Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಊರು ಹಬ್ಬ- ಸೋಡ್ತಿ ಸೇವೆ!
    ಅಂಕಣ ಬರಹ

    ಊರು ಹಬ್ಬ- ಸೋಡ್ತಿ ಸೇವೆ!

    Updated:01/09/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ದಿಲೀಪ್ ಕುಮಾರ್ ಶೆಟ್ಟಿ

    Click Here

    Call us

    Click Here

    ಜನವರಿ-ಮಾರ್ಚ್ ತಿಂಗಳ್ ಬಂದ್ರೆ ನಮಗೆ ಎಲ್ಲಿಲ್ಲದ್ ಖುಷಿ. ಅದು ಹಬ್ಬದ ಸೀಸನ್. ಕೋಟ, ಸಾಲಿಗ್ರಾಮ, ಕುಂಬಾಶಿ ಅಲ್ಲದೆ ಸಣ್ಣ-ಸಣ್ಣ ಊರು ಬದೆಗೂ ದೇವಸ್ಥಾನದಲ್ಲಿ ಹಾಲು ಹಬ್ಬ ಗೆಂಡ ಸೇವೆ. ಹಬ್ಬದ ದಿನ ರಾತ್ರಿ ಆಟ (ಯಕ್ಷಗಾನ) ಬೇರೆ. (ಗರ್ಗರ್ ಮಂಡ್ಲನೂ ಹಾಡಿ ಬದೆಗ್ ಇರತ್ತ್ ಅಂದ್ ಮಾಡ್ವ). ನಾವ್ ಅಪ್ಪಿ-ತಪ್ಪಿ ಹಬ್ಬಕ್ಕ್ ಹೊಯ್ದೆ ಇದ್ರೂ ಆಟಕ್ಕಂತೂ miss ಇಲ್ಲ. ಬಹುಶ ಆಗಳಿಕ್ ನಾನ್ 5-6 ನೇ ಕ್ಲಾಸ್ಸೆಗ್ ಇದಿನೆನೊ. ಚಂದ್ರ್ ಮಾಷ್ಟ್ರಿಗ್ ಹೆದರ್ಕಂಡ್ ರಾತ್ರಿ ಗೆಂಡಕ್ಕೆ ಮಾತ್ರ ಹೊಯಿ ಬೆಳಿಗ್ಗೆ ಶಾಲೀಗ್ ಹ್ವಾದ್ದೂ ಇತ್ತ್. ಕಟ್ಟಿತನ ನಮಗೆ on the way. ಹಾಂಗಾಯಿ ಬೆಳಿಗ್ಗೆ ಬೇಗೆ ಎದ್ಕಂಡ್, ಅಮ್ಮನ ಹತ್ರ ಪುಸ್ತಕ ತಕಣ್ಕ್ ಅಂದೆಳಿ 10-20 ರೂಪಾಯಿ ಬೇಡ್ಕಂಡ್ ಕಟ್ಟಿತನ ಹಬ್ಬಕ್ಕ್ ಬೇಗ್ ಹೋಯಿ, ಒಂದ್ 2 ice cream, ಪೆಪ್ಸಿ ತಿಂದ್ಕಂಡ್ ಆಚಿ-ಈಚಿ ಗೊತ್ತಿಪ್ಪರ್ ಇದ್ರಾ ಅಂದೇಳಿ ಹುಡ್ಕುಕ್ ಶುರು ಮಾಡ್ತ್. ಯಾರಾದ್ರೂ ಒಬ್ರ್ ಊರ್ ಮನಿಯರ್ ಅಂತೂ ಸಿಕ್ಕೆ ಸಿಕ್ಕತ್ರ್. ಅವ್ರ್ ಹತ್ರ ಹೋಯಿ ನಿಂತ್ ಹಲ್ಲ್ ಗಿಂಜಿದ್ರೆ, ಒಂದ್ ಗನಾ Choco-bar ice cream ಅಂತು ಗ್ಯಾರಂಟಿ. ಹಾಂಗೂ ಹೀಂಗೂ ಅವರ ಹತ್ತಿರ, ಇವರ ಹತ್ತಿರ ಹೊಯಿ ಮರ್ಯಾದಿ ಬಿಟ್ಟ್ ನಿಂತ್ ಹೊಟ್ಟಿ ಬಿರಿಯುವಷ್ಟು ತಿಂದು ತೇಗಿ ಆಯ್ತ್. ಹೊಟ್ಟಿ ಬರ್ತಿ ಆದ ಮೇಲೆ, ಕೈಯಲ್ಲಿ ದುಡ್ಡು ಇದ್ರ ಮೇಲೆ ಇನ್ನೆಂತಕೆ ತಡ, ಸೋಡ್ತಿ ಆಟ ಶುರು.

    _MG_1465ಈ ಸೋಡ್ತಿ ಆಡುದ್ ಅಂದ್ರೆ ಅಷ್ಟು ಸುಲಭ ಅಂದೇಳಿ ಎಣ್ಸಿರ್ಯ. ದೇವ್ರಾಣೆಗೂ ಇಲ್ಲ. ಇದೊಂತರ ಕೌನ್ ಬನೆಗಾ ಕರೋಡ್ಪತಿ ಕಂಡೆಗೆ, ಕೌನ್ ಬನೆಗ ಆಟ-ಸಮಾನ್ ಪತಿ. ಆಡುವ ನಿಯವಮಗಳು ಇಂತಿವೆ. 2 ರುಪಾಯಿ ಕೊಟ್ಟ್ ಆಟ ಸಾಮಾನ್ ಅಂಗಡಿಯನ್ ಹತ್ರ ಹೋಯಿ ಒಂದ್ ಬಾಕ್ಸ್ ನಿಂದ ಒಂದ್ ಚೀಟಿ ಹೆಕ್ಕಕ್. ಆದ್ರೆಗ್ ಒಂದ್ ನಂಬರ್ ಇರತ್ತ್. ಆ ನಂಬರಿಗ್ ಒಂದ್ ಆಟ ಸಾಮಾನ್ ಇಟ್ಟಿರಿತ್ರ್. ನಿಮ್ ನಂಬರ್ ಯಾವ್ದ್ ಅಂದೆಳಿ ಕಂಡ್ ಅದ್ರ್ ಪ್ರಕಾರ ನಿಮ್ಗ್ ಆಟ ಸಾಮಾನ್ ಕೊಡ್ತ. ಇಷ್ಟೆಲ್ಲ detail ಆಗಿ ಯಾಕ್ ಹೇಳ್ದಿ ಅಂದ್ರೆ ಈಗಿನ್ ಮಕ್ಕಳಿಗ್ ಪಾಪ ಸೋಡ್ತಿ ಅಂದ್ರೆ ಯಂತ ಆಂದೆಳಿಯೇ ಗೊತ್ತಿರುದಿಲ್ಲ. ಮೊಬೈಲ್ ಫೋನ್ ಆಟ ಬಿಟ್ರೆ ಬೇರೆ ಯಾವ್ ಆಟನೂ ಗೊತ್ತಿಲ್ಲ. “ಗಡ ಮೊಬೈಲ್ ಹಿಡ್ಕಂಡೆ ಮೂರ್ ಹೊತ್ತು ಮನೆಗೆ ಬಿದ್ಕಂತ್ಯಲಾ, ಹೊರಗೆ ಗುಡ್ಡಿಗೆ ಹೊಯಿ ಆಡುಕ್ ಆಗ್ದಾ” ಅಂದೇಳಿ ಅಮ್ಮ ಕೆಂಡ್ರೆ “ ಹೋಗಮ್ಮ, ground ಅಲ್ಲಿ ಆಟ ಆಡಿದ್ರೆ ಸುಸ್ತ್ ಆತ್ತ್, ಮೈಯೆಲ್ಲ ಬೆವರು ಆತ್ತ್, ಅದೂ ಅಲ್ದೆ ಆ ಗಣೇಶ ನಂಗೆ batting ಕೊಡುದಿಲ್ಲ. ನಾನ್ ಇಲ್ಲೇ mobile ಅಲ್ಲೇ batting ಮಾಡ್ತೆ” ಅಂದೇಳಿ ಹೇಳು ಮಕ್ಕಳ್ ಈಗಿನವರು. ಇಂಥ ಮಕ್ಕಳು ಅಷ್ಟಪ್ಪ ಜನ ಸೇರುವ ಹಬ್ಬಕ್ಕೆ ಕಾಲಿಡ್ತುವ?. ಕಾಲಿಟ್ಟರೂ ಅಮ್ಮನ ಸೆರಗಿನ ಒಳಗೆ ಹೊಕ್ಕಂತರ್ ಬಿಟ್ರೆ, ಎಲ್ಲ ಬಿಟ್ಟ್ ಸೋಡ್ತಿ ಆಡುಕ್ ಬತ್ತುವ?. ಅದು ಅಲ್ದೆ ಹಬ್ಬಕ್ಕೆ ಬಪ್ಪು ಆಟಸಾಮನ್ ಇವರಿಗೆ ಈಗ ಕಣ್ಣಿಗ್ ತೋರತ್ತ್ ಅಂದೇಳಿ ಮಾಡಿರ್ಯಾ, ಅದೆಲ್ಲ ನಮ್ಮ ಕಾಲದಲ್ಲ್ ಆಯ್ತ್ ಬಿಡಿ. ನಮ್ಗೆ ಒಂದ್ ಪಿಂಪಿರ್ಕಿ (whistle) ಯಾರಾದ್ರೂ ಕೊಟ್ರೆ ಅವರನ್ನ ದೇವರ ಕಂಡೆಗೆ ಕಾಂತಿದಿತ್. ಈಗ ಕಾಲ ಬದಲಾಯ್ತೆ. ಹೊಯ್ಲಿ ಬಿಡಿ. ಈಗ ಸೋಡ್ತಿ rules and regulations ಗೊತ್ತಾಯ್ತ್ ಅಲ್ದಾ?. ಈಗ ಏನೇನು ಆಟ ಸಾಮಾನ್ ಇರುತ್ತೆ ಅಂದೇಳಿ ಹೇಳ್ತಿ, ಆಗಳಿಕೆ ಮಕ್ಕಳ್ ಯಾಕೆ ಸೋಡ್ತಿ ಆಡ್ತಾರೆ ಅಂದೇಳಿ ಕಡಿಕೆ ಗೊತಾತ್ತ್ ನಿಮ್ಗೆ.

    _MG_1459ಈ 2 ರೂಪಾಯಿ ಸೋಡ್ತಿಗೆ helicopter, ಬುಲ್ಡೋಜರ್,ಮೆಷಿನ್ ಗನ್, ದೊಡ್ಡ ಲಾರೀ, ಟಿಪ್ಪರ್, automatic ಕಾರ್, ಹೀಂಗೆ costly item ಎಲ್ಲ ಇಟ್ಟಿರ್ತಿದ್ರ್. ಹಂಗಾಯಿ ಬಂದ್ರೆ ಬೆಟ್ಟ ಬರ್ಲಿ, ಇಲ್ದಿರೆ 2 ರೂಪಾಯಿ ಹೊಯಿಲಿ ಅಂದೇಳಿ ಆಟ ಶುರು ಮಾಡ್ತಿದಿತ್. ಮೇಲೆ ಹೇಳದ್ದ್ ಬರೆ ಕೆಲವು item ಬಗ್ಗೆ ಮಾತ್ರ. ಈ ದೊಡ್ಡ ದೊಡ್ಡ item ಅಲ್ದೆ, ಈ ಚಣ್ಣ-ಪುಟ್ಟದ್ದು ಬಾಚಣಿಗೆ, ಪಿಂಪಿರ್ಕಿ, ಸೋಪ್ ಡಬ್ಬಿ, ಪೆನ್, ಪೆನ್ಸಿಲ್ ಹೀಂಗಿದ್ದೆಲ್ಲಾನೂ ಇರ್ತಿತ್ತ್. ಅವೆಲ್ಲ ನಮಗೆ ಬೇಕಾಗಿರ್ಲಿಲ್ಲ. ಆದ್ರೆ ನೀವು ಆಡುಕ್ ಶುರು ಮಾಡ್ರ್ ಮೇಲೆ ಗೊತಾತಿದಿತ್, ಬಡ್ಡಿಮಗಂದ್ 99% ನಿಮ್ಗ್ ಸಿಕ್ಕುದ್ ಬಾಚಣಿಗೆ, ಸೋಪ್ ಡಬ್ಬಿ, ಟಕ್ಕು-ಟಿಕ್ಕು ಸೌಂಡ್ ಮಾಡು ಆಟ ಸಾಮಾನ್.. ಹೀಂಗೆ ಬರೀ ಸಣ್ಣ ಸಣ್ಣ ಆಟದ ಸಾಮಾನ್ ಬಿಟ್ರೆ ಈ ಕಾರ್, helicopter, ಬುಲ್ಡೊಜರ್ ಕಂಡೆಗಿದ್ದ್ ದೊಡ್ಡ್ ದೊಡ್ಡ್ ಆಟ ಸಾಮಾನ್ ಯಾರಿಗ್ ಸಿಕ್ಕದ್ದೂ ನನ್ನ್ ಜೀವಮಾನದೆಗೆ ಕಂಡಿಲ್ಲ. ಅವ ಆ ದೊಡ್ಡ ಆಟ ಸಾಮಾನ್ ಚೀಟಿನ ಸೋಡ್ತಿ ಬಾಕ್ಸ್ ಒಳಗೆ ಇಡುದೆ ಇಲ್ಲ ಅನ್ಸುತ್ತೆ. ಅನ್ಸುದ್ ಎಂತ ದೇವ್ರಾಣೆಗೂ ಇಡುದಿಲ್ಲ ಬಿಡಿ. ಇಷ್ಟೇ ಅಲ್ಲ, ನಿಮಗೆ ಈಗ ಬಾಚಣಿಗೆ ಬಂತ್ ಅಂದೇಳಿ ಮಾಡುವ, ನಿಮ್ಗೆ ಸಿಕ್ಕದ್ದ್ ಆಟ ಸಾಮಾನ್ ನಿಮಗೆ ಲೈಕ್ ಇಲ್ಲ, ಬ್ಯಾಡಾ ಅಂಬಗ್ ಆರೆ ಅದನ್ನ ವಾಪಾಸ್ ಕೊಟ್ಟ್ 50% discount ಗೆ ಮತ್ತ್ ಪುನಾ ಸೋಡ್ತಿ ಆಡ್ಲಕ್. ಅಂದ್ರೆ ನಿಮಗೆ ಸಿಕ್ಕ ಆಟ ಸಾಮಾನ್ ವಪಾಸ್ ಕೊಟ್ಟು, ಮತ್ತೆ ಎರಡು ರೂಪಾಯಿ ಬದಲಿಗೆ ಒಂದು ರೂಪಾಯಿ ಕೊಟ್ರೆ ಸಾಕ್, ಇನ್ನೊಂದ್ ಸಲ ಆಟ ಆಡ್ಲಕ್. ಹೀಂಗೆ ಆಡಿ ಆಡಿ, ಬಂದ್ ಬಾಚಣಿಗಿನ ವಾಪಾಸ್ ಕೊಟ್ಟ್, ಅದಕ್ಕ್ ಮತ್ತ್ ಒಂದ್ ರೂಪಾಯಿ ಸೇರ್ಸಿ ಆಡಿ ಸೋಪ್ ಡಬ್ಬಿ ಸಿಕ್ಕುದ್, ಅದನ್ನ ಮತ್ತ್ ವಾಪಾಸ್ ಕೊಟ್ಟ್ ಆಡ್ರೆ ಬಾಚಣಿಗಿ ಸಿಕ್ಕುದ್. ಹೀಂಗೆ 10 ರೂಪಾಯಿ ಮುಂಡಾಮುಚ್ಚಿ ಹೊಯ್ತ್. ಇದರ ಹೊಂಡ ಕಡುಕೆ, ಸಾಯ್ಲಿ ಅಂದೇಳಿ ಆಡುದ್ ಕೈದ್ ಮಾಡ್ತ್. ದಕ್ಕಿಬಲಿಯೂ ಮುಗಿತ ಬಂತ್. ಗಂಟಿ ಕಂಡ್ರೆ 9 ಆಯಿತ್. ಎಲ್ಲ ಹ್ವಾಪ ಹ್ವಾಪ ಅಂದೆಳಿ ಶಾಲಿಗ್ ಹೊರ್ಡುಕ್ ಶುರು ಮಾಡ್ತ್. ಅಜಿತ 5 ರೂಪಾಯಿ ನಾಯಿ ಉಂಡಿ (ಗೋಲಿ ಬಜ್ಜಿ ಕಂಡೆಗ್ ಇದ್ದದ್ದ್ ತಿಂಡಿ) ತಕಂಡ.

    ಹಾಂಗೆ ನಾಯಿ ಉಂಡಿನ ತಿನ್ನತ್ತ, pepsi ಚೀಪುತ್ತ ಶಾಲಿಗ್ ಹೊರ್ಡ್ತ್. ನಾವು ಹೆಲಿಕಾಪ್ಟರ್ ಸಿಗ್ಲಿ ಅಂದೆಳಿ ಕಷ್ಟ ಪಟ್ಟು ಸೋಡ್ತಿ ಮೇಲೆ ಸೋಡ್ತಿ ಆಡಿ ಕಡೆಗೂ ಬಾಚಣಿಗೆ ಕೈಯಲ್ಲಿ ಹಿಡ್ಕಂಡ್ ಬಂದ್ರೆ, ನಮ್ಮಲ್ಲಿ ಒಬ್ಬ ಅದೇ ಅಂಗಡಿ ಇಂದ ಒಳ್ಳೆ ಹೆಲಿಕಾಪ್ಟರನ್ನೇ ಎತ್ತಿದ. (ಯಾರ್ ಅಂದೆಳಿ ಹೆಳ್ರೆ ಇನ್ನೊಂದ್ ಸಲ ಸಿಕ್ರೆ ಬಡ್ಗಿ guarantee). ಹಾಂಗೆ ಹಡಿ ಮಾಡ್ಕಂತ ಹಬ್ಬದ ದಿನ ರಾತ್ರಿಗೆ ಆಟಕ್ಕೆ ಯಾರಲ್ಲ ಬತ್ರ್, ಎಷ್ಟೋತಿಗ್ ಹೊರ್ಡುದ್, ಹ್ಯಾಂಗ್ ಹ್ವಾಪುದ್, ಯಾರ್ ಮನಿ ಪಾಗರ ಹಾರಿ ಮಾವಿನಕಾಯಿ ಕೀಳುದು, ಯಾವ್ ಗೆದ್ದಿ ನೆಲ್ಗಡ್ಲಿ ತೆಗುದ್.. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಬಗ್ಗೆ ಗಾಡವಾಗಿ ಚರ್ಚೆ ನಡೆಯಿತು. ಮತ್ತೆ ಆಟಕ್ಕ್ ಹ್ವಾಪುದ್ ಅಂದ್ರೆ ಇಷ್ಟೆಲ್ಲ ಪೂರ್ವ ತಯಾರಿ ಇಲ್ದೇ ಇದ್ರೆ ಹ್ಯಾಂಗೆ ಅಲ್ದೆ? ಈ ಆಟಕ್ಕ್ ಹ್ವಾಪು storyನ ಮುಂದಿನ ತಿಂಗಳೆಗ್ ಹೇಳ್ತಿ. ಕಾಯ್ತ ಇರಿ ಆಗ್ದಾ?

    Click here

    Click here

    Click here

    Call us

    Call us

    Like this:

    Like Loading...

    Related

    Dileep kumar Shetty
    Share. Facebook Twitter Pinterest LinkedIn Tumblr Telegram Email
    ಒಡ್ಡೋಲಗ
    • Website
    • Facebook

    ಯುವ ಬರಹಗಾರ ದಿಲೀಪ್ ಕುಮಾರ್ ಶೆಟ್ಟಿ ಅವರು ಮೂಲತಃ ಕುಂದಾಪುರ ತಾಲೂಕಿನ ಗುಳ್ಳಾಡಿಯವರು. ಬಿಇ ಪದವೀಧರರಾದ ಅವರು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿ ದುಡಿಯುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಕಂಗ್ಲಿಷ್ ನಡುವೆಯೂ ಹುಟ್ಟೂರಿನ ಪ್ರೀತಿಯಿಂದ ಭಾಷಾಭಿಮಾನ ಮೆರೆಯುತ್ತಿರುವ ದಿಲೀಪ್ ಕುಮಾರ್ ಶೆಟ್ಟಿ, ಸಂಪೂರ್ಣ ಕುಂದಾಪ್ರ ಕನ್ನಡದ ಕಥೆ-ಕವಿತೆಗಳನ್ನೊಳಗೊಂಡ ಅಂಕಣ 'ಕಥೆ-ಕವಿತೆಗಳ ಒಡ್ಡೋಲಗ' ವನ್ನು ಬರೆಯಯುತ್ತಾರೆ

    Related Posts

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಕೋಟ: ಕೆ. ವಾಸುದೇವ ನಾಯಕ್ ಸ್ಮರಣಾರ್ಥ ತಂಗುದಾಣ ಲೋಕಾರ್ಪಣೆ

    27/02/2025

    ಹುಲಿಯಾಸ, ವಿಟ್ಲಪಿಂಡಿ… ಆ ಶ್ರೀ ಕೃಷ್ಣ ಜನ್ಮಾಷ್ಟಮಿ ರಂಗ್ ಕಾಣ್ದೇ ಇಪ್ಪುಕ್ ಆತ್ತೇ

    07/09/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಟದ ಪಂಚವರ್ಣದಿಂದ ಸಾಲುಮರದ ತಿಮ್ಮಕ್ಕನಿಗೆ ನುಡಿನಮನ
    • ಸರಸ್ವತಿ ವಿದ್ಯಾಲಯದಲ್ಲಿ ಸಿ.ಎ ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮ 
    • ಕುಂದಾಪುರ ಆರ್.ಎನ್. ಶೆಟ್ಟಿ ಸಂಯುಕ್ತ ಪ.ಪೂ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ
    • ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಸಂಭ್ರಮ
    • ವಿದ್ಯಾರ್ಥಿಗಳು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಿ: ಆರ್‌ಜೆ ನಯನಾ ಶೆಟ್ಟಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d