ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ಅಂಗವಿಕಲರಿಗಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್, ಅಂಗವಿಕಲರ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಸಾಧನ ಸಲಕರಣೆ, ನಿವಾರಣಾ ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ನೆರವು, ವಿಕಲಚೇತನರ ಬಸ್ ಪಾಸ್, ಸ್ವಯಂ ಉದ್ಯೋಗಕ್ಕಾಗಿ ಶೇ. 50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ. 50 ರಷ್ಟು ಸಬ್ಸಿಡಿ ಮೂಲಕ ಆಧಾರ ಸಾಲ ಯೋಜನೆ, ಯಂತ್ರಚಾಲಿತ ದ್ವಿಚಕ್ರ ವಾಹನ, ವಿಕಲಚೇತನ ವ್ಯಕ್ತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗೆ ವಿವಾಹ ಪ್ರೋತ್ಸಾಹಧನ, ಅಂಧ ಮಹಿಳೆಗೆ ಜನಿಸುವ ಮೊದಲನೇ ಮತ್ತು ಎರಡನೇ ಮಗುವಿನ ಪಾಲನೆಗಾಗಿ ಶಿಶುಪಾಲನಾ ಭತ್ಯೆ, ಶ್ರವಣ ದೋಷವುಳ್ಳ ವಿಕಲಚೇತನ ವ್ಯಕ್ತಿಗಳಿಗೆ ಹೊಲಿಗೆಯಂತ್ರ, ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸ್ಪರ್ಧಾಚೇತನ ಯೋಜನೆಗಳಿಗೆ ಷರತ್ತಿಗೊಳಪಟ್ಟು ಅಂಗವಿಕಲರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲಯನ್ಸ್ ಕ್ಲಬ್ನ 2021-22 ನೇ ಸಾಲಿನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಬಿ. ರಾಧಾಕೃಷ್ಣ ನಾಯಕ್ ಅಧಿಕಾರ ಸ್ವೀಕರಿಸಿದರು. ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಟಿ ಸೋನ್ಸ್ ಸಮಾಜ ಸೇವೆ ಮಾಡುವವರಿಗೆ ಹಲವು ಆಯ್ಕೆಗಳು ಇರುತ್ತದೆ. ನಮ್ಮ ಮನಸ್ಥಿತಿಗೆ ಒಪ್ಪುವಂತಹ ಆಯ್ಕೆಗಳನ್ನು ಮಾಡಿಕೊಳ್ಳುವುದರಿಂದ ಸೇವಾ ಸಂತೃಪ್ತಿ ಪಡೆಯಲು ಸಾಧ್ಯ. ಪ್ರತಿಯೊಬ್ಬ ಲಯನ್ಸ್ ಸದಸ್ಯರಲ್ಲಿಯೂ ಈ ರೀತಿಯ ಸಂತೃಪ್ತಿ ಇರಬೇಕು ಎಂದರು. ಈ ಸಂದರ್ಭ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಜಯಕರ ಶೆಟ್ಟಿ ಸುಪ್ರೀಮ್, ಮಂಜುನಾಥ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಕುಲಾಲ್ ಲಯನ್ಸ್ ವಿಭಾಗೀಯ ಸಭಾಪತಿ ಕೆದೂರು ಸೀತಾರಾಮ ಶೆಟ್ಟಿ, ವಲಯ ಸಭಾಪತಿ ಅಶೋಕ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಕೆ. ಚಂದ್ರಶೇಖರ ಕಲ್ಪತರು. ನಿಕಟ ಪೂರ್ವ ಕಾರ್ಯದರ್ಶಿ ಡಾ. ರಾಜೇಂದ್ರ ಕೆ, ನಿಕಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2020- 21 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿ ಇಲ್ಲಿನ ಕೋಡಿ ಬ್ಯಾರೀಸ್ ಪಿಯು ಕಾಲೇಜಿನ 20ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ , 70 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣಗೊಂಡಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಗೊಂಡ ವಿರ್ದ್ಯಾರ್ಥಿಗಳಾದ ಅಮೃತ -98% ಶಮೀಮ್ – 97% ಪ್ರಿಯಾ – 95% ಅಕ್ಷತ – 94% ಸಫ್ನಾಝ್ – 94% ರಕ್ಷಿತಾ – 94%
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯಕ್ಷಸಿಂಚನ ಟ್ರಸ್ಟ್ ರಿ., ಬೆಂಗಳೂರು ಇದರ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ವಿಶಿಷ್ಟವಾದ ಸ್ಪರ್ಧೆ ಎರ್ಪಡಿಸಲಾಗಿದೆ. ಛಂದೋಬದ್ಧ ಪ್ರಸಂಗಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಈ ಸ್ಪರ್ಧೆಯ ಮೊದಲ ಬಹುಮಾನವು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಎರಡನೇ ಬಹುಮಾನವು 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಸಂಗ ರಚನಾ ಸ್ಪರ್ಧೆಯ ನಿಯಮಗಳು: ಪ್ರಸಂಗವು ಪೌರಾಣಿಕ ಪ್ರಸಂಗವಾಗಿರಬೇಕು. ಕಥೆಯ ಎಳೆಯು ಯಾವುದಾದರೂ ಪುರಾಣಗಳಲ್ಲಿ ದಾಖಲಾಗಿರಬೇಕು. ಸ್ಥಳ ಪುರಾಣ ಹಾಗೂ ಕ್ಷೇತ್ರ ಮಹಾತ್ಮೆಯ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಕಥೆಯ ಬಗ್ಗೆ ಹಾಗೂ ಬಳಸಿದ ಮೂಲದ ಬಗ್ಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ತಿಳಿಸಬೇಕು ಹಾಗೂ ಕಡ್ಡಾಯವಾಗಿ ಕೊನೆಗೆ ಅದೇ ಕಥೆಯ ಪ್ರಸಂಗವನ್ನು ಸ್ಪರ್ಧೆಗೆ ಕಳುಹಿಸಿಕೊಡಬೇಕು. ಈಗಾಗಲೇ ಪ್ರಕಟನೆ/ಪ್ರದರ್ಶನಗೊಂಡ ಕೃತಿಗಳನ್ನು ಬಳಸುವಂತಿಲ್ಲ. ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಪ್ರಸಂಗ ರಚನೆಗೆ 4 ತಿಂಗಳುಗಳ ಕಾಲಾವಕಾಶ ನೀಡಲಾಗುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಛೇರಿಗೆ ನುಗ್ಗಿ ಫೈನಾನ್ಸ್ ಮಾಲೀಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ ಕಾಳವಾರ ಸಮೀಪ ನಡೆದಿದೆ. ಮೃತ ವ್ಯಕ್ತಿಯನ್ನು ಯಡಾಡಿ ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ (33) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಜೇಂದ್ರ ಶೆಟ್ಟಿ ಕಾಳಾವರದಲ್ಲಿ ಅನೂಪ್ ಎಂಬುವವರೊಂದಿಗೆ ಪಾಲುದಾರಿಕೆಯಲ್ಲಿ ಡ್ರೀಮ್ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು. ಶುಕ್ರವಾರ ರಾತ್ರಿ ಮನೆಗೆ ಬಂದಿರಲಿಲ್ಲ. ಆತನಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರಿಗೆ ಫೊನ್ ಮಾಡಿ ರಾತ್ರಿ ಕಾಳಾವರಕ್ಕೆ ಬಂದು ಫೈನಾನ್ಸ್’ನಲ್ಲಿ ನೋಡುವಾಗ ಫೈನಾನ್ಸ್’ನ ರೂಮಿನಲ್ಲಿ ಅಜೇಂದ್ರ ಶೆಟ್ಟಿಯು ಕುಳಿತಲ್ಲಿಯೇ ವಾಲಿಕೊಂಡು ಬಿದ್ದಿದ್ದು, ಆತನ ಕೆನ್ನೆಯ ಬಳಿ ಕಡಿದ ಗಾಯವಾಗಿ ರಕ್ತ ಹರಿಯುತ್ತಿತ್ತು. ಕೂಡಲೇ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಅಜೇಂದ್ರನನ್ನು ಪರೀಕ್ಷಿಸಿದಾಗ ಮೃತಪಟ್ಟಿದ್ದರು. ಕಳೆದ ಐದು ವರ್ಷಗಳಿಂದ ಅಸೋಡು-ಕಾಳಾವರ ಎಂಬಲ್ಲಿ ಫೈನಾನ್ಸ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ವ್ಯವಹಾರ ವಿಚಾರದಲ್ಲಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ನಿಖರ ಕಾರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅವರ ಚೊಚ್ಚಲ ಕೃತಿ ‘ಹೇಳದೆ ಹೋದ ಮಗಳಿಗೆ’ ಪುಸ್ತಕಕ್ಕೆ ತುಮಕೂರಿನ ಪ್ರತಿಷ್ಠಿತ ಸಂಸ್ಥೆ ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ. ವೈವಿಧ್ಯಮಯವಾದ ಪ್ರೇರಣಾತ್ಮಕ ಅಂಕಣ ಬರಹಗಳನ್ನು ಒಳಗೊಂಡಿರುವ ಈ ಕೃತಿ ಓದುಗ ವಲಯದಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದೆ. ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಶಿವರಾಜ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೇಂದ್ರ ಸರಕಾರದ ನೆಹರು ಯುವ ಕೇಂದ್ರ, ಜಿಲ್ಲಾ ಕಚೇರಿಯ ವತಿಯಿಂದ 2020-21 ನೇ ಸಾಲಿನ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ, ಯುವ ಮಂಡಳಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾವಣೆಯಾಗಿರುವ ಯುವಕ, ಯುವತಿ ಮಂಡಳಿಗಳು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು. 2020-21 ನೇ ಸಾಲಿನಲ್ಲಿ ಗ್ರಾಮ, ಪಟ್ಟಣ ಹಾಗೂ ತಾಲೂಕು ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರುವ (ಮಾಹಿತಿಯು 2020 ಏಪ್ರಿಲ್ 01 ರಿಂದ ಪ್ರಸಕ್ತ ಸಾಲಿನ ಮಾರ್ಚ್ 31ರ ಒಳಗಿರಬೇಕು), ಯುವ ಮಂಡಳಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಳಕ್ಕೆ 25,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಲ್ಲ್ಫ್ರೆಡ್ ಡಿ ಸೋಜ, ಜಿಲ್ಲಾ ಯುವಜನ ಅಧಿಕಾರಿ, ನೆಹರು ಯುವ ಕೇಂದ್ರ, ರಜತಾದ್ರಿ ಮಣಿಪಾಲ, ದೂ.ಸಂಖ್ಯೆ: ಉಡುಪಿ: 0820-2574992 ಅನ್ನು ಸಂಪರ್ಕಿಸುವಂತೆ ನೆಹರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಸಭೆಯ ಯುಜಿಡಿ ಕಾಮಗಾರಿ ವೆಟ್ವೆಲ್ ನಿರ್ಮಿಸಲು ನಿರುಪಯುಕ್ತ ಹೊಳೆ ಬದಿ ಖರೀದಿಸಿರುವ ಸರ್ಕಾರವು ದುಪ್ಪಟ್ಟು ಹಣ ಪಾವತಿಸಿದೆ. ಜಾಗದ ನಷ್ಟ ಪರಿಹಾರ ಎಂದು ತೋರಿಸಿ ಒಟ್ಟು 95 ಲಕ್ಷ ಜಾಗದ ಮಾಲೀಕರಿಗೆ ಸಂದಾಯ ಮಾಡಿರುವ ಹಿಂದೆ ಅಕ್ರಮ ನಡೆದಿರುವ ಶಂಕೆ ಇದೆ ಎಂದು ಪುರಸಭೆಯ ಮಾಜಿ ಸದಸ್ಯ ಕೇಶವ ಭಟ್ ಆರೋಪಿಸಿದ್ದಾರೆ. ಪುರಸಭೆ ಸದಸ್ಯರ ಗಮನಕ್ಕೆ ತರದೇ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯ ಮಾಡಿರುವ ಹಿಂದಿನ ಮರ್ಮವೇನು? ಈ ಕುರಿತು ಸಮಗ್ರ ತನಿಖೆ ನಡೆಸಬೇಕು, ಸಾರ್ವಜನಿಕರ ತೆರಿಗೆ ಹಣ ಈ ರೀತಿಯಾಗಿ ಫೋಲಾಗಬಾರದು ಎಂದು ಧ್ವನಿ ಎತ್ತಿದ್ದರೂ ಯಾಕೆ? ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಜಾಗ ಖರೀದಿ ಮಾಡಿ ಪುರಸಭೆ ಸದ್ಯಸರ ಗಮಕ್ಕೆ ತರದೇ, ರಿಜಿಸ್ಟರ್ ಮಾಡಿದರ ಹಿಂದಿನ ಗುಟ್ಟೇನು? ಕೇವಲ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯಾಗಿದೆ ಅನ್ನುವುದರ ಬಗ್ಗೆ ಆಡಳಿತ ಪಕ್ಷದ ಸದಸ್ಯ ಗಿರೀಶ್ ದೇವಾಡಿಗ ಹಾಗೂ ಸ್ವಪಕ್ಷದವರು ಧ್ವನಿ ಎತ್ತಿದ್ದು ಶ್ಲಾಘನೀಯ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿರುವ ವಸತಿಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಕುರಿತಂತೆ, ವಸತಿ ಶಾಲೆಗಳಲ್ಲಿರುವ ವಿವಿಧ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೆಚ್ಚಿನ ಮಾಹಿತಿ ನೀಡುವಂತೆ , ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಜಿಲ್ಲಾದಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , 6ನೇ ತರಗತಿ ಪ್ರವೇಶ ಪರೀಕ್ಷೆ ಹಾಗೂ ವಸತಿಶಾಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿಶಾಲೆಗಳ ಪ್ರಾಂಶುಪಾಲರ, ನಿಲಯಪಾಲಕರ, ಕಂಪ್ಯೂಟರ್ ಶಿಕ್ಷಕರ , ಪ್ರಥಮ ದರ್ಜೆ ಸಹಾಯಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರ ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಸುತ್ತಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದ್ದು , ಉಡುಪಿ ಜಿಲ್ಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೇವಾ ಮನೋಭಾವನೆಯಿಂದ ಲಭಿಸುವ ಯಶಸ್ಸು ಶಾಸ್ವತವಾಗಿದ್ದು, ಈ ನಿಟ್ಟಿನಲ್ಲಿ ಕಳೆದ 116 ವರ್ಷಗಳಿಂದ ವಿಶ್ವದಾದ್ಯಂತ ಸೇವಾಕಾರ್ಯದಲ್ಲಿ ತೊಡಗಿರುವ ರೋಟರಿಯಲ್ಲಿ ಸದಸ್ಯರಾಗಿ ಕಾರ್ಯೊನ್ಮುಖರಾದರೆ ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಹಕಾರಿಯಾಗುವುದು. ಹಾಗೆಯೇ ಕಷ್ಟದಲ್ಲಿರುವವರನ್ನು ಗುರುತಿಸಿ ತಕ್ಷಣ ಅಂತವರನ್ನು ಸ್ಪಂದಿಸಿ ಸ್ವಲ್ಪ ಮಟ್ಟಿನ ಪರಿಹಾರ ನೀಡಿದರೆ ಸೇವೆಯಲ್ಲಿ ಸಾರ್ಥಕತೆ ಕಾಣಬಹುದು ಎಂದು ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಜಯಪ್ರಕಾಶ್ ಶೆಟ್ಟಿ ಹೇಳಿದರು. ಅವರು, ಯಡ್ತರೆ ಬಂಟರ ಭವನದಲ್ಲಿ ನಡೆದ 2021-22ನೇ ಸಾಲಿನ ಬೈಂದೂರು ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಪ್ರತಿಯೊಂದಲ್ಲಿಯೂ ಸಮಯಪ್ರಜ್ಞೆ ಮತ್ತು ಶಿಸ್ತಿನ ಸೇವಾ ಕಾರ್ಯಾಚರಣೆ ಮೂಲಕ ಸಾಗುತ್ತಿರುವ ರೋಟರಿಯು ಜನರ ನಂಬಿಕೆಗೆ ಪಾತ್ರವಾಗಿದೆ. ಸೇವಾಕಾಂಕ್ಷಿ ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢಿಕರಿಸಿ ಅವರಲ್ಲಿ ಶ್ರೇಷ್ಠ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸಂಸ್ಥೆಯ ಪಾತ್ರ ದೊಡ್ಡದಿದೆ ಎಂದ ಅವರು, ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನ ಗುರುತಿಸುತ್ತಾರೆ. ಒಬ್ಬರಿಂದಾಗದ…
