ನಮ್ಮೂರಿನ ಚಂದು ಕಾಣ್ಕಾರೆ ನೀವ್ ಕುಂದಾಪ್ರ ಬಸ್-ಸ್ಟಾಂಡ್ಗೆ ಒಂದ್ ಲೋಕಲ್ ಬಸ್ ಹತ್ತಿ ಬೈಂದೂರಿಗೆ ಟಿಕೆಟ್ ಮಾಡಿ ಕೂಕಣಿ. ಶಾಸ್ತ್ರಿ ಪಾರ್ಕ್ ಬಿಟ್ಟ್ ಬಸ್ ಮುಂದ್ ಹೋದಾಗೆ….. ಆಚೀಚೆ ಹೊಳೆ, ಬಯಲು,
[...]
ಹೊಸ ವರುಷು ಕಣ್ಣಂಗೆ ಏಪ್ರಿಲ್ ತಿಂಗ್ಳು ಲಾಯಕೇ. ಹೊಸ ವರ್ಷದ್ ದಿನು ಕೇಕ್-ಪಾಕ್ ಕಟ್ ಮಾಡಿ ಗಮ್ಮತ್ ಮಾಡ್ರೆ, ಏಪ್ರಿಲ್ ಒಂದು ದಿನು ಎಲ್ರರನೂ ಮುರ್ಖರನ್ನಾಯ್ ಮಾಡುದ್. ಚಣ್ಣಕಿಪ್ಪೋತ್ತಿಗೆ ಒಂಥರ ಪೂಲ್
[...]