ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೇ ಮೊದಲ ಭಾರಿಗೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಒಂದು ವಿಶಿಷ್ಟ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಸಂಘದ ಮಾಲಿಕತ್ವದಲ್ಲಿ ವಿಶಿಷ್ಟ ವಿನ್ಯಾಸದ ರೈತಸಿರಿ ಅಗ್ರಿ ಮಾಲ್ ಎಂ.ಎಸ್.ಸಿ ಯೋಜನೆಯು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಒಟ್ಟು ರೂ. 15 ಕೋಟಿ ವಿನಿಯೋಗದ ರೈತಸಿರಿ ಎಗ್ರಿ ಮಾಲ್ ಬೃಹತ್ ಪ್ರಮಾಣದ ಯೋಜನೆಯಾಗಿದ್ದು, ಬಹುಮಹಡಿ ಕಟ್ಟಡದಲ್ಲಿ ರೈತರಿಗಾಗಿ ಒಂದೇ ಸೂರಿನಡಿ ಹಲವು ಸೌಲಭ್ಯಗಳು ದೊರೆಯಲಿದೆ ಎಂದರು. ರೈತಸಿರಿ ಅಗ್ರಿ ಮಾಲ್ ಕೃಷಿ ಸರ್ವಿಸ್ ಸೆಂಟರ್ಗಳು, ಸೂಪರ್ ಮಾರ್ಕೆಟ್ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೇಕ್ಟ್ರೀಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ ಅಲ್ಲದೇ ಸಭಾಂಗಣ ಎಸ್ಕ್ಯುಲೇಟರ್, ಲಿಫ್ಟ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯ ಮಟ್ಟದ ಟ್ರೈಲ್ಸ್ನಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ತ್ರಾಸಿ ಅಂಚೆ ಕಛೇರಿಯ ಎಂ. ಗುರುದೀಪಕ ಕಾಮತ್ ರಾಷ್ಟ್ರ ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ. ಗುರುದೀಪಕ ಕಾಮತ್ ಅವರೊಂದಿಗೆ ಬಿ.ಜಿ.ಜಿಗಣಿ ಪೋಸ್ಟ್ ಆಫೀಸಿನ ಶಿವಕುಮಾರ್, ಚಿಕ್ಕಮಗಳೂರಿನ ಜಯಂತ ನಟರಾಜ್, ಬೆಂಗಳೂರಿನ ಭರತ್ ಕೆ.ಎಸ್. ಮತ್ತು ಕೆ.ಗಣೇಶ ಕಿಣಿ ಹಾಗೂ ಶಿವಮೊಗ್ಗದ ಎಂ.ನಾಗರಾಜ್ ಮತ್ತು ಸಂದೀಪ ಮಲ್ಲಿಕ್ ಅವರು ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ 36ನೇ ಅಂಚೆ ಇಲಾಖೆಯ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಮತ್ತು ಬೆಸ್ಟ್ ಫಿಸಿಕ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಬ್ರದರ್ಸ್ ಸ್ಪೋರ್ಟ್ಸ್ ಆಂಡ್ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ಮತ್ತು ಅಡುಗೆಯವರ ಹೆಸರಲ್ಲಿ ನೆರಳು ನೀಡುವ, ಫಲ ನೀಡುವ ಗಿಡಗಳನ್ನು ನೆಡುವ ವಿನೂತನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಗುರುವೃಂದ ವೃಕ್ಷ ಗೌರವ ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ವಿಶ್ರಾಂತ ವಿದ್ಯಾಂಗ ಪರಿವೀಕ್ಷಕ ಅಡಂದಾಲು ಕರುಣಾಕರ ಹೆಗ್ಡೆ ಅವರು ಗಿಡಗಳನ್ನು ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹಾಗಾಗಿ ಅವರ ಜವಾಬ್ದಾರಿ ಹೆಚ್ಚು ಇದೆ. ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಕಲ್ಪನೆಗಳನ್ನು ಬಿತ್ತ ಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಮಾತನಾಡಿ, ಕನ್ನಡ ನಾಡು- ನುಡಿಯ ಸೇವೆ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯಾರೇ ಕೆಲಸ ಮಾಡಿದರೂ ಅದಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು, ಅನಾವಶ್ಯಕ ಟೀಕೆಗೆ ಸಮಯ ವ್ಯರ್ಥ ಮಾಡಬಾರದು ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಕಂಚಗೋಡು ಸಮೀಪ ಭಾನುವಾರ ಎರಡು ಮೀನುಗಾರಿಕಾ ದೋಣಿಗಳು ಮಗುಚಿದ ಪರಿಣಾಮ ಹಾನಿ ಉಂಟಾಗಿದ್ದು ಮೀನುಗಾರರು ಪಾರಾಗಿದ್ದಾರೆ. ‘ಓಂಕಾರ್ ಪ್ರಸನ್ನ’ ಎಂಬ ಹೆಸರಿನ ದೋಣಿಯಲ್ಲಿ ಹೊಸಾಡು ಗ್ರಾಮದ ಕಂಚಗೋಡು ನಿವಾಸಿಗಳಾದ ರಾಮ ಖಾರ್ವಿ, ವಿನಯ ಖಾರ್ವಿ ನಾಗರಾಜ ಖಾರ್ವಿ ಮಿನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಂದ ಭಾರಿ ಗಾಳಿ ಮಳೆ ಮತ್ತು ಅಲೆಗಳ ಹೊಡೆತಕ್ಕೆ ದೋಣಿ ಮಗುಚಿದೆ. ಸಮೀಪದಲ್ಲಿ ಮಹಾಲಕ್ಷ್ಮೀ ಎಂಬ ಹೆಸರಿನ ದೋಣಿಯಲ್ಲಿ ಮೀನುಗಾರಿಕೆ ನಿರತರಾಗದ್ದ ವಿಘ್ನೇಶ್ ಖಾರ್ವಿ, ಪ್ರಮೋದ್ ಖಾರ್ವಿ, ದೇವದಾಸ್ ಖಾರ್ವಿ, ಶಿವರಾಜ್ ಖಾರ್ವಿ, ಅಂಬರೀಶ್ ಖಾರ್ವಿ ಮುಳುಗುತ್ತಿದ್ದ ದೋಣಿಯತ್ತ ಧಾವಿಸಿ ಬಂದು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ದೋಣಿ, ಬಲೆ, ಎಂಜಿನ್, ಇತರ ಸಲಕರಣೆಗಳು ಮುಳುಗಿದ್ದು, ರೂ.4.5 ಲಕ್ಷ ನಷ್ಟ ಸಂಭವಿಸಿದೆ. ತ್ರಾಸಿ ಹೊಸಪೇಟೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಕ್ಷೇಶ್ವರಿ ಅನುಗ್ರಹ ದೊಣಿಯಿಂದ ಸಮುದ್ರಕ್ಕೆ ಬಿದ್ದ ನಾಗ ಖಾರ್ವಿ, ನಿತ್ಯಾನಂದ, ರೋಷನ್ ಖಾರ್ವಿ, ಈಜಿ ದಡ ಸೇರಿದ್ದಾರೆ. ದೋಣಿಯಲ್ಲಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭರತ ಭೂಮಿಯಲ್ಲಿ ಗುರುವಿಗೆ ವಿಷೇಶವಾದ ಮಾನ್ಯತೆಯಿದೆ. ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಹಾಗೂ ಕಲ್ಲನ್ನು ಕೂಡ ತಿದ್ದಬಹುದಾದ ಯೋಗ್ಯತೆ ಗುರುಗಳದ್ದಾಗಿದೆ. ಗುರುಕುಲ ಪದ್ದತಿ ಮೂಲಕ ಗುರು ಪರಪಂರೆ ಬೆಳೆದು ಬಂಧ ಸಂಸ್ಕಾರ ಈ ನೆಲದಲ್ಲಿದೆ. ಹೀಗಾಗಿ ಗುರು ಭಕ್ತಿ ಮೂಲಕ ಬದುಕು ಪಾವನಗೊಳ್ಳಬೇಕಾದ ಪದ್ದತಿ ನಮ್ಮದು ಎಂದು ಯು. ಬಿ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು. ಬಿ. ಶೆಟ್ಟಿ ಹೇಳಿದರು. ಅವರು ಸೋಮವಾರ ಯು. ಬಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಯು. ಬಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಬೈಂದೂರು ಹಾಗೂ ಉಪ್ಪುಂದ ಇದರ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಮಾತನಾಡಿ ರಾಧಾಕೃಷ್ಣನ್ರವರ ಆದರ್ಶ ಜಗತ್ತಿಗೆ ಶ್ರೇಯಸ್ಸು ನೀಡಿದೆ. ಸಂಸ್ಕಾರಯುತ ಜೀವನ ರೂಪಿಸಬೇಕಾದರೆ ಒಬ್ಬ ಯೋಗ್ಯ ಹಾಗೂ ಯಶಸ್ವಿ ಗುರು ಮುಖ್ಯ. ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿದೆ. ಎಂದರು. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶಿಕ್ಷಕರು ವಿದ್ಯಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಾರೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು. ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ, ಶ್ರೀ ಗಣೇಶೋತ್ಸವ ಸಮಿತಿ, ಇಂದುಧರ ಯುವಕ ಮಂಡಲ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ಮತ್ತು ನಾಗರಾಜ ಆಚಾರ್ಯ ಶುಭಾಶಂಸನೆಗೈದರು. ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಸಹಶಿಕ್ಷಕರಾದ ದೇವು, ಲಕ್ಷ್ಮೀ ಖಾರ್ವಿ, ಮಾಲಾಶ್ರೀ ಖಾರ್ವಿ, ರೇಖಾ ಖಾರ್ವಿ, ಭೂದೇವಿ, ರೇಣುಕಾ ನಾಯಕ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂದೇಶ ಜಿ.ಟಿ., ಶಿವ ಜಿ.ಟಿ., ಮಹೇಶ ಜಿ.ಟಿ., ನಾಗಿಣಿ, ಸುಶೀಲಾ, ಸುಮಿತ್ರಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸನ್ಮಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಲಗೇರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಲಗೇರಿ ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ಮತ್ತು ಸಹ ಶಿಕ್ಷಕಿ ರಂಜಿತ ಅವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ,ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು,ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ ಮಕ್ಕಳ ಬೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಅಷ್ಟೇ ಮುಖ್ಯ ಎಂದರು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ನವಶಕ್ತಿ ಮಹಿಳಾ ವೇದಿಕೆ ಯವರು ನಮ್ಮನ್ನು ಗುರುತಿಸಿ ಸನ್ಮಾನಿಸಿದ್ದು ನಮಗೆ ತುಂಬಾ ಸಂತೋಷವಾಗಿದೆ, ನವಶಕ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ವಾರ್ಷಿಕ ಸಾಮಾನ್ಯ ಸಭೆಯು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಸಭಾಂಗಣದಲ್ಲಿ ಜರಗಿತು. ಸಂಸ್ಥೆಯ ಉಪಾಧ್ಯಕ್ಷರಾದ ಶೇಖರ ಪೂಜಾರಿಂ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಯ ಸಿಇಒ ಕುಮಾರಿ ಪೂಜಾ ಟಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರಗಳನ್ನು ಮಂಡಿಸಿದರು. ಕೋವಿಡ್ 16ರ ವೀಕೆಂಡ್ ಕರ್ಪ್ಯೂ ಇರುವ ಕಾರಣ ಸಭೆಯಲ್ಲಿ ವರ್ಚುವಲ್ ಮೀಟಿಂಗ್ ಅಳವಡಿಸಲಾಯಿತು. ಸಹಕಾರಿಯ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ ಮಾತನಾಡಿ, ಕರೋನಾ ಸಂಕಷ್ಟದ ನಡುವೆಯೂ ಸಹಕಾರಿ ಸಂಸ್ಥೆ ಉತ್ತಮ ಪ್ರಗತಿ ಸಾಧಿಸಿ ಸದಸ್ಯರಿಗೆ ಶೇಕಡ 10 ಪಾಲು ಮುನಾಫೆ ಘೋಷಿಸಲಾಗಿದೆ ಎಂದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲೆಯ ಸಂಯೋಜಕರಾದ ವಿಜಯ ಬಿ.ಎಸ್ ಉಪಸ್ಥಿತರಿದ್ದು, ಸಹಕಾರಿಯ ದ್ಯೇಯೋದ್ದೇಶಗಳನ್ನು ಸಭೆಗೆ ತಿಳಿಸಿದರು. ಕಾನೂನು ರಿತ್ಯಾ ಲಾಭಾಂಶದಲ್ಲಿ ಸಲ್ಲಿಸಬೇಕಾಗಿರುವ ಶಿಕ್ಷಣ ನಿಧಿಯ ಚೆಕ್ ಅನ್ನು ಕುಮಾರಿ ಪೂಜಾ ಹಸ್ತಾಂತರಿಸಿದರು. ಎಸ್ಎಸ್ಎಲ್ಸಿ…
ದಶಕಗಳಿಂದ ತಮ್ಮ ಉನ್ನತ ಸಂಸ್ಕಾರ, ಸಜ್ಜನಿಕೆ, ಸ್ನೇಹಶೀಲತ್ವದ ಮೂಲಕ ಸಮಾಜದ ಸರ್ವ ವರ್ಗದವರ ಪಾಲಿನ ಪ್ರೀತಿಗೆ ಪಾತ್ರರಾದವರು ಬರೆಗುಂಡಿ ಶ್ರೀನಿವಾಸ ಚಾತ್ರರು ನಮ್ಮನ್ನು ಅಗಲಿದರೂ ಅವರ ನೆನಪು ಅಮರವಾಗಿದೆ. ವ್ಯಕ್ತಿತ್ವಗಳು ರಾಜಕೀಯ ಮತ್ತು ಧರ್ಮದ ಸಂಕುಚಿತತೆಗೆ ಒಳಗಾಗಿ, ಸೀಮಿತ ಸೀಮೆಗಳ ಒಳಗೆ ಬಂಧಿಯಾಗಿ, ಆಕರ್ಷಣೆ- ಪ್ರಭಾವ- ವ್ಯಾಪ್ತಿಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಮಾಜದಲ್ಲಿ ಪ್ರತ್ಯೇಕ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಸುದೀರ್ಘ ಕಾಲದಿಂದ ಸ್ಥಾಪಿಸಿಕೊಂಡು ಬಂದಿದ್ದರು. ಸಾಮಾಜಿಕ- ಧಾರ್ಮಿಕ ನಾಯಕತ್ವಗಳ ಕಾಲಕಾಲದ ನಿರ್ಣಾಯಕ ಭೂಮಿಕೆಗಳನ್ನು ಸೊಗಸಾಗಿ ಮತ್ತು ಸುಸೂತ್ರವಾಗಿ ನಿಭಾಯಿಸಿದ ಹಿರಿಮೆ ಇವರದ್ದು. ಸದಾ ತಮಗಿಂತ ಕಿರಿಯರಿಗೆ ಆದರ, ಆಶ್ರಯ, ಅವಕಾಶಗಳನ್ನು ನೀಡುತ್ತಾ, ಶ್ರೇಯಸ್ಸನ್ನು ಹಾರೈಸುತ್ತಾ, ಹಿರಿತನದ ಸಿರಿ-ಸಿಹಿಗಳನ್ನು ಸಮನಾಗಿ ಸರ್ವರಿಗೂ ಹಂಚಿದವರು. ದೀರ್ಘಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಗತ್ಯದ ಕಾಯಕ-ಕರ್ಮಗಳು ಯಥಾವತ್ತಾಗಿ ನೇರವೇರುವಂತೆ ನೋಡಿಕೊಂಡು, ಬದುಕಿನ ಕೊನೆಯವರೆಗೂ ಅಪಾರ ಬದ್ಧತೆಯನ್ನು ಮೆರೆದು ಮಾದರಿಯಾಗಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲೂ ಸದಾ ಚಟುವಟಿಕೆಯಿಂದಿದ್ದು ಯಾವ ಹಂತದಲ್ಲೂ ಜೀವನೋತ್ಸಾಹವನ್ನು ಕಳೆದುಕೊಂಡವರಲ್ಲ. ಸರಳತೆ, ಸಜ್ಜನಿಕೆ, ಸುಪಥಗಳಿಂದ ಕೂಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಾಗವನ್ನು ಮೀಸಲಿರಿಸಿ ಮಂಜೂರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ – ಭಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಈವರೆಗೆ ಗೋಶಾಲೆ ಮಂಜೂರಾಗಿಲ್ಲ. ಗೋ ಮಾಳ ಉಳ್ಳವರ ಪಾಲಾಗುತ್ತಿದ್ದು ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಜಾನುವಾರುಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಹೆಚ್ಚುತ್ತಿದೆ, ಬೆಳೆ ಹಾನಿಯಾಗಿ ಕೃಷಿಕರಿಗೆ ನಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಿ ಬೀಡಾಡಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದು ಗೋವುಗಳ ವಿನಾಶವಾಗುತ್ತಿದೆ. ರಕ್ಷಿಸಲ್ಪಟ್ಟ ಜಾನುವಾರುಗಳು, ಬೀಡಾಡಿ ಜಾನುವಾರುಗಳನ್ನು ದೂರದ ನೀಲಾವರ ಗೋಶಾಲೆಗೆ ಸಾಗಿಸಲು ಸಾಗಾಟ ವೆಚ್ಚ ಹೆಚ್ಚುತ್ತಿದೆ. ಹಾಗಾಗಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮೂಲಕ ನಿರ್ವಹಣೆ ಮಾಡಲು ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಮೀನು ಮಂಜೂರಾತಿಗೆ ಕೋರಿದ್ದು, ಅದನ್ನು…
