Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ರೈತ ಸೇವಾ ಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತ ಸಂತೆಯನ್ನು ನಡೆಸಿ, ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಹಾಗೂ ಗ್ರಾಹಕರಿಗೆ ತಾಜಾ ತರಕಾರಿ ಮತ್ತು ಇತರೇ ಪದಾರ್ಥಗಳನ್ನು ರೈತ ಸಂತೆಯ ಮೂಲಕ ಪೂರೈಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೈತ ಸೇವಾ ಕೇಂದ್ರದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಸಂತೆಯಲ್ಲಿ ಭಾಗವಹಿಸುವ ರೈತರಿಗೆ ಇಲಾಖೆ ವತಿಯಿಂದ ಗುರುತಿನ ಚೀಟಿಗಳನ್ನು ನೀಡುವಂತೆ ಸೂಚಿಸಿದ ಅವರು, ಆಸಕ್ತಿಯುಳ್ಳ ರೈತರು ರೈತ ಸಂತೆಯಲ್ಲಿ ಭಾಗವಹಿಸಲು ಸಲ್ಲಿಸಿರುವ ಅರ್ಜಿಗಳನ್ನು ಸ್ವೀಕರಿಸುವಂತೆ ತೋಟಗಾರಿಕಾ ಉಪನಿರ್ದೇಶಕರಿಗೆ ಸೂಚಿಸಿದರು. ಸಭೆಯಲ್ಲಿ ರೈತ ಸೇವಾ ಕೇಂದ್ರದ ಜಿಲ್ಲಾ ಉಸ್ತುವಾರಿ ಸಮಿತಿಯ ಸದಸ್ಯರು, ಮಳಿಗೆದಾರರು, ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿಯ ಕಾರ್ಯದರ್ಶಿ, ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ಬೈಂದೂರು ಕಲಾಸಂಸ್ಥೆಯ ನಿರ್ದೇಶಕ, ಶಿಕ್ಷಕ ಸುಧಾಕರ ಪಿ. ಬೈಂದೂರು ಅವರಿಗೆ ಬೈಂದೂರು ಜೆಸಿಐ ಸಿಟಿಯ ಜೆಸಿ ಸಂಭ್ರಮ-2020ರ ಸಂದರ್ಭ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ವಲಯಾಧ್ಯಕ್ಷ ಮಣಿಕಂಠ ಎಸ್, ಬೈಂದೂರು ಜೆಸಿಐ ನಿಕಟಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಜೆಸಿಐ ಅಧ್ಯಕ್ಷ ಶ್ರೀಧರ ಆಚಾರ್ಯ, ನಿಕಟಪೂರ್ವ ಜೆಜೆಸಿ ಅಧ್ಯಕ್ಷೆ ಭಾನುಮತಿ ಬಿ. ಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬಂದೂರು: ಶಿರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಇಂದು ಶುಕ್ರವಾರ ನಡೆಯಿತು. ಅಧ್ಯಕ್ಷರಾಗಿ ಜಿ. ಯು. ದಿಲ್‌ಶಾದ್ ಬೇಗಂ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಪಟೇಲರಮನೆ ಆಯ್ಕೆಯಾಗಿದ್ದಾರೆ. ಒಟ್ಟು 44 ಸದಸ್ಯ ಬಲ ಹೊಂದಿರುವ ಶಿರೂರು ಗ್ರಾಮ ಪಂಚಾಯಿತಿಯಲ್ಲಿ 13 ಬಿಜೆಪಿ ಬೆಂಬಲಿತ, 24 ಕಾಂಗ್ರೆಸ್ ಬೆಂಬಲಿತ, ಹಾಗೂ 4 ಎಸ್‌ಡಿಪಿಐ ಸದಸ್ಯರು ಆಯ್ಕೆಯಾಗಿದ್ದರು. ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಕಡಲತೀರದಲ್ಲಿ ಸಮುದ್ರ ಅಲೆಗಳ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಶುಕ್ರವಾರ ಭೂಮಿಪೂಜೆ ನೆರವೇರಿತು. ಶಿವಳ್ಳಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್‌ನ ವಿಜಯಕುಮಾರ ಹೆಗ್ಡೆ ಮಾತನಾಡಿ, ಹಿಂದೆ ಮಲ್ಪೆ ಮತ್ತು ಕೆಮ್ಮಣ್ಣಿನ ಕಡಲತೀರಗಳಲ್ಲಿ ಸಮುದ್ರ ಅಲೆಗಳ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲು ಪ್ರಾಯೋಗಿಕ ನೆಲೆಯಲ್ಲಿ ಸ್ಥಾಪಿಸಿದ ಘಟಕಗಳು ಯಶಸ್ವಿಯಾಗಿವೆ. ಮರವಂತೆ ತೀರ ಈ ಉದ್ದೇಶಕ್ಕೆ ಹೆಚ್ಚು ಪ್ರಶಸ್ತ ಎಂದು ಅಧ್ಯಯನದಿಂದ ದೃಢಪಟ್ಟಿರುವುದರಿಂದ ಇಲ್ಲಿ ದೊಡ್ಡಮಟ್ಟದ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಾಗತಿಕ ತಾಪಮಾನ ಕುರಿತು ದೀರ್ಘಕಾಲದಿಂದ ಇದ್ದ ಆಸಕ್ತಿ ನನ್ನನ್ನು ಈ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೇರೇಪಿಸಿತು. ನರೇಂದ್ರ ಮೋದಿ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಈ ಉದ್ದೇಶಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ಅಲ್ಲಿನ ತೀರ ಅಷ್ಟು ಅನುಕೂಲಕರ ಅಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮರವಂತೆಯಲ್ಲಿ ಸಧ್ಯ 10 ಕಿಲೊವಾಟ್ ಉತ್ಪಾದಿಸುವ ಘಟಕ ಸ್ಥಾಪಿಸಿ, ಅರ್ಹತಾ ದೃಢೀಕರಣ ಪಡೆದ ಬಳಿಕ ಅದನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರಧಾನಿ ಈಗಲೂ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಡಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ದಿನೇಶ ಶೆಟ್ಟಿ, ಉಪಾಧ್ಯಕ್ಷರಾಗಿ ಪದ್ದು ಪೂಜಾರ್ತಿ ಆಯ್ಕೆಗೊಂಡಿದ್ದಾರೆ. ಒಟ್ಟು 19 ಸದಸ್ಯ ಬಲ ಹೊಂದಿರುವ ನಾಡ ಗ್ರಾಮ ಪಂಚಾಯಿತಿಯಲ್ಲಿ 14 ಬಿಜೆಪಿ ಬೆಂಬಲಿತ 3 ಕಾಂಗ್ರೇಸ್ ಬೆಂಬಲಿತ ಹಾಗೂ 2 ಸಿಪಿಎಂ ಬೆಂಬಲಿತರು ಆಯ್ಕೆಯಾಗಿದ್ದರು. ಮೀಸಲಾತಿ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ನಿಗದಿಯಾಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ರೋಟರಿ ಸಮುದಾಯದಳ ತಲ್ಲೂರು ಇವರ ಆಶ್ರಯದಲ್ಲಿ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಮಕ್ಕಳ ತಜ್ಞರಾದ ಡಾ.ಎಚ್. ರಾಘವೇಂದ್ರ ಹೆಬ್ಬಾರ್, ವಿಶೇಷ ಮಕ್ಕಳ ಪಾಲನೆ ಪೋಷಣಿ, ಮತ್ತು ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಮಾಹಿತಿಯನ್ನು ನೀಡಿದರು, ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ವಿವರಣೆಯನ್ನು ನೀಡಿ ಸಂದೇಹಗಳಿಗೆ ಪರಿಹಾರ ಸೂಚಿಸಿದರು. ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಯಕರ್ತರಾದ ಅನಿತಾ, ಗಿರಿಜಾ, ಶ್ರೀವಿತಾ ಮತ್ತು ಹರ್ಪಿತಾ ಇವರ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ, ಉಪ್ಪಿನಕುದ್ರು ಗೂಂಬೆಯಾಟ ಆಕಾಡೆಮಿಯ ಭಾಸ್ಕರ ಕೂಗ್ಗ ಕಾಮತ್ ಅವರು ವಿಶೇಷ ಮಕ್ಕಳ ಬಗೆಗಿನ ಹೆತ್ತವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧೈರ್ಯ ಕುಂದದೆ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅನ್ಯರಿಗೆ ವಂಚಿಸಿ, ಗಳಿಸಿದ ಹಣದಿಂದ ಭಗವಂತನಿಗೆ ಕೋಟ್ಯಾಂತರ ರೂ. ವ್ಯಯಿಸಿದ್ದರು ಅದನ್ನು ಭಗವಂತನಿಗೆ ಸಲ್ಲುವುದಿಲ್ಲ. ಬದಲಾಗಿ ಜನರು ತಮ್ಮ ಪ್ರಾಮಾಣಿಕ ದುಡಿಮೆಯ ಒಂದು ಭಾಗವನ್ನು ದಾನ ಮಾಡಿದಾಗ ಮಾತ್ರ ಅದು ಭಗವಂತನಿಗೆ ಅರ್ಪಿತವಾಗುತ್ತದೆ ಎಂದು ಹಾವೇರಿ ನರಸೀಪುರ ಜಗದ್ಗುರು ಶ್ರೀ ಶಾಂತಭೀಷ್ಮ ಸ್ವಾಮೀಜಿ ಹೇಳಿದರು. ಅವರು ಉಪ್ಪುಂದ ಮಡಿಕಲ್ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ನೂತನ ಶಿಲಾದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿ ಮಾತನಾಡಿದರು. ಹಿಂದಿನ ಕಾಲದಲ್ಲಿ ರಾಜಮಹಾರಾಜರು ಮಾತ್ರ ಇಂತಹ ದೇಗುಲಗಳನ್ನು ನಿರ್ಮಿಸಲು ಸಾಧ್ಯವಾಗಿತ್ತು, ಆದರೆ ಇಂದು ಕಡಲಿನಲ್ಲಿ ಕಠಿಣ ದುಡಿಮೆ ನಡೆಸುವ ಮೀನುಗಾರರ ಪರಿಶ್ರಮದಿಂದ ಹಾಗೂ ಇತರ ಭಕ್ತರು ಸೇರಿ ಭವ್ಯವಾದ ಶಿವಾ ದೇಗುಲ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಮನುಷ್ಯ ಚಿಂತೆ ಮಾಡುವುದನ್ನು ಬಿಟ್ಟು ಚಿಂತನೆ ಮಾಡುವುದನ್ನು ರೂಢಿಸಿಕೊಂಡಾಗ ಜೀವನದ ನಿತ್ಯ ಯಾತ್ರೆಯಲ್ಲಿ ಉತ್ಸಾಹ, ಚೈನತ್ಯ ಮನಮಾಡುತ್ತದೆ, ಪರೋಪಕಾರ, ನಿಸ್ವಾರ್ಥ ಸೇವೆ ಮಾಡಿದಾಗ ಪರಮಾತ್ಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಂಗಳೂರು ಫೀಲ್ಡ್ ಔಟ್‌ರೀಚ್ ಬ್ಯುರೋ ಹಾಗೂ ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಸಹಭಾಗಿತ್ವದಲ್ಲಿ ಪಂಡಿತ್ ಭೀಮ್‌ಸೇನ್ ಜೋಶಿ ಜನ್ಮ ವರ್ಷಾಚರಣೆಯ ಅಂಗವಾಗಿ ವೆಬಿನಾರ್‌ನ್ನು ಆಯೋಜಿಸಲಾಯಿತು. ಕಲಬುರಗಿಯ ಕೇಂದ್ರೀಯ ವಿವಿಯ ಸಂಗೀತ ಹಾಗೂ ಲಲಿತ ಕಲೆ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ. ಜಯದೇವಿ ಜಂಗಮಶೆಟ್ಟಿ ಹಾಗೂ ಹಂಪಿಯ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ಜಯಮ್ಮ ದಾನಮ್ಮನ್ನವರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದಾದ್ಯಂತ ಕೋವಿಡ್ ಸಂಕಷ್ಟದ ದಿನಗಳು ಇದ್ದಾಗಲೂ ನಾವು ಎಚ್ಚರಿಕೆಯಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ದಾನಿಗಳಿಂದ ರಕ್ತವನ್ನು ಸಂಗ್ರಹಿಸಿ ಅನೇಕ ಪ್ರಾಣಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ ಹೇಳಿದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಆಯುಷ್ ಧಾಮ ಆರ್ಥೊ ನ್ಯೂರೋ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ, ಉಚಿತ ಮೂಳೆ ಹಾಗೂ ನರರೋಗ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಶೀರ್ವಚನ ನೀಡಿದ ವಲಯ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ ಅವರು, ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠ ದಾನವಾಗಿರುವ ರಕ್ತದಾನದಿಂದ ಅನೇಕ ಜೀವಗಳನ್ನು ಕಾಪಾಡಲು ಸಾಧ್ಯ ಎಂದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷ ಡಾ.ಉತ್ತಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ದೇಶದಾದ್ಯಂತ ರಾಷ್ಟ್ರೀಯ ಯುವ ಸ್ವಯಂ ಸೇವಕರು ಎಂಬ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರದ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯಡಿಯಲ್ಲಿ ಜಿಲ್ಲಾವಾರು ಯುವ ಜನರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 18ರಿಂದ 29 ವರ್ಷ ವಯೋಮಿತಿಯವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವಾಸ ಭತ್ಯೆ ಸೇರಿ ಗೌರವಧನವಾಗಿ ತಿಂಗಳಿಗೆ 5000 ರೂ. ನೀಡಲಾಗುವುದು. ಅರ್ಜಿ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://nyks.nic.in/nycapp/main.asp ಅಥವಾ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ರಜತಾದ್ರಿ, ಜಿಲ್ಲಾಧಿಕಾರಿ ಕಛೇರಿ ಆವರಣ, ಮಣಿಪಾಲ ದೂ. ಸಂಖ್ಯೆ 0820-2574992 ಅನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಲ್ಫಡ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More