Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಯಿಂದಾಗಿ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ, ಕಮಲಶಿಲೆ ಗ್ರಾಮವನ್ನು, ಕುಂದಾಪುರ ತಾಲೂಕಿನ ಆರ್ಜಿ ಗ್ರಾಮ ಪಂಚಾಯತ್‌ಗೆ ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರದ ಪತ್ರದಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಅದರಂತೆ ಕಮಲಶಿಲೆ ಗ್ರಾಮವನ್ನು ಆರ್ಜಿ ಗ್ರಾಮ ಪಂಚಾಯತ್‌ಗೆ ಸೇರ್ಪಡೆಗೊಳಿಸುವ ಬಗ್ಗೆ ಕರಡು ಅಧಿಸೂಚನೆಯನ್ನು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 4 ರಂತೆ ಹೊರಡಿಸಲಾಗಿದ್ದು, ಈ ಅಧಿಸೂಚನೆ ಪ್ರಕಟಿಸಿದ 30 ದಿನಗಳ ಒಳಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಕಚೇರಿಗೆ ಆಕ್ಷೇಪಣೆ ಸಲ್ಲಿಸುವಂತೆ, ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಲೇಖನ. ಗ್ರಾಮ ಸರ್ಕಾರವನ್ನು ಸ್ಥಳೀಯ ಸ್ವಯಂ ಸರ್ಕಾರವಾಗಿ ರೂಪಿಸುವ ಮೂಲಕ ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಗ್ರಾಮ ಪಂಚಾಯತ್ ಮತ್ತು ಗ್ರಾಮಸಭೆಯ ಅಧಿಕಾರವನ್ನು ಕಿತ್ತುಕೊಂಡು ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿರುವ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನಡೆಗಳನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಳೆದ ಕೆಲವು ದಿನಗಳಿಂದ ಪತ್ರಿಕೆಯಲ್ಲಿ ವರದಿಯಾಗಿದೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯದೆ 1993ಕ್ಕೆ ತಿದ್ದುಪಡಿ ತರಲು ಬುಧುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಯಾಗಿದೆ. ತಿದ್ದುಪಡಿ ತರಬೇಕಾದ ಸುಮಾರು 20 ಅಂಶಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಪ್ರಸ್ಥಾವನೆ ಸಿದ್ಧಪಡಿಸಿ ಕಾನೂನು ಇಲಾಖೆಗೆ ಅಭಿಪ್ರಾಯ ನೀಡುವಂತೆ ಸೂಚಿಸಿದ್ದು, ಸಂಪುಟದ ಸೂಚನೆಯ ಮೇರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ನಡೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷ ಅವಧಿಗೆ ಅಧ್ಯಕ್ಷರಾಗಿ ಸದಾಶಿವ ಖಾರ್ವಿ ಕಂಚುಗೋಡು ಮತ್ತು ಉಪಾಧ್ಯಕ್ಷರಾಗಿ ಸೂರಜ್ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಜರಗಿದ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸದಾಶಿವ ಖಾರ್ವಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೂರಜ್ ಖಾರ್ವಿ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರು ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಸುನೀಲ್ ಕುಮಾರ್ ಸಿ.ಎಂ. ಘೋಷಿಸಿದರು. ಮಾ.1ರಂದು ನಡೆದಿದ್ದ ಸಂಘದ ಮುಂದಿನ ಐದು ವರ್ಷ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸದಾಶಿವ ಖಾರ್ವಿ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿರುವ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಡಲ ಕಾರ್ಯವಾಹರಾಗಿ, ಬಿಜೆಪಿ ತ್ರಾಸಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಬಿಜೆಪಿ ಬೈಂದೂರು ಮಂಡಲದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: 2018 & 2019 ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ ಪಡೆದ ಹಾಗೂ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಒಲಂಪಿಕ್ ಗೇಮ್ಸ್, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ವರ್ಲ್ಡ್ ಕಪ್/ ವರ್ಲ್ಡ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹಾಗೂ ನ್ಯಾಷನಲ್ ಗೇಮ್ಸ್, ನ್ಯಾಷನಲ್ ಚಾಂಪಿಯನ್‌ಶಿಪ್, ಜೂನಿಯರ್ ನ್ಯಾಷನಲ್ಸ್ ಹಾಗೂ ಸಬ್ ಜೂನಿಯರ್ ನ್ಯಾಷನಲ್ಸ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ ಪಡೆದ ಕ್ರೀಡಾಪಟುಗಳು ಸದರಿ ನಗದು ಬಹುಮಾನಕ್ಕೆ ಅರ್ಹರಾಗಿರುತ್ತಾರೆ. ಅರ್ಹ ಕ್ರೀಡಾಪಟುಗಳು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ (ದೂರವಾಣಿ ಸಂಖ್ಯೆ: 0820-2521324, 9480886467) ಇವರಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ದೃಡೀಕೃತ ದಾಖಲೆಗಳೊಂದಿಗೆ ಏಪ್ರಿಲ್ 15 ರ ಒಳಗೆ ಹಿಂತಿರುಗಿಸಬೇಕು. ನಂತರ ಬಮರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ ತನಕ ಜರುಗಲಿದ್ದು, ಶುಕ್ರವಾರ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ  ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ರಘುರಾಮ ಶೆಟ್ಟಿ ಬಿಜೂರು, ಮದನಕುಮಾರ್ ಉಪ್ಪುಂದ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶಿರೂರು ಬಿಲ್ಲವ ಸಂಘದ ಅಧ್ಯಕ್ಷ ಚಿಕ್ಕು ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ನಾಗರಾಜ ಶೆಟ್ಟಿ, ಆನಂದ ಶೆಟ್ಟಿ ನಾಕಟ್ಟೆ, ನಾಗರಾಜ ಗಾಣಿಗ ಬಂಕೇಶ್ವರ, ಮಂಜಯ್ಯ ಪೂಜಾರಿ ಏಳಜಿತ, ರಘುರಾಮ ಪೂಜಾರಿ ಶಿರೂರು, ಶೇಖರ ಪೂಜಾರಿ ಉಪ್ಪುಂದ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯಲ್ಲಿ ಪರಿವಾರ ಶಕ್ತಿಗಳ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ ತನಕ ಜರುಗಲಿದ್ದು, ಪೂರ್ವಭಾವಿಯಾಗಿ, ಚಪ್ಪರ ಮುಹೂರ್ತ ಕಾರ್ಯಕ್ರಮ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ರಘುರಾಮ ಶೆಟ್ಟಿ ಬಿಜೂರು, ಮದನಕುಮಾರ್ ಉಪ್ಪುಂದ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶಿರೂರು ಬಿಲ್ಲವ ಸಂಘದ ಅಧ್ಯಕ್ಷ ಚಿಕ್ಕು ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಸಸಿಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ನಾಗರಾಜ ಶೆಟ್ಟಿ, ಆನಂದ ಶೆಟ್ಟಿ ನಾಕಟ್ಟೆ, ನಾಗರಾಜ ಗಾಣಿಗ ಬಂಕೇಶ್ವರ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಗಣಕಯಂತ್ರ ವಿಭಾಗದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತಿಹೆಚ್ಚು ತೊಡಗಿಸಿಕೊಂಡಾಗ ಅದರ ಪ್ರತಿಫಲವನ್ನು ಔದ್ಯೋಗಿಕ ಜೀವನದಲ್ಲಿ ಕಂಡುಕೊಳ್ಳಬಹುದು ಎಂದು ಡ್ಯಾನ್ಸ್ಕೆ ಬ್ಯಾಂಕ್ ನ ಸೀನಿಯರ್ ಸಾಫ್ಟ್‌ವೇರ್ ಅರ್ಕಿಟೆಕ್ಟ್ ಕಾತಿಮಯ್ಯ ಹೇಳಿದರು. ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ವತಿಯಿಂದ ನಡೆದ ’ಟೆಕ್ನೋಫಿಯಾ’ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು. ಡಿಲೈಟ್ ಕಂಪನಿಯ ಡೈರೆಕ್ಟರ್ ಅರುಣ್ ರಾಜ್ ಪುರೋಹಿತ್ ಮಾತಾನಾಡುತ್ತಾ “ಕೇವಲ ಹಣಗಳಿಸುವದು ಮತ್ತು ಒಳ್ಳೆಯ ಉದ್ಯೋಗವನ್ನು ಪಡಯುವುದು ನಿಜವಾದ ಜೀವನವಲ್ಲ. ಅದರ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮಿಂದ ಏನು ಮಾಡಲು ಸಾದ್ಯ ಎಂಬುದನ್ನು ಯೋಚಿಸಬೇಕು. ನಾವೆಲ್ಲರು ಎಲ್ಲರ ಕಷ್ಟ ದು:ಖಗಳಲ್ಲಿ ಭಾಗಿಯಾಗಿ ಮಾನವೀಯತೆಯಿಂದ ಬದುಕೋಣ ಎಂದರು. ಕಾರ‍್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್ ಮಾತನಾಡಿ, ಗಣಕಯಂತ್ರ ವಿಭಾಗ ಅತ್ಯಂತ ಕ್ಲಿಷ್ಟ ಮತ್ತು ಸವಾಲಿನ ವಿಭಾಗವಾದ್ದರಿಂದ ವಿದ್ಯಾರ್ಥಿಗಳು ದಿನೇ ದಿನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಧಾರವಾಡದ ಉದ್ಯಮಿ ಯು. ಬಿ. ಶೆಟ್ಟಿಯವರು ತಮ್ಮ ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಇಲಾಖೆಯ ಮೌಖಿಕ ಆದೇಶದೊಂದಿಗೆ ಶಾಲೆಯನ್ನು ಗುರುವಾರ ದತ್ತು ಸ್ವೀಕರಿಸಿದರು. ಶಾಲಾ ದತ್ತು ಸ್ವೀಕಾರ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ, ಸರ್ಕಾರಿ ಶಾಲೆಗಳು ಮುನ್ನೆಲೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ಖಾಸಗಿ ಸಹಭಾಗಿತ್ವ ಅಗತ್ಯವಾಗಿದ್ದು, ಯು.ಬಿ. ಶೆಟ್ಟಿ ಅಂತಹ ದಾನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಪ್ರತಿ ಊರಿನಲ್ಲಿ ದೇವಾಲಯಗಳಿರುವಂತೆಯೇ ಅಲ್ಲಿನ ಶಾಲೆಗಳು ಕೂಡಾ ಸುಸ್ಥಿತಿಯಲ್ಲಿದ್ದರೇ ಮಾತ್ರ ಆ ಊರಿಗೆ ಮನ್ನಣೆ ಲಭಿಸುತ್ತದೆ ಎಂದರು. ಬೈಂದೂರು ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಅಶೋಕಕುಮಾರ ಬಾಡ ಕಾರ್ಯಕ್ರಮ ಉದ್ಘಾಟಿಸಿ ಶುಭಸಂಶನೆಗೈದರು. ತಾ.ಪಂ. ಸದಸ್ಯೆ…

Read More

ಕುಂದಾಪ್ರ ಡಾಟ್ ಕಾಂ ವರದಿ ಉಡುಪಿ: ಉಡುಪಿ ಜಿಲ್ಲೆ ಕನ್ನಡ ನಾಡು ನುಡಿಯ ಸಂಭ್ರಮದ ಹಬ್ಬಕ್ಕೆ ಸಜ್ಜಾಗುತ್ತಿದೆ. ಕನ್ನಡದ ಕಂಪು ಇಡೀ ಜಿಲ್ಲೆ ಪಸರಿಸಲು ವೇದಿಕೆ ತಯಾರಾಗಿದೆ. ಸಾಹಿತ್ಯ ಲೋಕದ ದಿಗ್ಗಜರ ಅಪೂರ್ವ ಸಂಗಮಕ್ಕೆ ನಾಂದಿಯಾಗಲು 14 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಯಾರಾಗಿದೆ. ಕನ್ನಡದ ತೇರು ಎಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಹೌದು ಕನ್ನಡ-ನಾಡು ನುಡಿಯನ್ನು ಬಿಂಬಿಸುವ, ಕನ್ನಡ ಸಾಹಿತ್ಯ ಲೋಕದ ಮಜಲುಗಳನ್ನು ಬಿಂಬಿಸುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಇರುವಂತಿಗೆ-2020(ಹೊಸ ದಿಸೆಯ ಬೆಳಕು) ಹೆಸರಿನೊಂದಿಗೆ ಮಾರ್ಚ್ 14 ಹಾಗೂ 15 ರಂದು ಚೇತನ ಫ್ರೌಡಶಾಲೆ ಹಂಗಾರಕಟ್ಟೆಯಲ್ಲಿ ಸಂಭ್ರಮದ ವಾತವರಣ. ಇಲ್ಲಿ ಹಾಡು -ನೃತ್ಯ-ಕವಿಗೋಷ್ಠಿ-ಸಂವಾದ-ಸಾಧಕರನ್ನು ಗುರುತಿಸುವುದು ಇನ್ನೂ ಹತ್ತು ಹಲವಾರು ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ಇದೆ. ಸಮ್ಮೇಳನದ ಅಧ್ಯಕ್ಷೆ ವೈದೇಹಿ: ಕನ್ನಡ ಸಾಹಿಯ ಲೋಕಕ್ಕೆ ಕರಾವಳಿಗರ ಪಾಲು ತುಂಬಾನೇ ಇದೆ. ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕಾರಂತಜ್ಜ ನಮ್ಮ ಕರಾವಳಿಯವರು ಎಂಬುವುದು ನಮ್ಮ ಹೆಮ್ಮೆ. ಹಾಗೆಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕರ್ನಾಟಕ ಮುಸ್ಲಿಂ ಜಮಾಅತ್‌ನ ಬೈಂದೂರು ತಾಲ್ಲೂಕು ಸಮಿತಿ ಘೋಷಣಾ ಸಮಾವೇಶವು ನಾವುಂದ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಎಫ್. ರಫೀಖ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಅಲ್ ಫಾಳಿಲಿ ಸಮಾವೇಶವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ಅಲಿ ಮೂಳೂರು ವಿಷಯ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರೂ, ಜಿಲ್ಲಾ ಕಾರ್ಯದರ್ಶಿಯೂ ಆದ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಬೈಂದೂರು ತಾಲ್ಲೂಕು ಸಮಿತಿಯ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿ ನೂತನ ಸಮಿತಿಯನ್ನು ಘೋಷಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು. ಸಮಾವೇಶದಲ್ಲಿ ಕರ್ನಾಟಕ…

Read More