ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಮೇ.20: ತಾಲೂಕಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಜಗೋಪುರ ಸಮರ್ಪಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಶತಚಂಡಿಕಾ ಯಾಗದ ಪೂರ್ಣಾಹುತಿ ಶುಕ್ರವಾರ ದೇವಳದ ಆವರಣದಲ್ಲಿ ಜರುಗಿತು. ಪೂರ್ಣಾಹುತಿಯ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಿ ಎಲ್ಲರ ಕಷ್ಟಗಳನ್ನು ದೂರಮಾಡಿ ಸು:ಖ ಶಾಂತಿಯನ್ನು ನೀಡಲಿ. ಯು.ಬಿ. ಶೆಟ್ಟಿ ಅವರು ಯಾವುದೇ ಅಪೇಕ್ಷೆ ಇಲ್ಲದೇ ದೇವಿಯ ಸೇವೆಯನ್ನು ಮಾಡುತ್ತಿದ್ದಾರೆ. ಈ ಪವಿತ್ರ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ದೇವಿ ಒಳ್ಳೆಯದನ್ನು ಮಾಡಲಿ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್ ಅವರನ್ನು ಯು.ಬಿ. ಶೆಟ್ಟಿ ದಂಪತಿಗಳು ಹಾಗೂ ದೇವಳದ ಅರ್ಚಕರು ಸನ್ಮಾನಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್. ಸಭಾಪತಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್ ಉಪ್ಪುಂದ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಶಾಲೆಯ ವಿದ್ಯಾರ್ಥಿ ಧವನ್ ಟಿ. ಪೂಜಾರಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 580 (92.8%) ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಸಂಸ್ಕತದಲ್ಲಿ 125, ಇಂಗ್ಲಿಷ್ 98, ಕನ್ನಡ 100, ಗಣಿತ 86, ವಿಜ್ಞಾನ 75, ಸಮಾಜ ವಿಜ್ಞಾನದಲ್ಲಿ 76 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಈತ ಯಡ್ತರೆಯ ದುರ್ಗಾಂಬಾ ಪ್ರಿಂಟರ್ಸ್ ಮಾಲಿಕ ತಿಮ್ಮಪ್ಪ ಪೂಜಾರಿ ಹಾಗೂ ಅಂಬಿಕಾ ದಂಪತಿಗಳ ಪುತ್ರನಾಗಿದ್ದಾನೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.19: ತಾಲೂಕಿನ ಬೀಜಾಡಿ ರಾಷ್ಟ್ರೀಯ ಹೆದ್ದಾರಿ ಬಸ್ಸು ತಂಗುದಾಣದ ಸಮೀಪದಲ್ಲಿರುವ ಉಪಾಧ್ಯಾಯ ಕಾಂಪ್ಲೆಕ್ಸ್ನಲ್ಲಿನ ಶ್ರೀ ದುರ್ಗಾ ಜ್ಯುವೆಲ್ಲರ್ಸ್ನ ಶೆಟರ್ ಮುರಿದು ಚಿನ್ನ-ಬೆಳ್ಳಿ ದೋಚಲು ಯತ್ನಿಸಿದ ಕಳ್ಳರ ಕೃತ್ಯ ಹಾಗೂ ಮನೆ ಮನೆಗೆ ಪತ್ರಿಕೆ ಹಾಕುವ ಹುಡುಗನ ಸಮಯ ಪ್ರಜ್ಞೆಯಿಂದ ಲಕ್ಷಾಂತರ ಮೌಲ್ಯದ ಭಾರೀ ಕಳ್ಳತನ ತಪ್ಪಿದಂತಾಗಿದೆ. ಬುಧವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕುಂಭಾಸಿ ಕಡೆಯಿಂದ ಶೀಪ್ಟ್ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಬೀಜಾಡಿ ಐಸಿರಿ ಮೊಬೈಲ್ ಶಾಪ್ನ ಶೆಟರ್ ಮುರಿದು 15 ಸಾವಿರ ನಗದು, ಸುಮಾರು 25 ಸಾವಿರ ಬೆಲೆ ಬಾಳುವ ಮೊಬೈಲ್, 30 ಸಾವಿರ ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಕಳವು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಬೀಜಾಡಿ ಅಜಯ ದಿನ ನಿತ್ಯ ತನ್ನ ಕಾಯಕದಂತೆ ಮನೆ ಮನೆಗೆ ಪೇಪರ್ ಹಾಕಲು ಬೈಸಿಕಲ್ನಲ್ಲಿ ಹೋಗುವಾಗ ಮನೆಯಿಂದ ಕೆಲವೇ ದೂರದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಮಾರಕಾಯುಧಗಳನ್ನು ಹಿಡಿದು ನಿಂತ ವ್ಯಕ್ತಿ ಹಾಗೂ ಮೊಬೈಲ್ ಶಾಪ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಮೂವರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಸಾಧನೆಗೈದಿದ್ದಾರೆ. ಕುಂದಾಪುರ ತಾಲೂಕಿನ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಶಾ 625ರಲ್ಲಿ 625 ಪಡೆದಿದ್ದಾಳೆ. ಈಕೆ ಸಳ್ವಾಡಿ ಶ್ರೀನಿವಾಸ ಜೋಗಿ ಆಶಾ ದಂಪತಿಗಳ ಪುತ್ರಿ. ಬೈಂದೂರು ತಾಲೂಕಿನ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಕ್ಷತಾ ನಾಯ್ಕ್ 625ರಲ್ಲಿ 625 ಪಡೆದಿದ್ದಾಳೆ. ಈಕೆ ಶಿಕ್ಷಕ ದಂಪತಿ ನಾಗೇಶ್ ನಾಯ್ಕ್ ಹಾಗೂ ಶಾಲಿನಿ ಇವರ ಪುತ್ರಿ ಕುಂದಾಪುರ ತಾಲೂಕಿನ ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ವಿ. ಶೆಟ್ಟಿ 625ರಲ್ಲಿ 625 ರಾಜ್ಯದಲ್ಲಿ ಪಡೆದಿದ್ದಾಳೆ. ಈಕೆ ಅಲ್ಬಾಡಿ ವಸಂತ ಕುಮಾರ್ ಶೆಟ್ಟಿ ಹಾಗೂ ಸುಷ್ಮಾ ವಿ. ಶೆಟ್ಟಿ ಅವರ ಪುತ್ರಿ. ರಾಜ್ಯದಲ್ಲಿ ಟಾಪರ್ ಆಗಿರುವ 145 ವಿದ್ಯಾರ್ಥಿಗಳ ಪೈಕಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಮೂವರು ವಿದ್ಯಾರ್ಥಿನಿಯರು ಇರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ತಾಲೂಕಿನ ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ವಿ. ಶೆಟ್ಟಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ 625ರಲ್ಲಿ 625 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈಕೆ ಅಲ್ಬಾಡಿ ವಸಂತ ಕುಮಾರ್ ಶೆಟ್ಟಿ ಹಾಗೂ ಸುಷ್ಮಾ ವಿ. ಶೆಟ್ಟಿ ಅವರ ಪುತ್ರಿ. ಇದನ್ನೂ ಓದಿ:► ಎಸ್ಎಸ್ಎಲ್ಸಿ ಪರೀಕ್ಷೆ: ನಾಗೂರು ಸಂದೀಪನ್ ಶಾಲೆಯ ಅಕ್ಷತಾ ನಾಯ್ಕ್ ರಾಜ್ಯಕ್ಕೆ ಟಾಪರ್ – https://kundapraa.com/?p=59339 .► ಎಸ್ಎಸ್ಎಲ್ಸಿ ಪರೀಕ್ಷೆ: ಕಾಳವಾರ ಪ್ರೌಢಶಾಲೆಯ ನಿಶಾ ರಾಜ್ಯಕ್ಕೆ ಟಾಪರ್ – https://kundapraa.com/?p=59335 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ತಾಲೂಕಿನ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಕ್ಷತಾ ನಾಯ್ಕ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ 625ರಲ್ಲಿ 625 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈಕೆ ಶಿಕ್ಷಕ ದಂಪತಿ ನಾಗೇಶ್ ನಾಯ್ಕ್ ಹಾಗೂ ಶಾಲಿನಿ ಇವರ ಪುತ್ರಿ ಪರೀಕ್ಷೆಯ ಮೊದಲ ಎರಡು ತಿಂಗಳಿಂದ ತಯಾರಿ ನಡೆಸಿ ಅಭ್ಯಾಸ ಆರಂಭಿಸಿದ್ದರಿಂದ ಉತ್ತರ ಪತ್ರಿಕೆ ಬರೆಯುವಾಗ ಯಾವುದೇ ರೀತಿಯ ಮಾನಸಿಕ ಒತ್ತಡವಾಗಲೀ, ಭಯವಾಗಲೀ ಆಗಲಿಲ್ಲಾ. ಎಲ್ಲಾ ಪಠ್ಯಗಳನ್ನು ಸರಿಯಾದ ಕ್ರಮದಲ್ಲಿ ಓದಿ ಅರ್ಥಮಾಡಿಕೊಳ್ಳುತ್ತಿದ್ದೆ,ಮುಂದೆ ವಿಜ್ಞಾನ ವಿಷಯ ಆಯ್ದುಕೊಂಡು, ಎಂ.ಬಿ.ಬಿ.ಎಸ್ ಮಾಡುವ ಆಸೆ ಇದೆ ಎಂದಿದ್ದಾಳೆ. ಇದನ್ನೂ ಓದಿ:► ಎಸ್ಎಸ್ಎಲ್ಸಿ ಪರೀಕ್ಷೆ: ಕಾಳವಾರ ಪ್ರೌಢಶಾಲೆಯ ನಿಶಾ ರಾಜ್ಯಕ್ಕೆ ಟಾಪರ್ – https://kundapraa.com/?p=59335 .► ಎಸ್ಎಸ್ಎಲ್ಸಿ ಪರೀಕ್ಷೆ: ಸಿದ್ಧಾಪುರ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ರಾಜ್ಯಕ್ಕೆ ಟಾಪರ್ – https://kundapraa.com/?p=59343 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ರಾಜ್ಯದಲ್ಲಿ ಟಾಪರ್ ಆಗಿರುವ 145 ವಿದ್ಯಾರ್ಥಿಗಳ ಪೈಕಿ ನಿಶಾ ಕೂಡ ಓರ್ವಳಾಗಿದ್ದಾಳೆ. ಈಕೆ ಕಾಳಾವರ-ಸಳ್ವಾಡಿ ನಿವಾಸಿ ಶ್ರೀನಿವಾಸ ಜೋಗಿ, ಆಶಾ ದಂಪತಿಗಳ ಪುತ್ರಿ. ಇದನ್ನೂ ಓದಿ:► ಎಸ್ಎಸ್ಎಲ್ಸಿ ಪರೀಕ್ಷೆ: ನಾಗೂರು ಸಂದೀಪನ್ ಶಾಲೆಯ ಅಕ್ಷತಾ ನಾಯ್ಕ್ ರಾಜ್ಯಕ್ಕೆ ಟಾಪರ್ – https://kundapraa.com/?p=59339 .► ಎಸ್ಎಸ್ಎಲ್ಸಿ ಪರೀಕ್ಷೆ: ಸಿದ್ಧಾಪುರ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ರಾಜ್ಯಕ್ಕೆ ಟಾಪರ್ – https://kundapraa.com/?p=59343 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು,ಮೇ.19: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 85.63% ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ. ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579 ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 85.63% ಫಲಿತಾಂಶ ಬಂದಿರುವುದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 309 ವಿದ್ಯಾರ್ಥಿಗಳು 624 ಅಂಕ ಪಡೆಯುವ ಮೂಲಕ ಎರಡನೇ…
ನಮ್ಮ ಭಾರತೀಯ ಆಹಾರ ಪದ್ದತಿಯಲ್ಲಿ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಇವುಗಳು ಔಷಧಿಯ ಗುಣಗಳನ್ನು ಹೊಂದಿದೆ. ಈಗಿನ ವರ್ತಮಾನದ ಕಾಲದಲ್ಲಿ ಅಡುಗೆಯಲ್ಲಿ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಇರಲೇಬೇಕು. ಸಾರು, ಪಲ್ಯ ಇವುಗಳಿಗೆ ಕೊತ್ತಂಬರಿ ಸೊಪ್ಪು, ಕರಿ ಬೇವಿನ ಎಲೆ ಇಲ್ಲ ಅಂದರೆ ಅಡುಗೆ ಸಂಪೂರ್ಣವಾದಂತೆ ಅನಿಸುವುದಿಲ್ಲ. ಮನೆಯಲ್ಲಿಯೇ ಕರಿಬೇವು, ಕೊತ್ತಂಬರಿ ಗಿಡ ಇದ್ದರೆ ಅಡುಗೆಗೆ ಬೇಕಾಗಿರುವುದನ್ನು ಕಿತ್ತು ತಾಜಾ ಬಳಸಬಹುದು. ಇಲ್ಲಾ ಅಂದರೆ ಅಂಗಡಿಯಿಂದ ತಂದು ಫ್ರಿಡ್ಜ್ನಲ್ಲಿಟ್ಟು ಬಳಸುತ್ತೇವೆ. ಆದರೆ ಫ್ರಿಡ್ಜ್ನಲ್ಲಿಟ್ಟರೂ ಅದನ್ನು ಸರಿಯಾದ ರೀತಿಯಲ್ಲಿ ಇಡದಿದ್ದರೆ ಅದರ ತಾಜಾತನ ಹೋಗುತ್ತದೆ. ಕೊತ್ತಂಬರಿ ಹಾಗೂ ಕರಿಬೇವು ಒಂದೆರಡು ತಿಂಗಳವರೆಗೆ ಒಣಗದಂತೆ ಇರಿಸಲು ಕೆಲವೊಂದು ಸಲಹೆ ನೀಡಲಾಗಿದೆ. ಕರಿಬೇವು ಸಂಗ್ರಹಿಸಿಡುವ ವಿಧಾನ: ಎಲೆಯನ್ನು ಅದರ ದಂಟಿನಿಂದ ತೆಗೆದು ಸ್ವಚ್ಛಗೊಳಿಸಿ ಸ್ವಚ್ಛ ಬಟ್ಟೆಯಲ್ಲಿ ಹಾಕಿ ಒತ್ತಿ, ಆಗ ನೀರು ಹೀರಿಕೊಳ್ಳುವುದು. ನಂತರ ಎಲೆಯನ್ನು ಅಗಲವಾದ ಪ್ಲೇಟ್ನಲ್ಲಿ ಹಾಕಿ ಎರಡರಿಂದ-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಅದು ಒಣಗಿದ ಮೇಲೆ ಗಾಳಿಯಾಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಡಿದು ಬಂದು ಗಲಾಟೆ ಮಾಡಿದ ಪತಿ, ತನ್ನ ಪತ್ನಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ವಂಡಾರು ಗ್ರಾಮದ ಕಟ್ಟೆಕೊಡ್ಲು ಎಂಬಲ್ಲಿ ನಡೆದಿದೆ. ಕಟ್ಟೆಕೊಡ್ಲು ನಿವಾಸಿ ಅನಿತಾ (35) ಕೊಲೆಗೀಡಾಗಿದ್ದು, ತಲೆಮರೆಸಿಕೊಂಡಿರುವ ಅವರ ಪತಿ, ಕೊಲೆ ಆರೋಪಿ ಸುರೇಂದ್ರ ನಾಯ್ಕ(42) ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರೇಂದ್ರ ನಾಯ್ಕ ಸುಮಾರು 15 ವರ್ಷಗಳ ಹಿಂದೆ ಅನಿತಾ ಅವರನ್ನು ಮದುವೆ ಆಗಿದ್ದು, ಕಟ್ಟೆಕೊಡ್ಲುವಿನಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಕೊಂಡಿದ್ದ ಸುರೇಂದ್ರ ನಾಯ್ಕಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಪ್ರತಿದಿನ ಕುಡಿದು ಬರುತ್ತಿದ್ದ ಸುರೇಂದ್ರ ನಾಯ್ಕ, ಪತ್ನಿ ಮತ್ತು ಮಕ್ಕಳಿಗೆ ವಿಪರೀತವಾಗಿ ಹೊಡೆಯುತ್ತಿದ್ದನು ಎಂದು ದೂರಲಾಗಿದೆ. ಈತ ಮೇ.17ರ ರಾತ್ರಿ ಮನೆಯಲ್ಲಿ ಅನಿತಾಗೆ ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅನಿತಾ, ಸ್ಥಳದಲ್ಲಿಯೇ ಮೃತಪಟ್ಟರು. ಪತ್ನಿಯ ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…
