ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಹೊಳೆ ಬದಿಯಲ್ಲಿ ಕುಡಿಯುವ ನೀರಿಗಾಗಿ ತೆಗೆಯಲಾದ ಹೊಂಡಕ್ಕೆ 11 ವರ್ಷದ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಗುರುವಾರ ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೋಡಾಬೈಲು ಮರೂರು ಸಂಪರ್ಕದ ಮಧ್ಯ ಭಾಗದಲ್ಲಿ ಹರಿಯುವ ತೊಂಭತ್ತು ಹೊಳೆಯಲ್ಲಿ ನಡೆದಿದೆ. ಕೋಡಾಬೈಲು ಸರಸ್ವತಿ ಹಾಗೂ ಮೋಹನ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಸ್ವಾತಿ ಹಿರಿಯಳು. ತೊಂಭತ್ತು ಶ್ರೀ ದುರ್ಗಾ ಪರಮಮೇಶ್ವರಿ ಅನು ದಾನಿತ ಶಾಲೆಯ 6ನೇ ತರಗತಿಗೆ ತೇರ್ಗಡೆಯಾಗಿದ್ದ ವಿದ್ಯಾರ್ಥಿನಿ. ಘಟನೆ: ಸ್ವಾತಿ ಹಾಗೂ ಸಂಬಂಧಿಕರ ಮಕ್ಕಳೊಂದಿಗೆ ಮನೆ ಸಮೀಪದಲ್ಲಿ ನೀರಿಲ್ಲದೇ ಬತ್ತಿದ ಹೊಳೆಯ ಕಡೆಗಳಲ್ಲಿ ಆಟವಾಡಲು ಹೋಗಿದ್ದರು. ಆ ಸಂದರ್ಭದಲ್ಲಿ ಸ್ವಾತಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಜತೆಗಿದ್ದ ಮಕ್ಕಳು ಕೂಡ ಆಟವಾಡುತ್ತಿದ್ದರು. ಮಕ್ಕಳಿಗೆ ಸ್ವಾತಿ ಕಾಣದ್ದರಿಂದ ಗಿಡದ ನಡುವೆ ಅಡಗಿ ಕೊಂಡಿರಬೇಕೆಂದು ಹುಡುಕಾಡಿದ್ದಾರೆ. ಸ್ವಲ್ಪ ಹೊತ್ತಿನ ಅನಂತರ ಮಕ್ಕಳು ಸ್ವಾತಿಯನ್ನು ಮನೆಯ ತನಕ ಹುಡುಕಿಕೊಂಡು ಹೋಗಿದ್ದಾರೆ. ಮನೆಯವರಲ್ಲಿ ಮಕ್ಕಳು ಸ್ವಾತಿಯನ್ನು ಹುಡುಕಿದರೂ ಸಿಗಲಿಲ್ಲವೆಂದು ತಿಳಿಸಿದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿ ಗ್ರಾಮದ ವಿನಾಯಕ ಸೋಮಿಲ್ ಸಮೀಪದ ನಿವಾಸಿ ಹರೀಶ ಜಿ.ಕೆ. (26) ಅವರು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ಕುಟುಂಬದ ಆಧಾರಸ್ತಂಭವಾಗಿದ್ದ ಹರೀಶ ಜಿ.ಕೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಇವರ ಎರಡೂ ಮೂತ್ರಪಿಂಡಗಳು ವೈಫಲ್ಯವಾಗಿದ್ದು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂ.ಗಳನ್ನು ಮೂತ್ರಪಿಂಡದ ಚಿಕಿತ್ಸೆಗಾಗಿ ಖರ್ಚು ಮಾಡಿರುವ ಇವರು ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಕಂಗಾಲಾಗಿದ್ದಾರೆ. ಮನೆಯಲ್ಲಿ ದುಡಿಯುವವರು ಬೇರೆ ಯಾರೂ ಇಲ್ಲವಾದ್ದರಿಂದ ಈ ಕುಟುಂಬ ಭಾರೀ ಅತಂತ್ರತೆಯಲ್ಲಿ ಸಿಲುಕಿದೆ. ನೆರವಿಗೆ ಮನವಿ: ಕಳೆದ ನಾಲ್ಕು ತಿಂಗಳಿನಿಂದ ಮೂತ್ರಪಿಂಡಗಳ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಹರೀಶ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವ ಅನಿವಾರ್ಯತೆ ಇದೆ. ಡಯಾಲಿಸಿದ್ ಹಾಗೂ ಔಷಧೋಪಚಾರಕ್ಕಾಗಿ ಪ್ರತಿವಾರ ಸುಮಾರು 10 ಸಾವಿರ ರೂ.ಗಳ ಅವಶ್ಯತೆ ಇದ್ದು ಇಷ್ಟೊಂದು ಹಣವನ್ನು ಹೊಂದಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಭಟ್ಕಳ: ತಾಲೂಕಿನ ಅನಂತವಾಡಿ ಸಮೀಪ ರಾ.ಹೆ 66ರಲ್ಲಿ ಬೆಳಿಗ್ಗೆ ಖಾಸಗಿ ಬಸ್ ಹಾಗೂ ಟೆಂಪೋ ನಡುವಿನ ನಡೆದ ಭೀಕರ ಅಪಘಾತದಲ್ಲಿ ಮದುಮಗಳು ಸೇರಿದಂತೆ 7 ಮಂದಿ ದಾರುಣವಾಗಿ ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ವರದಿಯಾಗಿದೆ. ಮೃತರನ್ನು ಮಧುಮಗಳು ದಿವ್ಯಾ ಕುರ್ಡೇಕರ್ (35), ಪಾಲಾಕ್ಷಿ (42), ಬೇಬಿ (38), ಸುಬ್ರಹ್ಮಣ್ಯ (15), ಖಾಸಗಿ ಬಸ್ ಚಾಲಕ ವಾಲ್ಮೀಕಿ (35), ಟೆಂಪೋ ಚಾಲಕ ನಾಗಪ್ಪ ಗಣಿಗಾರ್ (48) ಎಂದು ಗುರುತಿಸಲಾಗಿದೆ. ಸಿರಸಿ-ಧಾರವಾಡದಿಂದ ಮದುವೆಯ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಹೊನ್ನಾವರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಅನಂತವಾಡಿ ಬಳಿ ಮುಖಮುಖಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಟೆಂಪೋ ಮಗುಚಿ ಬಿದ್ದಿದ್ದು ಬಸ್ಸಿನ ಮುಂಭಾಗ ನಚ್ಚುಗುಜ್ಜಾಗಿದೆ. ಗಾಯಾಳುಗಳನ್ನು ಭಟ್ಕಳ, ಮುರ್ಡೇಶ್ವರ, ಕುಂದಾಪುರ ಹಾಗೂ ಮಣಿಪಾಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಭಟ್ಕಳ ಸಮೀಪ ಅನಂತವಾಡಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ದಾಖಲಾದ ಕುಂದಾಪುರ ಖಾಸಗಿ ಆಸ್ಪತ್ರೆಗೆ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಭೇಟಿ ನೀಡಿ, ಗಾಯಗಳುಗಳಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರಣ ಅಪಘಾತಗಳು ಹೆಚ್ಚಾಗಿದೆ. ರಸ್ತೆ ಸೂಚನಾ ನಿಯಮ ಅನುಸರಿಸಲು ವಿಫಲರಾದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ಬಗ್ಗೆ ಎಸ್ಪಿ, ಎಎಸ್ಪಿ ಮತ್ತು ರಸ್ತೆ ನಿರ್ಮಾಣದ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತೇನೆ. ಕೆಲಸ ಸರಿಯಾಗಿ ನಿರ್ವಹಿಸದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಆದಾಯ ತೆರಿಗೆ ಇಲಾಖೆಯಿಂದ ಗಾಯಗೊಂಡ ವ್ಯಕ್ತಿಗಳಿಗೆ 5,೦೦೦ ರೂ. ಹಾಗೂ ಹೆಚ್ಚಿನ ಅನುದಾನದ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಗಾಯಗೊಂಡವರಿಗೆ ಸಹಾಯ ಮಾಡಲು ಪೊಲೀಸ್ ಇಲಾಖೆ ಸಿದ್ಧವಿದೆ ಎಂದರು. ಕಾರವಾರ ಎಸ್ಪಿ ವಿನಾಯಕ್ ಪಟೇಲ್, ಡಿವೈಎಸ್ಪಿ ಪ್ರವೀಣ್ ಕುಮಾರ್ ಮತ್ತು ಪೋಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಇದ್ದರು. ಭಟ್ಕಳ: ಭೀಕರ ಅಪಘಾತದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಜವುಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ಬುಧವಾರ ತನ್ನ 60ನೇ ಹುಟ್ಟುಹಬ್ಬದ ಸಲುವಾಗಿ ಚಂಡಿಕಾ ಹೋಮ ಸೇವೆ ಸಲ್ಲಿಸಿದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಆರ್ಥಿಕವಾಗಿ ಬಲಿಷ್ಠವಾಗಿರುವ ಮುಜರಾಯಿ ದೇವಸ್ಥಾನಗಳನ್ನು ಗುರುತಿಸಿ ಆ ಮೂಲಕ ಮುಜರಾಯಿ ಇಲಾಖೆಯ ಆದಾಯವಿಲ್ಲದ ಸಣ್ಣ ದೇವಸ್ಥಾನಗಳನ್ನು ದತ್ತು ಸ್ವೀಕರಿಸಿ ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೊಲ್ಲೂರು ದೇವಸ್ಥಾನದಲ್ಲಿರುವ 76 ನೌಕರರನ್ನು ಖಾಯಂಗೊಳಿಸುವ ಬಗ್ಗೆ ಸರಕಾರದೊಡನೆ ಚರ್ಚಿಸಲಾಗಿದ್ದು ಅತೀ ಶೀಘ್ರದಲ್ಲೇ ಅವರನ್ನು ಖಾಯಂಗೊಳಿಸಲಾಗುವುದು ಎಂದರು. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿನ ಕಾರ್ಯನಿರ್ವಹಧಿಣಾಕಾರಿ ಸಹಿತ ಖಾಲಿ ಇರುವ ಹುದ್ದೆಗಳಿಗೆ ತತ್‌ಕ್ಷಣ ನೇಮಕ ಮಾಡಲಾಗುವುದು. ಕೊಲ್ಲೂರಿನಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾದ ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಭೋಜನ ಶಾಲೆ ನಿರ್ಮಾಣದ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿಗ್ಗಜರನ್ನು ಗುರುತಿಸಿ ನೀಡಲಾಗುತ್ತಿರುವ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯು ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ದೊರಕಿದೆ. ಪ್ರಸ್ತುತ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಅವರು ಕನ್ನಡ ನಾಡು ನುಡಿಗಾಗಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕತಾರ್‌ನಲ್ಲಿ ಪಸರಿಸುತ್ತಿರುವ ಸುಬ್ರಹ್ಮಣ್ಯ ಅವರು ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಕರ್ನಾಟಕ ಸಂಘದ ಮೂಲಕ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013-15ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಕಾರ್ಯಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ…
ಹತ್ತು ಹಲವು ಸೌಲಭ್ಯಗಳೊಂದಿಗೆ ಉಚಿತ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕುಂದಾಪ್ರ ಡಾಟ್ ಕಾಂ ವರದಿ. ಗಂಗೊಳ್ಳಿ: ಸರಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗಿ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವ ಕಾಲಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ಮಾತ್ರ ತಾವು ಕಲಿತ ಸರಕಾರಿ ಶಾಲೆಗಳ ಉಳಿವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಸರಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ದೊರೆಯುವಂತೆ ಮಾಡುವುದರ ಜೊತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಸತತವಾಗಿ ಶ್ರಮಿಸುತ್ತ ತಾವು ಕಲಿತ ತಮ್ಮೂರಿನ ಶಾಲೆಯ ಶ್ರೇಯಸ್ಸಿನಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ಸರಕಾರಿ ಶಾಲೆಗಳ ಉಳಿವಿನ ಬಗೆಗೊಂದು ಆಶಾಭಾವನೆ ಮೂಡಿಸಿದೆ. ಶತಮಾನ ಪೂರೈಸಿರುವ ಗಂಗೊಳ್ಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಇಂತಹದ್ದೊಂದು ಪ್ರಯತ್ನವನ್ನು ಕಳೆದ ಎರಡು ದಶಕಗಳ ಹಿಂದಿನಿಂದಲೇ ಆರಂಭಿಸಿಕೊಂಡು ಬಂದಿದ್ದು ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಜೊತೆಯಾಗಿದ್ದಾರೆ. ಹಳೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದಾಗಿ ಪ್ರಸ್ತುತ ವರ್ಷದಿಂದ ಶಾಲೆಗೆ ಮಕ್ಕಳ ದಾಖಲಾತಿಯೂ ಹೆಚ್ಚಿದೆ. ಶತಮಾನ ಕಂಡ ಶಾಲೆ: 1895ರಲ್ಲಿ ದಿ. ಶಾಬುದ್ದೀನ್ ಅಬ್ದುರ್ರಹೀಮ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸೂರು ಗ್ರಾಮದ ವಿಜಿತ್ ಕುಮಾರ್ ಅವರಿಗೆ ಇಟಲಿಯ ಪ್ರತಿಷ್ಠಿತ ಪಾಲಿಟೆಕ್ನಿಕೋ ಡಿ ಮಿಲಾನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ವಿಜಿತ್ ಕುಮಾರ್ ಅವರ ‘ಹೈಡ್ರೋಜನ್ ಅಂಡ್ ಹ್ಯಾಲೊಜೆನ್ ಬಾಂಡಿಂಗ್; ಟವರ್ಡ್ಸ್ ಮೊಲಿಕ್ಯುಲರ್ ರೆಕೊಗ್ನಿಷನ್ ಅಂಡ್ ಸಪರೇಷನ್’ ಎಂಬ ಮಹಾಪ್ರಭಂದಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇಟಲಿಯ ಗ್ಯುಸೆಪ್ಪಿ ರೆಸ್ನಾಟಿಯವರ ಮಾರ್ಗದರ್ಶನದಲ್ಲಿ ಮತ್ತು ಜಪಾನ್ ನ ಟೋಕಿಯೋ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪಿಎಚ್‌ಡಿ ಪೂರೈಸಿದ್ದಾರೆ. ವಿಜತ್ ಅವರು ಇಡೂರು-ಕುಂಜ್ಞಾಡಿಯ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಂಡ್ಸೆಯಲ್ಲಿ ಪಡೆದಿರುತ್ತಾರೆ. ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು, ಮಡಿಕೇರಿಯ ಎಫ್.ಎಂ.ಕಾರ್ಯಪ್ಪ ಕಾಲೇಜು ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಳೆ ಪದವಿ ತನಕದ ಶಿಕ್ಷಣ ಪೂರೈಸಿದ್ದರು. ತಾಲೂಕಿನ ಹೊಸೂರು ಗ್ರಾಮದ ಸರೋಜಿನಿ ಮತ್ತು ಮಂಜುನಾಥ ಶೆಟ್ಟಿ ದಂಪತಿಯ ಪುತ್ರರಾಗಿರುವ ವಿಜಿತ್ ಕುಮಾರ್, ಇಟಲಿಯ ಪಾಲಿಟೆಕ್ನಿಕೋ ಡಿ ಮಿಲಾನ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಹಂಗಳೂರು ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭೆ ಜರುಗಿತು. ಈ ಸಂದರ್ಭದಲ್ಲಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ, ಆಂಜನೇಯ ಶಕ್ತಿ, ಸ್ವಾಮಿನಿಷ್ಠೆ, ಯುಕ್ತಿಯ ಮೂಲಕ ಪ್ರಸಿದ್ದಿ ಪಡೆದು ನೆಚ್ಚಿನ ದೇವರಾಗಿ ಜನರ ಕಷ್ಟ ನಿವಾರಿಸುತ್ತಾ ಬಂದಿದ್ದಾನೆ. ವಿದ್ಯಾರ್ಥಿಗಳು ತಮ್ಮ ಜೀವನಲ್ಲಿ ಧಾರ್ಮಿಕತೆ ಅಳವಡಿಸಿಕೋಳ್ಳಬೇಕು.ದೇವರ ಮೇಲೆ ನಂಬಿಕೆಯಿಂದ ಮನುಷ್ಯನು ಸಾರ್ಥಕ ಜೀವನ ನಡೆಸಲು ಸಾದ್ಯವಾಗುತ್ತದೆ ಎಂದರು. ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ ಧಾರ್ಮಿಕ ಸಭೆ ಉದ್ಘಾಟಿಸಿದರು. ಕೋಟೇಶ್ವರ ಜಿಪಂ ಸದಸ್ಯೆ ಲಕ್ಷ್ಮೀ ಎಂ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜ ಆರ್ ಚಂದನ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು ಉಪಸ್ಥಿತರಿದ್ದರು. ದೇವಸ್ಥಾನ ಸಂಸ್ಥಾಪಕ ಸುರೇಶ ಡಿ ಪಡುಕೋಣೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ತಾಲೂಕ್ ದೇವಾಡಿಗರ…
ತಾಯಿಯ ತಮಾಷೆ ಹೊಸ ಸೂತ್ರಕ್ಕೆ ಪ್ರೇರಣೆ [quote bgcolor=”#ffffff” bcolor=”#dd3333″ arrow=”yes” align=”right”]ಅಮ್ಮಾ ನನ್ನ ಶಿಕ್ಷಕರು ಕೊಟ್ಟಿರುವ ರೇಖಾಗಣಿತದ ಈ ಲೆಕ್ಕದಲ್ಲಿ ಬಾಹುಗಳ ಸಂಖ್ಯೆ ಕಂಡುಹಿಡಿಯಲು 2 ಸೂತ್ರಗಳ ಬದಲು ಒಂದೇ ಸೂತ್ರ ಯಾಕೆ ಕೊಟ್ಟಿಲ್ಲ ಎಂದು ಕೇಳಿದ. ಅದಕ್ಕೆ ಅವನ ತಾಯಿ ತಮಾಷೆಗಾಗಿ ಈ ರೀತಿಯ ಸೂತ್ರ ಇದುವರೆಗೆ ಯಾರೂ ಕಂಡುಹಿಡಿದಿಲ್ಲ. ಬೇಕಾದರೆ ನೀನೇ ಹೊಸ ಸೂತ್ರ ಕಂಡುಹಿಡಿ ಎಂದು ತಮಾಷೆ ಮಾಡಿದರು. ಹೌದು ನಾನೇಕೆ ಹೊಸ ಸೂತ್ರ ಕಂಡು ಹಿಡಿಯಬಾರದು ಎಂದು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿದ ಆತ ಸೂತ್ರ ಕಂಡುಹಿಡಿಯಲು ಮುಂದಾದ. [/quote] ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಭಾವಿಸುವ ವಿದ್ಯಾರ್ಥಿಗಳ ನಡುವೆ ಪಠ್ಯ ಪುಸ್ತಕದ ಲೆಕ್ಕಕ್ಕೆ ಸಡ್ಡು ಹೊಡೆದ ಬಾಲಕನೋರ್ವ ತಾನೇ ಹೊಸ ಗಣಿತ ಸೂತ್ರವೊಂದನ್ನು ಕಂಡುಹಿಡಿದು ಸೈ ಎನಿಸಿಕೊಂಡಿದ್ದಾನೆ. ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೂರ್ಣಪ್ರಜ್ಞ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣ…
