ಪ್ರಕೃತಿಯ ಮಡಿಲಲ್ಲೊಂದು ಕಲಾತ್ಮಕ ಚಿಕಿತ್ಸಾಲಯ

Call us

Call us

Call us

ಬೈಂದೂರು ಚಂದ್ರಶೇಖರ ನಾವಡ ಕುಂದಾಪ್ರ ಡಾಟ್ ಕಾಂ ಲೇಖನ.
ಪ್ರಾಚೀನ ವೈದ್ಯ ಪರಂಪರೆಯಾದ ಭಾರತೀಯ ಆಯುರ್ವೇದ ಇಂದು ವಿಶ್ವದಾದ್ಯಂತ ಜನಮನ್ನಣೆ ಗಳಿಸುತ್ತಿದೆ. ಆಯುರ್ವೇದ ಚಿಕಿತ್ಸೆಯೊಂದಿಗೆ ಧ್ಯಾನ, ಯೋಗ, ಭಜನೆ, ಸಂಗೀತ, ಕಲೆ, ಆಧ್ಯಾತ್ಮ ಮಾರ್ಗದರ್ಶನ,ಆಯುರ್ವೇದ ಪದ್ಧತಿಯ ಹಿತ-ಮಿತ ಭೋಜನವನ್ನು ಒಳಗೊಂಡ ಸಮಗ್ರ ಭಾರತೀಯ ಜೀವನ ಪದ್ದತಿಯನ್ನು ಪರಿಚಯಿಸುವ ಕೊಲ್ಲೂರಿನ ಅಭಯ ಚಿಕಿತ್ಸಾಲಯ ದೇಶ-ವಿದೇಶೀ ಸ್ವಾಸ್ಥ್ಯ ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದೆ.

Call us

Click Here

ಕೊಲ್ಲೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಸದ್ದಿಲ್ಲದೇ ಋಷಿ ಮುನಿಗಳ ಕೊಡುಗೆಯ ಪ್ರಾಚೀನ ಭಾರತದ ಪಾರಂಪರಿಕ ಚಿಕಿತ್ಸಾ ಪದ್ದತಿಯನ್ನು ಪಸರಿಸುತ್ತಿರುವ ಆಯುರ್ವೇದ ವೈದ್ಯ ಡಾ. ಶ್ರೀಕಾಂತ ಕೊಡವೂರು ಅವರ ಅಭಯ ಚಿಕಿತ್ಸಾಲಯದ ಪ್ರಸಿದ್ಧಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಐರೊಪ್ಯ ದೇಶಗಳವರೆಗೆ ಹರಡಿದೆ.

ಚಿಕಿತ್ಸಾಲಯದ ಗೋಡೆಗಳ ಮೇಲೆ ಹಿರಿಯ ಕಲಾವಿದ ಉಪ್ಪುಂದ ಮಂಜುನಾಥ ಮಯ್ಯರ ಕುಂಚದಿಂದ ಹೊಮ್ಮಿದ ಮನಮೋಹಕ ಚಿತ್ತಾರ ಕಣ್ಮನ ಸೆಳೆಯುತ್ತದೆ. Sound mind in sound body ಅರ್ಥಾತ್ ಮನಸ್ಸು ಆರೋಗ್ಯವಾಗಿದ್ದರೆ ಶರೀರ ಆರೋಗ್ಯವಾಗಿರುತ್ತದೆ ಎನ್ನುವ ಮಾತಿನಂತೆ ಈ ಸುಂದರ ಚಿತ್ರಗಳು ಚಿಕಿತ್ಸಾರ್ಥಿಗಳ ಚಿತ್ತವನ್ನು ಪ್ರಫುಲ್ಲಿತಗೊಳಿಸದೇ ಇರಲು ಸಾಧ್ಯವಿಲ್ಲ. ಈ ಸುಂದರ ಪೈಂಟಿಂಗಿಗೆ ಮನಸೋತ ಅನೇಕ ವಿದೇಶೀ ಚಿಕಿತ್ಸಾರ್ಥಿಗಳು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಭಿಮಾನದಿಂದ ಹಂಚಿಕೊಂಡಿದ್ದಾರೆ. ದುರಾಸೆ,ದುಶ್ಚಟ,ಕೆಟ್ಟ ಜೀವನಶೈಲಿಯ ಸ್ವಯಂಕೃತ ಅಪರಾಧದಿಂದಾಗಿ ಉಂಟಾಗುವ ಇಂದಿನ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಯನ್ನು ಉತ್ತಮ ಜೀವನಶೈಲಿಯ ತಳಹದಿಯಲ್ಲಿ ಎರಡರಿಂದ ನಾಲ್ಕು ವಾರಗಳ ಕಾಲ ನಡೆಸುವ ಡಾ.ಶ್ರೀಕಾಂತ್ ಅವರ ಮಾದರಿ ಚಿಕಿತ್ಸೆ ಕಾನನದ ಮಲ್ಲಿಗೆಯಂತೆ ಜಗದಗಲಕ್ಕೆ ತನ್ನ ಘಮಘಮ ಕಂಪು ಸೂಸುತ್ತಿದೆ.

ಮಾನಸಿಕ ಖಿನ್ನತೆಯಂತಹ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಶಿಸ್ತುಬದ್ದ ಜೀವನ ಕಲೆಯನ್ನು ಪರಿಚಯಿಸುವ ಡಾ. ಶ್ರೀಕಾಂತ್ ಅವರ ಅಭಯ ಚಿಕಿತ್ಸಾಲಯ, ಚಿಕಿತ್ಸಾಲಯಕ್ಕಿಂತ ಹೆಚ್ಚು ಒಂದು ಆದರ್ಶ ಮನೆಯ ವಾತಾವರಣವನ್ನು ಕೊಡುತ್ತದೆ ಎಂದರೆ ಅತಿಶಯೋಕ್ತಿಯಾಗದು. ವಿದೇಶೀ ಚಿಕಿತ್ಸಾರ್ಥಿಗಳಿಗೂ ಕೊಲ್ಲೂರು ಶ್ರೀ ಮುಕಾಂಬಿಕೆಯ ದರ್ಶನ, ಧ್ಯಾನ-ಭಜನೆ-ಸಂಗೀತಾಸಕ್ತಿಯ ಮೂಲಕ ಖಿನ್ನತೆಯನ್ನು ದೂರ ಮಾಡುವ ಅವರ ಪ್ರಯತ್ನಗಳನ್ನು ಮೆಚ್ಚಿಕೊಂಡ ಫ್ರಾನ್ಸ್,ಜರ್ಮನಿ,ಜಪಾನ್,ಬ್ರೆಜಿಲ್, ಆಸ್ಟ್ರೇಲಿಯಾ ಮೊದಲಾದ ದೇಶದ ಚಿಕಿತ್ಸಾರ್ಥಿಗಳು ಮತ್ತೆ ಮತ್ತೆ ಅಭಯ ಚಿಕಿತ್ಸಾಲಯದ ಅಭಯಕ್ಕಾಗಿ ಮೊರೆಹೋಗುತ್ತಿದ್ದಾರೆ.

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಭಾರತೀಯ ವೈದ್ಯ ವಿಜ್ಞಾನವಾದ ಆಯುರ್ವೇದ, ಯೋಗ ಮತ್ತು ಪ್ರಾಣಾಯಾಮ ದೀರ್ಘ ಕಾಲದಿಂದ ಅವಗಣನೆಗೆ ಗುರಿಯಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಆದರ್ಶ ಬದುಕಿಗೆ ಮುನ್ನುಡಿ ಬರೆದಿದ್ದ ಮತ್ತು ಇಂದಿಗೂ ಪ್ರಾಸಂಗಿಕವಾಗಿರುವ ನಮ್ಮ ಹಿರಿಯರು ಆಯುರ್ವೇದದಲ್ಲಿ ಉಲ್ಲೇಖಿಸಿದ ಉದಾತ್ತ ಜೀವನ ಮೌಲ್ಯಗಳನ್ನು ಸಮಾವೇಶಿತಗೊಳಿಸುವ ಡಾ.ಶ್ರೀಕಾಂತ್ ಅವರ ಚಿಕಿತ್ಸಾ ಪದ್ದತಿಯಿಂದ ಆಲೋಪತಿ ವೈದ್ಯ ವಿಜ್ಞಾನ ಗುಣಪಡಿಸಲಾಗದ ಆರೋಗ್ಯ ಸಮಸ್ಯೆಗಳಿಗೆ ಸಾವಿರಾರು ರೋಗಿಗಳು ಪರಿಹಾರ ಕಂಡಿದ್ದಾರೆ.

Click here

Click here

Click here

Click Here

Call us

Call us

ಹಣ-ಪ್ರಸಿದ್ಧಿಗಾಗಿ ನಗರಗಳಲ್ಲಿ ನೆಲೆಸ ಬಯಸುವ, ಹಣಗಳಿಕೆಯೇ ಧ್ಯೇಯವಾಗಿರಿಸಿಕೊಂಡ ವೃತ್ತಿಪರರ ನಡುವೆ ಭಿನ್ನರಾಗಿ ಕಾಣುವ, ಕಾಯಕವೇ ಕೈಲಸ ಎಂಬಂತೆ ವೃತ್ತಿ ಜೀವನದ ವ್ಯಸ್ತತೆಯೆಯ ನಡುವೆಯೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಚಾರ ಬಯಸದ ಬಹುಮುಖಿ ವ್ಯಕ್ತಿತ್ವದ ಡಾ. ಶ್ರೀಕಾಂತ್ ರಂತಹ ವೈದ್ಯರಿಂದ ಮಾತ್ರ ನಮ್ಮ ಹಳ್ಳಿ ತನ್ಮೂಲಕ ದೇಶ ಸ್ವಸ್ಥವಾಗಲು ಸಾಧ್ಯ / ಕುಂದಾಪ್ರ ಡಾಟ್ ಕಾಂ ಲೇಖನ /

One thought on “ಪ್ರಕೃತಿಯ ಮಡಿಲಲ್ಲೊಂದು ಕಲಾತ್ಮಕ ಚಿಕಿತ್ಸಾಲಯ

Leave a Reply