Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಐಡಿಯಲ್ ಪ್ಲೇ ಅಬಾಕಸ ಇಂಡಿಯಾ ಪೈವೇಟ್ ಲಿಮಿಟೆಡ್ ಚೆನೈ ವತಿಯಿಂದ ಇತ್ತೀಚೆಗೆ ನಡೆದ 16ನೇ ರಾಜ್ಯಮಟ್ಟದ ಆನ್ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ ಅಬಾಕಸ್ ವಿದ್ಯಾರ್ಥಿಗಳು ವಿಜೇತರಾಗಿ ಆಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ದ್ವಿತೀಯ ಸ್ಥಾನ ಪಡೆದ ಲಿಖಿತ್, ತೃತೀಯ ಸ್ಥಾನ ಪಡೆದ ರಿತ್ವೀಕಾ , ಐದನೇ ಸ್ಥಾನ ಪಡೆದ ಪ್ರಥ್ವಿ, ಹಾಗೂ ವರಪ್ರಸಾದ ಇತರೇ ಬಹುಮಾನ ಪಡೆದುಕೊಂಡರು. ಇವರಿಗೆ ಬೈಂದೂರು ಸೆಂಟರ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಛತ್ರಪತಿ ಶಿವಾಜಿ ಬಸ್ರೂರಿಗೆ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಟ್ಟಿಲ್ಲ. ಪೋರ್ಚುಗೀಸರು ತೊಲಗಲು ಅಡಿಗಲ್ಲು ಹಾಕಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾಪುರುಷ ಶಿವಾಜಿ ನೆನಪಿನಲ್ಲಿ ಬಸ್ರೂರಲ್ಲಿ ಕಳೆದ 9 ವರ್ಷಗಳಿಂದ ಕಾರ‍್ಯಕ್ರಮ ನಡೆಯುತ್ತಿರುವುದು ಗಮನಾರ್ಹ ವಿಷಯ. ಇತಿಹಾಸದಲ್ಲಿ ಬಸ್ರೂರಿಗೆ ಹೆಚ್ಚು ಪ್ರಾಮುಖ್ಯತೆಯಿದೆ ಎಂದು ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ‍್ಯದರ್ಶಿ ಡಾ. ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ ಹೇಳಿದರು. ಛತ್ರಪತಿ ಶಿವಾಜಿ 1665ರ ಫೆ. 13 ಪೋರ್ಚುಗೀಸರ ವಿರುದ್ಧ ಪ್ರಥಮ ನೌಕಾಯಾನ ಕೈಗೊಂಡು, ಬಸ್ರೂರಲ್ಲಿ ವಿಜಯ ಪತಾಕೆ ಹಾರಿಸಿದ ದಿನವಾಗಿದ್ದು, ಬಸ್ರೂರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಆಶ್ರಯದಲ್ಲಿ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಭಾನುವಾರ ಅದರ ಸವಿನೆನಪಿಗಾಗಿ ಬಸ್ರೂರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿ ಮಹಿಳಾ ಪ್ರಮುಖ್ ಡಾ. ಸೀಮಾ ಉಪಾಧ್ಯಾಯ,ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸೀಮಿತರಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು. ದುರ್ಗಾವಾಹಿನಿಯ ಚೈತ್ರ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉದ್ಯಮಿ, ಧಾರ್ಮಿಕ ಮುಂದಾಳು, ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸುರೇಶ ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚಿಕ್ಕವಯಸ್ಸಿನಲ್ಲೇ ಬಾಂಬೆ ಸೇರಿದ ಸುರೇಶ ಪಡುಕೋಣೆ ಅವರು ಭಾರತ್ ಬೋರಿಂಗ್ ಕಂಪನಿಯಲ್ಲಿ ಗ್ರೈಂಡರ್ ಆಪರೇಟರಾಗಿ ವೃತ್ತಿ ಆರಂಭಿಸಿ, ನಂತರ ಅಪೋಲೋ ಬೋರಿಂಗ್ ಇಂಡಸ್ಟ್ರೀಸ್ ಮೂಲಕ ಸ್ವಂತ ಉದ್ಯಮ ಆರಂಭಿಸಿದರು. ಬಳಿಕ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟರು. ಧಾರ್ಮಿಕ ಕ್ಚೇತ್ತದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಸುರೇಶ್ ಪಡುಕೋಣೆ ಅವರು ಆಂಜನೇಯ ಸ್ವಾಮಿ ಪರಮ ಭಕ್ತರಾಗಿದ್ದು, ಕುಂದಾಪುರ ಹಂಗಳೂರಲ್ಲಿ 82 ಅಡಿ ಎತ್ತರ ಆಂಜನೇಯ ಸ್ವಾಮಿ ಪ್ರತಿಷ್ಠಾನೆ ಮಾಡಿ, ಪ್ರತೀ ವರ್ಷ ಪ್ರತಿಷ್ಠಾ ಮಹೋತ್ಸವ ನಡೆಸಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದರು. ಆನೆಗುಡ್ಡೆ ಸ್ವಾಗತ ಗೋಪುರ, ಪಡುಕೋಣೆ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಈಶ್ವರ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕೆರೆ ನವೀಕರಿಸಿದ್ದರು. ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟೀ, ಕುಂದಾಪುರ ತಾಲೂಕು ದೇವಾಡಿಗ ಸಂಘದ ಮಹಾಪೋಷಕರಾಗಿಯೂ ಸೇವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ13: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಾರ್ಥಿಗಳ ಸಮವಸ್ತ್ರದ ವಿವಾದದ ಹಿನ್ನಲೆಯಲ್ಲಿ ಹಾಗೂ ಜಿಲ್ಲೆಯಲ್ಲಿನ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲಾ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳ ಸುತ್ತ ಮುತ್ತಲು 200ಮೀ ಪ್ರದೇಶವನ್ನು ಫೆ.14ರ ಬೆಳಿಗ್ಗೆ 6 ರಿಂದ ಫೆ.19ರ ಸಂಜೆ 6 ಗಂಟೆಯ ವರೆಗೆ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಆದೇಶಿಸಿದ್ದಾರೆ. ಸಮವಸ್ತ್ರದ ವಿವಾದದ ಹಿನ್ನಲೆಯಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಮಧ್ಯಂತರ ಆದೇಶವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ/ ಕಾಲೇಜು ಆಡಳಿತ ಮಂಡಳಿ/ಕಾಲೇಜು ಶಿಸ್ತು ಸಮಿತಿ ಮತ್ತು ಶಿಕ್ಷಕರ/ ಪಾಲಕರ ಸಭೆಗಳನ್ನು ಕೂಡಲೇ ಕರೆದು ಮಾನ್ಯ ಉಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಮಧ್ಯಂತರ ಆದೇಶದಾದುದನ್ನು ಮನವರಿಕೆ ಮಾಡುವಂತೆ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಶ್ರೀರಾಮ್ ಕ್ರಿಕೆಟರ್ಸ್ ಕೇವಲ ಕ್ರಿಕೆಟ್ ಆಡುವುದಕ್ಕೋಸ್ಕರ ಹುಟ್ಟಿದ ಸಂಸ್ಥೆಯಲ್ಲ. ಕೆಲ ಸಮಾಜಮುಖಿ ಕಾರ್ಯದ ಜೊತೆಗೆ ಈ ಭಾಗದ ಏಳಿಗೆಗಾಗಿ ಶ್ರಮಿಸುತ್ತಿದೆ. ಒಂದಿಲ್ಲೊಂದು ಹೊಸತನವನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆ ಸಾಧಕರನ್ನು ಅದರಲ್ಲೂ ಮುಖ್ಯವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸಮ್ಮಾನಿಸುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು. ಅವರು ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀರಾಮ್ ಕ್ರಿಕೆಟರ್ಸ್ ಆಶ್ರಯದಲ್ಲಿ ಜರುಗಿದ 3ನೇ ಬಾರಿಗೆ ಎರಡು ದಿನಗಳ 30 ಗಜಗಳ ಸಂಪತ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ರಂಗದಲ್ಲೂ ಮೀಸಲಾತಿಯಿದೆ. ಆದರೆ ಕ್ರಿಕೆಟ್ ಅಥವಾ ಕ್ರೀಡೆಯಲ್ಲಿ ಮಾತ್ರ ಮೀಸಲಾತಿ ಇಲ್ಲದೆಯೂ ಸಾಧನೆಯ ಮೂಲಕವೇ ಉನ್ನತ ಮಟ್ಟಕ್ಕೇರಬಹುದು. ಸಂಪತ್ ಅವರ ಸ್ಮರಣಾರ್ಥ ಆಯೋಜಿಸುತ್ತಿರುವ ಈ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಲಿ ಎಂದರು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸೌಕೂರು ಇದರ ಈ ವರ್ಷದ ತಿರುಗಾಟದ ನೂತನ ಪ್ರಸಂಗ ಅಂಬಿಕಾ ವಕ್ವಾಡಿ ವಿರಚಿತ ಪ್ರೇಮ ಸಂಘರ್ಷ ಪ್ರಸಂಗವನ್ನು ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಪಿ ಶೇಖರ ಪೂಜಾರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ನೂತನ ಪ್ರಸಂಗವನ್ನು ಮೇಳದ ಮುಖ್ಯ ಭಾಗವತ ರವಿ ಸುರಾಲ್ ಇವರಿಗೆ ಹಸ್ತಾಂತರಿಸಲಾಯಿತು. ಪದ್ಯ ರಚಿಸಿ ಕೊಟ್ಟ ದೇವದಾಸ ಈಶ್ವರ್ ಮಂಗಲ್ ಅವರನ್ನು ಸನ್ಮಾನಿಸಲಾಯಿತು. ವಕೀಲ ಎಮ್.ಜಿ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ಕೋಡಿ ವಿಶ್ವನಾಥ್ ಗಾಣಿಗ ಉಪಸ್ಥಿತರಿದ್ದರು. ಮಹಾಬಲೇಶ್ವರ ಭಟ್ ಕ್ಯಾದಗಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ವಕ್ವಾಡಿ ಸ್ವಾಗತಿಸಿದರು. ವಿ.ಜಿ ರಾಘವೇಂದ್ರ ಆಚಾರ್ ಕಾರ‍್ಯಕ್ರಮ ನಿರೂಪಣೆ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಮೂವರು ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ರಾಜೀವ ಶೆಟ್ಟಿ, ಸುಜಾತಾ ಹಾಗೂ ಮಂಜುಳಾ ಅವರನ್ನು ಶಾಲೆಯ ಸಹಶಿಕ್ಷಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಎಂ., ನಿವೃತ್ತ ಮುಖ್ಯ ಶಿಕ್ಷಕಿ ಸುಜಾತಾ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ ಕೋಟಾನ್ ಶುಭ ಹಾರೈಸಿದರು. ಶಿಕ್ಷಕರ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ ಶುಭಾಶಂಸನೆಗೈದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಾ, ಎಸ್‌ಡಿಎಂಸಿ ಸದಸ್ಯರು, ಸಹಶಿಕ್ಷಕರು, ಗೌರವ ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಉಷಾಕುಮಾರಿ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಯಶೋಧಾ, ಸರಿತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತಾಲೂಕು ತ್ರಾಸಿಯ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣರಾಗಿದ್ದಾರೆ. ಇವರು ತ್ರಾಸಿಯ ಅನಂತ ಮಧ್ಯಸ್ಥ ಮತ್ತು ಪೂರ್ಣಿಮಾ ಮಧ್ಯಸ್ಥ ಇವರ ಪುತ್ರಿ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತುಶಾಸ್ತ್ರಜ್ಞ ಚಂದ್ರಶೇಖರ ಸ್ವಾಮೀಜಿ ಇವರು ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ದೇವಳದ ಅರ್ಚಕರಾದ ವೇದಮೂರ್ತಿ ಜನಾರ್ದನ ಅಡಿಗ ಇವರು ಶ್ರೀ ದೇವರ ಪ್ರಸಾದ ನೀಡಿ ಸ್ವಾಮೀಜಿಯವರನ್ನು ಗೌರವಿಸಿ ಸನ್ಮಾನಿಸಿದರು. ವ್ಯವಸ್ಥಾಪಕ ಎಚ್ ನಾಗರಾಜ ಹಂದೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಹೆಚ್ಚಾಗಿರುತ್ತದೆ ಎಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ ಕೋಟ್ಯಾನ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಬೆಳೆಯುತ್ತದೆ. ಪ್ರಸ್ತುತ ಜಾಗತಿಕವಾಗಿ ಗುರುತಿಸಿಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಮುಂತಾದ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಯುವುದು ಅಗತ್ಯ. ಜೀವನದಲ್ಲಿ ಸಾಧಿಸುವ ಛಲ ಹಾಗೂ ಅವಕಾಶಗಳನ್ನು ಬಳಸಿಕೊಂಡು ಆಸಕ್ತಿಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೇಳುವ ವಿಷಯಗಳಿಕ್ಕಿಂತ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳ ಪ್ರತಿಯೊಂದು ನಡೆಯೂ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ನಮ್ಮಲ್ಲಿರುವ ವಿಭಿನ್ನತೆಯಂತೆ ಮಾತ್ರ ಅಸ್ತಿತ್ವ…

Read More