ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳನ್ನು ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮ ಆಗಸ್ಟ್ 6ರಂದು ಸಂಜೆ 6ರಿಂದ 8ರ ತನಕ ಕುಂದಾಪುರ ಸಹನಾ ಮಿನಿ ಹಾಲ್ನಲ್ಲಿ ನಡೆಯಲಿದೆ. ಮೀಟ್ – ಗ್ರೀಟ್ ಕಾರ್ಯಕ್ರಮದ ಅಧ್ಯಕ್ಷರಾಗಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್.ಸುಕುಮಾರ ಶೆಟ್ಟಿ, ರಘುಪತಿ ಭಟ್, ಸುನೀಲ್ ಕುಮಾರ್ ಆಗಮಿಸಲಿದ್ದಾರೆ. ದುಬೈನಲ್ಲಿ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಕೆ ನಮ್ಮ ಕುಂದಾಪ್ರ ಕನ್ನಡ ಬಳಗದ್ದಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಕಷ್ಟದಲ್ಲಿರುವವರಿಗೆ ಸಹಾಯ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕುಂದಾಪುರ ಭಾಷಿಗರನ್ನು ಒಗ್ಗೂಡಿಸುವುದು ಹಾಗೂ ಪರಸ್ಪರ ಭಾಂದವ್ಯ ಬೆಳೆಸುವುದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು/ ಬೆಳಗಾವಿ ಮತ್ತು ಆಲ್ ಇಂಡಿಯಾ ಕಲ್ಚರ್ ಮತ್ತು ಹೆರಿಟೇಜ್ ಡೆವಲಪ್ಮೆಂಟ್ ಸೆಂಟರ್ ನ್ಯೂಡೆಲ್ಲಿ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಕುಂದಾಪುರದ ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ರಿ. ಹಾಗೂ ಮಾತೃಶ್ರೀ ಟ್ಯುಟೋರಿಯಲ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ ವಾಸುದೇವ ಬೈಂದೂರು ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಗುರುಶಾಂತೇಶ್ವರ ಹಿರೇಮಠ ಹಲಿಕ್ಕೇರಿ ಬೆಳಗಾವಿ ಮತ್ತು ಸನ್ಮಾನ್ಯ ನ್ಯಾಯಮೂರ್ತಿ ಶ್ರೀ ಶಿವರಾಜ್ .ವಿ ಪಾಟೀಲ್ ನಿವೃತ್ತ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ದೆಹಲಿ ಮತ್ತು ಪ್ರೊ ಚಂದ್ರಶೇಖರ ಪಾಟೀಲ ಹಿರಿಯ ಸಾಹಿತಿ ಇವರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಹುಪಾಲು ಕರಾವಳಿಯ ಕಲಾವಿದರೇ ನಟಿಸಿ, ನಿರ್ದೇಶಿಸಿರುವ; ವಿಭಿನ್ನ ಕಧಾ ಹಂದರದ ಸಿನೆಮಾ ಕತ್ತಲೆಕೋಣೆ ಸಿನೆಮಾ ಅಗಸ್ಟ್ 10ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಕುಂದಾಪುರ ಬೈಂದೂರು ಹಾಗೂ ಉಡುಪಿಯ ಚಿತ್ರಮಂದಿರಗಳಲ್ಲಿಯೂ ಮೊದಲ ವಾರವೇ ಬಿಡುಗಡೆಗೊಳ್ಳಲಿದೆ ಎಂದು ಕತ್ತಲೆಕೋಣೆ ಸಿನೆಮಾ ತಂಡದ ಅಶ್ವತ್ ಆಚಾರ್ಯ ಯಡಬೆಟ್ಟು ಹೇಳಿದರು. ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ ಅವರ ಎಂಟು ವರ್ಷದ ಸಿನೆಮಾ ಕನಸು ಅಂತಿಮ ಘಟ್ಟ ತಲುಪಿದ್ದು ದೀಪಕ್ ಗಂಗಾಧರ್ ಮೂವೀಸ್ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದರು. ಚಿತ್ರವನ್ನು ನಿರ್ದೇಶಿಸಿದರು ಸಂದೇಶ್ ಶೆಟ್ಟಿ ಆಜ್ರಿ ನಾಯಕ ನಟನಾಗಿ ಕಾಣಿಸಿಕೊಂಡಿರುವುದಲ್ಲದೇ, ಸಿನೆಮಾಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ನಾಯಕ ನಟಿಯಾಗಿ ಹೆನಿಕಾ ರಾವ್ ಮೊದಲ ಭಾರಿಗೆ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಪುತ್ರ ರಿತೀಕ್ ಮುರ್ಡೇಶ್ವರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ವತಿಯಿಂದ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೆಸರುಗದ್ದೆಯ ಕ್ರೀಡಾಕೂಟ ಹಾಗೂ ನಾಟಿ ಕಾಯ೯ ಕಟ್ಕೆರೆಯ ಹಡಿಲು ಬಿದ್ದ ಬಯಲಿನಲ್ಲಿ ನಡೆಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರುಣಾಕರ ಶೆಟ್ಟಿಯವರು ಮಾತನಾಡಿ ಕೃಷಿಯನ್ನು ಕಡೆಗಣಿಸುತ್ತಿರುವ ಇಂದಿನ ಕಾಲದಲ್ಲಿ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ಸದಸ್ಯರು ಹಡಿಲು ಬಿದ್ದಿರುವ ಗದ್ದೆಯಲ್ಲಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಕಾಯ೯ವಾಗಿದೆ ಎಂದರು. ಯುವಕ ಮಂಡಲದವರು ಪ್ರತಿ ವಷ೯ ಕಟ್ಕೆರೆಯ ಉತ್ತಮ ಕೃಷಿಕರನ್ನು ಗುರುತಿಸಿ ನಮ್ಮೂರ ಅನ್ನದಾತ ಎನ್ನುವ ಪ್ರಶಸ್ತಿಯನ್ನು ನೀಡಿ ಗುರುತಿಸಿ ಗೌರವಿಸುವ ಮೂಲಕ ಕೃಷಿಯನ್ನು ಪ್ರೊತ್ಸಾಯಿಸುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪ್ರಥಮ ದಜೆ೯ ಗುತ್ತಿಗೆದಾರರಾದ ಸುಭೋಧ ಹೆಗ್ಡೆ ಕಟ್ಟೆರೆ, ಅರಣ್ಯ ಗುತ್ತಿಗೆದಾರರಾದ ಜಯಪ್ರಕಾಶ ಹೆಗ್ಡೆ ಕಟ್ಕೆರೆ, ಶಿಕ್ಷಕರಾದ ಅಜ್ಜರಗುಡ್ಡೆಮನೆ ಕರುಣಾಕರ ಶೆಟ್ಟಿ ಕಟ್ಕೆರೆ , ಕಿಶೋರಚಂದ್ರ ಶೆಟ್ಟಿ ಕಟ್ಕೆರೆ, ಲಕ್ಷಣ ಶೆಟ್ಟಿ ಕಟ್ಕೆರೆ ಇದ್ದರು. ನೆಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವಶಕ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಸುಮ ಫೌಂಡೇಷನ್ನ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕುಸುಮಾಂಜಲಿ-೨೦೧೮ರ ಪೂರ್ವಭಾವಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಾನಕುಸುಮ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ನಾಗೂರು ಕೆ.ಎ.ಎಸ್. ಆಡಿಟೋರಿಯಂನ ’ಬ್ಲಾಸಮ್’ ಸಂಗೀತ ನೃತ್ಯ ಶಾಲೆಯಲ್ಲಿ ಜರುಗಿತು. ಗಾನಕುಸುಮದ ಅಂತಿಮ ಸುತ್ತಿನಲ್ಲಿ 29 ಸ್ಪರ್ಧಿಗಳು ಭಾಗವಹಿಸಿದ್ದು, ಗಾನಕುಸುಮ 2018 ಪ್ರಥಮ ಸ್ಥಾನವನ್ನು ಸೀನಿಯರ್ ವಿಭಾಗದಲ್ಲಿ ಉಡುಪಿಯ ಸಿ.ಎ. ವಿದ್ಯಾರ್ಥಿ ವಿ. ಪಿ. ಶ್ರೀಹರಿ ಹೊಳ್ಳ, ಪಡೆದುಕೊಂಡರೆ, ಜೂನಿಯರ್ ವಿಭಾಗದಲ್ಲಿ ಎಸ್.ವಿ. ಪ್ರೌಢಶಾಲೆ ಗಂಗೊಳ್ಳಿಯ ವಿದ್ಯಾರ್ಥಿನಿ ಶ್ರೇಯಾ ಎನ್. ಖಾರ್ವಿ ಪಡೆದುಕೊಂಡರು. ಸಂಗೀತಕಾರ ಚಂದ್ರಶೇಖರ ಕೆದಿಲಾಯ, ಗಾಯಕ ರಾಘವೇಂದ್ರ ಐತಾಳ ಮತ್ತು ಗಾಯಕಿ ಪಲ್ಲವಿ ತುಂಗಾ ಸುರತ್ಕಲ್ ತೀರ್ಪುಗಾರರಾಗಿದ್ದರು. ಬೈಂದೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಹೆಚ್. ವಸಂತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕುಸುಮ ಹೋಮ್ಸ್ ಪ್ರೈ. ಲಿಮಿಟೆಡ್ನ ನಿರ್ದೇಶಕರಾದ ಕುಸುಮಾವತಿ ಎಸ್. ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಯು. ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಕುಸುಮ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದೇವರು ನಮ್ಮನ್ನು ಈ ಪುಣ್ಯಭೂಮಿಯಲ್ಲಿ ಹುಟ್ಟಿಸಬೇಕಾದರೆ ನಮಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಬೇಕಾದ ಎಲ್ಲಾ ಅಂಗಾಂಗಗಳನ್ನು ಸೃಷ್ಟಿಸಿದ್ದಾನೆ. ನಮಗೆ ಈ ಸುಂದರ ಮಾಯಾ ಜೀವನ ಕೊಟ್ಟಿದ್ದು ತಂದೆ ತಾಯಿ. ಅವರೇ ನಮ್ಮ ನಿಜವಾದ ದೇವರು, ತಂದೆ ತಾಯಿ ನಮ್ಮ ಜೀವನದ ಹೀರೋಗಳು. ಹೀಗಾಗಿ ನಾವು ಪ್ರತಿನಿತ್ಯ ತಂದೆ ತಾಯಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ನಮ್ಮ ಜೀವನ ಅಭಿವೃದ್ಧಿಯಾಗಿ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲು ಸಹಾಯವಾಗುತ್ತದೆ ಎಂದು ಕುಂದಾಪುರ ಸರಸ್ವತಿ ಗ್ರೂಫ್ ಆಫ್ ಇನ್ಸಿಟ್ಯೂಟ್ನ ಆಡಳಿತ ನಿರ್ದೇಶಕ ರಿತೇಶ್ ಕಾಮತ್ ಹೇಳಿದರು. ಕ್ರಾಂತಿವೀರರ ಅಭಿಮಾನಿ ಬಳಗ ಗಂಗೊಳ್ಳಿ ಹಾಗೂ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಜನ್ಮದಾತೋ ದೇವೋ ಭವ: ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂದೆ ತಾಯಿ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗಿ ಎಲ್ಲಡೆ ಸಮತೋಲನವುಂಟಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ವೃದ್ಧಿಯಾಗಿ ಮನೆಮನದಲ್ಲಿ ಶಾಂತಿ ದೊರೆಯುತ್ತದೆ ಆದುದರಿಂದ ವಿಶಿಷ್ಠ ಚೇತನವನ್ನು ನೀಡಬಲ್ಲ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ನಿತ್ಯ ಪಠಿಸೋಣ ಎಂದು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಪಶ್ಚಿಮ ಕರಾವಳಿಯ ಸಂಯೋಜಕ ಸಂತೋಷ ಕೋಣಿ ಹೇಳಿದರು ಅವರು ಕುಂದಾಪುರದ ಶ್ರೀ ಬಗಳಾಂಬ ದೇವಸ್ಥಾನದಲ್ಲಿ ನಡೆದ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಲಿಕಾ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಬಗಳಾಂಬ ದೇವಸ್ಥಾನದ ಉತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ.ಬಿ., ಪ್ರಧಾನ ಅರ್ಚಕ ಗಣಪತಿ ಸುವರ್ಣ, ಸ್ತೋತ್ರ ಪಠಣ ಸಮಿತಿಯ ರಶ್ಮಿರಾಜ್ ಇನ್ನಿತರರು ಉಪಸ್ಥಿತರಿದ್ದರು.ಶ್ರೀಧರ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಶ್ರೀ ಆನೆಗಣಪತಿ ದೇವಸ್ಥಾನದ ಬಳಿ ಇರುವ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ ಅಂಗಡಿಗೆ ಬೆಳಗಿನ ಜಾವ ಆಕಸ್ಮಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಂಗಡಿಗೆ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ. ಇಲೆಕ್ಟ್ರಿಕಲ್ ಶಾಪ್ನಲ್ಲಿರುವ ವಸ್ತುಗಳ ಸಂಪೂರ್ಣ ಸುಟ್ಟು ಕರಕಲಾಗಿವೆ. ಪಕ್ಕದ ಅಂಗಡಿಗಳಿಗೂ ಬೆಂಕಿ ಆವರಿಸಿಕೊಳ್ಳುವುದರಲ್ಲಿತ್ತು. ಅಗ್ನಿಶಾಮಕದಳದ ಸಿಬ್ಬಂಧಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯ ನಿಖರ ಕಾರಣ ತನಿಕೆಯ ಬಳಿಕ ತಿಳಿದುಬರಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಅಪರಾಧಗಳನ್ನು ಕಡಿಮೆ ಮಾಡುವಲ್ಲಿ ದೇಶಕ್ಕೆ ಮಾದರಿಯಾಗಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಸರಕಾರ ಇಲಾಖೆಯನ್ನು ಬಲಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿದ್ದು, ಇತ್ತೀಚಿಗೆ ಜಾರಿಗೆ ತಂದಿರುವ ಜನಸಾಮಾನ್ಯರನ್ನೊಳಗೊಂಡ ಸುಧಾರಿತ ಬೀಟ್ ವ್ಯವಸ್ಥೆ ಯಶಸ್ವಿಯಾಗುತ್ತಿದೆ ಎಂದು ಪೊಲೀಸ್ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ.ದಿನೇಶ ಕುಮಾರ್ ಹೇಳಿದರು. ರೋಟರಿ ಕ್ಲಬ್ ಗಂಗೊಳ್ಳಿ ಆಶ್ರಯದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಸಹಕಾರದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾಹನ ಚಾಲಕರು ಹಾಗೂ ಮಾಲಕರಿಗೆ ಶನಿವಾರ ಜರಗಿದ ’ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಮಾಹಿತಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮೂಲ ಉದ್ದೇಶವಾಗಿದ್ದು, ಜನಸಾಮಾನ್ಯರು ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಪೊಲೀಸ್ ಇಲಾಖೆಯ ಮತ್ತು ಮೋಟಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು:ಸದ್ಗುರು ಶ್ರೀ ನಿತ್ಯಾನಂದರ ಭಕ್ತರು ವಿಶ್ವದೆಲ್ಲೆಡೆ ನೆಲೆಸಿದ್ದು, ಕೊಲ್ಲೂರಿನ ನಿತ್ಯಾನಂದಆಶ್ರಮದಲ್ಲಿ ನಡೆಯುವ ವಿವಿಧಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯನ್ನುಅಂತರ್ಜಾಲದ ಪಡೆದುಕೊಳ್ಳಲು ಆಶ್ರಮದ ವೆಬ್ಸೈಟ್ರೂಪಿಸಲಾಗಿದ್ದುಆಶ್ರಮದ ಭಕ್ತರುಇದರಸದುಪಯೋಗವನ್ನು ಪಡದುಕೊಳ್ಳುವಂತಾಗಲಿಎಂದುಶ್ರೀ ನಿತ್ಯಾನಂದಗುರುದೇವರ ಹಿರಿಯ ಭಕ್ತಮಂಬೈನ ನರೇಂದ್ರದೇಶಪಾಂಡೆ ಹೇಳಿದರು ಅವರು ಗುರುಪೂರ್ಣಿಮೆ ಅಂಗವಾಗಿ ಕೊಲ್ಲೂರು ಸದ್ಗುರು ಶ್ರೀ ನಿತ್ಯಾನಂದ ಆಶ್ರಯಮದಲ್ಲಿ ಜರುಗಿದ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶ್ರಮ ವೆಬ್ಸೈಟ್ www.kollurunithyanandaashrama.com ಲೋಕಾರ್ಪಣೆಗೋಳಿಸಿ ಮಾತನಾಡಿದರು. ಶ್ರೀ ನಿತ್ಯಾನಂದ ಗುರುದೇವರ ನೇರ ಶಿಷ್ಯರಾದ ಶ್ರೀ ವಿಮಲಾನಂದ ಸ್ವಾಮೀಜಿಯವರು ನಿತ್ಯಾನಂದರ ಅಣತಿಯಂತೆ ಕೊಲ್ಲೂರಿನಲ್ಲಿ ನೆಲೆಸಿ ತಮ್ಮಸೇವಾಕಾರ್ಯವನ್ನು ನಡೆಸುತ್ತಾ ಬಂದಿದ್ದರು. ಅವರ ಸಮಾಧಿಯ ಬಳಿಕವೂ ಸೇವಾ ಕಾರ್ಯಗಳು ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿದ್ದು ಶ್ರೀ ನಿತ್ಯಾನಂದರ ಭಕ್ತರಿಗೂ ಸಂತೃಪ್ತಿ ತಂದಿದೆ ಎಂದರು. ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದ ಮುಖ್ಯಸ್ಥ ಜಯಾನಂದ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶ್ರಮದ ವೆಬ್ಸೈಟನ್ನು ಸಮಷ್ಠಿ ಮೀಡಿಯಾ ವೆಂಚರ್ಸ್ ಸಂಸ್ಥೆ ರೂಪಿಸಿತ್ತು. ಶಿರೂರು ಶ್ರೀ ನಿತ್ಯಾನಂದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಆಶ್ರಮದ…
