Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಸಭ್ಯ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ದ ಕುಂದಾಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ಕುಂಭಾಶಿ ಎನ್ನುವವರು ತಮ್ಮ ಫೇಸ್‌ಬುಕ್‌ನಲ್ಲಿ ನಾರಾಯಣ ಗುರುಗಳ ಫೋಟೋ ಹಾಕಿ, ಅವಾಚ್ಯ ಶಬ್ದದಿಂದ ಬರೆದುಕೊಂಡು ನಾರಾಯಣ ಗುರು ಜಯಂತಿಯ ಶುಭಾಶಯ ಕೋರಿದ್ದರು. ಈ ಬಗ್ಗೆ ದೂರು ದಾಖಲಿಸಿರುವ ಕಿರಣ್ ಪೂಜಾರಿ ಎನ್ನುವವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಿದ್ದಾಂತವನ್ನು ಜಗತ್ತಿಗೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗೆಗೆ ಇತ್ತೀಚೆಗೆ ಹರೀಶ್ ಕುಂಭಾಶಿ ಎನ್ನುವ ವ್ಯಕ್ತಿಫೇಸ್ ಬುಕ್ನಲ್ಲಿ ಅಸಭ್ಯ ಪೋಸ್ಟ್ ಮಾಡುವ ಮೂಲಕ ನಾರಾಯಣ ಗುರುಗಳ ಅನುಯಾಯಿಗಳಿಗೆ ನೋವನ್ನುಂಟು ಮಾಡಿದೆ. ಇಂತಹ ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಆ ವ್ಯಕ್ತಿ ನಾರಾಯಣ ಗುರುಗಳ ಪ್ರತಿಮೆಯ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಈ ಬಾರಿಯ ಕೋವಿಡ್ ಹಿನ್ನಲೆಯಲ್ಲಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ, ಜಿಲ್ಲೆಯಲ್ಲಿ ಸರಳವಾಗಿ, ಸಾರ್ವಜನಿಕರು ಕನಿಷ್ಠ ಸಂಖ್ಯೆಯೊಂದಿಗೆ ಭಕ್ತಿ ಪೂರ್ವಕವಾಗಿ ಗಣೇಶೋತ್ಸವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ವರ್ಚುವಲ್ ಸಭೆಯ ಮೂಲಕ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ಮಾರ್ಗಸೂಚಿ ಅನುಷ್ಠಾನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ 3ನೇ ಅಲೆಯ ನಿಯಂತ್ರಣ ಉದ್ದೇಶದಿಂದ ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಗಣೇಶ ಚತುರ್ಥಿ ಆಚರಣೆ ನಡೆಸಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಗೊಂದಲ ಇರಬಾರದು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸ್ಥಳೀಯಾಡಳಿಗಳು ಎಲ್ಲಾ ನಿಬಂದನೆಗಳ ಕುರಿತು ಆಯೋಜಕರಿಗೆ ಮನವರಿಕೆ ಮಾಡಬೇಕು ಎಂದರು. ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಅಥವಾ ಸರ್ಕಾರಿ /ಖಾಸಗಿ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊAದಿಗೆ ಗಣೇಶೋತ್ಸವ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮತ್ತು ಮನೆಯೊಳಗೆ 2 ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.07: ಬೈಂದೂರಿನ ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ (೬೫) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂಲತಃ ಉಡುಪಿಯವರಾದ ಡಾ. ರವಿರಾಜ್ ಅವರು, ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ವೈದ್ಯಕೀಯ ಸೇವೆ ಆರಂಭಿಸಿದ್ದರು. ಸ್ವಯಂ ನಿವೃತ್ತಿ ಹೊಂದಿ ಬೈಂದೂರು ಹೊಸ ಬಸ್ ನಿಲ್ದಾಣದ ಸಮೀಪದ ಬಾಲಕ್ಷೇಮ ಕ್ಲಿನಿಕ್ ನಡೆಸುತ್ತಿದ್ದರು. ಸುಧೀರ್ಘ ಅವಧಿಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿದ್ದ ಅವರು ಬೈಂದೂರು ಹಾಗೂ ಭಟ್ಕಳದಲ್ಲಿ ಪ್ರಸಿದ್ಧಿ ಪಡೆದಿದ್ದರು. ಎಲ್‌ಐಸಿಯ ಮೆಡಿಕಲ್ ಎಕ್ಸಾಮಿನರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರಿನಿಂದ ಪತ್ನಿಯೊಂದಿಗೆ ಚೆನ್ನೈಗೆ ತೆರಳಿದ್ದ ಅವರಿಗೆ ಚೆನ್ನೈ ಎರ್‌ಪೋರ್ಟ್‌ನಲ್ಲಿ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ► ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಲ್. ಜೋಸ್ ನಿಧನ – https://kundapraa.com/?p=52147 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂರು ವರ್ಷದ ಪೋರ ಆರ್ಯನ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ದೇಶಗಳು, ರಾಜ್ಯಗಳು, ರಾಜಧಾನಿ, ಜಿಲ್ಲೆ, ಬಣ್ಣ, ವರ್ಣಮಾಲೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟಪಟನೆ ಉತ್ತರಿಸುವ ಹಾಗೂ ಗುರುತಿಸುವ ಆರ್ಯನ್, ಅಧಿಕ ಜ್ಞಾಪನಾ ಶಕ್ತಿಯ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಈ ದಾಖಲೆ ಮಾಡಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕು ಕೋಡಿಯ ಕೋಟೆಮನೆ ನಾಗೆಂದ್ರ ಹಾಗೂ ಅಂಜಲಿ ದಂಪತಿಗಳ ಏಕೈಕ ಪುತ್ರ ಆರ್ಯನ್. ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಆರ್ಯನ್ ಬಹಳ ಚುರುಕಾಗಿರುವುದನ್ನು ಗಮನಿಸಿ ಆತನ ತಾಯಿ ಅಂಜಲಿ ಒಂದೊಂದೇ ವಿಷಯವನ್ನು ಕಲಿಸುತ್ತಾ ಬಂದಿದ್ದಾರೆ. ಸ್ನೇಹಿತರ ಸಲಹೆಯಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2 ವರ್ಷ 11 ತಿಂಗಳು ಇರುವಾಗಲೇ ಆರ್ಯನ್‌ನ ಜ್ಞಾಪಕಶಕ್ತಿಯ ಪರೀಕ್ಷೆ ನಡೆದಿದ್ದು, ಅಂತಿಮವಾಗಿ ಆತನ ಹೆಸರಿನಲ್ಲಿ ದಾಖಲೆಯೊಂದು ದಾಖಲಾಗಿದೆ. ಆರ್ಯನ್ 2 ವರ್ಷ 11 ತಿಂಗಳ ಮಗುವಾಗಿದ್ದಾಗಲೇ ಸಾಮಾನ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮುದೂರಿನ ಪಿ. ಎಲ್ ಜೋಶ್ ಅವರು ಅಲ್ಪಕಾಲದ ಅನಾರೋಗ್ಯ ಕಾರಣದಿಂದ ನಿಧನರಾದರು. ಅವರು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ , ಜಡ್ಕಲ್ ಗ್ರಾಹಕರ ಸೊಸೈಟಿಯ ಅಧ್ಯಕ್ಷರಾಗಿ ಹಾಗೂ ಎರಡು ಬಾರಿ ಜಡ್ಕಲ್ ಗ್ರಾಮ ಪಂಚಾಯತ್ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು, ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಂತಾಪ ಸೂಚಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಆಳ್ವಾಸ್ ಸ್ನಾತಕೋತ್ತರ ಫುಡ್ ಸಯನ್ಸ್ ವಿಭಾಗದ ವತಿಯಿಂದ ಎರಡು ದಿನದ ವೆಬಿನಾರ್ ಅಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಾಗಲಕೋಟೆಯ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರಲ್ ಸಯನ್ಸ್ ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿಯ ಮುಖ್ಯಸ್ಥೆ ಡಾ. ಭುವನೇಶ್ವರಿ ಜಿ ಹಾಗೂ ಕೊಯಂಬುತ್ತೂರ್‌ನ ಅರ್‌ವಿಎಸ್ ಕಾಲೇಜಿನ ರಿಸರ್ಚ್ ಹೆಡ್ ಆಗಿರುವ ಡಾ. ಮೀರಾ ರಮಣ್ ಭಾಗವಹಿಸಿದ್ದರು. ವೆಬಿನಾರ್‌ನಲ್ಲಿ ಪೌಷ್ಟಿಕ ಆಹಾರದ ಮಹತ್ವ, ಶಿಶು ಮತ್ತು ಮಕ್ಕಳ ಆರೈಕೆಯಲ್ಲಿ ಪೌಷ್ಟಿಕಾಂಶಗಳ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಪ್ರಾಂಶುಪಾಲ ಡಾ. ಕುರಿಯನ್, ವಿಭಾಗ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವಾತಿ ಹಾಗೂ ದಿವ್ಯ ವಂದಿಸಿದರು, ಶಿವಾನಿ ಶೆಟ್ಟಿ ಹಾಗೂ ನವ್ಯ ಕಾರ್ಯಕ್ರಮ ನಿರೂಪಿಸಿದರು. ಫುಡ್ ಸಯನ್ಸ್ ವಿಭಾಗದ ವಿದ್ಯಾರ್ಥಿಗಳು ವೆಬಿನಾರ್‌ನ ಪ್ರಯೋಜನ ಪಡೆದುಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಸರ್ವೆಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್‌ನ ಖಜಾಂಚಿ ಜಿ. ಶ್ರೀಧರ್ ಶೆಟ್ಟಿ ಶಾಲೆಯ ಎಲ್ಲಾ ಶಿಕ್ಷಕರನ್ನು ಗೌರವಿಸಿ, ಉತ್ತಮ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅಭಿವೃದ್ದಿ ಶಾಖೆ ಆರಂಭವಾಗಿದೆ. ಟ್ರಸ್ಟ್ ವತಿಯಿಂದ ಸಾಧ್ಯವಾದಷ್ಟು ಸೌಲಭ್ಯ ನೀಡುವಲ್ಲಿ ಪ್ರಯತ್ನಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ವಹಿಸಿದ್ದರು. ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀನಿವಾಸ ಪೂಜಾರಿ ಕಲ್ಮಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಪೂಜಾರಿ, ಶಶಿಕಲಾ, ಗೋವರ್ಧನ್ ಜೋಗಿ, ಸುಬ್ಬು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ನಾಗವೇಣಿ ಸ್ವಾಗತಿಸಿ, ಮುಖ್ಯಶಿಕ್ಷಕ ಚಂದ್ರ ನಾಯ್ಕ್ ಎಸ್., ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ರವಿಚಂದ್ರ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೇ ಮೊದಲ ಭಾರಿಗೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಒಂದು ವಿಶಿಷ್ಟ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಸಂಘದ ಮಾಲಿಕತ್ವದಲ್ಲಿ ವಿಶಿಷ್ಟ ವಿನ್ಯಾಸದ ರೈತಸಿರಿ ಅಗ್ರಿ ಮಾಲ್ ಎಂ.ಎಸ್.ಸಿ ಯೋಜನೆಯು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಒಟ್ಟು ರೂ. 15 ಕೋಟಿ ವಿನಿಯೋಗದ ರೈತಸಿರಿ ಎಗ್ರಿ ಮಾಲ್ ಬೃಹತ್ ಪ್ರಮಾಣದ ಯೋಜನೆಯಾಗಿದ್ದು, ಬಹುಮಹಡಿ ಕಟ್ಟಡದಲ್ಲಿ ರೈತರಿಗಾಗಿ ಒಂದೇ ಸೂರಿನಡಿ ಹಲವು ಸೌಲಭ್ಯಗಳು ದೊರೆಯಲಿದೆ ಎಂದರು. ರೈತಸಿರಿ ಅಗ್ರಿ ಮಾಲ್ ಕೃಷಿ ಸರ್ವಿಸ್ ಸೆಂಟರ್ಗಳು, ಸೂಪರ್ ಮಾರ್ಕೆಟ್‌ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೇಕ್ಟ್ರೀಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ ಅಲ್ಲದೇ ಸಭಾಂಗಣ ಎಸ್ಕ್ಯುಲೇಟರ್, ಲಿಫ್ಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯ ಮಟ್ಟದ ಟ್ರೈಲ್ಸ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ತ್ರಾಸಿ ಅಂಚೆ ಕಛೇರಿಯ ಎಂ. ಗುರುದೀಪಕ ಕಾಮತ್ ರಾಷ್ಟ್ರ ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ. ಗುರುದೀಪಕ ಕಾಮತ್ ಅವರೊಂದಿಗೆ ಬಿ.ಜಿ.ಜಿಗಣಿ ಪೋಸ್ಟ್ ಆಫೀಸಿನ ಶಿವಕುಮಾರ್, ಚಿಕ್ಕಮಗಳೂರಿನ ಜಯಂತ ನಟರಾಜ್, ಬೆಂಗಳೂರಿನ ಭರತ್ ಕೆ.ಎಸ್. ಮತ್ತು ಕೆ.ಗಣೇಶ ಕಿಣಿ ಹಾಗೂ ಶಿವಮೊಗ್ಗದ ಎಂ.ನಾಗರಾಜ್ ಮತ್ತು ಸಂದೀಪ ಮಲ್ಲಿಕ್ ಅವರು ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ 36ನೇ ಅಂಚೆ ಇಲಾಖೆಯ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಮತ್ತು ಬೆಸ್ಟ್ ಫಿಸಿಕ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಬ್ರದರ‍್ಸ್ ಸ್ಪೋರ್ಟ್ಸ್ ಆಂಡ್ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ಮತ್ತು ಅಡುಗೆಯವರ ಹೆಸರಲ್ಲಿ ನೆರಳು ನೀಡುವ, ಫಲ ನೀಡುವ ಗಿಡಗಳನ್ನು ನೆಡುವ ವಿನೂತನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಗುರುವೃಂದ ವೃಕ್ಷ ಗೌರವ ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ವಿಶ್ರಾಂತ ವಿದ್ಯಾಂಗ ಪರಿವೀಕ್ಷಕ ಅಡಂದಾಲು ಕರುಣಾಕರ ಹೆಗ್ಡೆ ಅವರು ಗಿಡಗಳನ್ನು ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹಾಗಾಗಿ ಅವರ ಜವಾಬ್ದಾರಿ ಹೆಚ್ಚು ಇದೆ. ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಕಲ್ಪನೆಗಳನ್ನು ಬಿತ್ತ ಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಮಾತನಾಡಿ, ಕನ್ನಡ ನಾಡು- ನುಡಿಯ ಸೇವೆ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯಾರೇ ಕೆಲಸ ಮಾಡಿದರೂ ಅದಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು, ಅನಾವಶ್ಯಕ ಟೀಕೆಗೆ ಸಮಯ ವ್ಯರ್ಥ ಮಾಡಬಾರದು ಎಂದು…

Read More