ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಅಂಪಾರು ಸುಖಾನಂದ ಶೆಟ್ಟಿ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಡೀಮ್ಡ್ ಯೂನಿವರ್ಸಿಟಿ)ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ. ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಡೀಮ್ಡ್ ಯೂನಿವರ್ಸಿಟಿ)ವಿಶ್ವ ವಿದ್ಯಾಲಯದ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಮೂಲಕ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರೇಖಾ ಬನ್ನಾಡಿಯವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ (A cultural Study in Kolluru)” ಎಂಬ ಮಹಾಪ್ರಬಂಧಕ್ಕಾಗಿ ಅಧ್ಯಯನ ನಡೆಸಿದ್ದರು. ಅವರ ಈ ಸಾಧನೆಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶೈಕ್ಷಣಿಕ ಹಂತದಲ್ಲಿ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನ ಮತ್ತು ಪ್ರಗತಿಪತ್ರಿಕೆಯು ಮಹತ್ವದ್ದಾಗಿರುತ್ತದೆ. ಕಲಿಕಾ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದಕ್ಕೆ ನವೀನ ರೀತಿಯ ಬೋಧನಾ ತಂತ್ರಗಳನ್ನು ನಾವು ಹೆಚ್ಚು ಹೆಚ್ಚು ಬಳಸಿಕೊಂಡು ಚಟುವಟಿಕೆ ಆಧಾರಿತ ಪಾಠ ಕ್ರಮದ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಂವಿಜೆ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ, ಶಿಕ್ಷಣ ತಜ್ಞೆ ಹಾಗೂ ಸಿಬಿಎಸ್‌ಸಿ ಮಾಸ್ಟರ್ ಟ್ರೈನರ್ ವಂಶಿಪ್ರಿಯ ಅಮರ್ ಹೇಳಿದರು. ಅವರು ಗುರುವಾರ ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಿಗಾಗಿ “ಸಮಗ್ರ ಪ್ರಗತಿ ಪತ್ರಿಕೆಯ ಮೂಲ ಹಾಗೂ ಕಲಿಕಾ ಫಲಿತಾಂಶ ಮತ್ತು ಬೋಧನಾ ವಿಧಾನಗಳು “ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಅವರು ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಯನ ಮತ್ತು ಅನುಭವಾತ್ಮಕ ವಿಚಾರಗಳನ್ನು ಹೆಚ್ಚು ಬಳಸಿಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ಭವ್ಯ ರಕ್ತದಾನ ಶಿಬಿರವನ್ನು ಶುಕ್ರವಾರದಂದು ಯಶಸ್ವಿಯಾಗಿ ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಸಾದಿಕಾ ಅಲ್ ಮಹ್ಮೂದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವು ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಈಶ್ ಸಿಂಘಾಲ್ ಅವರು, ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಮಾಜಸೇವೆಗೈಯಲು ಹಲವು ದಾರಿಗಳಿವೆ. ಅದರಲ್ಲಿ ವಿವಿಧ ಸಂಘ-ಸಂಸ್ಥೆಗಳ ಮೂಲಕ ಕೊರಗ ಸಮುದಾಯದ ಮನೆಗಳಿಗೆ ಗೋದ್ರೇಜ್ ಕೊಡುಗೆ ನೀಡಲು ಪ್ರೇರಣೆದಾಯಕರಾಗಿರುವ ಸಮಾಜಸೇವಕ ಶ್ರೀಕಾಂತ್ ಶೆಣೈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು. ಅವರು ಕೋಟತಟ್ಟು ಚಿಟ್ಟಿಬೆಟ್ಟು ಕೊರಗ ಕಾಲೋನಿಯ ಏಳು ಮನೆಗಳಿಗೆ ಸಮಾಜಸೇವಕ ಶ್ರೀಕಾಂತ್ ಶೆಣೈ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಗೋದ್ರೇಜ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರಗ ಸಮುದಾಯವನ್ನು ಕೀಳಾಗಿ ಕಾಣುವ ಕಾಲಘಟ್ಟ ಇದಲ್ಲ ಅವರು ನಮ್ಮಂತೆ ಈ ಸಮಾಜದಲ್ಲಿ ಸಮಾನರಾಗಿ ಗುರುತಿಸಿಕೊಂಡಿದ್ದಾರೆ ಎಂದರು. ಸಭೆಯಲ್ಲಿ ಗೋದ್ರೇಜ್ ನಿರ್ಮಿಸಿ ಅತಿ ಕಡಿಮೆ ಬೆಲೆಯಲ್ಲಿ ಒದಗಿಸಿದ ಪ್ರವೀಣ್ ಮಣೂರು ಇವರಿಗೆ ಕೃತಜ್ಞತೆ ಸಲ್ಲಿಸಿ ಗೌರವಿಸಲಾಯಿತು. ಸಭೆಯಲ್ಲಿ ಟ್ರಾವೆಲಿಂಕ್ಸ್ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೌರವಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟ-ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ ಇವರ ಸಹಭಾಗಿತ್ವದಲ್ಲಿ ಜೂನ್ 2ರಂದು ಮಂಗಳವಾರ ಬೆಳಿಗ್ಗೆ 9:00 ರಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಂಪನಿಗಳು ಆಗಮಿಸುತ್ತಿದ್ದು, SSLC, PUC, NTC, D.Ed, BPEd, B.Ed, BA, B.com, BSW, MSW, MA, M.com, MSc, MBA, BBA, BCA, BTech, MTech ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಪ್ರಸ್ತುತ ಅಂತಿಮ ಪದವಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಲು ಇದೊಂದು ಸುವರ್ಣಾವಕಾಶ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ರೆಸ್ಯುಮ್, ಅಂಕಪಟ್ಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ಗಳ ಮೂಲ ಪ್ರತಿಯೊಂದಿಗೆ ಹಾಜರಾಗುವುದು. ಈ ಉದ್ಯೋಗ ಮೇಳದ ಪ್ರಯೋಜನವನ್ನು ರಾಜ್ಯದ ಎಲ್ಲಾ ಉದ್ಯೋಗಾಕಾಂಕ್ಷಿಗಳು ಪಡೆದುಕೊಳ್ಳುವಂತೆ ಕಾಲೇಜಿನ ಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರು ನಗರದ ಪ್ರತಿಷ್ಠಿತ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಜಿಲ್ಲೆಯ ಚಿತ್ತೂರು ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಗುರುಪ್ರಸಾದ್ ಅವರು, ಅದ್ಭುತ ಪ್ರದರ್ಶನದ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಪಾಲಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಜಾನಪದ ಕಲೆಯ ವೈಭವವನ್ನು ಮನೋಜ್ಞವಾಗಿ ಮೂಡಿಸಿ, ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಲಾಪ್ರೇಮದಿಂದ ರಾಜ್ಯದ ಗಮನ ಸೆಳೆದಿರುವುದು ನಿಜಕ್ಕೂ ಶ್ಲಾಘನೀಯ. ಇದೇ ವೇಳೆ ಕಿರು ನಾಟಕ ಸ್ಪರ್ಧೆಯಲ್ಲಿಯೂ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ, ದ್ವಿತೀಯ ಸ್ಥಾನ ಗಳಿಸಿರುವುದು ಅವರ ಕಲಾತ್ಮಕ ನೈಪುಣ್ಯ ಹಾಗೂ ಸಾಂಸ್ಕೃತಿಕ ಬದ್ಧತೆಯ ಮತ್ತೊಂದು ಮೆರುಗು. ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಜೊತೆಗೆ, ವೇದಿಕೆಯ ಮೇಲೂ ಸಾಧನೆಯ ಶಿಖರ ಏರಿರುವುದು ಶಿಕ್ಷಣ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದೆ. ಗುರುಪ್ರಸಾದ್ ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸುಮಾರು 5 ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹಿಮರ ತ್ಯಾಗ ಬಲಿದಾನಗಳ ದೃಷ್ಟಾಂತವು ಮನುಕುಲದಲ್ಲಿ ಮಹಾ ಸಂವೇದನೆ ಮೂಡಿಸಿದ ಘಟನೆ ಎಂದು ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ಹೇಳಿದರು. ಅವರು ಗುರುವಾರ ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿನ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಧಾರ್ಮಿಕ ಪ್ರವಚನ ನೀಡಿದರು. ನೀರಿಗಾಗಿ ಹಾಜಿರಾರವರು ಓಡಿದ ಎರಡು ಪರ್ವತಗಳ ನಡುವಿನ ಓಟ ಮತ್ತು ಅದಕ್ಕೆ ಪ್ರತಿಯಾಗಿ ಅಲ್ಲಾಹನು ನೀರಿಲ್ಲದ ಮರುಭೂಮಿಯಲ್ಲಿ ಇಡೀ ಜಗತ್ತು ಕುಡಿಯುವಷ್ಟು ನೀರನ್ನು ಸೃಷ್ಟಿಸಿದ್ದು ಕಾಲಾತೀತವಾದ ಜಾಗತಿಕ ಚರಿತ್ರೆಯ ಮಹಾನ್ ವಿಸ್ಮಯಗಳಲ್ಲಿ ಒಂದು. ದೇವನ ಇರುವಿಕೆ, ಪ್ರಭಾವ ಮತ್ತು ಪ್ರೀತಿ ಎಲ್ಲವೂ ಸಂಗಮವಾಗಿದ್ದನ್ನು ಸಂಭ್ರಮಿಸಲು ಈ ಹಬ್ಬವಿದೆ. ಯಾವುದೇ ಹಬ್ಬದ ಸಂಭ್ರಮವು ಸೌಹಾರ್ದಕ್ಕೆ ಮತ್ತು ಸಹಧರ್ಮೀಯರೊಂದಿಗಿನ ಸಹಜೀವನಕ್ಕೆ ಪೂರಕವಾಗಿರಬೇಕು ಎಂದರು. ಪ್ರಾರ್ಥನಾ ಸಭೆಯಲ್ಲಿ ಅಲಿಯಬ್ಬ ತೋಟದಮನೆ, ಸೈಯದ್ ರಫೀಕ್, ಹಸನ್ ಸಾಹೇಬ್, ಶಾಹುಲ್ ಹಮೀದ್, ಸೈಯದ್ ಅಬ್ಬಾಸ್, ಸೈಯದ್ ಇಕ್ಬಾಲ್ , ಅಮಾನ್ ಜಮಾಲ್, ಇಬ್ರಾಹಿಂ ಸೈಯದ್, ಆದಮ್ ಸಾಹೇಬ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ 48 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಕೃಷ್ಣ ಕಾಮತ್ ಅವರು ವಹಿಸಿದ್ದರು. ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಿರಂತರ ಪ್ರಯತ್ನ ಯಶಸ್ಸಿಗೆ ದಾರಿ. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ನಿರಂತರ ಪ್ರಯತ್ನ ಮತ್ತು ಕಾಯುವ ತಾಳ್ಮೆ ಇರಬೇಕು. ಶಿಕ್ಷಣ ಕೇವಲ ಪುಸ್ತಕದ ಜ್ಞಾನವಲ್ಲ, ಬದಲಿಗೆ ಜೀವನದ ಏಳು-ಬೀಳುಗಳನ್ನು ಎದುರಿಸುವ ಧೈರ್ಯ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುವಂತಿರಬೇಕು ಎಂದರು. ಅತಿಥಿಯಾಗಿ ಭಾಗವಹಿಸಿದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ಹೆತ್ತವರು ತಮ್ಮ ಮಕ್ಕಳಿಗೆ ಸದ್ವಿಚಾರ, ಸಂಸ್ಕೃತಿ, ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯ ಪ್ರವೃತ್ತರಾಗಬೇಕು ಎನ್ನುವುದರ ಕುರಿತು ಸಂಪೂರ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಕ್ಕಳ ಸಾಧನೆಯಿಂದ ಹೆತ್ತವರಿಗೆ ಗೌರವ ಸಿಗುವಂತಾದರೆ ಅದು ನಿಜಕ್ಕೂ ಮಕ್ಕಳು ಹೆತ್ತವರಿಗೆ ನೀಡುವಂತಹ ಅತಿ ದೊಡ್ಡ ಉಡುಗೊರೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಪರಿಶ್ರಮ ಮತ್ತು ಶ್ರದ್ಧೆಯಿಂದ ಸಾಧನೆಗಳನ್ನು ಮಾಡಬೇಕು ಮತ್ತು ಗುರಿಯನ್ನು ತಲುಪಬೇಕು ಎಂದು ಗಂಗೊಳ್ಳಿಯ ಉದ್ಯಮಿ ವಾಮನ ಎಸ್. ಪೈ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿಯ ಆರಂಭೋತ್ಸವ ಮತ್ತು ಅಭಿಮುಖೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ. ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪಿ.ಪೈ, ಕಾಲೇಜಿನ ಕಾರ್ಯದರ್ಶಿ ಎನ್. ಸದಾಶಿವ ನಾಯಕ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರತಿಭೆಗಳಾದ ಅದಿತಿ ಎಸ್. ಖಾರ್ವಿ ಇವರಿಂದ ಭರತನಾಟ್ಯ ಮತ್ತು ಶ್ಯಾಮ್ ಜಿ.ಎನ್. ಪೂಜಾರಿ ಅವರ ಕೊಳಲು ವಾದನ ಮತ್ತು ರಚಿತ್ ಚಂದ್ರ ಖಾರ್ವಿ ಅವರಿಂದ ತಬಲ ವಾದನ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾದ ಸುಜಯೀಂದ್ರ …
