Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೋರಾಟದಿಂದಲೇ ದಕ್ಕಿಸಿಕೊಂಡ ತಂಗುದಾಣ. ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ
    Uncategorized

    ಹೋರಾಟದಿಂದಲೇ ದಕ್ಕಿಸಿಕೊಂಡ ತಂಗುದಾಣ. ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ

    Updated:21/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಬೈಂದೂರು: ಕೊಂಕಣ ರೈಲ್ವೇ ಆರಂಭಗೊಂಡಾಗ ಕೇವಲ ಒಂದು ಲೋಕಲ್ ರೈಲು ನಿಲುಗಡೆಗಷ್ಟೇ ಅವಕಾಶವಿದ್ದ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಇಂದು ಹಲವಾರು ಏಕ್ಸಪ್ರೆಸ್ ರೈಲುಗಳು ನಿಲುಗಡೆಯನ್ನು ಕಂಡುಕೊಂಡಿದೆ. ನಿಲುಗಡೆ ನಿಲ್ದಾಣ ಎನಿಸಿಕೊಂಡಿದ್ದ ರೈಲ್ವೇ ನಿಲ್ದಾಣವು ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ಇಲ್ಲಿನ ಜನತೆಯ ಹೋರಾಟದ ಮೂಲಕವೇ ಹತ್ತಾರು ಮಹತ್ತರವಾದ ಸೌಲಭ್ಯಗಳನ್ನು ಪಡೆದುಕೊಂಡ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣವು ಕೊಂಕಣ ರೈಲ್ವೇ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿಯೇ ಕೊನೆಯ ದರ್ಜೆ ನಿಲ್ದಾಣವಾಗಿದ್ದರೂ, ದೇಶದ ಪ್ರಥಮ ದರ್ಜೆ ನಿಲ್ದಾಣಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಏಕೈಕ ರೈಲ್ವೇ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    Click Here

    Call us

    Click Here

    ನಿಲ್ದಾಣದಲ್ಲಿ ಸದ್ಯ 24 ಗಂಟೆ ವಿದ್ಯುತ್, ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ವಿಶ್ರಾಂತಿ ಆಸನಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ಪ್ರತ್ಯೇಕವಾದ ಶೌಚಾಲಯ ಇದೆ. ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಕೂಡ ಇದ್ದು ಹದಿಮೂರು ಎಕ್ಸ್‍ಪ್ರೆಕ್ಸ್ ಮತ್ತು ನಾಲ್ಕು ಪ್ಯಾಸೆಂಜರ್ ರೈಲುಗಳಿಗೆ ನಿಲುಗಡೆಯಿದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವಿಶೇಷ ರೈಲು ಸೌಲಭ್ಯ ಇರುತ್ತದೆ. ರಾಜಸ್ಥಾನದ ಬಿಕೆನಾರ್, ನಾಗರಕೊಯಿಲ್, ಗುಜರಾತಿನ ಓಕಾ ಕ್ಕೆ ಹೋಗುವ ರೈಲುಗಳಿಗೂ ಸಹ ಇಲ್ಲಿ ನಿಲುಗಡೆಯಿದೆ.

    ಪ್ರತಿದಿನ ಸರಾಸರಿ 1500 ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದು, ವರ್ಷಕ್ಕೆ ಆರ್ಡಿನರಿ ಮತ್ತು ನಾನ್‍ರಿಸರ್ವೇಷನ್ ಟಿಕೇಟ್‍ನಿಂದ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಬೈಂದೂರು ಕ್ಷೇತ್ರದ ಹೆಚ್ಚಿನವರು ಬೆಂಗಳೂರು, ಗೋವಾ, ಮುಂಬಯಿ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ವಿವಿಧ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇದೆಲ್ಲವನ್ನು ಮನಗಂಡ ಕೊಂಕಣ ರೈಲ್ವೆ ನಿಗಮ ಬೈಂದೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿ ಮಡಗಾಂವ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 16 ಕೋಟಿ ರೂ. ಯೋಜನೆ ರೂಪಿಸಿತ್ತು. ಮೊದಲ ಹಂತವಾಗಿ ಸ್ಟೇಶನ್ ಮಾಸ್ಟರ್ ಕೊಠಡಿ, ಪುರುಷ, ಮಹಿಳೆಯರ ವಿಶ್ರಾಂತಿ ಕೊಠಡಿ, ವಿಐಪಿ ವಿಶ್ರಾಂತಿ ಕೊಠಡಿ, ಟಿಕೇಟ್ ಕೌಂಟರ್ ಒಳಗೊಂಡ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿದೆ. ಇದೇ ಕಟ್ಟಡದ ಮೇಲ್ಮಹಡಿಯಲ್ಲಿ ಡಾರ್ಮೆಟರಿ, ಡಬ್ಬಲ್ ಟ್ರ್ಯಾಕ್, ಸಿಗ್ನಲ್, ಮೇಲ್ಸೆತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಶೇಷವೆಂದರೆ ರೈಲ್ವೇ ನಿಗಮ ದೇಶದಲ್ಲೇ ಪ್ರಥಮ ಭಾರಿಗೆ ಈ ನಿಲುಗಡೆ ನಿಲ್ದಾಣದಲ್ಲಿ ರೈಲ್ವೇ ಹೋಟೆಲ್ ಎಂಬ ನೂತನ ಮಾದರಿಯ ಪ್ರಯಾಣಿಕ ವಸತಿಗೃಹ ನಿರ್ಮಾಣಕ್ಕೆ ಮಂಜೂರು ನೀಡಿದೆ.

    ರಾಷ್ಟೀಯ ಹೆದ್ದಾರಿಗೆ ಹತ್ತಿರವೇ ಇರುವ ರೈಲ್ವೇ ನಿಲ್ದಾಣ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೂ ಹತ್ತಿರ ಇರುವುದರಿಂದ ಇಲ್ಲಿಗೆ ಬರುವ ಪ್ರಯಾಣಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ನಿಲ್ದಾಣವಾಗಬೇಕೆಂಬುದನ್ನು ಅರಿತು ಕಳೆದ ಮೂರು ವರ್ಷಗಳಿಂದ ಬೈಂದೂರು ಮೂಕಾಂಬಿಕಾ ರೈಲು ಯಾತ್ರಿ ಸಂಘ ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಒಂದು ಸಾಮಾನ್ಯ ನಿಲುಗಡೆ ನಿಲ್ದಾಣ ಈ ಮಟ್ಟಕ್ಕೆ ಏರುವಲ್ಲಿ ಮೂಕಾಂಬಿಕಾ ರೈಲು ಯಾತ್ರಿ ಸಂಘದ ಹೋರಾಟ, ನಿರಂತರವಾದ ಪ್ರಯತ್ನ ಗಮನೀಯವಾದುದು ಎಂಬುದನ್ನು ಮರೆಯುವಂತಿಲ್ಲ.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಗಂಗೊಳ್ಳಿ: ನರೇಂದ್ರ ಎಸ್. ಗಂಗೊಳ್ಳಿ ಅವರ ‘ರೂಮಿನೊಳಗಿಂದ’ ಕಥಾ ಸಂಕಲನ ಬಿಡುಗಡೆ

    25/07/2026

    ಕಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಊರಿನ ಜೀವಂತಿಕೆ ಅಡಗಿದೆ – ಗಮ್ಮತ್ತ್‌ ಪೋಸ್ಟರ್‌ ಅನಾವರಣಗೊಳಿಸಿ  ಓಂ ಗಣೇಶ್‌ ಉಪ್ಪುಂದ

    24/07/2026

    ನಾಳೆ (ಜುಲೈ 25) ಉಡುಪಿ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ

    24/07/2026
    Leave A Reply Cancel Reply

    16 + 1 =

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ ಕಾಲೇಜಿನಲ್ಲಿ ʼಡ್ರಗ್ಸ್ ಬೇಡ ಬ್ರೋʼ ಅಭಿಯಾನ
    • ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಿದ್ದರಾಗಿರಿ – ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕ ಕೊಡ್ಗಿ
    • ಬೈಂದೂರು ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆ – ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
    • ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ – ಜೂನ್‌ ತಿಂಗಳಲ್ಲಿ 15.12 ಕೋಟಿ ಬಿಡುಗಡೆ
    • ಹಂಗಾರಕಟ್ಟೆ ಸರಕಾರಿ ಶಾಲೆ ಮಕ್ಕಳಿಗೆ ಕುರ್ಚಿ ಹಾಗೂ ಆಟದ ಸಾಮಗ್ರಿ ವಿತರಣೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.