ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಂಗಳೂರಿನ ಜಾನ್ಸನ್ ಕ್ರಿಕೆಟ್ ಕ್ಲಬ್‌ನ ೧೫ ನೇ ವರ್ಷಾಚರಣೆ ಪ್ರಯುಕ್ತ ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ‘ಜಾನ್ಸನ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟವನ್ನು ರಾತ್ರಿ ದಾಂಡೇಲಿಯ ಉದ್ಯಮಿ ಪ್ರಕಾಶ್ ಶೆಟ್ಟಿ ಗೈನಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೈನಂದಿನ ಬದುಕಿನಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸಿದ್ದು, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದವರು ಹೇಳಿದರು. ಕ್ರೀಡಾ ಅಕಾಡೆಮಿ ಸ್ಥಾಪನೆ ಇಲ್ಲಿಯೂ ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವಂತಹ ಉತ್ತಮ ಕ್ರೀಡಾ ಪಟುಗಳಿದ್ದು, ಆದರೆ ಅವರಿಗೆ ಪ್ರೋತ್ಸಾಹದ ಕೊರತೆಯಿದೆ. ಅದಕ್ಕಾಗಿ ಕುಂದಾಪುರದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿದರೆ ಪ್ರಯೋಜನವಾಗಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಬಿಜೆಪಿ ರಾಜ್ಯ ಕಾರ‍್ಯಕಾರಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಣದ ಜತೆಗೆ ಕಲೆ, ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಬೆಳವಣಿಗೆಗೆ ಇನ್ನಷ್ಟು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ವಿನಯ್ ಕುಮಾರ್ ಸೊರಕೆಯವರು ತಮ್ಮ ಕ್ಷೇತ್ರಕ್ಕೆ ಸರಕಾರದಿಂದ ೧೮೦೦ ಕೋಟಿ ರೂ.ಗೂ ಮೀರಿ ಅನುದಾನವನ್ನು ತಂದರೆ, ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಅವರು 1900 ಕೋಟಿ ಗೂ ಮೀರಿ ಅನುದಾನ ತಂದಿದ್ದಾರೆ. ಹಾಗೆಯೇ ಬೈಂದೂರಿನ ಶಾಸಕ ಗೋಪಾಲ ಪೂಜಾರಿಯವರು ೧೮೦೦ ಕೋಟಿಗೂ ಹೆಚ್ಚು ಅನುದಾನವನ್ನು ಕ್ಷೆತ್ರದ ಅಭಿವೃದ್ಧಿಗೆ ವ್ಯಯಿಸಿದ್ದಾರೆ. ಆದರೆ ಕುಂದಾಪುರ ಕ್ಷೇತ್ರದ ಶಾಸಕರು ಹೆಚ್ಚುವರಿ ಅನುದಾನ ತರಲು ಯಾವುದೇ ಪ್ರಯತ್ನ ಪಡದ ಕಾರಣಕ್ಕೆ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇಲ್ಲಿಗೆ ಬಂದ ಅನುದಾನ ೨೦೦ ಕೋಟಿಗೂ ಮೀರಿಲ್ಲದಿರುವುದು ನಮ್ಮ ಮಾಜಿ ಶಾಸಕ ಹಾಲಾಡಿಯವರು ಅದೆಷ್ಟು ನಿಷ್ಕ್ರೀಯರು ಎನ್ನುವುದನ್ನು ಪ್ರತಿಭಿಂಬಿಸುತ್ತದೆ ಎಂದು ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದ್ದಾರೆ. ಅವರುಆನಗಳ್ಳಿಯಲ್ಲಿ ನಡೆದ ಹಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯುವ ಮುಖಂಡ ಕೋಡಿ ಸುನಿಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇದುವರೆಗೂ ಯಾವ ಮುಖ್ಯ ಮಂತ್ರಿಗಳಿಗೂ ಟಿಪ್ಪು ನೆನಪಾಗಲಿಲ್ಲ. ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎನ್ನುವ ಹಾಗೆ ಕ್ರೂರಿ, ಮತಾಂಧರಿ, ಹಿಂದೂ ವಿರೋಧಿ, ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮುಸ್ಲಿಂರ ಓಟಿಗಾಗಿ, ಅವರನ್ನು ಸಂತೃಪ್ತಿಪಡಿಸುವುದಕ್ಕಾಗಿ ಮುಗ್ಧ ಮುಸ್ಲಿಂರ ಮೇಲಿನ ಕೇಸುಗಳನ್ನು ವಾಪಾಸು ತೆಗೆದುಕ್ಕೊಳ್ಳುತ್ತವೆ ಎನ್ನುತ್ತಾರೆ ಹಾಗಾದರೆ ನೀವು ಅಮಾಯಕರ ಮೇಲು ಕೇಸು ದಾಖಲಿಸುತ್ತಿದ್ದಿರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ರಾಜ್ಯ ಸರಕಾರವನ್ನು ಪ್ರಶ್ನಿಸಿದರು. ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆಯ ಅಂಗವಾಗಿ ಉಪ್ಪುಂದದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋಮುವಾದ ಸಹಿಸಲ್ಲ, ಅಗತ್ಯಬಿದ್ದರೆ ಆರ್‌ಎಸ್‌ಎಸ್‌ನ್ನು ಮಟ್ಟ ಹಾಕುತ್ತೇನೆ ಎಂದು ಸಿಎಂ ಬೊಬ್ಬಿಡತ್ತಿದ್ದಾರೆ, ಆದರೆ ಇಂದಿರಾ ಗಾಂಧಿಗೆ ಆರ್‌ಎಸ್‌ಎಸ್‌ನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ, ಈಗ ನಿಮ್ಮಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಸಿದ್ಧರಾಮಯ್ಯಗೆ ಬೇಕಾಗಿರುವುದು ಕುರ್ಚಿ, ಯಾವುದೇ ರಾಷ್ಟ್ರ ಭಕ್ತರು ಕೊಲೆಯಾದರು ಬೇಸರವಿಲ್ಲ, ಹಿಂದು-ಮುಸ್ಲಿಂ ಹೊಡೆದಾಡಿದರು ಚಿಂತೆ ಇಲ್ಲ, ಕರ್ನಾಟಕದ ಆರೂವರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು, ಮಕ್ಕಳು ಭಯದಿಂದ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದಲ್ಲಿ ಇವತ್ತಿನವರೆಗೆ ಕಂಡು ಕೇಳರಿಯದಂತಹ ಹಿಂದು ಕಾರ್ಯಕರ್ತರ ಕೊಲೆಗಳಾಗಿದೆ. ಕೇರಳ ಮಾದರಿಯಂತೆ ಇಲ್ಲಿಯೂ ಕೂಡಾ ರಾಜಕೀಯ ಉದ್ದೇಶಕ್ಕಾಗಿ ಸಂಘ ಪರಿವಾರದ ಅಮಾಯಕ ಕಾರ್ಯಕರ್ತರ ಕೊಲೆಗಳಾಗಿತ್ತಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದರು. ಅವರು ರಾಜ್ಯದಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ಹಾಗೂ ಸಮಾಜಘಾತುಕ ಸಂಘಟನೆಗಳ ನಿಷೇಧ ಆಗ್ರಹಿಸಿ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳು ನಡೆಸುತ್ತಿರುವ ಮಂಗಳೂರು ಚಲೋ ಜನಸುರಕ್ಷಾ ಪಾದಯಾತ್ರೆಗೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು. ಗೋವಾ, ಮಹಾರಾಷ್ಟ್ರಗಳಿಂದ ಕದ್ದುತಂದಿರುವ ಜಾನುವಾರುಗಳನ್ನು ಇಲ್ಲಿನ ಅಕ್ರಮ ಕಸಾಯಿಖಾನೆ ಕಾರ್ಖಾನೆಯಿಂದ ವಿವಿಧೆಡೆ ರವಾನಿಸಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ರಾಜ್ಯ ಸರ್ಕಾರ, ಪೋಲಿಸ್ ಇಲಾಖೆಯೂ ಶಾಮೀಲಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸಿಗರು ಆತಂಕದ ವಾತಾವರಣ ಸೃಷ್ಠಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡಾ ಕ್ಷೇತ್ರದ ಸಾಧಕರಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಡಮಾಡುವ ಏಕಲವ್ಯ ಪ್ರಶಸ್ತಿಗೆ ಚಿತ್ತೂರಿನ ಯುವಕ, ಅಥ್ಲೆಟಿ ಗುರುರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ. ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಅವರು ತರಬೇತಿ ನೀಡಿದ್ದರು. ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು. ಈ ಅವಧಿಯಲ್ಲಿ ಎಂ. ರಾಜೇಂದ್ರ ಪ್ರಸಾದ್ ವೇಯ್ಡ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಗುರುರಾಜ್ ಎಸ್.ಡಿ.ಎಂ ಕ್ರೀಡಾ ತರಬೇತಿ ಸಂಸ್ಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊಸಾಡು ಗ್ರಾಮದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಶಾಸಕ ಕೆ, ಗೋಪಾಲ ಪೂಜಾರಿ ಬುಧವಾರ ಕುಂಜನಬೈಲು ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆಗೈದರು. ಆ ಬಳಿಕ ಮಾತನಾಡಿದ ಅವರು ಈ ಯೋಜನೆಯಡಿ ಗ್ರಾಮದ ೬ ರಸ್ತೆಗಳ ಕಾಂಕ್ರೀಟೀಕರಣ, ಗ್ರಾಮ ಪಂಚಾಯತ್ ಸಭಾ ಭವನ, ಹೊಸಾಡು ಗರಡಿಮನೆ, ನಾಲ್ಕು ಮಾರ್ಗಗಳಗೆ ಸೋಲಾರ್ ಬೀದಿದೀಪ ಅಳವಡಿಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ, ಗ್ರಾ.ಪಂ ನಡವಳಿ ಪ್ರಸಾರ, ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳು ನಡೆಯುವುವು. ಆ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಹೊಸದಾಗಿ ಆರಂಭವಾದ ಗ್ರಾಮ ಪಂಚಾಯತ್‌ಗೆ ಹಲವು ಅಗತ್ಯಗಳಿವೆ. ಅವುಗಳನ್ನು ಕ್ರಮಶ: ಈಡೇರಿಸಲಾಗುವುದು ಎಂದರು. ಗ್ರಾ,ಪಂ, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಸ್ವಾಗತಿಸಿದರು. ಶಾಸಕರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಊರಿನ ಪ್ರಮುಖರಾದ ಎಂ. ಎಂ. ಸುವರ್ಣ, ವಕೀಲ ಮಂಜುನಾಥ ಅರಾಟೆ, ವಿಜಯ ಪುತ್ರನ್, ಗ್ರಾ.ಪಂ. ಸದಸ್ಯರು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿ-ನಾಡ ಗ್ರಾಮಗಳನ್ನು ಸಂಪರ್ಕಿಸಲು ಸೌಪರ್ಣಿಕಾ ನದಿಗೆ ಅಡ್ಡವಾಗಿ ರೂ 7 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೇತುವೆ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಬುಧವಾರ ಮೊವಾಡಿ ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಸೇತುವೆ ಪೂರ್ಣಗೊಂಡಾಗ ನಾಡದ ನಿವಾಸಿಗಳಿಗೆ ಹೆದ್ದಾರಿ ಹತ್ತಿರವಾಗುತ್ತದೆ. ತ್ರಾಸಿಯ ನಿವಾಸಿಗಳಿಗೆ ನಾಡಕ್ಕೆ ನಿಕಟ ಸಂಪರ್ಕ ಏರ್ಪಡುತ್ತದೆ. ಈ ಎರಡೂ ಗ್ರಾಮಗಳ ಅಭಿವೃದ್ಧಿಗೆ ವೇಗ ದೊರೆಯುತ್ತದೆ ಎಂದರು. ಈ ಸೇತುವೆಯನ್ನು ಸಂಪರ್ಕಿಸುವ ರಸ್ತೆಗೆ ಭೂಮಿ ಬಿಟ್ಟುಕೊಟ್ಟಿರುವವರನ್ನು ಅಭಿನಂದಿಸಿದ ಅವರು ಸೇತುವೆ ಮುಗಿಯುವ ಹೊತ್ತಿಗೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಈ ಪರಿಸರದಲ್ಲಿ ಈಚೆಗೆ ಆಗಿರುವ ಅಭಿವೃದ್ಧಿ ಕೆಲಸಗಳ ವಿವರ ನೀಡಿದ ಅವರು ನಾಡದಲ್ಲಿ ’ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ನಡೆದಿದೆ. ತ್ರಾಸಿ ಭಾಗದ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ನಾಡ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಬಹು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿಶೋರ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಇವರ ಸ್ಮರಣಾರ್ಥ ಓಂ ಫ್ರೆಂಡ್ಸ್ ಕುಂದಾಪುರ ಇವರ ಆಶ್ರಯದಲ್ಲಿ ಮಾಚ್ 11 ಮತ್ತು 25ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಡಾ.ಶಿವರಾಮ ಕಾರಂತ ಥೀಂ ಪಾರ್ಕ್ ಕೋಟತಟ್ಟುವಿನಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವಾಗಿ ಪ್ರಥಮ ರೂ.20,000 ನಗದು, ದ್ವಿತೀಯ ರೂ.10,000 ನಗದು ಮತ್ತು ಶಾಶ್ವತ ಫಲಕವನ್ನು ನೀಡಲಿದ್ದಾರೆ. ಪ್ರವೇಶಾತಿಯು ಉಚಿತವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳಿಗೆ ಹಾಗೂ ವಿಧ್ಯಾರ್ಥಿಗಳಿಗರ ಸಹಾಯಕವಾಗಲಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಓಂ ಫ್ರೆಂಡ್ಸ್ ನ ಸದಸ್ಯರಾದ ಹರೀಶ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗವಹಿಸುವ ಆಕಾಂಕ್ಷಿಗಳು ತಮ್ಮ ಹೆಸರನ್ನು ವಾಟ್ಸಪ್ ಮೂಲಕ ಹೆಸರನ್ನು ನೊಂದಾಯಿಸಬಹುದು – 9980040551
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಕರ್ನಾಟಕ ಸಂಘ ಕತಾರ್‌ನ 2018-19ನೇ ಸಾಲಿಕ ಅಧ್ಯಕ್ಷ ಸ್ಥಾನದ ಹಾಗು ಹೊಸ ಸಮಿತಿಯ ಚುನಾವಣೆ ಐಸಿಸಿಯಲ್ಲಿ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟ ರಾವ್ ಅವರು, ನಾಗೇಶ್ ರಾವ್ ವಿರುದ್ಧ ಹೆಚ್ಚು ಮತ ಪಡೆದು ಮುಂದಿನ 2 ವರ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ಅಧ್ಯಕ್ಷ ಸ್ಥಾನಕ್ಕೆ 2 ಅಭ್ಯರ್ಥಿಗಳ ಹೆಸರು ನೋಂದಾವಣೆ ಗೊಂಡಿದ್ದು, ಹಾಗೇನೇ ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಒಟ್ಟು ೧೫ ಸ್ಪರ್ದಿಗಳ ಹೆಸರು ಚುನಾವಣೆಗೆ ನಾಮಾಂಕಿತ ಗೊಂಡಿತ್ತು. ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಪಟ್ಟಿಗೆ 10 ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಮತ ಮುಖಾಂತರ ಕಾರ್ಯಕಾರಿ ಸಮಿತಿಗೆ ರವಿ ಶೆಟ್ಟಿ, ದಿನೇಶ್ ಗೌಡ, ಸಂದೀಪ್ ರೆಡ್ಡಿ, ಮುರಳೀಧರ್ ರಮಾನಾಥ್ ರಾವ್, ಅನಿಲ್ ಕುಮಾರ್ ಬೋಳೂರ್, ಮಣಿಹಳ್ಳ ಯೋಗೀಶ್ ಪೈ, ಅಶ್ವಿನ್ ಪ್ರಸನ್ನ ಕುಮಾರ್, ಶಶಿಧರ್ ಹೆಬ್ಬಾಳ್ ಚುನಾಯಿತರಾದರು. ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಆಶಾ ನಂಜಪ್ಪ ಹಾಗು ರಶ್ಮಿ ಜಯರಾಮ್ ಅವಿರೋಧವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆದರ್ಶ ಪುರುಷರಾದ ಕೋಟಿ ಚೆನ್ನಯರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲೆಡೆಯೂ ಬಿಲ್ಲವ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದೆ. ಸಮುದಾಯದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡುತ್ತಿದೆ. ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘ ಯಡ್ತರೆ ಇದರ ವಿಂಶತಿ ವರ್ಷಾಚರಣೆಯ ಅಂಗವಾಗಿ ಶನಿವಾರ ಯಡ್ತರೆ ಬೈಪಾಸ್ ಬಳಿ ಆಯೋಜಿಸಲಾದ ಬಿಲ್ಲವ ಸಮ್ಮಿಲನ ೨೦೧೮ ’ಕೋಟಿ ಚೆನ್ನಯ್ಯ ಟ್ರೋಫಿ’ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಬೈಂದೂರು ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸದ್ಯದಲ್ಲೇ ಕೋರ್ಟ್, ತಾಲೂಕು ಪಂಚಾಯತ್ ಹಾಗೂ ಇತರೆ ಕಛೇರಿಗಳ ಕಾರ್ಯರಂಭ ಮಾಡಲಿವೆ. ಕೆಎಸ್‌ಆರ್‌ಟಿಸಿ ಡಿಪೋ ಕೂಡ ಮಂಜೂರಾಗಿದ್ದು ಜನರಿಗೆ ಅನುಕೂಲವಾಗಲಿದೆ. ಬಿಲ್ಲವ ಸಂಘಟನೆ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸುವುದಲ್ಲದೇ, ವೈಯಕ್ತಿಯವಾಗಿ ನೆರವು…
