ಕುಂದಾಪ್ರದ್ ಸುದ್ಧಿ

ಸಿಗಡಿ ಕೃಷಿಕರ ಸಮ್ಮಿಲನ ಉದ್ಘಾಟನೆ

ಹೆಮ್ಮಾಡಿ: ಸಿಗಡಿ ಕೃಷಿ ಲಾಭದಾಯಕ ಉದ್ಯಮವಾಗಿ ಬೆಳೆದಿದ್ದರೂ ಸಿಗಡಿ ಕೃಷಿಕರು ಹತ್ತು- ಹಲವು ಸವಾಲುಗಳು ಎದುರಿಸುತ್ತಿದ್ದಾರೆ. ಕುಂದಾಪುರ ತಾಲೂಕಿನಲ್ಲಿ 20 ವರ್ಷಗಳ ಹಿಂದೆ ಸಿಗಡಿ ಕೃಷಿ ಪರಿಚಯವಾಗಿದ್ದು, 200ಕ್ಕೂ ಅಧಿಕ ಸಂಖ್ಯೆಯಲ್ಲಿ [...]

ಮೊಯ್ಲಿ ಸರಸ್ವತಿ ಸಮ್ಮಾನಕ್ಕೆ ಅರ್ಹರು: ಎ.ಎಸ್.ಎನ್ ಹೆಬ್ಬಾರ್

‘ಸರಸ್ವತಿ ಸಮ್ಮಾನ್’ ಕನ್ನಡ ಸಾಹಿತ್ಯಕ್ಕೆ ದೊರೆತರೂ ಸಂಭ್ರಮಿಸದಿರುವುದು ದುರಂತ ಕುಂದಾಪುರ: ದೇಶದ ಅತ್ಯುನ್ನತ ಪುರಸ್ಕಾರಗಳಲ್ಲೊಂದಾದ ಸರಸ್ವತಿ ಸಮ್ಮಾನ್ ಕನ್ನಡ ಸಾಹಿತ್ಯಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕನ್ನಡಿಗರು ಸಂಭ್ರಮಿಸಬೇಕಾದ ಹೊತ್ತಿನಲ್ಲಿ ಮಹಾಕಾವ್ಯ ಬರೆದ ಲೇಖಕನನ್ನು ಲೇಖಕನೇ [...]

ಮಡಿಕೆ ಮಾರುವ ಹುಡುಗ ಕೃತಿ ಲೋಕಾರ್ಪಣೆ

ಓದು ಹಾಗೂ ಗ್ರಹಿಕೆ ಹೆಚ್ಚಿಸಿಕೊಂಡು ಬರಹ ಜನನುಡಿಯಾಗಬಲ್ಲದು: ಡಾ| ರೇಖಾ ಬನ್ನಾಡಿ ಕುಂದಾಪುರ: ಜಾಗತೀಕರಣದ ಪರಿಣಾಮದಿಂದಾಗಿ ಸ್ವರ್ಧೆಗೆ ಬಿದ್ದಿರುವ ಯುವಜನರು ಸೃಜನಶೀಲತೆಯನ್ನೇ ಮರೆತಿದ್ದಾರೆ. ಪೂರ್ತಿ ಗ್ರಾಮೀಣ ಸೊಗಡನ್ನು ಕಳೆದುಕೊಳ್ಳದ, ಸಂಪೂರ್ಣವಾಗಿ ಹೊಸತನಕ್ಕೆ [...]

ಸಮುದಾಯ ರಂಗ ರಂಗು ಮಕ್ಕಳ ಮೇಳಕ್ಕೆ ಚಾಲನೆ

ಕುಂದಾಪುರ: ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ, ಜೆಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗರಂಗು ಮಕ್ಕಳ ಉಚಿತ ರಜಾಮೇಳ ವಡೇರಹೋಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಜೆ.ಸಿ.ಐ ದಶಮಾನೋತ್ಸವ [...]

ಮಹಿಳೆ ಕೊಲೆ: ಸಮಗ್ರ ತನಿಕೆಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ಕಳೆದ ವಾರ ಕೊಲೆಯಾದ ಗೋಪಾಡಿಯ ಗರ್ಭಿಣಿ ಮಹಿಳೆ ಹತ್ಯೆ ಪ್ರಕರಣದ ಸಮಗ್ರ ತನಿಖೆ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಾಲೂಕು ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟದ ನೇತತ್ವದಲ್ಲಿ [...]

ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆ

ಕುಂದಾಪುರ: ಜನರ ಬೇಡಿಕೆಗಳನ್ನು ಪರಿಗಣಿಸಿ ಈ ಅಡೆತಡೆಗಳನ್ನು ನಿವಾರಣೆ ಮಾಡಿಕೊಂಡು ರೈತರಿಗೆ ಯೋಜನೆಯ ಮೊದಲ ಹಂತದ ನೀರನ್ನು ಬಿಡಲು ಸರಕಾರ ಕ್ರಮ ಕೈಗೊಂಡಿರುವುದನ್ನು ಜಿಲ್ಲಾ ರೈತ ಸಂಘ ಸ್ವಾಗತಿಸುತ್ತದೆ ಎಂದು ಜಿಲ್ಲಾ [...]

ವಿಮೋಚನಾ ಜನಜಾತ್ರೆಗೆ ಕುಂದಾಪುರದಲ್ಲಿ ಚಾಲನೆ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 124ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಾಮಾಜಿಕ ಪರಿವರ್ತನೆ ವಿಮೋಚನಾ ಜನಜಾತ್ರೆಗೆ ಬೆಳಗ್ಗೆ ಕುಂದಾಪುರದಲ್ಲಿ [...]

ರೊಜರಿ ಅಮ್ಮನವರ ಇಗರ್ಜಿಯಲ್ಲಿ ಈಸ್ಟರ್ ಆಚರಣೆ

ಕುಂದಾಪುರ: ಯೇಸುಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ದಿನವಾದ ಈಸ್ಟರ್ ಹಬ್ಬವನ್ನು ಭಾನುವಾರ ಉಡುಪಿ ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕತ್ತಲೆಯಲ್ಲಿ ಹೊಸದಾಗಿ ಬೆಂಕಿ ಉರಿಸಿ ಅದನ್ನು ಆಶಿರ್ವದಿಸಿ, ಪಾಸ್ಕಾ [...]

ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಅಗತ್ಯ: ವನಿತಾ ತೋರ್ವಿ

ಕುಂದಾಪುರ: ಇಂದು ದೇಶದಲ್ಲಿ ಮಕ್ಕಳ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಶೇ.8.2ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ನಾವು ನೋಡುತ್ತೇವೆ. ವರ್ಷಕ್ಕೆ ಸುಮಾರು ಮೂರೂವರೆ ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ರಾಜ್ಯ ಮಕ್ಕಳ [...]

ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಯ್ತು ಸ್ವರ್ಧಾರಹಿತ ‘ಮಕ್ಕಳ ಹಬ್ಬ’

ಕುಂದಾಪುರ: ಅಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಹಾಡು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಚನ್ನೆಮಣೆಯಂತಹ ಅಪರೂಪದ ಆಟವಾಡುತ್ತಿದ್ದರು. ಕೆಲವರು ಜೇಡಿಮಣ್ಣಿನ ಮಾದರಿಗಳನ್ನು ತಯಾರಿಸುತ್ತಿಸುತ್ತಿದ್ದರೇ, ಕೆಲವರು ಇನ್ನೂ ಮುಂದೆ ಹೋಗಿ ರಗೋಲಿ, ಕುಂಟೆಬಿಲ್ಲೆ [...]