ವಿಕಲಚೇತನರು ಸಮಾಜದ ಧ್ವನಿಯಾಗಬೇಕು: ವಿಕಲಚೇತನರ ಸಮಾವೇಶ ಉದ್ಘಾಟಿಸಿ ಕಾರ್ತಿಕೇಯ ಮಧ್ಯಸ್ಥ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಕಲಚೇತನರು ದೈಹಿಕ ನ್ಯೂನ್ಯತೆಗೆ ಹಿಂಜರಿಯದೇ, ಮಾನಸಿಕ ಕೀಳರಿಮೆಯನ್ನು ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ವಿಕಲಚೇತನರು ಅವಕಾಶಗಳಿಂದ ವಂಚಿತರಾಗದಂತೆ ಸಮಾಜವೂ ಅವರೊಂದಿಗೆ ಧ್ವನಿಯಾಗಬೇಕು ಎಂದು ಯುವ ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಹೇಳಿದರು.

Call us

Click Here

[quote font_size=”16″ bgcolor=”#ffffff” bcolor=”#dd3333″ arrow=”yes” align=”right”]*ವಿಕಲಚೇತನರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು, ವಿಕಲಚೇತನರಿಗಿರುವ ಸರಕಾರಿ ಸೌಲತ್ತುಗಳ ಬಗ್ಗೆ ಮಾಹಿತಿ ನೀಡುವುದು. ಅವರಲ್ಲಿನ ಪ್ರತಿಭೆ ಅನಾವರಣಕ್ಕಾಗಿ ವೇದಿಕೆ ಕಲ್ಪಿಸುವುದು, ವಿಕಲಚೇತನರ ಅಭ್ಯುದಯಕ್ಕಾಗಿ ದುಡಿಯುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸುವ ಉದ್ದೇಶದಿಂದ ವಿಕಲಚೇತನರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.  – ಜಿ.ಎಂ ಉದಯಕುಮಾರ್ ಕಾರ್ಯಕ್ರಮ ಸಂಯೋಜಕ[/quote]

ಸೋಮವಾರ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಂಡ ವಿಕಲಚೇತನರ ಸಮಾವೇಶ, ಪ್ರತಿಭಾ ಹಾಗೂ ಕೌಶಲ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ವಿಕಲಚೇತನರ ಬಗ್ಗೆ ಕರುಣೆ ಇದ್ದರೇ ಸಾಲದು. ಬದಲಾಗಿ ಎಲ್ಲರೂ ಸಮಾನರೂ ಎಂಬ ಭಾವನೆ ತಳೆದು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್, ಉದ್ಯಮಿ ಸುರೇಶ್ ಡಿ. ಪಡುಕೋಣೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಎಂ., ಜನಪರ ಪ್ರಗತಿಪರ ವೇದಿಕೆ ಸಂಚಾಲಕ ಮಾಣಿ ಗೋಪಾಲ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೋ. ಅರುಣಾಚಲ ಮಯ್ಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ವಾತಿ, ಸಂತೋಷ್ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಸಿಂಡಿಕೇಟ್ ಬ್ಯಾಂಕ್ ಅಸಿಸ್ಟಂಟ್ ಮ್ಯಾನೆಜರ್ ಪಾಂಡುರಂಗ ಶಾನುಭೋಗ್ ದಿಕ್ಸೂಚಿ ಭಾಷಣ ಮಾಡಿದರು. ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೋ. ಜಿ.ಎಂ. ಉದಯ್‌ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರೋ. ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

[quote font_size=”16″ bgcolor=”#ffffff” bcolor=”#1e73be” arrow=”yes”]* ಸಮಾಜದಲ್ಲಿ ಬ್ರಹ್ಮಕಲಶ, ನಾಗಮಂಡಲದಂತಹ ಧಾರ್ಮಿಕ ಕಾರ್ಯಮಗಳನ್ನು ಮಾಡುವುದಕ್ಕಿಂತ ವಿಕಲಚೇತನರ ಕಣ್ಣೊರೆಸುವ ಕೆಲಸ ಮಾಡುವುದು ಶ್ರೇಷ್ಠ. ಪ್ರತಿಯೊಬ್ಬರಲ್ಲಿಯೂ ಅಗಾಧವಾದ ಶಕ್ತಿಯಿಂದ ಆದರೆ ಅದನ್ನು ಗುರುತಿಸುವ ಕೆಲಸವಾಗಬೇಕಷ್ಟೇ. ಅಂಗವಿಕಲತೆ ದೇಹಕ್ಕೆ ಹೊರತು ಮನಸ್ಸಿಗಲ್ಲ. ಪೋಷಕರು ವಿಕಲಚೇತನರನ್ನು ತಾತ್ಸಾರ ಮಾಡದೇ ಪ್ರೋತ್ಸಾಹಿಸಬೇಕು. ವಿಕಲ ಚೇತನರಿಗೆ ಸೌಲಭ್ಯಗಳನ್ನು ನೀಡುವ ಬದಲು ಸಮಾಜದಲ್ಲಿ ಎಲ್ಲರಂತೆಯೇ ಬದುಕಲು ಅವಕಾಶಗಳನ್ನು ಮಾಡಿಕೊಡಿ. ಸಮಾಜದಲ್ಲಿ ವಿಕಲಚೇತನರು ಕೊಡುವ ಕೈಗಳಾಗಬೇಕೆ ಹೊರತು ಪಡೆಯುವ ಕೈಗಳಾಗಬಾರದು.  – ಪಾಂಡುರಂಗ ಶ್ಯಾನುಭೋಗ್ ಸಿಂಡಿಕೇಟ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೆಜರ್ ಉಡುಪಿ[/quote]

Bhandarkars college  Handicapts Samavesha (2) Bhandarkars college  Handicapts Samavesha (3) Bhandarkars college  Handicapts Samavesha (4) Bhandarkars college  Handicapts Samavesha (5)

Leave a Reply