Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಭಾಷೆಗಿರುವ ಇತಿಹಾಸ ಕುಂದಗನ್ನಡ ಭಾಷೆಗೂ ಇದೆ. ಪ್ರಾದೇಶಿಕ ಅನನ್ಯತೆಯನ್ನು ಒಳಗೊಂಡು ವಿಶಿಷ್ಠ ನಂಬಿಕೆ ಆಚರಣೆಗಳ ಮೂಲಕ ಸಾಂಸ್ಕೃತಿಕ ಹೆಗ್ಗುರುತನ್ನು ಹೊಂದಿರುವ ಈ ಭಾಷೆಯ ಅಭಿವೃದ್ಧಿಗೆ ಮಂಗಳೂರು ವಿ.ವಿ.ಯಲ್ಲಿ ಕುಂದಗನ್ನಡ ಅಧ್ಯಯನ ಪೀಠಕ್ಕೆ ಅನುಮೋದನೆ ದೊರಕಿರುವುದು ಸ್ತುತ್ಯಾರ್ಹ. ಕುಂದಗನ್ನಡ ಭಾಷೆ & ಸಂಸ್ಕೃತಿಯ ಬಹುಮುಖಿ ಆಯಾಮದ ಸಂಶೋಧನೆಗೆ & ಅಭಿವೃದ್ಧಿಗೆ ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಯಾಗಲಿ ಎಂದು ಕುಂದಪ್ರಭ ವಾರಪತ್ರಿಕೆ ಸಂಪಾದಕ ಯು. ಎಸ್. ಶೆಣೈ ಹೇಳಿದರು. ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕನ್ನಡ ವಿಭಾಗ ಆಯೋಜಿಸಿದ ವಿಶ್ವ ಕುಂದಾಪ್ರಕನ್ನಡ ದಿನವನ್ನು ಉದ್ಧೇಶಿಸಿ ಮಾತನಾಡಿದರು. ಕುಂದಗನ್ನಡ ಭಾಷೆಯನ್ನು ಬಳಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೆಶ್ ಶೆಟ್ಟಿ ಹೇಳಿದರು. ಮೂಡುಬಗೆಯ ಬಾಪು ಸಾಹೇಬರು ಭತ್ತ ಕುಟ್ಟುವ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಮ್ ಶೆಟ್ಟಿ ಅತ್ತಿಕಾರ್, ಶ್ರೀ ಪ್ರಸಾದ್ ಜೋಗಿ ಹಕ್ಲಾಡಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ, ಜು.28: ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮ ಕೋಟ ಪಶು ಆಸ್ಪತ್ರೆ ವಠಾರದಲ್ಲಿ ಜರಗಿತು. ಹಿರಿಯ ಕೃಷಿಕರಾದ ಕೂಸ ಪೂಜಾರಿಯವರು ಹಾಲೆ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನವರು ಗಿಡ ಮರಗಳನ್ನು ಬೆಳೆಸಿ ಸಂರಕ್ಷಿಸಿದ್ದರಿಂದ ಅದರ ಫಲ ಇವತ್ತು ನಾವು ಉಣ್ಣುವಂತಾಗಿದೆ. ಈ ಪರಂಪರೆಯನ್ನು ಮುಂದುವರಿಸುವಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಯಂತಹ ಕಾರ್ಯಕ್ರಮಗಳು ನೆಪವಾಗುತ್ತಿರುವುದು ಅರ್ಥಪೂರ್ಣ ಎಂದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕುಂದಗನ್ನಡದ ವಿಶೇಷತೆಯನ್ನು ತಿಳಿಸಿದರು ಹಾಗೂ ಈ ಭಾಷೆಯನ್ನು ಬಳಸುವುದರ ಮೂಲಕ ಬೆಳೆಸಬೇಕು ಎಂದರು. ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಆಶಯಗಳನ್ನು ವಿವರಿಸಿದರು. ಪಶು ವೈದ್ಯಾಕಾರಿ ಡಾ| ಅರುಣ ಕುಮಾರ್ ಶೆಟ್ಟಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 75ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆಯನ್ನು ಪಕ್ಷ ನೀಡಿರುವ ಸೂಚನೆಯಂತೆ ಯಶಸ್ವಿಗೊಳಿಸಬೇಕು ಮತ್ತು ರಾಜ್ಯದ ಬಡವರಿಗೆ, ಹಿಂದುಳಿದವರಿಗೆ ಮತ್ತು ದೀನ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಿ ಶೋಷಿತರ ಪರ ತನ್ನ ಅಧಿಕಾರ ಅವಧಿಯಲ್ಲಿ ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ,ಸಿದ್ಧರಾಮಯ್ಯ – 75 ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಕರೆ ನೀಡಿದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಕ್ಷದ ಬೂತ್ ಸಮಿತಿ ಮತ್ತು ಗ್ರಾಮೀಣ ಸಮಿತಿಗಳನ್ನು ಮತ್ತು ಮೂಂಚೂಣಿ ಘಟಕಗಳನ್ನು ಬಲಿಷ್ಠಗೊಳಿಸಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಕುಂದರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬೆಳ್ವೆ ಸತೀಶ ಕಿಣಿ, ಕೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ನಾಗಬನ ಹಾಗೂ ಮಂದಾರಬೆಟ್ಟು ಹೈಗುಳಿ ಸೇವಾಸಂಘ ಮತ್ತು ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ ತಂಡದಿಂದ ವನಮಹೊತ್ಸವ ಆಚರಣೆಯೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಲಾಯಿತು. ಕುಂದಾಪುರ ವಲಯದ ಇರುವ ಎಲ್ಲಾ ಶಾಲೆಗಳಿಗೆ ಗಿಡ ನೀಡುವುದರ ಮೂಲಕ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಮೊಗವೀರ, ಕಾರ್ಯದರ್ಶಿ ಸಂದೀಪ್ ಮೊಗವೀರ, ದೈವಸ್ಥಾನದ ಪದಾಧಿಕಾರಿಗಳಾದ ರಾಘವೇಂದ್ರ ಕುಂದರ್, ಪ್ರದೀಪ್ ಮೊಗವೀರ, ಜೊತೆ ಕಾರ್ಯದರ್ಶಿಗಳಾದ ಆದಿ, ಸಂಘದ ಸದಸ್ಯರಾದ ಶರತ್ ಮೊಗವೀರ, ಪವನ್ ಕುಮಾರ, ರಾಜೇಶ್ ಬೋಟ್, ರಾಘು ಕರ್ಕಾಡಿ , ಕುಮಾರಣ್ಣ, ಸುಚೀತ್ ಭಾಗವಹಿಸಿದ್ದರು. ಬಳಿಕ ಸಾಮಾಜಿಕ ಅರಣ್ಯ ಇಲಾಖೆ ಕುಂದಾಪುರ ವಲಯ ಹಾಗೂ ಗ್ರಾಮ ಪಂಚಾಯತ್ ಬೀಜಾಡಿಯ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳ್ಳೇನ್ ಕೆರೆಯ ದಡದಲ್ಲಿ ಹಾಗೂ ನೀರೆಶ್ವಾಲ್ಯ ದೇವಸ್ಥಾನದ ಕೆರೆಯ ದಡದಲ್ಲಿ ಗಿಡಗಳನ್ನು ನೇಡಲಾಯಿತು. ಈ ಕಾರ್ಯಕ್ರಮದಲ್ಲಿ ಬೀಜಾಡಿ ಪಂಚಾಯತ್ ಅಧ್ಯಕ್ಷರಾದ ಸುಮತಿ, ಪಿಡಿಒ ಗಣೇಶ್, ಸದಸ್ಯರಾದ ವಾದಿರಾಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು,ಜು.29: ನಗರದ ಅತ್ತಿಗುಪ್ಪೆಯಲ್ಲಿನ ಬಂಟರ ಸಂಘದ ಹಾಲಿನಲ್ಲಿ ‘ವಿಶ್ವಕುಂದಾಪ್ರ ಕನ್ನಡ ದಿನ’ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಶೇಷ ಕಾರ್ಯಕ್ರಮಗಳು, ಕಿಕ್ಕಿರುದು ತುಂಬಿದ ಸಭಾಂಗಣ ಕುಂದಾಪ್ರ ಕನ್ನಡದ ದಿನವನ್ನು ಹಬ್ಬವನ್ನಾಗಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ಕುಂದಾಪ್ರದ ಸಂಸ್ಕ್ರತಿಯನ್ನ ಸದುದ್ದೇಶದಿಂದ ವಿಜ್ರಂಭಣೆಯಿಂದ ಆಚರಿಸಿ. ಆದರೆ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಕುಂದಾಪುರ ಭಾಗದಲ್ಲಿ ಸಾಕಷ್ಟು ಜನ ಸಾಧಕರಿದ್ದಾರೆ. ಅವರನ್ನ ಕಂಡು ಖುಷಿಪಟ್ಟರಷ್ಟೇ ಸಾಲದು ಅವರಂತೆ ಆಗಲು ಪ್ರಯತ್ನಿಸಬೇಕು ಎಂದರು. ಪ್ರಸಿದ್ಧ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಪ್ರೋ. ಬಾಲಕೃಷ್ಣ ಶೆಟ್ಟಿ ಅವರು ‘ನುಡಿ, ಚಂದಾ ಮುಡಿ’ಯಲ್ಲಿ ಕುಂದಾಪ್ರದ ಸೊಗಡನ್ನು ತೆರೆದಿಟ್ಟರು. ಈ ವೇಳೆ ಅಬ್ಬಿಗೊಂದು ಕಾಗ್ದ ಸ್ವರ್ಧೆಯ ಆಯ್ದ ಪತ್ರಗಳ ಸಂಕಲನ ಅಗ್ರಣಿ ಪ್ರಕಾಶನದಿಂದ ಪ್ರಕಟಿಸಿದ ‘ಕಾಗ್ದದ್ ದೋಣಿ’ ಬಿಡುಗಡೆಗೊಂಡಿತು. ದೀಪಕ್ ಶೆಟ್ಟಿ ಬಾರ್ಕೂರು ಅವರು ಕುಂದಾಪ್ರ ಕನ್ನಡದ ಬಗೆಗಿನ ಹತ್ಕೊತ್ತಾಯವನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ನದಿ-ಕಡಲ ಸಂಗಮದ ಅಪೂರ್ವ ತಾಣ ಮರವಂತೆಯ ಪುರಾಣ ಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಸಮುದ್ರ ಸ್ನಾನ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು. ನಸುಕಿನಿಂದಲೇ ಆಸುಪಾಸಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮರವಂತೆಗೆ ಆಗಮಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಾಚೆಗಿನ ಸಮುದ್ರದಲ್ಲಿ ಸ್ನಾನಗೆ„ದು ಬಳಿಕ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಸ್ನಾನಗೈದು ಶ್ರೀದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಹಾಗೂ ಸ್ಥಳೀಯ ಭಾಗದ ಮೀನುಗಾರರು (ಮರವಂತೆ) ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು. ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ಸುಮಾರು ಅರ್ಥ ಕಿ.ಮೀ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಯುವಕರು ತಾವು ಬೆಳೆದ ಪರಿಸರವನ್ನು ಮರೆಯಬಾರದು. ದೇಶ ಎದುರಿಸುತ್ತಿರುವ ಪ್ರತಿಯೊಂದು ಪರಿಸರ ಸಮಸ್ಯೆಗೂ ನಾವೇ ಪರಿಹಾರವಾಗಬೇಕು. ಎನ್ಎಸ್ಎಸ್ ಸ್ವಯಂಸೇವಕರು ಆರೋಗ್ಯವಂತ ಸಮುದಾಯಕ್ಕಾಗಿ ನಮ್ಮ ಪರಿಸರಕ್ಕೆ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಬೇಕು ಎಂದು ಎಂಐಟಿ ಮಣಿಪಾಲ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಹೇಳಿದರು. ಅವರು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಪರಿಸರ ಜಾಗೃತಿ ಮತ್ತು ಜಲ ಸಂರಕ್ಷಣೆ ಕಾರ್ಯಕ್ರಮದ ಕುರಿತು ಮಾತನಾಡಿದರು. ಎನ್ ಎಸ್ ಎಸ್ ಘಟಕ 1 ಮತ್ತು 2ರ ಕಾರ್ಯಕ್ರಮ ಅಧಿಕಾರಿ ಪ್ರೊ. ರಾಘವೇಂದ್ರ ಗುಡಿಗಾರ್ ಅವರು ಪರಿಸರ ನಿರ್ಮಾಣ ಚಟುವಟಿಕೆಗಳ ಬಗ್ಗೆ ಯುವಜನರಿಗೆ ಶಿಕ್ಷಣ ನೀಡಲು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗಣಿತ ತಜ್ಞ ಪ್ರೊ. ಉದಯ್ ಎಂ.ಪಿ ಮತ್ತು ಪ್ರೊ. ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಮುಖಂಡ ರೋಶನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಹಾಗೂ ಶಿರೂರು ಟೋಲ್ ಸಿಬ್ಬಂದ್ಧಿ ನಿರ್ಲಕ್ಷದಿಂದ ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಬೈಂದೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿ ಉಪ್ಪುಂದ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಉದಯ ಪೂಜಾರಿ, ಸಂತೋಷ ಹೊಸ್ಕೋಟೆ, ಸುರೇಶ ದೇವಾಡಿಗ, ಕೀರ್ತನ್ ಉಪ್ಪುಂದ, ಪ್ರವೀಣ ದೇವಾಡಿಗ, ಮಹೇಶ್, ಮನೋಜ್, ಸುಬ್ರಹ್ಮಣ್ಯ, ಶಿವರಾಜ್, ಅಭಿಜೀತ್ ಬಿಜೂರು, ಶರತ್ ಪೂಜಾರಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾನ್ಕಿ ಗಣೇಶೋತ್ಸವ ಸಮಿತಿಯ 7ನೇ ವರ್ಷದ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಬೆಳಾರಮಕ್ಕಿ, ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಮಕ್ಕಿಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಧು ಪಿ.ಟಿ, ಹಾಗೂ ಖಜಾಂಚಿಯಾಗಿ ರವೀಂದ್ರ ಪೂಜಾರಿ ಕಾನ್ಕಿ ಬೂರ್ದಡಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಬುಧವಾರ ಜರುಗಿತು. ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಚಿಕ್ಕವಯಸ್ಸಿನಲ್ಲಿ ಕಾಳಜಿ ಮೂಡಿಸಿದರೆ ಪ್ರಕೃತಿ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಆದ್ದರಿಂದ ಗಿಡಗಳನ್ನು ಬೆಳಸಿ ಉಳಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹೆಮ್ಮಾಡಿ ಶ್ರೀ ವಿ.ವಿ.ವಿ ಮಂಡಳಿ ಮಂಡಳಿ ಉಪಾಧ್ಯಕ್ಷ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು ವಲಯದ ರೇಂಜರ್ ಆಗಿರುವ ಸಿದ್ದೇಶ್, ಉಡುಪಿ ವಲಯದ ರೇಂಜರ್ ಚಿದಾನಂದ, ಇಕೋ ಕ್ಲಬ್ ಅಧ್ಯಕ್ಷ ನಿಕೇಶ್, ಶಾಲಾ ಮುಖ್ಯೋಪಾಧ್ಯಾಯಾರಾದ ಆನಂದ ಮದ್ದೂಡಿ ಉಪಸ್ಥಿತರಿದ್ದರು. ಶಿಕ್ಷಕಿ ಚೈತ್ರ ವಂದಿಸಿದರು. ಅಧ್ಯಾಪಕರಾದ ಚಂದ್ರ…

Read More