ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್-19 ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ 3.50 ಲಕ್ಷ ರೂ. ಹಣ ಪಡೆಯುತ್ತದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಎಲ್ಲೆಡೆ ಹರಿಬಿಟ್ಟಿದ್ದ ಕಮಲಶಿಲೆ ನಿವಾಸಿ ಸುರೇಶ್ ಕುಲಾಲ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಅವರು ನೀಡಿದ ದೂರಿನಲ್ಲಿ ಜಿಲ್ಲಾಡಳಿತದ ವಿರುದ್ಧ ಸುಳ್ಳುಸುದ್ದಿಯನ್ನು ಹರಿಬಿಟ್ಟು ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡುವ ಪ್ರಯತ್ನ ಮಾಡಲಾಗುತ್ತಿದೆ. ಸುಳ್ಳುಸುದ್ದಿ ಹರಿಬಿಟ್ಟ ಆತನನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದರು.
ದೂರಿನನ್ವಯ ಶಂಕರನಾರಾಯಣ ಠಾಣೆಯಲ್ಲಿ ಆಪಾದಿತನ ವಿರುದ್ದ ಐಟಿ ಕಾಯಿದೆ, ಡಿಎಂ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಗೆ ಸದ್ಯ ಬೇಲ್ ದೊರೆತಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಕೋವಿಡ್ ಪಾಸಿಟಿವ್ ಇದೆ ಎಂದು 4 ದಿನವಾದರೂ ಆಸ್ಪತ್ರೆಗೆ ಕರೆದೊಯ್ದಿಲ್ಲ. ಮರವಂತೆಯಲ್ಲಿ ಆಕ್ರೋಶ – https://kundapraa.com/?p=38361 .
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .
► ಉಡುಪಿ ಜಿಲ್ಲೆ: ಶನಿವಾರ 121 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38332 .
► ಪಾಸಿಟಿವ್ ಬರುವವರಲ್ಲಿ ರೋಗದ ಲಕ್ಷಣಗಳಿಲ್ಲ: ಡಾ. ಪ್ರಶಾಂತ್ ಭಟ್ – https://kundapraa.com/?p=38333 .