Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ | ಸುತ್ತಲೂ ಗಿಡಮರಗಳಿಂದ ಕಂಗೊಳಿಸುವ ಪ್ರಶಾಂತ ಪರಿಸರದ ನಡುವೆ ಪ್ರಾಚೀನ ಮಾದರಿಯ ಶಿಕ್ಷಣ ಪದ್ದತಿಯನ್ನು ನೆನಪಿಸುವ ಸುಂದರ ವಾತಾವರಣ. ಇದರ ನಡುವೆ ಆಧುನಿಕ ಶಿಕ್ಷಣದ ಎಲ್ಲಾ ಆಯಾಮಗಳನ್ನು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದಾದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಖ್ಯಾತಿವೆತ್ತಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು. ಕ್ಯಾಂಪಸ್‌ನ ಹೊರನೋಟದಲ್ಲೇ ಒಂದು ಸಾತ್ವಿಕ ಶೈಕ್ಷಣಿಕ ವಾತಾವರಣ ಮನಸ್ಸಿನ ಒಡಮೂಡುತ್ತದೆ. ನೋಟಕ್ಕೆ ನಿಲುಕಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪಿಯು ಕಾಲೇಜು ತನ್ನದೇ ಆದ ಹತ್ತಾರು ವೈಶಿಷ್ಟ್ಯತೆಗಳಿಂದ ಇಂದು ಮನೆಮಾತಾಗಿದೆ. ಶಿಕ್ಷಣವೂ ಅರಿವು, ಉದ್ಯೋಗವನ್ನು ನೀಡುವುದರ ಜೊತೆಗೆ ಅದು ಪ್ರತಿ ವಿದ್ಯಾರ್ಥಿಯನ್ನು ಒಬ್ಬ ಸಜ್ಜನ ನಾಗರಿಕನನ್ನಾಗಿಸಬೇಕು ಎಂಬ ಮಾತಿಗೆ ಕಟಿಬದ್ಧರಾಗಿ, ವಿಶ್ವಾಸವೇ ನಮ್ಮ ಯಶಸ್ಸೆಂಬ ಧ್ಯೇಯವಾಕ್ಯದೊಂದಿಗೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಮೂಲಕ ಆರಂಭಗೊಂಡ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ಚಲ್ಲಿ ಆಂತರ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟೀಮ್ ಜಿಎಸ್‌ಬಿ ಕುಂದಾಪುರದ ಆಶ್ರಯದಲ್ಲಿ ಪೇಟೆ ಶ್ರೀ ವೆಂಕಟರಮಣ ಟ್ರೋಫಿ-2017 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಪುರುಷರ ವಿಭಾಗದಲ್ಲಿ ಹರಿ ಓಂ ಎಸ್‌ಎಲ್‌ವಿಟಿ ಉಡುಪಿ ಪ್ರಥಮ, ಶ್ರೀ ರಾಮ ಸೂಪರ್‌ಕಿಂಗ್ಸ್ ಕೆಸರಗದ್ದೆ ದ್ವಿತೀಯ, ಸ್ಪಾರ್ಕ್ ಎಸ್‌ಎಲ್‌ವಿಟಿ ಉಡುಪಿ ತೃತೀಯ, ಹರಿ ಓಂ ಗಂಗೊಳ್ಳಿ ಚತುರ್ಥ ಸ್ಥಾನವನ್ನು ಪಡೆದುಕೊಂಡರು. ಉತ್ತಮ ಬ್ಯಾಟ್ಸ್‌ಮೆನ್ ಬಹುಮಾನವನ್ನು ಶ್ರೀ ರಾಮ ಸೂಪರ್‌ಕಿಂಗ್ಸ್ ಕೆಸರಗದ್ದೆ ತಂಡದ ಬಾಲ ನಾಯಕ್, ಉತ್ತಮ ಎಸೆತಗಾರ ಬಹುಮಾನವನ್ನು ಕಟಪಾಡಿಯ ಹರಿ ಓಂ ತಂಡದ ಶರತ್ ಪ್ರಭು, ಉತ್ತಮ ಕೀಪರ್ ಆಗಿ ಸತೀಶ್ ಕಾಮತ್ ಬಹುಮಾನ ಸ್ವೀಕರಿಸಿದರು. ಮ್ಯಾನ್ ಆಫ್ ದಿ ಸೀರಿಸ್‌ನ್ನು ನಾಗೇಶ್ ಪೈ ತನ್ನದಾಗಿಸಿಕೊಂಡರು. ಉದ್ಘಾಟನೆ: ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ವೆಂಕಟರಮಣ ದೇವ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಕೃಷ್ಣ ಶೆಣೈ ವಹಿಸಿದ್ದು, ಕುಂದಾಪುರದ ಪೇಟೆ…

Read More

ಸಂಘಟಿತ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣ ಸಾಧ್ಯ: ಕೆ. ಗೋಪಾಲ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳವಾಡಿ ಮಾರಿಕಾಂಬಾ ದೇವಸ್ಥಾನ ಧಾರ್ಮಿಕ ಐತಿಹ್ಯ ಹೊಂದಿರುವ ಕ್ಷೇತ್ರವಾಗಿದ್ದು ಸಾವಿರಾರು ಭಕ್ತರು ನಂಬಿ ಬಂದಿದ್ದಾರೆ. ಊರಿನವರ ಸಂಘಟಿತರಾಗಿ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡ ಭವ್ಯ ಮಂದಿರ ನಿರ್ಮಾಣ ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಅಮೂಲಾಗ್ರ ಜೀರ್ಣೋದ್ದಾರದ ಪ್ರಯುಕ್ತ ನಿರ್ಮಾಣವಾಗಲಿರುವ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವಸ್ಥಾನಗಳ ಜೀರ್ಣೋದ್ದಾರದಿಂದ ಊರಿಗೆ ಶ್ರೇಯಸ್ಸು. ಕರಾವಳಿಯ ಹಲವು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿದ್ದು ಉಚ್ರಾಯ ಸ್ಥಿತಿಯಲ್ಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಅಪಣ್ಣ ಹೆಗ್ಡೆ, ಮಾಜಿ ರೋಟರಿ ಗವರ್ನರ್ ಜಗನ್ನಾಥ ಶೆಟ್ಟಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಹರೀಶ್ ಶೆಟ್ಟಿ, ಮಾಜಿ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ, ಬ್ಯೆ.ವ್ಯ.ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಯಾವುದೇ ಟ್ಯೂಶನ್ ತರಗತಿಗಳಿಗೆ ಹೋಗದೇ ತನ್ನದೇ ಆದ ಸ್ವಂತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಗಂಗೊಳ್ಳಿಯ ಹೆಮ್ಮೆಯ ವಿದ್ಯಾರ್ಥಿನಿ ರಾಧಿಕಾ ಪೈ ಸಾಧನೆ ಶ್ಲಾಘನೀಯ. ಮುಂದೆಯೂ ಇಂತಹ ಸಾಧನೆಗಳನ್ನು ಮಾಡುವಂತಾಗಲಿ ಎಂದು ಕುಂದಾಪುರದ ವಕೀಲ, ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು. ಅವರು  ಗಂಗೊಳ್ಳಿಯಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ವತಿಯಿಂದ ಜರಗಿದ ಸರಳ ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯ ಟಾಪರ್ ರಾಧಿಕಾ ಪೈ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಭಾಸ್ಕರ ಖಾರ್ವಿ ಹಾಗೂ ಸಮಿತಿಯ ಹಿರಿಯ ಸದಸ್ಯ ರಾಮದಾಸ ಖಾರ್ವಿ ಶುಭ ಹಾರೈಸಿದರು. ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಜಯರಾಮ ದೇವಾಡಿಗ, ಕುಂದಾಪುರದ ವಕೀಲ ಹರ್ಷರಾಜ್, ಗಂಗೊಳ್ಳಿಯ ವಕೀಲ ಆನಂದ ಕೆ., ಎಂ.ಮಾಧವ ಪೈ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನಲ್ಲಿ ನಡೆದ ಬೈಕ್-ಕಾರು ಅಪಘಾತವೊಂದರಲ್ಲಿ ಕುಂದಾಪುರ ಮೂಲದ ಯುವತಿ ಸೇರಿದಂತೆ ಬೈಕ್ ಚಲಾಯಿಸುತ್ತಿದ್ದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಮೊಳಹಳ್ಳಿಯ ಸುರೇಶ್ ಕುಲಾಲ್ ಎಂಬುವವರ ಪುತ್ರಿ ರಶ್ಮಿತಾ ಕುಲಾಲ್ (19) ಹಾಗೂ ಆಕೆಯ ಸಂಬಂಧಿ ಹೆಬ್ರಿ ಮೂಲದ ಯುವಕ ಮೃತ ದುರ್ದೈವಿಗಳು. ದ್ವಿತೀಯ ಪಿಯುಸಿ ಮುಗಿಸಿದ್ದ ರಶ್ಮಿತಾ ಬೆಂಗಳೂರಿನ ಸಂಬಂಧಿ ಮನೆಗೆ ತೆರಳಿದ್ದಳು. ಕೆಲಸ ನಿಮಿತ್ತ ಬೈಕ್‌ನಲ್ಲಿ ಸಂಬಂಧಿಯೊಂದಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಶ್ಮಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಯವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆನ್ನಲಾಗಿದೆ. ಬೆಂಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಅರ್ಥಪೂರ್ಣ ಸ್ಥಾನವಿದೆ. ದೇವರು ವಾಸಿಸುವ, ದೇವರು ಅಸ್ತಿತ್ವದಲ್ಲಿರುವ ದೇವಾಲಯವು ದೇವರು ಹಾಗೂ ಮನುಷ್ಯರ ನಡುವೆ ನಿಕಟ ಸಂಪರ್ಕ ಕಲ್ಪಿಸುವ ಪವಿತ್ರವಾದ ತಾಣವಾಗಿದೆ. ದೇವರು ನಮ್ಮ ಮಧ್ಯ ಸದಾ ನೆಲೆ ನಿಲ್ಲುತ್ತಾನೆ, ಜನರ ಮಧ್ಯೆ ಸದಾ ವಾಸಿಸುತ್ತಾನೆ. ಕ್ರೈಸ್ತ ಸಮುದಾಯದವರಿಗೆ ದೇವಾಲಯ ಸ್ವರ್ಗದ ದಾರಿ. ಪವಿತ್ರ ಪ್ರೀತಿಯ ತಾಣವಾಗಿರುವ ದೇವಾಲಯಕ್ಕೆ ಬಂದು ದೇವರ ಆಶೀರ್ವಾದ, ಕೃಪಾವರ ಬೇಡಿದರೆ ದೇವರು ಯಾರನ್ನೂ ಬರಿಗೈಯಲ್ಲಿ ಕಳುಹಿಸದೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ನವೀಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಆಶೀರ್ವಚನ ಹಾಗೂ ಉದ್ಘಾಟನಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 400 ವರ್ಷಗಳ ಅಧ್ಭುತ ಇತಿಹಾಸವಿರುವ ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ದೇವಾಲಯ ಯಾವುದೇ ಜಾತಿ ಮತಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮಾಜದ ಜನರು ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ನ್ಯೂ ಉಷಾ ಹೋಟೆಲ್ ಮೊದಲನೇ ಮಹಡಿಯಲ್ಲಿ ನಿಯೋ ಬ್ರಾಂಡ್ ಫ್ಯಾಕ್ಟರಿ ಶೂಸ್ & ಫ್ಯಾನ್ಸಿ ಲೋಕಾರ್ಪಣೆಗೊಂಡಿತು. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದರು. ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ನಿರ್ದೇಶಕ ಡಾ. ರಂಜನ್ ಶೆಟ್ಟಿ ಫ್ಯಾನ್ಸಿ ವಿಭಾಗವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ನಿಯೋ ಬ್ರಾಂಡ್ ಫ್ಯಾಕ್ಟರಿ ಶೂಸ್ & ಫ್ಯಾನ್ಸಿ ಪಾಲುದಾರರದ ಅವಿನಾಶ್ ರೈ, ಸುಹಾಸ್ ಶೆಟ್ಟಿ, ಉದ್ಯಮಿಗಳಾದ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ, ದಿವ್ಯಾಧರ ಶೆಟ್ಟಿ ಕೆರಾಡಿ, ರಾಘವೇಂದ್ರ ನೆಂಪು, ಪ್ರದೀಪ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದ ಶ್ರೀ ರಾಮ ಭಜನಾ ಮಂದಿರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ನಾವುಂದ, ಶುಭದಾ ಎಜ್ಯುಕೇಶನ್ ಟ್ರಸ್ಟ್ (ರಿ) ನಾವುಂದ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಾವುಂದ, ಶ್ರೀ ಗುರು ನಿತ್ಯಾನಂದ ಸೌಹಾರ್ದ ಸಹಕಾರಿ ನಾವುಂದ ಆಶ್ರಯದಲ್ಲಿ ನಾವುಂದ ಗ್ರಾಮದ ಬಿಲ್ಲವ ಸಮಾಜದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘ ನಾವುಂದ ಇದರ ಅಧ್ಯಕ್ಷರಾದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶುಭದಾ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎನ್.ಕೆ.ಬಿಲ್ಲವ ಉಪಾಧ್ಯಕ್ಷರಾದ ಶುಭದಾ ಎನ್. ಬಿಲ್ಲವ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಾವುಂದ ಇದರ ಅಧ್ಯಕ್ಷರಾದ ಮುತ್ತ ಬಿಲ್ಲವ, ಗರಡಿ ಆಡಳಿತ ಮೊಕ್ತೇಶ್ವರ ಶೇಖರ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ ಪೂಜಾರಿ ಹಾಗೂ ಮಹೇಂದ್ರ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಇದರ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಸಿಂಗಾರಿ ಪೂಜಾರಿ ಉಪಸ್ಥಿತರಿದ್ದರು. ಶಂಕರ ಎಸ್. ಪೂಜಾರಿ ಸ್ವಾಗತಿಸಿ…

Read More

ಸ್ಪಷ್ಟ ಗುರಿಯಿದ್ದರೆ ಯಶಸ್ವು ಸಾಧ್ಯ: ಎನ್. ಕೆ ಬಿಲ್ಲವ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳು ಉನ್ನತ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯವಿದೆ. ಬಡತನದಲ್ಲಿ ಹುಟ್ಟುವುದು ಸಹಜ ಆದರೆ ಬಡತನದಲ್ಲಿ ಬದುಕು ಅಂತ್ಯವಾಗಬಾರದು. ಪ್ರತಿಭೆಗೆ ಯಾವುದೇ ಬಡತನವಿಲ್ಲ. ಅದನ್ನು ಸದುಪಯೋಗಪಡಿಸಿಕೊಳ್ಳುವ ಚಾಕಚಕ್ಯತೆಯನ್ನು ಕರಗತಗೊಳಿಸಿಕೊಳ್ಳಬೇಕು ಎಂದು ಶಾಲಾ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಸಂಸ್ಥಾಪಕ ಎನ್.ಕೆ. ಬಿಲ್ಲವ ಹೇಳಿದರು. ಅವರು ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೬ ಅಂಕ ಪಡೆದ ವಿದ್ಯಾರ್ಥಿನಿ ಶ್ವೇತಾ ನಾಗಪ್ಪ ಹೆಬ್ಬಾರ್ ಅವರಿಗೆ ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಸಮಯದಲ್ಲಿ ಆಯಾ ದಿನದ ಪಠ್ಯ ಕ್ರಮವನ್ನು ಅದೇ ದಿನವೇ ಅಭ್ಯಾಸ ನಡೆಸುವುದರಿಂದ ಪರೀಕ್ಷೆಯನ್ನು ಎದುರಿಸಲು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಇಂದಿನ ಪೈಪೋಟಿಯುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯವಶ್ಯವಾಗಿದೆ. ನಮ್ಮ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೋತ್ಸಾಹಗಳನ್ನು ಮಾಡುವ ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದರು. ಕಾರ್ಯಕ್ರಮದಲ್ಲಿ ಶುಭದಾ ಸಂಸ್ಥೆಯ ಶುಭದಾ ಎನ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತೋಟಗಾರಿಕೆ ಮತ್ತು ಕೈತೋಟ ನಿರ್ವಹಣೆ ಜೀವಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬಲ್ಲುದು. ಮಣ್ಣು ಗುಣವಿಶೇಷತೆ ಮತ್ತು ಹವಮಾನಕ್ಕನುಸಾರವಾಗಿ ಪ್ರೀತಿಯಿಂದ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಜೀವನವನ್ನು ನೋಡುವ ದೃಷ್ಠಿಕೋನವೇ ಬದಲಾಗಬಲ್ಲುದು. ಕ್ರೀಯಾಶೀಲ ಬದುಕಿಗೆ ಕೈತೋಟ ನಿರ್ವಹಣೆ ಉತ್ತಮ ಉಪಾಯ ಎಂದು ನಿವೃತ್ತ ಕೃಷಿ ಅಧಿಕಾರಿ ವಿ. ಹೆಚ್ ನಾಯಕ್ ಹೇಳಿದರು. ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ್ ಸಭಾ ಭವನದಲ್ಲಿ ನಡೆದ ತೋಟಗಾರಿಕೆ ಮತ್ತು ಕೈತೋಟ ನಿರ್ವಹಣೆ ಕುರಿತು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಭಾಗವಹಿಸಿದ ಆಸಕ್ತರ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತ, ಸಂದೇಹ ನಿವಾರಿಸಿ ಉಪಯುಕ್ತ ಮಾಹಿತಿ ಮತ್ತು ತರಕಾರಿ ಬೀಜಗಳ ಸ್ಯಾಂಪಲ್ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಸುದ್ಧಿಮನೆ ವಾರ ಪತ್ರಿಕೆಯ ಸಂಪಾದಕ ಸಂತೋಷ್ ಕೋಣಿ ಮಾತನಾಡಿ ಜೀವನ ಶುದ್ಧಿಯಾಗಬೇಕಾದರೆ ಮನುಷ್ಯನ ಮನಸ್ಸು ಮತ್ತು ವಾತಾವರಣ ಶುದ್ಧಿಯಾಗಬೇಕು. ವನಸ್ಪತಿಗಳು ಕಲುಷಿತ ಗಾಳಿಯನ್ನು ಉಪಯುಕ್ತ ಆಕ್ಸಿಜನ್ ಆಗಿ ಪರಿವರ್ತಿಸುವಲ್ಲಿ ವಹಿಸಿ ಗೋವುಗಳ ಪಾತ್ರ ಮಹತ್ತರವಾದದ್ದು ಎಂದರು.…

Read More