Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಡಾ. ಕಾರಂತರ ಹೆಸರಿನ ಪ್ರಶಸ್ತಿ ಶ್ರೇಷ್ಠವಾದದ್ದು: ಅಶೋಕ್ ಕಾಮತ್
    ಊರ್ಮನೆ ಸಮಾಚಾರ

    ಡಾ. ಕಾರಂತರ ಹೆಸರಿನ ಪ್ರಶಸ್ತಿ ಶ್ರೇಷ್ಠವಾದದ್ದು: ಅಶೋಕ್ ಕಾಮತ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಡಾ. ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿ ಶ್ರೇಷ್ಠವಾದುದು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಶಿಕ್ಷಕರು ಅಭಿನಂದನಾರ್ಹರು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ಉಡುಪಿ ಸರಕಾರಿ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಹೇಳಿದರು.

    Click Here

    Call us

    Click Here

    ಅವರು ಇತ್ತೀಚಿಗೆ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಉಡುಪಿ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್  ಇನ್ನಿತರ ಸಂಘ ಸಂಸ್ಥೆಯ  ಆಶ್ರಯದಲ್ಲಿ ನಡೆದ ಕೋಟ ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಸಮಾರಂಭವನ್ನು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತನಾಡಿ, ಡಾ. ಶಿವರಾಮ ಕಾರಂತರು ಕೋಟದ ಹೆಮ್ಮೆಯ ಸುಪುತ್ರರು. ಅವರ ಹೆಸರಿನಲ್ಲಿ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಿರುವುದು ಕಾರಂತ ಪ್ರತಿಷ್ಠಾನಕ್ಕೆ ಹೆಮ್ಮೆ ಎಂದರು.

    ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯ ವಾಸು ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಸೈಯದ್ ಸಿರಾಜ್ ಅಹಮ್ಮದ್ ಶುಭಹಾರೈಸಿದರು.

    ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯೆ ಸಾಹಿರಾ ಬಾನು, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಉಪಸ್ಥಿತರಿದ್ದರು.

    Click here

    Click here

    Click here

    Click Here

    Call us

    Call us

    ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಕೋಟ ನರೇಂದ್ರ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ  ಅಭೀವೃದ್ದಿ ಅಧಿಕಾರಿ ರವೀಂದ್ರ ರಾವ್ ವಂದಿಸಿದರು.

    ಪ್ರಶಸ್ತಿ ಪುರಸ್ಕೃತರು ಪ್ರಾಥಮಿಕ ಶಾಲಾ ವಿಭಾಗ:
    ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿದ್ಧಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಧರ ಎಸ್ ಐತಾಳ, ಮೆಟ್ಟಿನಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜೀವ ಶೆಟ್ಟಿ ಎಂ., ನೂಲಿಗ್ಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೇಖಾ ಪ್ರಭಾಕರ್, ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾರಿಕಾ, ಹೇರೂರು ಹಿರಿಯ ಪ್ರಾಥಮಿಕ ಶಾಲೆಯ ಮಂಜುಳಾ ಜಯಕರ, ಬ್ರಹ್ಮಾವರ ಎಸ್ ಎಂ ಎಸ್ ಆಂಗ್ಲಮಾಧ್ಯಮ ಶಾಲೆಯ ಶೈಲಾ ಜಾಯ್ಸ್ ಲೂಯಿಸ್, ಗಂಟುಬೀಳು ಬೆಳ್ವೆ ಕಿರಿಯ ಪ್ರಾಥಮಿಕ ಶಾಲೆ ಶಾರದಾ, ಕೆರ್ವಾಶೆ ಮೈನ್ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣ ನಾಯ್ಕ್, ಹುಂಚಾರುಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯ ಶಂಕರ ಪೂಜಾರಿ, ಅರಳಿಕಟ್ಟೆ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಕಿರಣ್‌ರಾಮ್  ಚಿಲ್ಲೂರ ಬಡ್ನಿ, ಕಾಸಾಡಿ ಕಿರಿಯ ಪ್ರಾಥಮಿಕ ಶಾಲೆಯ ಉಷಾ ಹೆಬ್ಬಾರ್, ದುಡ್ಡಿನಗುಳಿ ಬೈಂದೂರು ಕಿರಿಯ ಪ್ರಾಥಮಿಕ ಶಾಲೆಯ ಸವಿತಾ ಬಿಲ್ಲವ ಪ್ರಶಸ್ತಿ ಸ್ವೀಕರಿಸಿದರು.

    ಪ್ರಶಸ್ತಿ ಪುರಸ್ಕೃತರು ಪ್ರೌಢಶಾಲಾ ವಿಭಾಗ:
    ನಾಲ್ಕೂರು ಸರಕಾರಿ ಪ್ರೌಢಶಾಲೆಯ ಕೃಷ್ಣ ನಾಯ್ಕ್ ಕೆ., ಬೀಜಾಡಿ ಸೀತಾಲಕ್ಷ್ಮೀ ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆಯ  ಅರ್ಪಣ ಬಾಯಿ ಕೆ., ಅಮಾಸೆಬೈಲು ಡ್ಯೂಯಲ್ ಸ್ಟಾರ್ ಆಂಗ್ಲಮಾಧ್ಯಮ ಶಾಲೆಯ ವಿಘ್ನೇಶ್ ಜಿ.ಎಲ್., ನುಕ್ಕೂರು ಸರಕಾರಿ ಪ್ರೌಢಶಾಲೆಯ ಸತೀಶ್ ಜಿ., ಮಣೂರು ಪಡುಕರೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ರಾಮದಾಸ್ ಬಿ.ನಾಯಕ್., ಶಿರ್ಲಾಲು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ನಾರಾಯಣ ಪೂಜಾರಿ, ಮಣಿಪಾಲ ಪರ್ಕಳ ಮಾಧವ ಕೃಪ ಶಾಲೆ ಎನ್ ಶಕುಂತಳ ಪರ್ಕಳ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಸುರೇಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೋಟೇಶ್ವರ: ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ – ಬೈಕ್‌ ಸವಾರ ಸಾವು

    09/06/2026

    ಸಾಸ್ತಾನ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ

    09/06/2026

    ಕುಂದಾಪುರ ಶಾಸಕರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿ: ಕೆ. ವಿಕಾಸ್ ಹೆಗ್ಡೆ

    09/06/2026
    Leave A Reply Cancel Reply

    11 − nine =

    Call us

    Click Here

    Call us

    Call us

    Call us
    Highest Viewed Recently
    • ಪ್ರಕೃತಿಗೆ ಮರಳಿ ನೀಡದೆ ಪ್ರತಿಕ್ಷಣ ಬಳಸುತ್ತಿದ್ದೇವೆ: ಆರ್.ಕೆ. ನಾಯರ್
    • ಕೋಟೇಶ್ವರ: ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ – ಬೈಕ್‌ ಸವಾರ ಸಾವು
    • ಸಾಸ್ತಾನ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ
    • ಕುಂದಾಪುರ ಶಾಸಕರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿ: ಕೆ. ವಿಕಾಸ್ ಹೆಗ್ಡೆ
    • ಬೆಳ್ವೆ: ಕುಂದಾಪುರ ಶಾಸಕ ಹಾಗೂ ಸಂಸದರಿಂದ ಮಲ್ಟಿ ಪರ್ಪಸ್ ಸೆಂಟರ್ ವೀಕ್ಷಣೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.