ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಸಹಕಾರಿ ಎಂಬ ಕುರಿತು 2004 ರಿಂದ 2006 ರವರೆಗೆ ಉಡುಪಿ ಜಿಲ್ಲೆ, ಉತ್ತರಕನ್ನಡ ಜಿಲ್ಲೆ, ಗೋವಾ ರಾಜ್ಯದಲ್ಲಿ ನಡೆಸಿದ ಪ್ರಯೋಗದ ಸತ್ಪರಿಣಾಮವಾಗಿ ಕಳೆದೊಂದು ದಶಕಗಳಿಂದ ಕಡಲ್ಕೊರೆತ ನಿಯಂತ್ರಣಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ. ಆದುದರಿಂದ ಈಗಾಗಲೇ ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವವರು ಹಾಗೂ ಕಾರಣಾಂತರಗಳಿಂದ ನಿಲ್ಲಿಸಿದವರೂ ಪ್ರಾಕೃತಿಕ ಸಮತೋಲನಕ್ಕಾಗಿ ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣವನ್ನು ಮುಂದುವರಿಸಿಕೊಂಡು ಹೋಗುವಂತೆ ಪಶ್ಚಿಮ ಕರಾವಳಿಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯ ನಿರ್ದೇಶಕರಾದ ಡಾ.ಎಸ್.ಎನ್. ಪಡಿಯಾರ್ ಕರೆ ನೀಡಿದ್ದಾರೆ. 2005 ರಲ್ಲಿ ಪಶ್ಚಿಮ ಕರಾವಳಿಯ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ಪಠಣ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಬೃಹತ್ ಅಭಿಯಾನವನ್ನು ಸಂಘಟಿಸಿತ್ತು. ತನ್ಮೂಲಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದ ಅವಶ್ಯಕತೆಯನ್ನು ಜನಸಾಮಾನ್ಯರಿಗೆ ಮನಗಾಣಿಸಿ, ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವಂತೆ ಪ್ರೇರೇಪಿಸಲಾಗಿತ್ತು. ಇದರ ಸತ್ಪರಿಣಾಮವನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿರುವ ಕುಸುಮ ಫೌಂಡೇಷನ್‌ನ ‘ಕುಸುಮಾಂಜಲಿ-2018’ ವಾರ್ಷಿಕ ಸಾಂಸ್ಕೃತಿಕ ಉತ್ಸವವು ಈ ಭಾರಿ ಡಿಸೆಂಬರ್ 22 ಹಾಗೂ 23ರ ಶನಿವಾರ ಮತ್ತು ಭಾನುವಾರದಂದು ನಾಗೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರತಿಭಾವಂತ ಗಾಯಕರ ಅನ್ವೇಷಣೆ ಹಾಗೂ ಗಾನಕುಸುಮ 2018ರ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಗಾಯನ ಸ್ವರ್ಧೆಯನ್ನು ಆಯೋಜಿಸಲಾಗಿದೆ. ಸಂಪೂರ್ಣ ಉಚಿತವಾಗಿರುವ ಸ್ವರ್ಧೆಗೆ ಆಸಕ್ತರು ಹೆಸರು ನೊಂದಾಯಿಸಬಹುದಾಗಿದೆ. ಗಾನಕುಸುಮಾ 2018ರ ಪ್ರತಿಭಾನ್ವೇಷಣೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಪ್ರಥಮ ಸುತ್ತಿನ ಆಯ್ಕೆಯನ್ನು ಜುಲೈ 8 ಹಾಗೂ 15ರಂದು ಆದಿತ್ಯವಾರ ಬೈಂದೂರು ತಾಲೂಕು ನಾಗೂರಿನ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಯಾವುದೇ ಭಾಷೆಯ ಭಾವಗೀತೆ, ಭಕ್ತಿ ಪ್ರಧಾನ ಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿವುಳ್ಳ ಕಲಾತ್ಮಕ ಚಿತ್ರಗೀತೆಗಳನ್ನು ಆಯ್ದುಕೊಳ್ಳಲು ಅವಕಾಶವಿದೆ. ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 01-01-1997 ನಂತರ ಜನಿಸಿದವರು ಮಾತ್ರ ಭಾಗವಹಿಸಬಹುದಾಗಿದೆ. ಉಚಿತ ಸ್ವರ್ಧೆಯಲ್ಲಿ ಫೈನಲ್ ತಲುಪುವ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಶಿರೂರು ಕರಾವಳಿ ಇದರ ವತಿಯಿಂದ 20ನೇ ವರ್ಷದ ಗಣೇಶೋತ್ಸವದಲ್ಲಿ ನಿರ್ಮಿಸಲು ಉದ್ದೇಶಿಸಿದ ಸಭಾಭವನದ ಮೇಲ್ಛಾವಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು ಬೆಳಿಗ್ಗೆ ಸಂಘದ ಸಮ್ಮುಖದಲ್ಲಿ ನಡೆಯಿತು. ಸಂಘದ ಅದ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆಯಲ್ಲಿ ಹಾಗೂ ಅರ್ಚಕ ರವೀಂದ್ರ ಅಯ್ಯಂಗಾರ್ ರವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ನಾಣು ಬಿಲ್ಲವ ಆರ‍್ಮಾರಹಿತ್ಲು, ಮಾಧವ ಬಿಲ್ಲವ ಶೆಟ್ರಹಿತ್ಲು, ಚಿಕ್ಕು ಪೂಜಾರಿ, ಚಂದ್ರ ಮೊಗೇರ್ ಕರಾವಳಿ, ರಾಮ ಟೈಲರ್, ಸಂಘದ ಗೌರವಾಧ್ಯಕ್ಷ ವಾಸು ಬಿಲ್ಲವ, ಕಾರ್ಯದರ್ಶಿ ಮಹೇಶ್ ಮೊಗೇರ್,ಉದ್ಯಮಿ ಚಿಕ್ಕಯ್ಯ ಬಿಲ್ಲವ ತೆಂಕಮನೆ, ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಬೈಂದೂರಿನ ನೂತನ ಶಾಸಕರಾಗಿ ಆಯ್ಕೆಯಾದ ಎಮ್.ಸುಕುಮಾರ ಶೆಟ್ಟಿಯವರನ್ನು ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ. ಅಧ್ಯಕ್ಷರಾದ ಭಾಸ್ಕರ್ ಖಾರ್ವಿ, ಜಯರಾಂ ದೇವಾಡಿಗ, ರಾಜ ಶೇಖರ್ , ಮಾಧವ ಖಾರ್ವಿ, ಲಕ್ಷಣ ಖಾರ್ವಿ, ರಾಘವೇಂದ್ರ ದೇವಾಡಿಗ, ಸಂತೋಷ ಖಾರ್ವಿ , ಸತೀಶ್ ಖಾರ್ವಿ, ಗಣೇಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹತ್ತಾರು ವರ್ಷಗಳಿಂದ ಸರ್ಕಾರಿ ನಿವೇಶನದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ಕ್ಷೇತ್ರದ 170 ಕುಟುಂಬಗಳಿಗೆ ಇಲ್ಲಿನ ಶಾಸಕರ ಕಛೇರಿಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು ಇಂದು ಹಕ್ಕುಪತ್ರ ವಿತರಿಸಿದ ನಿವೇಶನಕ್ಕೆ ಮುಂದಿನ 15 ದಿನದೊಳಗೆ ಆರ್‌ಟಿಸಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೊದಲಾದ ಪಿಂಚಣೆಗಳ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನೊಳಗೊಂಡಿರುವ ಈ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ, ಕಿಂಡಿಅಣೆಕಟ್ಟು ಮೊದಲಾದ ಮೂಲಸೌಕರ್ಯ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕಳೆದ ಐದು ದಿನಗಳ ಹಿಂದೆ ನದಿಗೆ ಬಿದ್ದು ಪ್ರಾಣ ಕಳೆದುಕೊಂಡ ಬಿಜೂರು ಗ್ರಾಮದ ಅಣ್ಣಪ್ಪ ದೇವಾಡಿಗ ಕುಟುಂಬಕ್ಕೆ ಹಾಗೂ ಸಿಡಿಲು ಬಡಿದು ಮನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರವೀಂದ್ರ ಕಲಾಕ್ಷೇತ್ರ ಕಲಾವಿದರ ಪುಣ್ಯಭೂಮಿ, ಇಲ್ಲಿ ಯೋಗ್ಯ ಮೂವರಿಗೆ ಸನ್ಮಾನವಾಗಿದೆ , ಯಕ್ಷಗಾನ ಇನ್ನಷ್ಟು ವ್ಯಾಪ್ತಿ ವಿಸ್ತರಿಸಲಿ ಎಂದು ರಾಘವೇಂದ್ರ ವೈಭವ ಧಾರವಾಹಿ ಖ್ಯಾತಿಯ , ಉದಯ ವಾಹಿನಿಯ ಪರಿಕ್ಷಿತ್ ಸರ್ಪಶಯನವರು ನುಡಿದರು. ರಾಘು ಶೆಟ್ಟಿ ನೈಕಂಬ್ಳಿ ಮತ್ತು ಪ್ರದೀಪ ಆಜ್ರಿ ಜಂಟಿ ಸಂಯೋಜನೆಯ ಯಕ್ಷ ಸಿಂಧೂರ ಯಕ್ಷಗಾನ ಕಾರ್ಯಕ್ರಮದ ರವೀಂದ್ರ ಕಲಾಕ್ಷೇತ್ರ ವೇದಿಕೆಯಲ್ಲಿ ಕಾಮಿಡಿ ಕಿಲಾಡಿಗಳಾದ ಅಪ್ಪಣ್ಣ ಗಾಣಿಗೇರ್ , ಸೂರಿ ಮೂಡುಬಗೆ ಕುಂದಾಪುರ , ಮಾರಣಕಟ್ಟೆ ಮೇಳದ ಪ್ರಧಾನ ಕಲಾವಿದರಾದ ಗೋಳಿಕೆರೆ ಚಂದ್ರಗೌಡರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಉದಯ ಶೆಟ್ಟಿ ಜಡ್ಕಲ್ , ರಘುರಾಮ ಶೆಟ್ಟಿ ಎಳುಮುಡಿ , ರಘುರಾಮ ಶೆಟ್ಟಿ SKC , ಯಕ್ಷಪ್ರೇಮಿ ಜಯರಾಮ ಶೆಟ್ಟಿ , ಸುಬ್ರಮಣ್ಯ ಚಿಟ್ಟಾಣಿ ಉಪಸ್ಥಿತರಿದ್ದರು . ನಾಗರಾಜ್ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮ ನಿರೂಪಿಸಿದರು .ಕಾರ್ಯಕ್ರಮದ ನಂತರ ಕಲಾಧರ ಬಳಗ ಜಲವಳ್ಳಿಯವರಿಂದ ಅಗ್ನಿವರ್ಷ ಪ್ರಸಂಗ ಪ್ರದರ್ಶನ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜ ಸುಧಾರಣೆಗಾಗಿ, ಹಿಂದೂ ತತ್ವದ ಜಾಗೃತಿಗಾಗಿ ಸರ್ವವನ್ನು ಪರಿತ್ಯಜಿಸಿ ಸಂನ್ಯಾಸ ಸ್ವೀಕರಿಸಿರುವುದು ಬದುಕಿನ ದೊಡ್ಡ ನಿರ್ಧಾರವೇ ಸರಿ. ರಾಜಕೀಯ ಕಾರಣದಿಂದಾಗಿ ಮುಸುಕಾಗಿ ಕಾಣುತ್ತಿರುವ ಹಿಂದೂ ಧರ್ಮ ಸದಾ ಪ್ರಜ್ವಲಿಸುತ್ತಿರಬೇಕಾದರೆ ಭಗವದ್ಗೀತೆ ಹಾಗೂ ಧಾರ್ಮಿಕ ಗ್ರಂಥಗಳ ಪಠಣ ನಿರಂತರ ನಡೆಯುದವರ ಜೊತೆಗೆ ಸಂತರ ಧರ್ಮ ಜಾಗೃತಿಗಾಗಿ ಕಾರ್ಯವೂ ಅಗತ್ಯವಾಗಿದೆ ಎಂದು ಗೋಕರ್ಣ ಮಾದನಗಿರಿ ಶ್ರೀ ಸಿದ್ಧಿವಿನಾಯಕ ಮಹಾಲಸ ನಾರಾಯಣ ದೇವಸ್ಥಾನದ ಮೊಕ್ತೇಸರರಾದ ಸುನಿಲ್ ಪೈ ಹೇಳಿದರು. ಅವರು ಏಳಜಿತದಲ್ಲಿ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಶ್ರೀ ರಾಮಕೃಷ್ಣ ಕುಟೀರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಾಗುವ ಘಟನೆಗಳೇ ನಮ್ಮನ್ನು ಬದಲಿಸಿ ಸಾಕ್ಷಾತ್ಕಾರದೆಡೆಗೆ ಕರೆದೊಯ್ಯುತ್ತದೆ. ಮನುಷ್ಯನ ಅಂತಸ್ತಿನ ಆಧಾರದಲ್ಲಿ ಸ್ನೇಹವನ್ನು ಸರಿದೂಗಿಸಲು ಸಾಧ್ಯವಿಲ್ಲ. ಅಂತಸ್ತು ಇದ್ದಾಗಲೂ ಇಲ್ಲದಾಗಲೂ ಇರುವ ಪ್ರೀತಿ, ವಿಶ್ವಾಸವೇ ಬದುಕಿನಲ್ಲಿ ಮುಖ್ಯವಾದದ್ದು ಎಂದರು. ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಮಾತನಾಡಿ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿವರು ತಮ್ಮ ಪೂರ್ವಾಶ್ರಮದಲ್ಲಿ ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಅರವಿಂದ ಮರಳಿಯವರು ಮಾತನಾಡಿ ಯೋಗವು ಕೇವಲ ದೈಹಿಕ ಬೆಳವಣಿಗೆ ಮಾತ್ರವಲ್ಲದೇ ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗಿದೆ. ಕ್ರಮಬದ್ಧವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎಂದರು. ಶಾಲೆಯ ವಿದ್ಯಾರ್ಥಿಗಳು ಮತ್ತು NCC ಕೆಡೆಟ್‌ಗಳು ಭಾಗವಹಿಸಿದ್ದರು. ಶ್ಲೋಕದೊಂದಿಗೆ ಆರಂಭವಾದ ಈ ಕಾರ್ಯಕ್ರಮವು ಯೋಗಾಸನ, ಕಪಾಲಭಾತಿ, ಪ್ರಾಣಯಾಮ, ಧ್ಯಾನದವರೆಗೆ ಮುಂದುವರೆದು ಎಲ್ಲರಲ್ಲೂ ಶಾಂತಿ ನೆಮ್ಮದಿ ಆರೋಗ್ಯ ನೆಲಸಲಿ ಎಂಬ ಸಂಕಲ್ಪವನ್ನು ಮಾಡಿ ಶಾಂತಿಪಾಠದೊಂದಿಗೆ ಕೊನೆಗೊಂಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಮೇಲ್‌ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಹಿರಿಯ ಯೋಗಪಟು ಜಿ.ಗಣಪತಿ ಶಿಪಾ ಅವರು ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂಚಲಿತ ರೀತಿಯಲ್ಲಿ ಸುಧಾರಿಸಲು ಅಥವಾ ಅಭಿವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ ಜಿ.ಎಂ., ನಿವೃತ್ತ ಬ್ಯಾಂಕ್ ಉದ್ಯೋಗಿ ಈಶ್ವರ ಜಿ., ಅಂಗನವಾಡಿ ಶಿಕ್ಷಕಿ ಸಹನಾ, ಅಂಗನವಾಡಿ ಸಹಾಯಕಿಯರು, ಪೋಷಕರು ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪತ್ರಕರ್ತ ನಾಗೇಂದ್ರ ಪಿ. ತ್ರಾಸಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಪತ್ರಕರ್ತ ನಾಗೇಂದ್ರ ಪಿ. ತ್ರಾಸಿಯವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಿರುವ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಹೊಂದಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಕೆ., ತನ್ನ ಪುತ್ರಿ ಪ್ರಾರ್ಥನಾ ಎನ್. ತ್ರಾಸಿ ಇವಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ನೀತಿ ಕಥೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವುದನ್ನು ಶ್ಲಾಘಿಸಿದರು. ಶಾರದಾ ನಾಗೇಂದ್ರ, ಶಾಲೆಯ ಸಹಶಿಕ್ಷಕರಾದ ಶಶಿಶಂಕರ್, ರಾಜೀವ ಶೆಟ್ಟಿ,…
