ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಶ್ರೀ ಶಾರದಾ ಕಾಲೇಜು ಬಸ್ರೂರು ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ನಾವುಂದ ಸ.ಪ್ರ.ದ ಕಾಲೇಜು ಕೋಟೇಶ್ವರ ಕುಂದಾಪುರ ಸ.ಪ್ರ.ದ ಕಾಲೇಜು ಬೈಂದೂರು ಸ.ಪ್ರ.ದ ಕಾಲೇಜು ಶಂಕರನಾರಾಯಣ ತೌಹಿದ್ ವುಮನ್ಸ್ ಕಾಲೇಜ್ ಆಫ್ ಕಾಮರ್ಸ್ ಗಂಗೊಳ್ಳಿ ಸೌಖ್ಯ ಪ್ರಥಮ ದರ್ಜೆ ಕಾಲೇಜು ಬೈಂದೂರು ಆರ್. ಎನ್. ಶೆಟ್ಟಿ ಪಿಯು ಕಾಲೇಜು ಕುಂದಾಪುರ ಎಸ್.ವಿ. ಪಿ.ಯು. ಕಾಲೇಜು ಗಂಗೊಳ್ಳಿ ಸೈಂಟ್ ಮೆರೀಸ್ ಪಿಯು ಕಾಲೇಜು ಕುಂದಾಪುರ ಗ್ರೀನ್ ವ್ಯಾಲಿ ಪಿಯು ಕಾಲೇಜು ಶಿರೂರು ಎಕ್ಸಲೆಂಟ್ ಪಿ.ಯು ಕಾಲೇಜು ಕುಂದಾಪುರ ಜನತಾ ಪಿಯು ಕಾಲೇಜು ಹೆಮ್ಮಾಡಿ ಗುರುಕುಲ ಪಿಯು ಕಾಲೇಜು ವಕ್ವಾಡಿ ಯುವ ಕೆನರಾ ಪಿಯು ಕಾಲೇಜು ಕೋಟೇಶ್ವರ ವರಸಿದ್ಧಿ ವಿನಾಯಕ ಪಿಯು ಕಾಲೇಜು ಕೆರಾಡಿ ಮದರ್ ತೆರೆಸಾ ಪಿಯು ಕಾಲೇಜು ಶಂಕರನಾರಾಯಣ ಶ್ರೀ ಮೂಕಾಂಬಿಕಾ ಪಿಯು ಕಾಲೇಜು…
Author: Editor Desk
ಗಂಗೊಳ್ಳಿ: ಇಲ್ಲಿರುವ ಚಿತ್ರವನ್ನೊಮ್ಮೆ ನೋಡಿ. ಇದೇನು ಯಾವುದೋ ಮದಗದ ಚಿತ್ರವಲ್ಲ. ಇದು ರಸ್ತೆ ಹೊಳೆಯಾದ ಕತೆ ಹೇಳುವ ಚಿತ್ರ. ಹೌದು ಮಳೆಗಾಲಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮ್ಯಾ0ಗನೀಸ್ ರಸ್ತೆ ಹೊಳೆಯ ರೂಪ ತಳೆದು ನಿಂತಿದೆ. ಇಡೀ ಮ್ಯಾಂಗನೀಸ್ ರಸ್ತೆಯೆಂಬೋ ರಸ್ತೆ ಒಂದೇ ಮಳೆಗೆ ತನ್ನ ಸಹಸ್ರಾರು ಹೊಂಡಗಳಲ್ಲಿ ಕೊಳಕು ನೀರನ್ನು ತುಂಬಿಕೊಂಡು ಕೆಸರುಗದ್ದೆಯದಂತಾಗಿ ಬಿಟ್ಟಿದೆ. ಇನ್ನು ಮಳೆಗಾಲ ನೆಟ್ಟಗೆ ಆರಂಭಗೊ0ಡಿಲ್ಲ. ಅಷ್ಟರಲ್ಲಾಗಲೇ ಈ ರಸ್ತೆ ಎಂದಿನಂತೆ ಈ ಬಾರಿಯೂ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದೆ. ದೇವಸ್ಥಾನಗಳಲ್ಲಿ ದೇವರಿಗೆ ಸಹಸ್ರ ಕುಂಭಾಭಿಷೇಕ ನಡೆಯುವದರ ಬಗೆಗೆ ನೀವು ಕೇಳಿರುತ್ತೀರಿ. ಅಲ್ಲೇನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಈ ರಸ್ತೆಯಲ್ಲಿ ಬರುವವರಿಗೆ ಮಾತ್ರ ಸಹಸ್ರ ಹೊಂಡಾಭಿಷೇಕದ ಅನುಭವ ಶತಸ್ಸಿದ್ಧ. ಬೇಸಿಗೆ ಕಾಲವಿಡೀ ಧೂಳುಮಯವಾಗಿದ್ದ ಈ ರಸ್ತೆ ಇದೀಗ ಜಲಮಯವಾಗಿಬಿಟ್ಟಿದೆ. ರಸ್ತೆಯ ಎರಡೂ ಕೊನೆಗಳಲ್ಲಿ ದೊಡ್ಡ ದೊಡ್ಡ ನೀರಿನ ಕೆರೆಗಳು ಈ ಬಾರಿಯೂ ಎಂದಿನಂತೆ ನಿರ್ಮಾಣಗೊಂಡಿದೆ. ಕಾಲು ಇಟ್ಟ ಕಡೆಯೆಲ್ಲಾ ಹೊಂಡ ಗುಂಡಿಗಳೇ ಕಾಣಿಸುವ ಈ ರಸ್ತೆಯಲ್ಲಿ ವಾಹನಗಳು ಗಂಟೆಗೊಂದು…
ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಚುನಾವಣೋತ್ತರ ಸಮೀಕ್ಷೆ ನಡೆಸಿರುವ ಕಾಪ್ಸ್ ಸಮೀಕ್ಷಾ ಸಂಸ್ಥೆ ಸಮಗ್ರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದು, ಅದನ್ನು ಆಧರಿಸಿದ ಫಲಿತಾಂಶ ಪೂರ್ವ ಫಲಿತಾಂಶ ನೀಡಲಾಗಿದೆ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಒಟ್ಟಾರೆಯಾಗಿ ಬಿಜೆಪಿ 14 ಸ್ಥಾನ ಗಳಿಸಿ ಮುಂದಿದ್ದರೆ, 10 ಸ್ಥಾನಗಳೊಂದಿಗೆ ಕಾಂಗ್ರೆಸ್ ದ್ವಿತೀಯ ಸ್ಥಾನದಲ್ಲಿದೆ ಹಾಗೂ ಜೆಡಿಎಸ್ 4 ಸ್ಥಾನ ಗೆಲ್ಲುವ ಮೂಲಕ ತೃತೀಯ ಸ್ಥಾನದಲ್ಲಿದೆ. ಕ್ಷೇತ್ರವಾರು ವಿವರ..ಎಲ್ಲೆಲ್ಲಿ ಯಾರ್ಯಾರು ? ಚಿಕ್ಕೋಡಿ ಬಿಜೆಪಿ ಬೆಳಗಾವಿ ಕಾಂಗ್ರೆಸ್ ಬಾಗಲಕೋಟೆ ಕಾಂಗ್ರೆಸ್ ಬಿಜಾಪುರ [ಪ.ಜಾ] ಬಿಜೆಪಿ ಗುಲ್ಬರ್ಗಾ [ಪ.ಜಾ] ಕಾಂಗ್ರೆಸ್ ರಾಯಚೂರು [ಪ.ಜಾ] ಕಾಂಗ್ರೆಸ್ ಬೀದರ್ ಕಾಂಗ್ರೆಸ್ ಕೊಪ್ಪಳ ಬಿಜೆಪಿ ಬಳ್ಳಾರಿ [ಪ.ಪಂ] ಬಿಜೆಪಿ ಹಾವೇರಿ ಬಿಜೆಪಿ ಧಾರವಾಡ ಬಿಜೆಪಿ ಉತ್ತರ ಕನ್ನಡ ಬಿಜೆಪಿ ದಾವಣಗೆರೆ ಬಿಜೆಪಿ ಶಿವಮೊಗ್ಗ ಬಿಜೆಪಿ ಉಡುಪಿ-ಚಿಕ್ಕಮಗಳೂರು ಬಿಜೆಪಿ ಹಾಸನ ಜೆಡಿಎಸ್ ದಕ್ಷಿಣ ಕನ್ನಡ ಕಾಂಗ್ರೆಸ್ ಚಿತ್ರದುರ್ಗಾ [ಪ.ಜಾ] ಕಾಂಗ್ರೆಸ್ ತುಮಕೂರು ಬಿಜೆಪಿ ಮಂಡ್ಯ ಜೆಡಿಎಸ್ ಮೈಸೂರು ಬಿಜೆಪಿ ಚಾಮರಾಜನಗರ [ಪ.ಜಾ] ಕಾಂಗ್ರೆಸ್…
ಕುಂದಾಪುರ: ಅಮೇರಿಕದ ಪ್ರತಿಷ್ಠಿತ ‘ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ’ ನಡೆಸುವ ‘ರಾಷ್ಟ್ರೀಯ ಜಿಯೋಗ್ರ್ರಫಿಕ್ ಬೀ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ಸುಳ್ಸೆ ಮೂಲದ ಸಾತ್ವಿಕ್ ಕರ್ಣಿಕ್ ಜಯಸಾಧಿಸಿದ್ದಾನೆ. ಸ್ವರ್ಧೆಯಲ್ಲಿ ಕೇಳಲಾದ ಎಲ್ಲ 5 ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ ಸಾತ್ವಿಕ್ ತನ್ನ ಸಮೀಪದ ಪ್ರತಿಸ್ಪರ್ಧಿಯಾದ 13 ವರ್ಷದ ಕೊನಾರ್ಡ್ ಒಬರ್‌ಹಾಸ್ ನನ್ನು ಹಿಂದಿಕ್ಕಿ ವಿಜೇತನಾಗಿದ್ದಾನೆ. ಈ ಮೂಲಕ ಸತತ 6ನೇ ವರ್ಷವೂ ಜಿಯೋಗ್ರಫಿಕ್ ಬೀ ಪ್ರಶಸ್ತಿಯು ಭಾರತೀಯ ಮೂಲದವರ ಪಾಲಾದಂತಾಗಿದೆ. ಅಮೆರಿಕದ ದಕ್ಷಿಣ ಬೋಸ್ಟನ್‌ನ ನೋರ್‌ಫೋಕ್ ಸಿಟಿಯ ಕಿಂಗ್ ಫಿಲಿಪ್ ಪ್ರಾದೇಶಿಕ ಮಾಧ್ಯಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಸಾತ್ವಿಕ್, ‘ಭೂ ಕೇಂದ್ರದಿಂದ ಅತ್ಯಂತ ದೂರದಲ್ಲಿರುವ ಬಿಂದು ಯಾವುದು?, ಎಂಬ ರಸಪ್ರಶ್ನೆಯ ಅಂತಿಮ ಸವಾಲಿಗೆ ಈಕ್ವೇಡಾರ್‌ನ ‘ಚಿಂಬೊರಾಜೊ’ ಬೆಟ್ಟ ಎಂಬ ಸರಿಯುತ್ತರ ನೀಡಿ ಅಮೆರಿಕದ ಅತ್ಯಂತ ಬುದ್ಧಿವಂತ ‘ಬೀ’ ಎನಿಸಿಕೊಂಡಿದ್ದಾನೆ. ವಿದ್ಯಾರ್ಥಿ ವೇತನ- ಪ್ರಶಸ್ತಿ: ಸಾತ್ವಿಕ್ ‘ಬೀ’ ಪ್ರಶಸ್ತಿ ಫಲಕದ ಜತೆಯಲ್ಲಿ 25 ಸಾವಿರ ಡಾಲರ್ ಮೌಲ್ಯದ (ಅಂದಾಜು ರೂ13.75 ಲಕ್ಷ)…
ಕುಂದಾಪುರ: ವಿಶ್ವದ ಅತ್ಯಂತ ಪ್ರತಿಷ್ಠಿತ ಸಮಕಾಲೀನ ಕಲಾ ಮೇಳವಾದ ಆರ್ಟ್ ಬಾಷೆಲ್‌ನ ‘ಆರ್ಟ್ ಅನ್ ಲಿಮಿಟೆಡ್’ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕುಂದಾಪುರ ಮೂಲದ ಕಲಾವಿದ ತಲ್ಲೂರು ಎಲ್.ಎನ್. ಆಯ್ಕೆ ಆಗಿದ್ದಾರೆ. ಸ್ವಿಡ್ಜರ್‌ಲ್ಯಾಂಡ್- ಜರ್ಮನಿ ಗಡಿ ಭಾಗದಲ್ಲಿರುವ ಬಾಷೆಲ್ ನಗರದಲ್ಲಿ ಇದೇ ಜೂ.13ರಿಂದ 16ರ ತನಕ ಈ ಕಲಾಮೇಳ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ತಲ್ಲೂರು ಎಲ್.ಎನ್ ಅವರನ್ನು ಮುಂಬಯಿಯ ಕೆಮೊಲ್ಡ್ ಮತ್ತು ದಿಲ್ಲಿಯ ನೇಚರ್ ಮೋರ್ತಾ ಗ್ಯಾಲರಿಗಳು ಜೊತೆಯಾಗಿ ಪ್ರಾಯೋಜಿಸಿವೆ. ಆರ್ಟ್ ಅನ್ ಲಿಮಿಟೆಡ್ ಕಲಾ ಪ್ರದರ್ಶನದಲ್ಲಿ ಜಗತ್ತಿನಾದ್ಯಂತ ಆಯ್ದ 79 ಮಂದಿ ಕಲಾವಿದರು ಭಾಗವಹಿಸುತ್ತಿದ್ದು, ವಿವಿಧ ವಿಭಾಗಗಳಲ್ಲಿ ಜಗತ್ತಿನ ಒಟ್ಟು 300 ಗ್ಯಾಲರಿಗಳು ತಮ್ಮ ಕಲಾವಿದರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಿದೆ. ತಲ್ಲೂರ್ ಎನ್. ಎಲ್ ಪರಿಚಯ: 1971ರಲ್ಲಿ ತಾಲೂಕಿನ ತಲ್ಲೂರಿನಲ್ಲಿ ಜನಿಸಿದ ತಲ್ಲೂರು ಎಲ್. ಎನ್(ತಲ್ಲೂರು ಲಕ್ಷ್ಮೀನಾರಾಯಣ), ಮೈಸೂರು ವಿಶ್ವವಿದ್ಯಾನಿಲಯದಿಂದ ಚಿತ್ರಕಲೆಯಲ್ಲಿ ಬಿ.ಎಫ್.ಎ(bachelor of fine arts) ಪದವಿ, ಬರೋಡಾ ವಿಶ್ವವಿದ್ಯಾನಿಲಯದಿಂದ ಎಂ.ಎಫ್.ಎ ಪದವಿ ಪಡೆದು, ಯು.ಕೆಯ…
ಜೀವನದಲ್ಲಿ ಎನನ್ನಾದರೂ ಸಾಧಿಸಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತಾದರೂ ಹಾಗೆ ಅಂದುಕೊಂಡವರೆಲ್ಲಾ ಸಾಧಿಸಿಬಿಡುವುದಿಲ್ಲ. ತಾನು ಕಟ್ಟಿಕೊಳ್ಳುವ ಕನಸಿನ ಸಾಕಾರಗೊಳಿಸಲು ಯಾರು ಮನಪೂರ್ವಕವಾಗಿ ದುಡಿಯುತ್ತಾರೋ ಅಂತವರು ಮಾತ್ರ ಎಲ್ಲಾ ತೊಡಕುಗಳನ್ನು ಮೀರಿ ಗೆಲ್ಲಬಲ್ಲರು.ಹೀಗೆ ಬದುಕಿನಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು ಸಾಧನೆಯತ್ತ ಮುಖಮಾಡಿ ನಿಂತವನೇ ನಮ್ಮ ಕುಂದಾಪುರದ ಹುಡ್ಗ ಗೌತಮ್ ಜಾದುಗಾರ್. ಜಾದು ಕಲೆಯನ್ನು ಕರಗತ ಮಾಡಿಕೊಂಡು ತನ್ನ 22ನೇ ವಯಸ್ಸಿನಲ್ಲಿಯೇ 1300ಕ್ಕೂ ಅಧಿಕ ಜಾದು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿರುವ ಗೌತಮ್, ಉತ್ತಮ ಗಾಯಕನಾಗಿ, ಸಂಗೀತಕಾರನಾಗಿ, ನಟನಾಗಿಯೂ ತನ್ನ ಪ್ರತಿಭೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಸದ್ಯ ಸಿನಿಮಾವೊಂದರಲ್ಲಿ ಸಹನಿರ್ದೇಶಕರಾಗಿ ದುಡಿಯುತ್ತಿರುವ ಇವರು ಇತ್ತಿಚಿಗೆ ಕುಂದಾಪ್ರ ಡಾಟ್ ಕಾಂಗೆ ಮಾತಿಗೆ ಸಿಕ್ಕಾಗ ತನ್ನ ಬದುಕಿನ ಪುಟಗಳನ್ನು ತೆರೆದಿಟ್ಟರು. ಮೂಲತಃ ಕುಂದಾಪುರದವರಾದ ಕೆ. ಪಾಂಡುರಂಗ ಹಾಗೂ ಉಷಾ ದಂಪತಿಗಳ ಪುತ್ರರಾದ ಇವರು ತನ್ನ ಪಿಯುಸಿ ವರೆಗಿನ ಶಿಕ್ಷಣವನ್ನು ಚಿತ್ರದುರ್ಗ, ಮಲೆಬೆನ್ನೂರು, ಹರಿಹರದಲ್ಲಿ ತೀರ್ಥಹಳ್ಳಿಯಲ್ಲಿ ಪಡೆದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚಿಕ್ಕಂದಿನಿಂದಲೂ ಜಾದುವಿನ ಬಗೆಗೆ…
ಮಡಿಕೇರಿ: ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು. ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಪ್ರತ್ಯೇಕ ರಾಜ್ಯ ಕೊಡಿ ಎಂದು ಯಂಕ ನಾಣಿ ಸೀನರೆಲ್ಲ ಕೇಳುವಂತಾಗಿದೆ. ಕನ್ನಡ ಮತ್ತು ಕರ್ನಾಟಕದ ಸಾರ್ವಭೌಮತೆಗೆ ಅಡ್ಡಿಯಾಗುವವರು ಯಾರೇ ಇರಲಿ ಅಂಥವರ ಕಿವಿ ಹಿಂಡಿ ಬುದ್ಧಿ ಕಲಿಸಬೇಕು ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ನಾ. ಡಿಸೋಜ ಹೇಳಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಿರ್ಮಿಸಲಾಗಿರುವ ಭಾರತೀಸುತ ವೇದಿಕೆಯಲ್ಲಿ ಮಂಗಳವಾರ ಸಾಹಿತ್ಯಾಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೆಲು ನುಡಿಯ ಸಾಹಿತಿ ಎಂದೇ ಹೆಸರಾದ ನಾ. ಡಿಸೋಜ ಕನ್ನಡದ ಹಿತಾಸಕ್ತಿಯ ಸಂಬಂಧದಲ್ಲಿ ಮಾತನಾಡುವಾಗ ಯಾವ ಮುಲಾಜೂ ಇಟ್ಟುಕೊಳ್ಳದೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲದಿರುವುದಕ್ಕೆ ನಮ್ಮ ಅಪ್ಪ, ಅಮ್ಮ ಕಾರಣ. ಎರಡನೇ ಕಾರಣ ನಮ್ಮ ಸರ್ಕಾರ. ಎಲ್ಲ ರಾಜ್ಯಗಳ ಸರ್ಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತ ಕಾಪಾಡುತ್ತ ಬಂದಿವೆ.…
ಹಿರಿಯ ಲೇಖಕಿ ವೈದೇಹಿ ಅವರೊ೦ದಿಗೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇಲ್ಲಿನ ವಿದ್ಯಾರ್ಥಿಗಳಾದ ಸುಶ್ಮಿತಾ ಜಿ ಪೂಜಾರಿ, ಸ೦ಪ್ರದ ರಾವ್, ತನಿಶಾ ಆರ್ ಮತ್ತು ಬಿ೦ದು ಪೂಜಾರಿ ನಡೆಸಿದ ಸ೦ವಾದ *** ತಮ್ಮ ಬರವಣಿಗೆಯ ಮೂಲಕ ಮಕ್ಕಳು ಹಾಗೂ ಸ್ತ್ರೀಪರ ಚಿ೦ತನೆಯನ್ನು ಸಮರ್ಥವಾಗಿ ಪ್ರತಿಬಿ೦ಬಿಸುವ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊ೦ಡವರು ವೈದೇಹಿ. ಸುತ್ತಲಿನ ವಿದ್ಯಮಾನಗಳಿಗೆ ಸ್ಪ೦ದಿಸುತ್ತಾ ಕು೦ದಾಪುರದ ಆಡುಮಾತಿನ ಸೊಬಗನ್ನು ಬರವಣಿಗೆಯಲ್ಲಿ ಆಳವಡಿಸಿಕೊಳ್ಳುವ ಅವರ ಸಾಹಿತ್ಯ ಶೈಲಿ ವಿಭಿನ್ನವಾದುದು. ಕಾಲೇಜಿನ ಸವಿನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದೇಹಿ ಅವರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ಪಟಪಟನೆ ಉತ್ತರಗಳನ್ನು ನೀಡಿದರು. ಈ ಸ೦ವಾದದ ಆಯ್ದ ಭಾಗ ಇಲ್ಲಿದೆ. ಪ್ರಶ್ನೆ: ವೈದೇಹಿ ಅನ್ನುವುದು ನಿಮ್ಮ ಮೂಲ ಹೆಸರಲ್ಲವ೦ತೆ. ಹಾಗಾದರೆ ಈ ಹೆಸರು ಬ೦ದಿದ್ದು ಹೇಗೆ? ವೈದೇಹಿ: ಹೌದು ನನ್ನ ಮೂಲ ಹೆಸರು ಜಾನಕಿ ಹೆಬ್ಬಾರ್. ಮನೆಯಲ್ಲಿ ಕರೆಯೋದು ವಸ೦ತಿ ಅ೦ತ. ಪ್ರಥಮ ಬಾರಿಗೆ ನೈಜ ಘಟನೆಯನ್ನಾಧರಿಸಿ ಬರೆದ ಕಥೆಯೊ೦ದನ್ನು ಪತ್ರಿಕೆಗೆ(ಸುಧಾ) ಕಳುಹಿಸಿದ್ದೆ.…
ಕುಂದಾಪುರ: ಆಸ್ಟ್ರೇಲಿಯಾದಲ್ಲಿ ಸೆ. 7ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಲಿಬರಲ್ ಪಕ್ಷದ ವತಿಯಿಂದ ಸ್ಪರ್ಧಿಸುತ್ತಿರುವ ಮೊದಲ ಕನ್ನಡತಿ ಶಿಲ್ಪಾ ಹೆಗ್ಡೆ (36)ಯ ತವರೂರು ವಡ್ಡರ್ಸೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶಿಲ್ಪಾ ಹೆಗ್ಡೆಯ ಅಜ್ಜಿ ಪ್ರೇಮಲತಾ ಹೆಗ್ಡೆ (80) ಅವರ ಮೊಮ್ಮಗಳ ಸಾಧನೆ ಖುಷಿ ಯಿಂದ ಇದ್ದಾರೆ. ಪ್ರೇಮಲತಾ ಅವರ ಪತಿ ಡಾ. ಎಂ. ಆರ್. ಹೆಗ್ಡೆ ಪೆರ್ಡೂರಿನ ಜನಪ್ರಿಯ ವೈದ್ಯರು. ಶಿಲ್ಪಾ ಹೆಗ್ಡೆ ಪ್ರೇಮಲತಾ ಹೆಗ್ಡೆಯವರ ಮಗಳು ಶಶಿಕಲಾ ಮತ್ತು ಮೋಹನ್‌ದಾಸ್ ಹೆಗ್ಡೆಯವರ ಕುಡಿ. ಶಿಲ್ಪಾ ಜನಿಸಿದ್ದು ಮಣಿಪಾಲ ಕೆಎಂಸಿ ಯಲ್ಲಿ. ತಂದೆ ಮೋಹನ್‌ದಾಸ್ ಹೆಗ್ಡೆ ಉದ್ಯೋಗದ ಹಿನ್ನೆಲೆಯಲ್ಲಿ ಶಿಲ್ಪಾ ಹೆಗ್ಡೆ 1ರಿಂದ 4ನೇ ತರಗತಿ ಶಿಕ್ಷಣವನ್ನು ಕುವೈಟ್‌ನಲ್ಲಿ ಪಡೆದರು. ಮರಳಿ ಹುಟ್ಟೂರಿಗೆ ಹೆತ್ತವರೊಂದಿಗೆ ಆಗಮಿಸಿದ ಅವರು ಅಜ್ಜನ ಮನೆ ಪೆರ್ಡೂರಿನಲ್ಲಿ ವಿದ್ಯೆ ಮುಂದುವರಿಸಿದರು. 5ರಿಂದ 7ನೇ ತರಗತಿ ಶಿಕ್ಷಣವನ್ನು ಮಣಿಪಾಲದ ಮಾಧವಕೃಪಾ, ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣವನ್ನು ಎಂಜಿಸಿಯಲ್ಲಿ ಪಡೆದರು. ನಂತರ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದರು.…
ಕುಂದಾಪುರ: ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆಗಳಾದಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯವೈಖರಿಯೂ ಬದಲಾಗಬೇಕು ಎನ್ನುವುದು ನಿಜ. ಗುರು ಎನಿಸಿಕೊಂಡವರು ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಷ್ಟೇ ಅಲ್ಲ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ, ಅವರ ಅಗತ್ಯತೆಗಳನ್ನು ಅರಿತು ಕಲಿಸುವ ಕ್ರೀಯಾಶೀಲತೆ ಅವರಲ್ಲಿರಬೇಕು. ಆಗ ಮಾತ್ರ ಶಾಲೆಗಳತ್ತ ಮಕ್ಕಳು ಮುಖ ಮಾಡುತ್ತಾರೆ, ಪೋಷಕರು ಕೂಡ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಮನಸ್ಸು ಮಾಡುತ್ತಾರೆ. ಮಕ್ಕಳ ಕುರಿತಾಗಿ ವಿಶೇಷ ಕಾಳಜಿ ಇರುವ ಶಿಕ್ಷಕರೊಬ್ಬರು ನಮ್ಮ ನಡುವಲ್ಲಿದ್ದಾರೆ. ಅವರು ಮಕ್ಕಳ ಚಟುವಟಿಕೆಗಳ ಕುರಿತಾಗಿ, ಅವರಿಗೆ ನೀಡಬೇಕಾದ ಶಿಕ್ಷಣದ ಕುರಿತಾಗಿ ವೈಜ್ಞಾನಿಕವಾಗಿ ಮಾತನಾಡಬಲ್ಲವರು. ಕುಂದಾಪುರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಉದಯ ಗಾಂವಕಾರ್ ಅವರ ಮಕ್ಕಳ ಕುರಿತಾದ ಪ್ರೀತಿಯನ್ನು ಅವರ ಮಾತಿನಲ್ಲಿಯೇ ಕೇಳಬೇಕು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಶಿಕ್ಷಕನಾಗಿದ್ದುಕೊಂಡು ಮಕ್ಕಳೊಂದಿಗೆ ಬೆರೆಯಬೇಕು ಎಂಬ ಇಂಗಿತದಲ್ಲಿಯೇ ಅವರ ಕಾಳಜಿ ಅರ್ಥವಾಗುತ್ತದೆ. ಶಿಕ್ಷಕರಾಗಿ, ಚಿತ್ರ ಕಲಾವಿದರಾಗಿ, ಬರಹಗಾರರಾಗಿ ಸೃಜನಾತ್ಮಕ ಬದುಕು…
