ಡಿ.19ಕ್ಕೆ ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ, ಥೇಮ್ಸ್ ತಟದ ತವಕ ತಲ್ಲಣಗಳು ಪುಸ್ತಕ ಬಿಡುಗಡೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ಹಿರಿಯ ಪತ್ರಿಕೋದ್ಯಮಿ, ಬರಹಗಾರ ಸತೀಶ ಚಪ್ಪರಿಕೆ ಅವರ ’ಥೇಮ್ಸ್ ತಟದ ತವಕ ತಲ್ಲಣಗಳು’ ಮತ್ತು ಉದಯೋನ್ಮುಖ ಲೇಖಕ ಯೋಗೀಂದ್ರ ಮರವಂತೆ ಅವರ ’ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ’ ಪುಸ್ತಕಗಳು ಡಿ.19ರ ಸಂಜೆ 5ಕ್ಕೆ ಬೆಂಗಳೂರಿನ ಬನಶಂಕರಿ ಎರಡನೆ ಹಂತದ ಬಿ. ವಿ. ಕಾರಂತ ರಸ್ತೆಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಬಿಡುಗಡೆಗೊಳ್ಳಲಿವೆ.

Call us

Click Here

ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಧ್ಯಕ್ಷತೆ ವಹಿಸಿ, ಪುಸ್ತಕ ಬಿಡುಗಡೆ ಮಾಡುವರು. ಹಿರಿಯ ಪತ್ರಕರ್ತ, ಲೇಖಕ ಜೋಗಿ, ಲೇಖಕ, ಅಂಕಣಕಾರ ಕೆ. ಸಿ. ರಘು, ಮೈಲ್ಯಾಂಗ್ ಬುಕ್ಸ್‌ನ ಸಹ ಸಂಸ್ಥಾಪಕ ವಸಂತ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಪುಸ್ತಕ ಪ್ರಕಟಿಸಿರುವ ನವ ಕರ್ನಾಟಕ ಪಬ್ಲಿಕೇಷನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಉಡುಪ ಉಪಸ್ಥಿತರಿರುವರು.

ಸತೀಶ ಚಪ್ಪರಿಕೆ ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕೆ ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಶಿಪ್ ಪಡೆದು ಲಂಡನ್‌ನಲ್ಲಿ ನಡೆಸಿದ ವ್ಯಾಸಂಗದ ಅವಧಿಯಲ್ಲಿ ಗ್ರೇಟ್ ಬ್ರಿಟನ್‌ನಲ್ಲಿ ಮಾಡಿದ ವೃತ್ತಿಪರ ನೆಲೆಯೊಳಗಿನ ಸುತ್ತಾಟ ಮತ್ತು ಆ ವೇಳೆ ಜಾಗತಿಕ ಮಾಧ್ಯಮ ಲೋಕದಲ್ಲಿ ನಡೆಸಿದ ಪ್ರವಾಸದ ಅನುಭವ ಆಧರಿತ ಸೃಜಶೀಲ ಬರೆವಣಿಗೆ ’ಥೇಮ್ಸ್ ತಟದ ತವಕ ತಲ್ಲಣಗಳು.’ ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರಕಿದ್ದು, ಈಗ ಎರಡನೇ ಮುದ್ರಣ ಹೊರಬರುತ್ತಿದೆ.

ಲಂಡನ್ ಸಮೀಪದ ಬ್ರಿಸ್ಟಲ್‌ನಲ್ಲಿ ಕೆಲವು ವರ್ಷಗಳಿಂದ ವೃತ್ತಿ ನಿಮಿತ್ತ ನೆಲೆಸಿರುವ ಯೋಗೀಂದ್ರ ಮರವಂತೆ ಅವರ ಪ್ರಬಂಧ ಸಂಕಲನ ’ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ’ ಆ ದೇಶ ತೀವ್ರವಾಗಿ ಎದುರಿಸಿದ ಕೊರೊನಾ ಕಾಲದ ಅನುಭವ, ವಿದ್ಯಮಾನ, ಪ್ರಸಂಗ, ವ್ಯಕ್ತಿ ವಿಶೇಷಗಳ ನಿರೂಪಣೆ. ಈ ಪುಸ್ತಕಕ್ಕೆ ಹಿರಿಯ ಲೇಖಕ ಎಸ್. ದಿವಾಕರ ಮುನ್ನುಡಿ ಬರೆದಿದ್ದಾರೆ. ಯೋಗೀಂದ್ರ ಅವರ ಮೊದಲ ಪ್ರಬಂಧ ಸಂಕಲನ ’ಲಂಡನ್ ಡೈರಿ-ಅನಿವಾಸಿಯ ಪುಟಗಳು’ ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೯ನೇ ಸಾಲಿನ ರತ್ನಾಕರ ವರ್ಣಿ-ಮುದ್ದಣ ದತ್ತಿ ಪ್ರಶಸ್ತಿ ಪಡೆದಿದೆ.

Leave a Reply