ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋವುಗಳನ್ನು ಪ್ರೀತಿಸಿ ಮನುಷ್ಯರನ್ನು ಕೊಲ್ಲುವ ಗೋ ಭಯೋತ್ಪಾದಕ ಪಡೆ ಇಂದು ಹುಟ್ಟಿಕೊಂಡಿದೆ. ಅವರುಗಳ ದಬ್ಬಾಳಿಕೆಗೆ ಹೆದರದೇ ಐಕ್ಯತೆಯಿಂದ ಮುನ್ನಡೆಯುವ ನಮ್ಮ ನಡೆಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿದವರ ಎದೆ ನಡುಗಬೇಕು. ಈ ದೇಶದ ಮೂಲ ನಿವಾಸಿ ಜನಾಂಗದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಅಶೋಕ್ ಹೇಳಿದರು. ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ದಲಿತ ಹಿಂದುಳಿತ ಮತ್ತು ಅಲ್ಪಸಂತ್ಯಾತ ಸಂಘಟನೆಗಳ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೊವಾಡಿ ಚಲೋ ಜಾಥಾ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರಾವಳಿಯಲ್ಲಿ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಬದುಕಬಾರದು ಎಂದು ಬ್ರಾಹ್ಮಣ್ಯವನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರ ನಿರ್ಧರಿಸಿವೆ. ಆಹಾರ ಕ್ರಮದಲ್ಲಿ ಶ್ರೇಷ್ಠ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೊವಾಡಿ ಗೋಹತ್ಯೆ ಪ್ರಕರಣದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಹಾಗೂ ಹಲ್ಲೆ ಖಂಡನೀಯ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಪೈಶಾಶಿಕ ಕೃತ್ಯ ನಡೆಸಲಾಗುತ್ತಿದೆ. ಮೊವಾಡಿ ಘಟನೆಯನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಕೆಡಿಸುವ ಹಾಗೂ ಪರಿಸರದಲ್ಲಿ ಅನಗತ್ಯವಾಗಿ ಭಯಭೀತಿ ಸೃಷ್ಟಿ ಮಾಡುತ್ತಿರುವ ಕ್ರೂರ, ಕ್ರೌರ್ಯ ಮನಸ್ಸಿನ ಸಮಾಜಘಾತುಕ ಶಕ್ತಿಗಳ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ ಮತ್ತು ದಲಿತ ಸಂಘರ್ಷ ಸಮಿತಿಯ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಮೊವಾಡಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆ ಆಶ್ರಯದಲ್ಲಿ ಜರಗಿದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿದ್ದ ಮೊವಾಡಿಯಲ್ಲಿ ಜನರು ಜಾತಿ ಮತ ಭೇದ ಮರೆತು ಸಹಬಾಳ್ವೆಯ ಜೀವನ ನಡೆಸುತ್ತಿದ್ದರು. ಅಂಬೇಡ್ಕರ್ ಅವರ ಚಿಂತನೆ ಸ್ವಾಭಿಮಾನದ ಬಗ್ಗೆ ತಿಳುವಳಿಕೆ ಇಲ್ಲದ ಜನರು ತಮ್ಮ ಬೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುತ್ತಿದ್ದ ಯುವಕ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ಘಟನೆ ಭಾನುವಾರ ಕಾಲ್ತೋಡಿನಲ್ಲಿ ನಡೆದಿದೆ. ಇಲ್ಲಿನ ಯಡೇರಿ ಹೊಸಮನೆ ನಿವಾಸಿ ಹರೀಶ ದೇವಾಡಿಗ (೩೪) ಕಲ್ಸಂಕ ಹಳ್ಳವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ನೀರಿನ ರಭಸಕ್ಕೆ ಕಾಲು ಜಾರಿ ಸೆಳೆದೊಯ್ಯಲ್ಪಟ್ಟರು. ಸೋಮವಾರವೂ ಸ್ಥಳೀಯರು ಮತ್ತು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದರು. ಸಂಜೆಯ ತನಕ ಅವರು ಪತ್ತೆಯಾಗಿಲ್ಲ. ಘಟನೆ ಬಗ್ಗೆ ಅವರ ಭಾವ ರಘುರಾಮ ದೇವಾಡಿಗ ಬೈಂದೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಯುವಕನಿಗೆ ಪತ್ನಿ, ಶಾಲೆಗೆ ಹೋಗುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಶಾಸಕರ ಭೇಟಿ: ಸುದ್ದಿ ತಿಳಿದ ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ಹುಡುಕಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿನೀಡಿ ಬಂಧುಗಳು ಮತ್ತು ಸ್ಥಳೀಯರಿಂದ ಘಟನೆ ಮತ್ತು ಹುಡುಕಾಟದ ವಿವರ ಪಡೆದು ಅವರಲ್ಲಿ ಧೈರ್ಯ ತುಂಬಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿಯಲ್ಲಿ ಆರಂಭಗೊಂಡಿರುವ ಮುಂಗಾರು ಮಳೆಗೆ ಹೆದ್ದಾರಿ ಕಾಮಗಾರಿಗಾಗಿ ಅವ್ಶೆಜ್ಞಾನಿಕವಾಗಿ ಕೊರೆದಿರುವ ಒತ್ತಿನೆಣೆ ಗುಡ್ಡವು ಸತತವಾಗಿ ಕುಸಿಯುತ್ತಿದೆ. ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಿನವೂ ವ್ಯತ್ಯಯಗೊಳ್ಳುತ್ತಿದೆ. ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕುಂಟುಮಾಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ್ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚತುಷ್ಪತ ಹೆದ್ದಾರಿಯ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವ ಬಗ್ಗೆ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡ ಇಬ್ಬಾಗ ಮಾಡುವಾಗ ಸಂಬಂಧಿತ ಗುತ್ತಿಗೆದಾರ ಕಂಪೆನೆ ಮುಂಜಾಗೃತ ಕ್ರಮ ಕೈಗೊಳ್ಳದ ಹಿನ್ನೆಯಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೊಡಕ್ಕಾಗಿದೆ, ಈ ಬಗ್ಗೆ ಈಗಾಗಲೇ ಸಂಬಂಧಿತ ಕಂಪೆನಿಯ ವಿರುದ್ಧ ಕ್ರಿಮಿನಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶಿಕ್ಷಣ ಕ್ಷೇತ್ರ ವಿಶಾಲವಾಗಿದ್ದು ಶಿಕ್ಷಣದ ಅರ್ಥವನ್ನು ಇಂದಿನ ಮಕ್ಕಳು ತಿಳಿದುಕೊಂಡು ತಮ್ಮ ಗುರಿಯನ್ನು ಅರಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮುಖ್ಯವಲ್ಲ. ಎಳೆಯ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿಕೊಂಡು ತಮ್ಮ ಮುಂದಿನ ಸಾಧನೆಗಳ ಬಗ್ಗೆ ಸಿದ್ಧತೆ ನಡೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನ ಬೆಳೆದು ಬರಬೇಕು. ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ಹೊರಹೊಮ್ಮಬೇಕು. ಸೀಮಿತ ಪರೀಕ್ಷೆಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಎಸ್ವಿಎಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಸರಸ್ವತಿ ವಿದ್ಯಾಲಯ ಸಮೂಹ ವಿದ್ಯಾಸಂಸ್ಥೆಗಳ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳ ಹವ್ಯಾಸ ಆಸಕ್ತಿಯನ್ನು ಗಮನಿಸದೆ ಪೋಷಕರು ಆರ್ಥಿಕ ವ್ಯಾಮೋಹದಿಂದ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಾಕುವ ಒತ್ತಾಯ ಒತ್ತಡದಿಂದ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳಿವೆ. ಆದ್ದರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಒತ್ತಿನಣೆ ಗುಡ್ಡ ಕುಸಿತ ಮುಂದುವರಿದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು, ಏಕಮುಖ ಸಂಚಾರ, ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕ್ಕಾಗಿತ್ತು. ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ದೊಂಬೆ ಕರಾವಳಿ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಕರಾವಳಿ ಪಡಿಯಾರಹಿತ್ಲು ವೀರಮಹಾಸತಿ ದೇವಳದ ಬಳಿ ಸರಕು ತುಂಬಿದ ಲಾರಿಯೊಂದು ರಸ್ತೆಯ ಇಕ್ಕೆಲದಲ್ಲಿ ಕುಸಿದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿಯೂ ಸುಮಾರು ಒಂದು ತಾಸು ಸಂಚಾರ ವ್ಯತ್ಯಯಗೊಂಡು ವಾಹನ ಸವಾರರು ಪರದಾಡುವಂತಾಯಿತು. ಸುರಕ್ಷತೆಗೆ ಶಾಸಕರ ಸೂಚನೆ: ವತ್ತಿನಣೆಯಲ್ಲಿನ ಸಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಕೆ. ಗೋಪಾಲ ಪೂಜಾರಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಇಲ್ಲಿಗೆ ಭೇಟಿನೀಡಿದ ಅವರು ವಾಹನ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯುಕ್ತಿಗೊಳಿಸಬೇಕು. ಆತಂಕ ದೂರಾಗುವ ವರೆಗೆ ಅಗ್ನಿಶಾಮಕ ವಾಹನ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ ಚಥುಷ್ಪತ ಕಾಮಗಾರಿಗಾಗಿ ನೂತವಾಗಿ ನಿರ್ಮಿಸಲಾಗಿದ್ದ ಸೇತುವೆ ಬಳಿಯ ರಸ್ತೆ ಕುಸಿದ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ರಸ್ತೆಯ ಒಂದು ಭಾಗ ಕುಸಿದಿದ್ದು ಅಪಾಯಕಾರಿಯಾಗಿ ಪರಿಣಮಿಸಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸತತ ಮಳೆಯಿಂದಾಗಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಒತ್ತಿನಣೆ ಗುಡ್ಡ ಜರಿದು ಹೆದ್ದಾರಿ ತಡೆಯುಂಟಾದ ಪ್ರದೇಶಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಭೇಟಿ ನೀಡಿ ವೀಕ್ಷಿಸಿದರು. ಇಲಾಖೆ ಹಾಗೂ ಗುತ್ತಿಗೆ ಪಡೆದ ಕಂಪೆನಿಯ ಅಭಿಯಂತರರಿಗೆ ಸತತವಾಗಿ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆಯ ಡಿಎಫ್ಓ ಅವರಿಗೆ ಕರೆಮಾಡಿದ ಶಾಸಕರು, ಕಳೆದ ಆರು ತಿಂಗಳುಗಳಿಂದ ಕಾಮಗಾರಿಯಿಂದ ಎದುರಾಗಬಹುದಾದ ಅಪಾಯದ ಮನ್ಸೂಚನ್ನೆಯನ್ನು ನೀಡಲಾಗಿತ್ತು. ಆದಾಗ್ಯೂ ಯಾರೋಬ್ಬರೂ ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ಧೋರಣೆ ತಳೆದಿದ್ದೀರಿ. ಪ್ರತಿನಿತ್ಯ ಸಾವಿರಾರು ವಾಹನಗಳು ತಿರುಗಾಡುವ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು. ನಿಮ್ಮ ನಿರ್ಲಕ್ಷ್ಯ ಅಮಾಯಕರ ಸಮಯ ಹಾಗೂ ಬದುಕಿನೊಂದಿಗೆ ಚಲ್ಲಾಟವಾಡುವಂತಿರಬಾರದು. ಕೂಡಲೇ ಎಲ್ಲರೂ ಸ್ಥಳ ಪರಿಶೀಲನೆ ನಡೆಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೆನ್ನೆಯಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಸಮೀಪದ ಒತ್ತಿನಣೆ ಗುಡ್ಡ ಮತ್ತೆ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬ್ಲಾಕ್ ಆಗಿದೆ. ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಗುಡ್ಡ ಜರಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸುಮಾರು ಒಂದೂವರೆ ಕಿ.ಮೀ ತನಕ ಸಾಲುಗಟ್ಟಿ ನಿಂತಿವೆ. ಬೆಳಿಗ್ಗೆಯಿಂದಲೇ ಮಣ್ಣು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದರೂ, ಭಾರಿ ಮಳೆಯಿಂದಾಗಿ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿಯೇ ಗುಡ್ಡದ ನೀರು ಹರಿದು ಬರುತ್ತಿದ್ದು ಕಾರ್ಯಾಚರಣೆಗೆ ತೊಡಕು ಉಂಟು ಮಾಡುತ್ತಿದೆ. ಬೈಂದೂರು ದೊಂಬೆ ಮೂಲಕ ಹಾಗೂ ಶಿರೂರು ಪೇಟೆಯಿಂದ ಮದ್ದೋಡಿ ರಸ್ತೆಯಲ್ಲಿ ಲಘು ವಾಹನಗಳಿಗೆ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದ್ದರೂ ರಸ್ತೆ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಎರಡು ದಿನಗಳ ಹಿಂದಷ್ಟೇ ಕುಸಿದಿತ್ತು: ಮೊದಲ ಮಳೆಗೆ ಗುಡ್ಡ ಕುಸಿತ ಆರಂಭವಾಗಿದ್ದು ಎರಡು ದಿನಗಳ ಹಿಂದಷ್ಟೇ ಹೆದ್ದಾರಿ ಬ್ಲಾಕ್ ಆಗಿತ್ತು. ಸತತವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಐಆರ್ಬಿ ಕಂಪೆನಿಯ ಮೇಲೆಯೂ ಕೇಸ್ ದಾಖಲಿಸಲಾಗಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆದ್ದಾರಿ ಕಾಮಗಾರಿ; ಸರಕಾರಿ ಆಸ್ಪತ್ರೆ ಅವಾಂತರ, ಹೊಸ ಸರಕಾರಿ ಬಸ್ಸು ಹಾಕಿಸಲು, ಬಸ್ಸು ನಿಲಗಡೆ ಮಾಡಲು ಒತ್ತಾಯ, ಶಿಕ್ಷಣ ಇಲಾಖೆಯೊಂದಿಗೆ ಮುಂದುವರಿದ ಗೊಂದಲ, ಸರಕಾರಿ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಹಯೋಗದ ಬಗೆಗೆ ಚರ್ಚೆ, ಕಂದಾಯ ಇಲಾಖೆ, ಆಧಾರ್ ಕಾರ್ಡ್ ರೇಷನ್ ಕಾಡ್ ಗೊಂದಲ, ಮರಳು ಅಲಭ್ಯತೆ, ಎಂಡೋಸಲ್ಪಾನ್ ಪೀಡಿತರಿಗೆ ನೀಡುತ್ತಿರುವ ಪರಿಹಾರದಲ್ಲಿ ತಾರತಮ್ಮ, ಅಧ್ಯಕ್ಷರು ಹಾಗೂ ಅವರದೇ ಪಕ್ಷದ ಸದಸ್ಯರ ನಡುವಿನ ಮಾತಿನ ಚಕಮಕಿ ಇವೇ ಮುಂತಾದ ಚರ್ಚೆ, ಗೊಂದಲ, ವಿವಾದ, ವಾದ ಪ್ರತಿವಾದಗಳಿಗೆ ಕುಂದಾಪುರ ತಾಲೂಕು ಪಂಚಾಯತ್ ಸಮಾನ್ಯ ಸಭೆ ಸಾಕ್ಷಿಯಾಯಿತು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರಂಭವಾಗುತ್ತಿದ್ದಂತೆ ತಾಲೂಕು ಪಂಚಾಯತ್ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಹದಿಮೂರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಆಯ್ಕೆಮಾಡಿರುವ ಬಗೆಗೆ ಸದಸ್ಯೆ ಜ್ಯೋತಿ ಪುತ್ರನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕೆಲವು ಸದಸ್ಯರುಗಳು ಧ್ವನಿಗೂಡಿಸಿದಾಗ ಕಾರ್ಯನಿರ್ವಹಣಾಧಿಕಾರಿಗಳು ಮರು ಆಯ್ಕೆಗೆ ಸಲಹೆ ನೀಡಿದರು. ಬಸ್ ಸೌಲಭ್ಯ ಬೇಕು: ಉಪ್ಪುಂದ…
