ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನ, ಹಟ್ಟಿಕುದ್ರು ಇದರ ೧೧ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಸಕಲ ಧಾರ್ಮಿಕ ವಿಧಿವಿದಾನಗಳೋಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ಶ್ರೀ ನಾಗ ದೇವರ ಸಂದರ್ಶನ ಸೇವೆ, ಶ್ರೀ ಬೊಬ್ಬರ್ಯ ದೇವರ ಸನ್ನಿಧಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡು ವರ್ಷಂಪ್ರತಿಯಂತೆ ಸೇವೆ ಸಲ್ಲಿಸಿದರು. ಸನ್ಮಾನ : ದೇವಳದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷವೇದಿಕೆಯಲ್ಲಿ ಯಕ್ಷ ಧ್ರುವ ಬಿರುದಾಂಕಿತ ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆಯವರು ದೇವಳ ಹಾಗೂ ಹಟ್ಟಿಕುದ್ರು ಊರಿನ ಹತ್ತು ಸಮಸ್ತರ ವತಿಯಿಂದ ಸನ್ಮಾನಿಸಿದರು. ಸನ್ಮಾನವನ್ನು ನೆರವೇರಿಸಿದ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ ಹಟ್ಟಿಕುದ್ರುವಿನ ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನದಲ್ಲಿ ಯಕ್ಷರಂಗದಲ್ಲಿ ಅಪ್ರತಿಮ ಸಾಧನೆ ಮಾಡಿರುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೇಲ್ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ೩೦ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ಗಂಗೊಳ್ಳಿ ಇವುಗಳ ೨೪ನೇ ವಾರ್ಷಿಕೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ರವರ ೧೨೬ನೇ ಜನ್ಮದಿನಾಚರಣೆ ಕಾರ್ಯಕ್ರಮ ಮೇಲ್ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಮಾತನಾಡಿ ,ಯುವಕ ಮಂಡಲವು ೩೦ ವರ್ಷಗಳಲ್ಲಿ ಸಾಧಿಸಿದ ಸಾಧನೆ ಅಪಾರವಾದುದು. ಈ ಭಾಗದ ಜನರಿಗೆ ಸಾಕಷ್ಟು ಸವಲತ್ತು ಒದಗಿಸುವಲ್ಲಿ ಶ್ರಮಿಸಿದ್ದಾರೆ ಎಂದರು. ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯೆ ಚಂದು ಶುಭ ಹಾರೈಸಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಸಂದೇಶ ಬಹುಮಾನ ವಿತರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಶಾಸಕ ಕೆ.ಗೋಪಾಲ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಥಳೀಯ ಟಾರ್ಪೆಡೋಸ್ ತಂಡದ ಆಶ್ರಯದಲ್ಲಿ ಮೂರು ದಿನಗಳಿಂದ ನಡೆದ ‘ಟಿಪಿಎಲ್-2017’ ಅಂತರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಲೆವೆನ್ ವಾರಿಯರ್ಸ್ ದುಬೈ ತಂಡ 2017 ಸಾಲಿನ ಟಿಪಿಎಲ್ ಚಾಂಪಿಯನ್ ಆಗಿ ಮೂಡಿ ಬಂದಿದೆ. ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಫೈನಲಿನಲ್ಲಿ ಉಡುಪಿ ಬಾಯ್ಸ್ ತಂಡವನ್ನು ಎಂಟು ವಿಕೆಟುಗಳಿಂದ ಸೋಲಿಸಿದ ದುಬೈ ತಂಡ ರೂ. ಹತ್ತು ಲಕ್ಷ ನಗದು ಬಹುಮಾನದೊಂದಿಗೆ ಗಜಗಾತ್ರದ ಮಿನುಗುವ ಟಿಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ರನ್ನರ್ಸ್-ಅಪ್ ತಂಡ ರೂ. ಐದು ಲಕ್ಷ ನಗದಿನೊಂದಿಗೆ ಮಿನುಗುವ ಬೃಹತ್ ಟ್ರೋಫಿ ಗೆದ್ದಿತು. ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಎಪ್ರಿಲ್ 14 ರಿಂದ 16 ರ ತನಕ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಹಾರ್ಡ್-ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟದಲ್ಲಿ ಶ್ರೀಲಂಕಾ, ಕತಾರ್, ಸೌದಿ ಅರೇಬಿಯಾ, ದುಬೈ ಜೊತೆಗೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 12 ಕ್ರಿಕೆಟ್ ತಂಡಗಳು ಭಾಗವಹಿಸಿ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪ್ರಶಸ್ತಿಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೆಕ್ಕಟ್ಟೆ ಪುರಾಣಿಕ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾರಂಭಗೊಂಡ ನೂತನ ಬಿಜೆಪಿ ಕಛೇರಿಯನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು. ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ. ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಿನಕರ ಹೆಗ್ಡೆ, ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಹಿಂದುಳಿದ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕಳಿಂಜೆ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಕುಂದಾಪುರ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ, ಎಸ್ಟಿ ಮೋರ್ಚಾ ಅಧ್ಯಕ್ಷ ಕೃಷ್ಣ ನಾಯ್ಕ್, ಬಿಜೆಪಿಯ ಪ್ರಮುಖರಾದ ರತ್ನಾಕರ ಶೆಟ್ಟಿ, ಬೆಳ್ವೆ ವಸಂತಕುಮಾರ್ ಶೆಟ್ಟಿ, ನವೀನ್ ಹೆಗ್ಡೆ ಶಾನಾಡಿ, ಮೋಹನದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ. ಕಿಶೋರ್ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೀವ ಶೆಟ್ಟಿ ಸ್ವಾಗತಿಸಿ, ಹಿಂದೂಳಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತೀಯರು ಧಾರ್ಮಿಕತೆ ಹಾಗೂ ದೇಶಭಕ್ತಿಯ ವಿಷಯಕ್ಕೆ ಸಂಘಟಿತರಾಗುತ್ತಾರೆ. ವೈಯಕ್ತಿಕ ಲಾಭ, ಮನಸ್ತಾಪಗಳಿಂದಾಗಿ ವೈಮನಸ್ಸುಗಳಿದ್ದರೂ ದೇಶ, ಧರ್ಮಕ್ಕೆ ಕಳಂಕ ಉಂಟಾದರೇ ಒಗ್ಗಟ್ಟಾಗಿ ಪ್ರತಿಭಟಿಸುವ ಗುಣ ನಮ್ಮಲ್ಲಿದೆ. ಇಂತಹ ಮನೋಭಾವ ಗಟ್ಟಿಯಾಗಬೇಕಾದರೇ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ ಒಗ್ಗಟ್ಟಾಗಿ ಮುನ್ನಡೆಯುವ ಮಾರ್ಗ ತೋರಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವದ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ೧೨ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಿ ಶುಭಶಂಸನೆಗೈದರು. ಮಕ್ಕಳು ಸನ್ಮಾರ್ಗದಲ್ಲಿ ನಡೆಯಬೇಕಿದ್ದರೆ ಅವರಿಗೆ ಸಂಸ್ಕಾರ ಸಂಸ್ಕೃತಿಯ ಅರಿವಿರಬೇಕು. ಇದನ್ನು ಯಾವ ಶಿಕ್ಷಣ ಕೇಂದ್ರದಲ್ಲಿಯೂ ಹೇಳಿಕೊಡಲಾರಾರರು. ಇದೇ ಪ್ರಸ್ತುತ ಗೊಂದಲಕ್ಕೆ ಕಾರಣವಾಗಿದೆ. ನಮ್ಮ ದೇಶ ಶತಮಾನಗಳ ಕಾಲ ಪರಕೀಯರ ದಾಳಿಗೆ ತುತ್ತಾದರೂ ತನ್ನತನವನ್ನು ಉಳಿಸಿಕೊಂಡಿದೆ. ಸನಾತನ ಸಂಸ್ಕೃತಿಯಿಂದಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನವೋದಯದ ಪುರುಷ ಎಂದೆನಿಸಿಕೊಂಡಿರುವ ಖ್ಯಾತ ಚಿತ್ರ ಕಲಾವಿದ ಲಿಯೋನಾರ್ಡೋ ಡಾ ವಿಂಚಿ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಚಿತ್ರಕಲೆಗಿರುವ ಜಾಗತಿಕ ಆಯಾಮ ತೆರೆದಿಡಲಾಗುತ್ತಿದೆ. ಅದ್ಬುತ ಕಲಾಕಾರನನ್ನು ನೆನಪಿಸಿಕೊಳ್ಳುವ ಮೂಲಕ ಚಿತ್ರಕಲೆ ಎಲ್ಲವನ್ನೂ ಮೀರಿದ್ದು ಎಂದು ಹೇಳಹೊರಟಿರುವ ಪ್ರಕ್ರಿಯೆ ವಿಶಿಷ್ಟವಾದುದು ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು. ಅವರು ಸುರಭಿ ರಿ. ಬೈಂದೂರು ಸಾರಥ್ಯದಲ್ಲಿ ಚಿತ್ರ ಸುರಭಿ, ರೋಟರಿ ಕ್ಲಬ್ ಬೈಂದೂರು, ಜೆ.ಸಿ.ಐ ಉಪ್ಪುಂದ ಹಾಗೂ ಸೌಜನ್ಯ ರಿ. ಬೈಂದೂರು ಆಶ್ರಯದಲ್ಲಿ ಇಲ್ಲಿನ ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ರೋಟರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾವಿದರಾದ ಕೆ.ಬಿ. ಬಡಿಗೇರ್, ಗಿರೀಶ್ ಬೈಂದೂರು ಸುಪ್ರಿತ್ ಆಚಾರ್ಯ ಉಪಸ್ಥಿತರಿದ್ದರು. ಭ್ರಮರ ಉಡಪ ಪ್ರಾರ್ಥಿಸಿದರು. ಸೌಜನ್ಯ ರಿ. ಅಧ್ಯಕ್ಷ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಸುರಭಿ ಬೈಂದೂರು ನಿರ್ದೇಶಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೊಂಬೆಯಾಟ ಎಂದೊಡನೆ ಮೊದಲು ಕೇಳಿ ಬರುವ ಹೆಸರು ಉಪ್ಪಿನಕುದು. ಕಲಾ ಪ್ರಪಂಚಕ್ಕೆ ‘ಗೊಂಬೆಯಾಟ’ ಎನ್ನುವ ವಿಶಿಷ್ಟ ರೀತಿಯ ಕಲೆಯ ಕೊಡುಗೆಯನ್ನು ಕೊಟ್ಟವರು ಉಪ್ಪಿನಕುದ್ರು ಕಾಮತ್ ಮನೆತನದವರು. ಈ ಬೊಂಬೆಯಾಟ ಕಲೆಗೆ ಸುಮಾರು 350 ವರ್ಷಗಳ ಇತಿಹಾಸವಿದೆ. ಇಂದು ಈ ಕಲೆಯನ್ನು ವಿಶ್ವ ವಿಖ್ಯಾತಗೊಳಿಸಿದವರು ಈ ಮನೆತನದ 6ನೇ ತಲೆಮಾರಿನವರಾದ ಭಾಸ್ಕರ್ ಕೊಗ್ಗ ಕಾಮತ್ರು. ಸುದೀರ್ಘ ಇತಿಹಾಸ ಇರುವ ಈ ಗೊಂಬೆಯಾಟವು ಈ ಕಲಾ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ನಿಟ್ಟಿನಲ್ಲಿ ಗೊಂಬೆಯಾಟ ಅಕಾಡೆಮಿಯನ್ನು ನಿರ್ಮಿಸಿ, ತನ್ಮೂಲಕ ನಿರಂತರವಾಗಿ ಕಲಾ ಚಟುವಟಿಕೆಗಳನ್ನು ನಡೆಸುವ ಕನಸು ಕಂಡು ಅದನ್ನು ಸಾಕಾರಗೊಳಿಸಿಕೊಂಡು ಮುನ್ನಡೆಯುತ್ತಿರುವ ಅಂತರಾಷ್ಟ್ರೀಯ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ್ ಕೊಗ್ಗ ಕಾಮತ್ ಅವರ ಶ್ರಮದ ಫಲ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇದೀಗ 2ವರ್ಷ ಸಂಭ್ರಮ. ಕುಂದಾಪ್ರ ಡಾಟ್ ಕಾಂ ಸುದ್ದಿ. ಎ.16 ರಂದು ಮಧ್ಯಾಹ್ನ ೨ಕ್ಕೆ ನಡೆಯುವ 2ನೇ ವಾರ್ಷಿಕ ಆಚರಣೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಸಮಾನತೆಗೆ ಶಿಕ್ಷಣವೇ ಮೂಲ ವೇದಿಕೆ, ಆಸ್ಪೃಶ್ಯತೆ ಕಾಲಘಟ್ಟದಲ್ಲಿ ಶಿಕ್ಷಣ ಮೂಲಕ ಸಮಾನತೆ ಸಾಧ್ಯ ಎನ್ನುವುದು ಅಂಬೇಡ್ಕರ್ ನಂಬಿಕೆಯಾಗಿತ್ತು. ಮೇಲೂ, ಕೀಳು ಭಾವನೆ ತೊಳೆದ ಹಾಕಲು ಶಿಕ್ಷಣ ಒಂದೇ ಮಾರ್ಗ. ಪ್ರಸಕ್ತ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಅಸ್ಪೃಶ್ಯತೆ ಇದ್ದರೂ, ಅದನ್ನು ಶಿಕ್ಷಣದ ಮೂಲಕ ನಿವಾರಣೆ ಮಾಡಿಕೊಳ್ಳಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಶಾಖೆ ಆಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಆಂಬೇಡ್ಕರ್ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡ ನಮ್ಮ ಭೂಮಿ, ನಮ್ಮ ಹಕ್ಕು ಜಾಗೃತೆಗಾಗಿ ಹೊರಟ ಜೈ ಭೀಮ್ ರ್ಯಾಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಂಬೇಡ್ಕರ್ ಶ್ರೇಷ್ಠ ಸಂವಿಧಾನದ ಮೂಲಕ ಸಮಾಜಿಕ ಪರಿರ್ವತೆ ಹರಿಕಾರರಾಗಿದ್ದು, ಪರಿಶಷ್ಟ ಜಾತಿ ಮತ್ತು ಪಂಗಡದ ಮೀಸಲು ಭೂಮಿ ಹಕ್ಕು ನೀಡಲು ತಾಲೂಕ್ ಆಡಳಿತ ಬದ್ದವಾಗಿದೆ ಎಂದು ಹೇಳಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇದು ಎಸುವಿನ ಕೊನೆಯ ಭೋಜನದ ದಿನವೂ ಆಗಿದೆ ಅಂದು ಎಸು ಮೂರು ಸಂಸ್ಕಾರ ನೇರವೆರಿಸಿದರು, ಒಂದು ರೊಟ್ಟಿಯ (ಪ್ರಸಾದ) ಸಂಸ್ಕಾರ, ಈ ರೊಟ್ಟಿಯ ಮೂಲಕ ತಾನು ನಮ್ಮ ಜೊತೆಗಿರುತ್ತೇನೆಂದು ವಾಗ್ದಾನ ಮಾಡಿದ ದೀನ, ಎರಡನೆಯದು ತನ್ನ ಶಿಸ್ಯರು, ಅನುಯಾಯಿಗಳು ತಾವು ಸೇವೆ ಮಾಡಿಕೊಳ್ಳುವುದಲ್ಲಾ, ಇತರರ ಸೇವೆ ಮಾಡಬೇಕೆಂದು ಭೋದನೆ ಮಾಡಿದ ದಿನ, ಮೂರನೇಯದು ತನ್ನ ಶಿಸ್ಯರನ್ನು ಯಾಜಕರನ್ನಾಗಿ ಮಾಡಿ ಧರ್ಮಗುರುಗಳ ಸಂಸ್ಕಾರ ಆರಂಭಿಸಿದ ದೀನ, ’ನಾನು ಸೇವೆ ಪಡೆಯಲು ಬಂದಿದ್ದಲ್ಲಾ, ನಾನು ಇತರರ ಸೇವೆ ಮಾಡಲು ಬಂದಿದ್ದು’ ಅಂತಾ ಏಸು ನಮಗೆ ಭೋದನೆ ಮಾಡಿದ್ದಾರೆ, ಅದರಂತೆ ಎಸುವಿನ ಹಿಂಬಾಲಾಕರಾದ ನಾವು ದೀನ ದಲಿತರ, ಅಗತ್ಯ ಇರುವರ ಸೇವೆ ಮಾಡಬೇಕೆನ್ನುತ್ತಾ’ ಕುಂದಾಪುರ ಇಗರ್ಜಿಯ ಪ್ರಧಾನ ಗುರು ವಂ.ಅನಿಲ್ ಡಿಸೋಜಾ ಆರಿಸಲ್ಪಟ್ಟ ಸದಸ್ಯರ ಪಾದ ತೊಳೆಯುವ ಸಂಪ್ರದಾಯವನ್ನು ನೇಡೆಸಿಕೊಟ್ಟರು. ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಸಹವರ್ತಿಯಾಗಿ ಈ ಧಾರ್ಮಿಕ ಕ್ರಿಯೆಗಳನ್ನು ನೆಡೆಸಿಕೊಟ್ಟರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಬೈಂದೂರು ಇದರ ಆಶ್ರಯದಲ್ಲಿ ೨೨ನೇ ವಾರ್ಷಿಕೋತ್ಸವ ಹಾಗೂ ೧೨೬ನೇ ಅಂಬೇಡ್ಕರ್ ಜಯಂತಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿತು. ಹಟ್ಟಿಯಂಗಡಿ ನಳಂದಾ ವಿದ್ಯಾಪೀಠದ ಪ್ರಾಂಶುಪಾಲ ಗುರುರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಬೈಂದೂರು ವೃತ್ತ ನೀರೀಕ್ಷಕ ರಾಘವ ಡಿ. ಪಡೀಲ್, ಶಿರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಸವಿತಾ ಸಮಾಜದ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ನರಸಿಂಹ ಹಳಗೇರಿ, ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕಲಚೇತನ ಕ್ರೀಡಾಪಟುಗಳಾದ ಭುವನಾ ಹಾಗೂ ಮೇಘನಾ ಸಹೋದರಿಯರನ್ನು ಗುರುತಿಸಿ ಗೌರವಿಸಲಾಯಿತು. ಸೇವೆಯಿಂದ ನಿವೃತ್ತರಾದ ಭಾಸ್ಕರ ಪಿ ಹಾಗೂ ಪರಮೇಶ್ವರ ಹಾವಳಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಸ್ವಾಗತಿಸಿದರು. ಚೈತ್ರಾ ಯಡ್ತರೆ…
