Author: Kundapra.com

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕೊರಗ ಸಂಪ್ರದಾಯದ ಸಾಂಸ್ಕೃತಿಕ ಕೊಂಡಿಯಾಗಿ, ಕೊರಗರ ಸಮುದಾಯದ ಸಂಪ್ರದಾಯ, ಸಂಸ್ಕೃತಿಯನ್ನು ಸಂಗೀತದ ಮೂಲಕ ಅನಾವರಣಗೊಳಿಸುತ್ತಾ  ಇಂದಿಗೂ ನಮ್ಮ ನಡುವೆ ಜನಜನಿತರಾಗಿರುವ ಹಿರಿಯಜ್ಜ ಮರವಂತೆಯ ಭುಜಂಗ ಕೊರಗ. ಭುಜಂಗ ಅವರು ಸಾಮಾಜಿಕವಾಗಿ ನಿರ್ಲಕ್ಷಕ್ಕೆ ಒಳಗಾದ ಮತ್ತು ಕಡುಬಡತನದ ಕೊರಗ ಸಮುದಾಯದಿಂದ ಬಂದವರು.  ಕುಲಕಸುಬಾದ ಬೀಳು, ಬಿದಿರಿನ ಕೃಷಿಉಪಯೋಗಿ ಸಾಮಗ್ರಿಗಳನ್ನು ತಯಾರಿಸಿ ಮಾರುವ ಮತ್ತು ಕೊರಗರ ಸಾಂಪ್ರದಾಯಿಕ ವಾದನದ ತಂಡದಲ್ಲಿ ದುಡಿಯುವ ಮೂಲಕ ಬದುಕುಸವೆಸಿದವರು. ಈ ವಾದನ ತಂಡದ ಡೋಲು, ಚೆಂಡೆ ಬಾರಿಸುವುದರಲ್ಲೂ ಕುಶಲಿಗರಾಗಿರುವ ಅವರು ಕೊಳಲು ನುಡಿಸುವುದರಲ್ಲಿ ವಿಶೇಷ ಪರಿಣತಿ ಸಾಧಿಸಿದರು. ತಮ್ಮದೇ ಆದ ತಂಡದ ನೇತೃತ್ವ ವಹಿಸಿ ಊರ, ಪರ ಊರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತ ಬಂದವರು. ಅವರ ವಾದನ ಕಲಾಪರಿಣತಿಯನ್ನು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಕಲೆಗಳಿಗೆ ಸಂಬಂಧಿಸಿದ ಸ್ಥಳೀಯ ಮಟ್ಟದಿಂದಾರಂಭಸಿ, ರಾಜ್ಯಮಟ್ಟದ ವರೆಗಿನ ಹಲವು ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗಿದೆ. ತಮ್ಮ ಕಲಾ ಪ್ರಕಾರದ ತರಬೇತುದಾರರಾಗಿಯೂ ಅವರು ಕೆಲಸಮಾಡಿದ್ದಾರೆ. ತಮ್ಮ ಪರಿಣತಿಗಾಗಿ ಹತ್ತಾರು ಸನ್ಮಾನಗಳನ್ನೂ ಅವರು ಪಡೆದಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಾವಣ್ಯ ರಿ. ಬೈಂದೂರು ಇದರ ಕಾರ್ಯಕಾರಿಣಿ ಸಮಿತಿ ನೂತನ ಅಧ್ಯಕ್ಷರಾಗಿ ಗಿರೀಶ್ ಬೈಂದೂರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ರವೀಂದ್ರ ಶ್ಯಾನುಭಾಗ್, ಎಚ್. ಉದಯ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಮೋಹನ್ ಕಾರಂತ್, ಜೊತೆ ಕಾರ್ಯದರ್ಶಿಯಾಗಿ ಎಚ್. ವಿಶ್ವನಾಥ ಆಚಾರ್ಯ, ನಾಗರಾಜ ಕಾರಂತ್, ಕೋಶಾಧ್ಯಕ್ಷರಾಗಿ ನಾಗರಾಜ ಪಿ. ಯಡ್ತರೆ, ಸಂಘಟನಾ ಕಾರ್ಯದರ್ಶಿಯಾಗಿ ಮೂರ್ತಿ ಬೈಂದೂರು, ಸತ್ಯಪ್ರಸನ್ನ, ಗಣೇಶ ಪರಮಾನಂದ, ವ್ಯವಸ್ಥಾಪಕರಾಗಿ ಬಿ. ಗಣೇಶ ಕಾರಂತ್, ಬಿ.ರಾಮ್ ಟೈಲರ್, ಗಣಪತಿ ಎಸ್. ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಿಜೆಪಿ ಯುವಮೋರ್ಚಾದ ಕಂಬದಕೋಣೆ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ರಾಘವೇಂದ್ರ ದೇವಾಡಿಗ ಕಂಬದಕೋಣೆ, ಕಾರ್ಯದರ್ಶಿಯಾಗಿ ರಮೇಶ್ ದೇವಾಡಿಗ ಅವರನ್ನು ನೇಮಿಸಿಲಾಗಿದೆ ಎಂದು ಬೈಂದೂರು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠ ಪ್ರವಚನಗಳಲ್ಲ, ಪಠ್ಯಕ್ಕಿಂತ ಹೊರತಾದ ಅಮೂಲ್ಯ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾದರೆ ಹತ್ತು ಹಲವು ಮುಖಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಪುರಾಣ ಕಾವ್ಯಗಳ ಓದು ಮತ್ತು ಅಧ್ಯಯನ ವಿದ್ಯಾರ್ಥಿಗಳಲ್ಲಿ ನೈತಿಕವಾದ ಜಾಗೃತಿಯನ್ನುಂಟು ಮಾಡುತ್ತದೆ – ಎಂದು ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷರಾದ ಡಾ| ಕಾಶೀನಾಥ ಪೈ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ| ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ(ರಿ) ಗಂಗೊಳ್ಳಿ ಇವರು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಆಯೋಜಿಸಿದ ಗಮಕ-ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಯುವಕ ಮಂಡಲದ ಅಧ್ಯಕ್ಷ ಕಿರಣ್ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಗಮಕದ ಹುಟ್ಟು, ಉದ್ದೇಶದ ಸ್ವರೂಪದ ಬಗೆಗೆ ಪ್ರಾಸ್ಥಾವಿಕ ಮಾತುಗಳನ್ನು ಆಡಿದರು. ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಸದಾನಂದ ವೈದ್ಯ ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ್ ಎಚ್. ಈ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಉಡುಪಿ ಜಿಲ್ಲೆಯಲ್ಲಿಯೇ ಕಾರಂತ ಥೀಂ ಪಾರ್ಕ್ ನಿರಂತರ ಕಾರ್ಯಕ್ರಮ ಮೂಲಕ ಕಲಾವಿದರ ಮತ್ತು ಕಲಾ ರಸಿಕರ ಸ್ವರ್ಗವಾಗಿದೆ. ಕಾರಂತರ ಸ್ಮರಣೆಯ ಈ ಥೀಂ ಪಾರ್ಕ್‌ನಲ್ಲಿ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲಿ, ಕಲೆ ಮತ್ತು ಕಲಾವಿದರಿಗೆ ಆಶ್ರಯ ನೀಡಲಿ ಎಂದು ನಟ, ನಿರ್ದೇಶಕ ರಂಗಕರ್ಮಿ ರಘು ಪಾಂಡೇಶ್ವರ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾದ ದಿಬ್ಬಣ ೨೦೧೬ ಇದರ ಎಂಟನೇಯ ದಿನದ ಕಾರ್ಯಕ್ರಮ ಕುಂದಾಪ್ರ ಕನ್ನಡ ಕಿರು ಚಿತ್ರೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಮೇಘನಾ ಪ್ರಭು ಎಲ್ಲರಂತಲ್ಲ ನನ್ನ ಕಾರಂತ ಎನ್ನುವ…

Read More

ನಮಸ್ಕಾರ ಸರ್ ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ, ನಿಮ್ಮ ನೆನಪುಗಳು ಮತ್ತು ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನ್ನ ವ್ಯಕ್ತಿತ್ವದ ಭಾಗವೇ ಆಗಿದ್ದೀರಿ. ನನ್ನೊಳಗೆ ನೀವು ಇರುವುದರಿಂದಲೋ ಅಥವಾ ನೀವು ನನ್ನಿಂದ ಹೊರತಾದ ಸಂಗತಿ ಎಂದು ಅನ್ನಿಸಿದ ಕಾರಣದಿಂದಲೋ ಗೊತ್ತಿಲ್ಲ ನಿಮ್ಮ ನೆನಪು ನನಗೆ ಆಗುವುದೇ ಇಲ್ಲ. ಆದರೆ, ನನ್ನ ನಡೆಯಲ್ಲಿ, ನುಡಿಯಲ್ಲಿ, ಬರೆವ ಬೆರಳುಗಳ ತುದಿಯಲ್ಲಿ ನಿಮ್ಮ ನೆರಳಿದೆ. ನನ್ನ ಆಲೋಚನೆಗಳಲ್ಲಿ ನೀವಿದ್ದೀರಿ. ನನ್ನೊಳಗೆ ನೀವು ನನಗೇ ಗೊತ್ತಿಲ್ಲದಂತೆ ಆವರಿಸಿಕೊಂಡಿದ್ದೀರಿ. ನಿಮ್ಮ ನೆನಪುಗಳು ಬಾರದಷ್ಟು ನೀವು ನನ್ನೊಳಗೆ ಸೇರಿಕೊಂಡಿದ್ದೀರಿ. ಈ ದಿನ ಎಲ್ಲರೂ ಶಿಕ್ಷಕರನ್ನು ನೆನೆವಾಗ ಇದೆಲ್ಲ ಹೇಗಾಯಿತು ಎಂದು ಅಚ್ಚರಿಪಡುತ್ತಿದ್ದೇನೆ. ನೀವಂದುಕೊಂಡಂತೆ ನಾ ನಡೆಯಬೇಕೆಂದು ನೀವೆಂದೂ ಒತ್ತಡಹೇರಿದವರಲ್ಲ. ನಿಮ್ಮ ಆಲೋಚನೆಗಳೆಂದೂ ನನ್ನ ಭುಜದ ಮೇಲೆ ಕುಳಿತು ನನ್ನನ್ನು ಉಸಿರುಗಟ್ಟಿಸಲಿಲ್ಲ. ನಿಮ್ಮ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದಿರಲಿ, ನೀವೇ ನನ್ನ ಅಭಿಪ್ರಾಯಗಳನ್ನು ಮನ್ನಿಸಿದ್ದೀರಿ, ಒಪ್ಪಿ ನಡೆದಿದ್ದೀರಿ. ಹೀಗೆ ನಡೆಯುತ್ತಲೆ ನೀವು ಹಿಂಬಾಲಿಸಿದಂತೆ ಅನ್ನಿಸಿದರೂ ನಾನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವೊಂದು ಕೆಲಕಾಲ ಈ ಪರಿಸರದವರನ್ನು ಆತಂಕಕ್ಕೀಡು ಮಾಡಿತ್ತು. ಚಿಂತಾಕ್ರಾಂತರಾದ ಮನೆಮಂದಿ ಅರಣ್ಯ ಇಲಾಖೆಗೆ ಸಂದೇಶ ರವಾನಿಸಿದರು. ಕೆಲಹೊತ್ತಿನಲ್ಲಿ ಉರಗ ತಜ್ಞರೂ ಬಂದು ಹುಡುಕಾಟ ಆರಂಭಿಸಿದರು. ಕಾಳಿಂಗ ಸರ್ಪವನ್ನು ನೋಡಲು ಮನೆ ಎದುರೊಂದಿಷ್ಟು ಜನ. ಆದರೆ ಮನೆಯಲ್ಲ ಹುಡುಕಾಡಿದ ಮೇಲೆ ಉರಗ ತಜ್ಞರ ಕಣ್ಣಿಗೆ ಬಿದ್ದದ್ದು ಮಾತ್ರ ನಾಗರಹಾವಿನ ಮರಿ! ಅರೆ ಮನೆಯಲ್ಲಿ ಸೇರಿದ್ದ ಕಾಳಿಂಗ ಸರ್ಪ ಮಾಯವಾಯ್ತು ಅಂದುಕೊಂಡಿರಾ? ವಾಸ್ತವಾಗಿ ಅಲ್ಲಿ ಕಾಳಿಂಗ ಸರ್ಪವೇ ಬಂದಿರಲಿಲ್ಲ! ಮನೆಯವರಿಗೆ ಹಾವಿನ ಪರಿಚಯವೂ ಇಲ್ಲದ್ದರಿಂದ, ಮನೆಯೊಳಕ್ಕೆ ಬಂದ ಹಾವನ್ನು ಸ್ಪಷ್ಟವಾಗಿ ಗಮನಿಸದೇ ಏಕಾಏಕಿ ಕಾಳಿಂಗ ಸರ್ಪವೆಂದು ಕೂಗಾಡಿಕೊಂಡಿದ್ದಾರೆ. ಆದರೆ ಅಲ್ಲಿಗೆ ಒಂದಿದ್ದು ಮರಿ ನಾಗರಹಾವು. ಕುಂದಾಪ್ರ ಡಾಟ್ ಕಾಂ ಸುದ್ದಿ. ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಹೆಮ್ಮಾಡಿಯ ಉರಗ ತಜ್ಞ ಜೋಸೆಫ್ ಲೂವೀಸ್ ಕ್ಷೇತ್ರ ಶಿಕ್ಷಣಾಧಿಕಾಗಳ ಕಛೇರಿ ಸಮೀಪದ ಮನೆಯನ್ನು ಸೇರಿಕೊಂಡಿದ್ದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಅಂತು…

Read More

ಕುಂದಾಪುರ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಗೆ ಯುವ ಪತ್ರಕರ್ತ, ಕುಂದಾಪ್ರ ಡಾಟ್ ಕಾಂ ವೆಬ್ ಪೋರ್ಟೆಲ್ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಭಾಜನರಾಗಿದ್ದಾರೆ. ಗ್ರಾಮೀಣ ಪ್ರದೇಶವನ್ನೇ ಕೇಂದ್ರವಾಗಿಟ್ಟುಕೊಂಡು ಪತ್ರಿಕೋದ್ಯಮದ ಹೊಸ ಆಯಾಮಕ್ಕೆ ಮುನ್ನುಡಿ ಬರೆದು ಕುಂದಾಪ್ರ ಡಾಟ್ ಕಾಂ ವೆಬ್ ಪೋರ್ಟೆಲ್ ಮೂಲಕ ಕುಂದಾಪುರ ತಾಲೂಕಿನ ಸಮಗ್ರ ಚಿತ್ರಣವನ್ನು ಒದಗಿಸಿ ಕುಂದನಾಡು ಹಾಗೂ ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ವೆಬ್ ಪತ್ರಿಕೋದ್ಯಮಿಯಾಗಿರುವುದಲ್ಲದೇ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯನ್ನು ಆರಂಭಿಸಿದ್ದ ಸುನಿಲ್ ಅವರ ಬರಹಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪಿಯುಸಿ ದಿನಗಳಲ್ಲಿ ’ಕರಾವಳಿ ಧ್ವನಿ’ ಪತ್ರಿಕೆಯ ಬೈಂದೂರು ಭಾಗದ ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಬೈಂದೂರನ್ನು ಸಮಗ್ರವಾಗಿ ಪರಿಚಯಿಸುವ ’ಬೈಂದೂರು ಡೈರೆಕ್ಟರಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಭದ್ರತೆ ನೀಡಲು ಸಾಗುವಳಿ ಜಮೀನಿನಲ್ಲಿ ಗರಿಷ್ಟ ಕೃಷಿ ಆಹಾರ ಉತ್ಪಾದನೆಯ ಅಗತ್ಯವಿದೆ. ರೈತರು ಕೇವಲ ಒಂದೇ ಬೆಳೆಯನ್ನು ನಂಬಿಕೊಳ್ಳದೇ ಸಮಗ್ರ ಕೃಷಿಗೆ ಪೂರಕವಾದ ಉಪಕಸಬುಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಈಗಾಗಲೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಸೂಚನೆ ನೀಡಲಾಗಿದೆ ಎಂದು ಜಿಪಂ ಸದಸ್ಯ ಶಂಕರ ಪೂಜಾರಿ ಹೇಳಿದರು. ಗೋಳಿಹೊಳೆ ಶ್ರೀ ಮಹಿಷಮರ್ಧಿನಿ ಸಭಾಭವನದಲ್ಲಿ ಉಡುಪಿ ಜಿಪಂ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಸಹಯೋಗದಲ್ಲಿ ಬೈಂದೂರು ಹೋಬಳಿ ಮಟ್ಟದಲ್ಲಿ ನಡೆದ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿ, ಕೃಷಿ ಕಾರ್ಮಿಕರ ಕೊರತೆಯಿದ್ದರೆ ಇನ್ನೊಂದೆಡೆ ತಮ್ಮ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಮತ್ತು ಬೆಲೆ ಪಡೆಯಲು ಹರಸಾಹಸ ಪಡೆಯುವ ಸ್ಥಿತಿಯಲ್ಲಿದ್ದಾರೆ. ಈ ನೆಲೆಯಲ್ಲಿ ಕೃಷಿ ಸಂಬಂಧಿತ…

Read More