ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವರು ಕಳ್ಳತನ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಗಂಗೊಳ್ಳಿಯಲ್ಲಿರುವ ಬಿಡಾಡಿ ಜಾನುವಾರುಗಳನ್ನು ಹಿಡಿದು ಬುಧವಾರ ನೀಲಾವರ ಗೋಶಾಲೆಗೆ ಸಾಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಹಾಗೂ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಅನೇಕ ಜಾನುವಾರುಗಳು ಗೋಕಳ್ಳರ ಪಾಲಾಗಿತ್ತು. ಹೀಗಾಗಿ ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ನಿರ್ಧಾರ ಕೈಗೊಂಡ ಹಿಂಜಾವೇ ಕಾರ್ಯಕರ್ತರು, ಕಳೆದ ನಾಲ್ಕೈದು ದಿನಗಳಿಂದ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯ ನಡೆಸಿದ್ದರು. ಹೀಗೆ ಹಿಡಿದ ಸುಮಾರು ೨೪ ಜಾನುವಾರುಗಳನ್ನು ಬುಧವಾರ ವಾಹನಗಳಲ್ಲಿ ನೀಲಾವರ ಗೋಶಾಲೆಗೆ ಸಾಗಿಸಿದ್ದಾರೆ. ಹಿಂಜಾವೇ ಕಾರ್ಯಕರ್ತರ ಈ ಕಾರ್ಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುವೇದ ದೇವಾಡಿಗ, ಬೈಂದೂರು ಕಾರ್ಯಕಾರಣಿ ಸದಸ್ಯ ರತ್ನಾಕರ ಗಾಣಿಗ, ಬೈಂದೂರು ಪ್ರಧಾನ ಕಾರ್ಯದರ್ಶಿ ನವೀನ ದೊಡ್ಡಹಿತ್ಲು, ಸಹ ಕಾರ್ಯದರ್ಶಿ ಮೋಹನ ಖಾರ್ವಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.22ರ ಬುಧವಾರ 281 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಒಟ್ಟು ಪ್ರಕರಣಗಳಲ್ಲಿ 160 ಪುರುಷರು, 100 ಮಹಿಳೆಯರು, 21 ಮಕ್ಕಳು ಸೇರಿದ್ದಾರೆ. 135 ನೆಗೆಟಿವ್: ಈ ತನಕ ಒಟ್ಟು 25,748 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 22,595 ನೆಗೆಟಿವ್, 2,686 ಪಾಸಿಟಿವ್ ಬಂದಿದ್ದು, 467 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 135 ನೆಗೆಟಿವ್, 281 ಪಾಸಿಟಿವ್ ಬಂದಿದೆ. ಒಟ್ಟು 2,004 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 899 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 2,686 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,776 ಮಂದಿ ಬಿಡುಗಡೆಯಾಗಿದ್ದು, 899 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 11 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಮಾಹಿತಿಗೆ ಕೆಲವು ಸಮಯದ ನಂತರ ಇದೇ ಲಿಂಕ್ ನೋಡಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯ, ಕೃಷಿ ಇಲಾಖೆಯ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಬೇಕಾದ ಸಮುದಾಯ ಸಹಾಯಕರು ಹಾಗೂ ಸಮುದಯ ಸಂಪನ್ಮೂಲ ವ್ಯಕ್ತಿಗಳನ್ನು ಹೊರಗುತ್ತಿಗೆ ಮೇಲೆ ಪಡೆಯಲು ಇ ಪ್ರೊಕ್ಯರ್ಮೆಂಟ್ ನ ನಿಬಂದನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಟೆಂಡರ್ ಆಹ್ವಾನಿಸಲಾಗಿದೆ.ಆಸಕ್ತರು ಜುಲೈ 24 ರ ಸಂಜೆ 5 ಗಂಟೆಯ ಒಳಗೆ www.eproc.karnataka.gov.in ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಡಿಗೆ ವಾಹನ: ಟೆಂಡರ್ ಆಹ್ವಾನ ಉಡುಪಿ ಜಿಲ್ಲೆಯ, ಕೃಷಿ ಇಲಾಖೆಗೆ 2020-21ನೇ ಸಾಲಿನಲ್ಲಿ ಕೇಂದ್ರದ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯನ ಮತ್ತು ಆತ್ಮ ಯೋಜನೆಯಡಿ ಬಾಡಿಗೆ ವಾಹನ ಪಡೆಯಲು ಟೆಂಡರನ್ನು ಆಹ್ವಾನಿಸಲಾಗಿದೆ. ಇಚ್ಛೆಯುಳ್ಳ ಸಂಸ್ಥೆಯವರು ರೂ 100/- ಪಾವತಿಸಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ-304, ಸಿ ಬ್ಲಾಕ್, ಎರಡನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ ಇಲ್ಲಿಂದ ಕಛೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಪಿಯುಸಿ/ಐಸಿಎಸ್ಸಿ/ಸಿಬಿಎಸ್ಸಿ ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ವಾಣಿಜ್ಯ ಮತ್ತು ಕಲಾ ವಿಭಾಗದ (ವಿಜ್ಞಾನದ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ) ಮತೀಯ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದ ವಿದ್ಯಾರ್ಥಿಗಳಿಗೆ “ನಾಗರಿಕ ಸೇವೆಗಳ ತರಬೇತಿ” ಸಂಯೋಜಿತ ಪದವಿ ಕೋರ್ಸ್ಗಳಿಗೆ(ಃ.ಂ&B.ಛಿom ತಿiಣh IಂS/ಏAS ಛಿoಚಿಛಿhiಟಿg ) ಆನ್ಲೈನ್ ಮಾಲಕ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರತಿಭೆ ಆಧಾರದ ಮೇಲೆ ಮೊದಲ 50 ವಿದ್ಯಾರ್ಥಿಗಳನ್ನು ಮಾತ್ರ ಕಿರುಪಟ್ಟಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ https://gokdom.kar.nic.in ನಲ್ಲಿ ನೋಡಬಹುದು. ಷರತ್ತುಗಳು : ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ವರ್ಗ-1 ಕ್ಕೆ 4.5 ಲಕ್ಷ ಮತ್ತು ಇತರರಿಗೆ 3.5 ಲಕ್ಷ ಮೀರಿರಬಾರದು, ಉಚಿತ ಊಟ, ವಸತಿ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡAತೆ ಸಂಪೂರ್ಣ ಸನಿವಾಸಿ ಕೋರ್ಸ್ ಆಗಿರುವುದು. ದ್ವಿತೀಯ ಪಿಯುಸಿ ಕಲಾ ಹಾಗೂ ವಾಣಿಜ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಅಭಿರಕ್ಷ ಸಾಂಘಿಕ ಬಳಗ ನೇರಳಕಟ್ಟೆ ನೇತೃತ್ವದಲ್ಲಿ ಹಸಿರು ನೇರಳಕಟ್ಟೆ ಕಾರ್ಯಕ್ರಮಕ್ಕೆ ಶ್ರೀ ಮಹಾಲಕ್ಷ್ಮಿ ಸತ್ಯನಾಥ ಮಂದಿರ ಶ್ರೀಗಿರಿ ನೇರಳಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭ ರಾಘವ ಆಜ್ರಿ ಸಾಹಿತ್ಯದ “ನನ್ ಇಕ್ಲೀಪದ್ ಗಂಡ” ಎನ್ನುವ ಕುಂದಾಪ್ರ ಕನ್ನಡ ಆಲ್ಬಮ್ ಹಾಡೊಂದನ್ನು ಸ್ಥಳದ ಧಾರ್ಮಿಕ ಚಿಂತಕರು,ಜ್ಯೋತಿಷ್ಯರು, ಪ್ರವಚಕರಾದ ಶಂಕರ್ ಪೈ ಶ್ರೀಗಿರಿ ಅವರು ಲೋಕಾರ್ಪಣೆಗೈದರು. ಹಸಿರು ನೇರಳಕಟ್ಟೆ ಕಾರ್ಯಕ್ರಮದಡಿಯಲ್ಲಿ ನೇರಳಕಟ್ಟೆಯ ಹಲವೆಡೆ ಸೀತಾಫಲ, ಬಿಲ್ವಪತ್ರೆ, ಪೇರಳೆ ಸಹಿತ ಕೆಲವು ಔಷಧಿಯುಕ್ತ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಗಣೇಶ್ ಸೋಮಯಾಜಿ ಹಾಗೂ ಟೀಮ್ ಅಭಿರಕ್ಷದ ಸರ್ವ ಸದಸ್ಯರು ಜೊತೆಗೂಡಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸ್ಟಾಫ್ ನರ್ಸ್ ಹಾಗೂ ಇಬ್ಬರು ಡಿ ಗ್ರೂಫ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಡೃವಾಗಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಗೆ ಜ್ವರದ ಲಕ್ಷಣವಿದ್ದ ಹಿನ್ನಲೆ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಇವರ ಪೈಕಿ ಒಬ್ಬರ ಕೋವಿಡ್ ವರದಿ ಎರಡು ದಿನದ ಹಿಂದೆ ಹಾಗೂ ಇತರೆ ಮೂವರ ವರದಿ ಸೋಮವಾರ ಬಂದಿದ್ದು ಸೋಂಕು ದೃಡ ಪಟ್ಟಿತ್ತು. ಸದ್ಯ ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದ್ದು ಮೂರು ದಿನಗಳ ಕಾಲ ಸೀಲ್ ಡೌನ್ ಬಳಿಕ ಮತ್ತೆ ಕಾರ್ಯಾರಂಭಿಸಲಾಗುತ್ತದೆ. ಇದನ್ನೂ ಓದಿ: ► ಉಡುಪಿ ಡಿಸಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲಿಸದವರಿಂದ ದಂಡ ವಸೂಲಿ – https://kundapraa.com/?p=39752 . ► ಉಡುಪಿ ಜಿಲ್ಲೆಯಲ್ಲಿ ಬಸ್ ಸಂಚಾರ, ಗಡಿ ಸೀಲ್ ಡೌನ್ ತೆರವು: ಜಿಲ್ಲಾಧಿಕಾರಿ – https://kundapraa.com/?p=39760 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಜು.21: ರಾಜ್ಯಾದ್ಯಂತ ಲಾಕ್ ಡೌನ್ ತೆರವುಗಳಿಸಿರುವುದರಿಂದ ಜಿಲ್ಲೆಯಲ್ಲಿಯೂ ಗಡಿಗಳ ಸೀಲ್ ಡೌನ್ ತೆರವುಗಳಿಸಲಾಗಿದೆ ಆದರೆ ಅನಗತ್ಯ ಸಂಚಾರ ಬೇಡ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ನಾಳೆಯಿಂದ ಜಿಲ್ಲೆಯಲ್ಲಿ ಬಸ್ ಸಂಚಾರ ಕೂಡ ಆರಂಭಗೊಳ್ಳಲಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಮಾಸ್ಕ ಧರಿಸುವಂತೆ ಅವರು ಸೂಚಿಸಿದ್ದಾರೆ. ಬೇರೆ ಜಿಲ್ಲೆಗಳಿಗೆ ತೆರಳುವವರು ಮತ್ತು ಜಿಲ್ಲೆಗೆ ಬರುವವರು ಅನಗತ್ಯ ಸಂಚಾರ ಮಾಡದಂತೆ ತಿಳಿಸಿದ್ದು, ಚೆಕ್ ಪೋಸ್ಟ್ ಹಾಗೇ ಮುಂದುವರಿಯಲಿದೆ ಎಂದಿದ್ದಾರೆ. ಇದನ್ನೂ ಓದಿ: ► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಮಂಗಳವಾರ 84 ಪಾಸಿಟಿವ್ ದೃಢ – https://kundapraa.com/?p=39748 . ► ಉಡುಪಿ ಡಿಸಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲಿಸದವರಿಂದ ದಂಡ ವಸೂಲಿ – https://kundapraa.com/?p=39752 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಪ್ರಾರಂಭವಾದ ಸಮೃದ್ಧ ಸಂತೆ ಕೀರ್ತಿ ಕುಂದಾಪುರಕ್ಕೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಕಲಾಕ್ಷೇತ್ರ – ಕುಂದಾಪುರ ಮತ್ತು ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ‘ಬ್ರಿಟಿಷರ ಕಾಲದಲ್ಲಿ ಕುಂದಾಪುರದಲ್ಲಿ ತಹಶೀಲ್ದಾರರಾಗಿದ್ದ ಮಾರ್ಷಲ್ ಕೊಯ್ಲಿ ಮೊದಲು ಕುಂದಾಪುರದಲ್ಲಿ ಸಂತೆ ಪ್ರಾರಂಭ ಮಾಡಿರುವ ಬಗ್ಗೆ ಉಲ್ಲೇಖವಿದೆ’ ಎಂದರು. ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಮಾತನಾಡಿ, ‘ಕುಂದಾಪುರದವರ ಶಿಷ್ಟ ಕನ್ನಡ ಮಾತಿನಲ್ಲಿ ಒಂದಾದರೂ ಕುಂದಾಪ್ರ ಕನ್ನಡ ಶಬ್ದ ಬಳಕೆಯಾಗಿಯೇ ಆಗುತ್ತದೆ. ಇದು ಈ ಭಾಷೆಯ ವಿಶೇಷತೆ’ ಎಂದು ಹೇಳಿದರು. ಕುಂದಾಪ್ರ ಕನ್ನಡ ವಾಗ್ಮಿ, ಶಿಕ್ಷಕ ಮನು ಹಂದಾಡಿ ಮಾತನಾಡಿ, ‘ಕೇಶಿರಾಜನ ‘ಶಬ್ದ ಮಣಿದರ್ಪಣ’ದಲ್ಲಿ ಬಳಕೆಯಾದ ಶಬ್ದಗಳನ್ನು ಇಂದಿಗೂ ಕುಂದಾಪ್ರ ಕನ್ನಡದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ’ ಎಂದರು. ಕುಂದಾಪ್ರ ಡಾಟ್ ಕಾಂ ಯುಟ್ಯೂಬ್ ಚಾನೆಲ್ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕೋವಿಡ್ -19 ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತಂತೆ ಸಾರ್ವಜನಿಕರು ಈ ನಿಯಮಗಳ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ಉಡುಪಿ ನಗರದಲ್ಲಿ ದಿಢೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದರು. ಮಂಗಳವಾರ ಜಿಲ್ಲೆಯ ಎಲ್ಲಾ ನಗರಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲಕ್ಕೆ ನಡೆಸಲಾದ ಈ ಕಾರ್ಯಾಚರಣೆಯಲ್ಲಿ, ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಜೊತೆಯಲ್ಲಿ, ಕೋವಿಡ್-19 ನಿಯಂತ್ರಣ ಕುರಿತಂತೆ ಪ್ರತಿಯೊಬ್ಬರ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು. ಬಸ್ ಸ್ಟಾö್ಯಂಡ್ ಬಳಿಯ ಹೋಟೆಲ್ ಒಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೋಟೆಲ್ ನಲ್ಲಿ ಗ್ರಾಹಕರಿಗೆ ಕೈ ತೊಳೆಯಲು ಸೋಪ್ ಇಡದ ಕಾರಣ ಮಾಲೀಕರಿಗೆ ದಂಡ ವಿಧಿಸಿದರು, ಪೆಟ್ರೋಲ್ ಬಂಕ್ ನಲ್ಲಿ ಕ್ಯಾಷಿಯರ್ ಕೈಗವಸು ತೊಡದೆ ಹಣ ಪಡೆಯುವುದನ್ನು ಕಂಡ ಜಿಲ್ಲಾಧಿಕಾರಿಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.21ರ ಮಂಗಳವಾರ 84 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 43, ಉಡುಪಿ ತಾಲೂಕಿನ 37 ಹಾಗೂ ಕಾರ್ಕಳ ತಾಲೂಕಿನ 4 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 48 ಪುರುಷರು, 34 ಮಹಿಳೆಯರು, 2 ಮಕ್ಕಳು ಸೇರಿದ್ದಾರೆ. ಆದಿಉಡುಪಿಯ ಪ್ರಸಿದ್ಧ ಹೋಟೆಲೊಂದರ 18 ಮಂದಿ ನೌಕರರಿಗೆ ಕೋರೋನ ಧೃಡಗೊಂಡಿದೆ. ಈ ಹೋಟೆಲಿನ ಮಾಲಕರಿಗೆ ಈ ಹಿಂದೆಯೇ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ 20 ಮಂದಿ ನೌಕರರು ಹೋಮ್ ಕ್ವಾರಂಟೈನ್ ನಲ್ಲಿದ್ದರು. ಇದೀಗ ಹೋಮ್ ಕ್ವಾರಂಟೈನ್ ನಲ್ಲಿದ್ದ ಹದಿನೆಂಟು ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಕೇರಳ ಕಣ್ಣೂರು ಮೂಲದ 35 ವರ್ಷದ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಕಿಡ್ನಿ ಸಮಸ್ಯೆಯಿಂದ ಮಣಿಪಾಲದ ಕೆಎಂಸಿ ಯಲ್ಲಿ ದಾಖಲಾಗಿದ್ದರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಎಸ್ಪಿ ಕಚೇರಿ, ನ್ಯಾಯಾಲಯ ಸೀಲ್ಡೌನ್: ಉಡುಪಿ ನ್ಯಾಯಾಲಯ ನ್ಯಾಯಾಧೀಶರೊಬ್ಬರಿಗೆ ಕೊರೋನ ವೈರಸ್…
