Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಗುರುನಾರಾಯಣ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮುದಾಯ ಸಂಘಟಿತವಾದರೆ ಅದು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಕ್ತಿ ದೊರೆಯುತ್ತದೆ. ಸಂಘಟನೆ ಎಲ್ಲಕ್ಕಿಂತ ಹೆಚ್ಚಾಗಿ ಯುವಜನರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಸಂಘಟನೆಯನ್ನು ಇನ್ನೊಂದು ಸಮುದಾಯದೊಂದಿಗೆ ಸ್ಪರ್ಧೆಗೆ ಬಳಿಸಿಕೊಳ್ಳದೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ನಾರಾಯಣಗುರುಗಳು ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಇದನ್ನು ಬಿಲ್ಲವ ಸಂಘಟನೆ ಅರ್ಥಮಾಡಿಕೊಳ್ಳಬೇಕು. ತಮ್ಮ ಸಮುದಾಯದ ಸದಸ್ಯರು ಸ್ವಾವಲಂಬಿಗಳಾಗಿ, ಗೌರವಯುತವಾಗಿ ಬದುಕಲು ಅಗತ್ಯ ಅವಕಾಶ ಸೃಷ್ಟಿಸಬೇಕು ಎಂದರು. ಮರವಂತೆ ಬಡಾಕೆರೆ ವ್ಯವಸಾಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಜಿಲ್ಲಾಧಿಕಾರಿಯಾಗಿದ್ದ ಟಿ. ವೆಂಕಟೇಶ್ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. 2009 ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಪ್ರಿಯಾಂಕಾ ಫ್ರಾನ್ಸಿಸ್ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಚಿಕ್ಕಮಂಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಅವರು, ಬೆಳಗಾಂ ಜಿಲ್ಲೆಯಾ ಸಹಾಯಕ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಬೆಳಗಾಂ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. 2015 ನವೆಂಬರ್‌ನಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಟಿ. ವೆಂಕಟೇಶ್ ಅವರು ಮೈಸೂರು ಶುಗರ್ ಎಂ.ಡಿ ಆಗಿ ವರ್ಗಾವಣೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ನೀಡಲಾಗುತ್ತಿರುವ ಬಿಂದುಶ್ರೀ ಪ್ರಶಸ್ತಿಗೆ ಪ್ರಸ್ತುತ ಸಾಲಿನಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಕಾಸರವಳ್ಳಿ ಅವರನ್ನು ಆಯ್ಕೆಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕೆಸಲೂರಿನವರಾದ ಗಿರೀಶ್ ಕಾಸರವಳ್ಳಿ ಅವರು ದೇಶದ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರು. ಮಣಿಪಾಲದಲ್ಲಿ ಬಿ.ಫಾರ್ಮಾ, ಪುಣೆ ರಾಷ್ಟ್ರೀಯ ಚಲನಚಿತ್ರ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪಡೆದು ನಿರ್ದೇನಕ್ಕಿಳಿದವರು. ತನ್ನ 27ನೇ ವಯಸ್ಸಿಗೆ ಘಟಶ್ರಾದ್ಧ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಹಾಗೂ ಸ್ವರ್ಣಕಮಲ ಪಡೆಯುವುದರೊಂದಿಗೆ ನಾಲ್ಕು ಸ್ವರ್ಣಕಮಲ ಪ್ರಶಸ್ತಿ ಪಡೆದ ಹಿರಿಮೆ ಗಿರೀಶ್ ಕಾಸರವಳ್ಳಿಯವರದ್ದು. ಸದಭಿರುಚಿಯ ಪ್ರಾದೇಶಿಕ ಚಲನಚಿತ್ರವನ್ನು ನೀಡುವುದರ ಮೂಲಕ ವ್ಯಾಪಾರಿ ಚಿತ್ರಗಳಿಂದ ದೂರ ಉಳಿದವರು. ಅವರ ನಿರ್ದೇಶನದ ಎಲ್ಲಾ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹತ್ತಾರು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದಿವೆ. ಕಾಸರವಳ್ಳಿ ಅವರು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನನ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಗುರುಕುಲ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಅಜ್ಜಿ-ಅಜ್ಜಂದಿರಿಗಾಗಿ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ.ಎಚ್.ವಿ.ನರಸಿಂಹಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಲೆ ಎಂದರೆ ಕೇವಲ ಮಕ್ಕಳಿಗೆ ಅಂಕ ಪಟ್ಟಿ ನೀಡುವ ಸಂಸ್ಥೆ ಅಲ್ಲ, ಬದಲಾಗಿ ಮಕ್ಕಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಪಾಶ್ಚಾತ್ಯ ಶಿಕ್ಷಣದ ಹಾವಳಿಯಿಂದ ನಮ್ಮ ತನ ಮರೆಯಾಗುತ್ತಿರುವ ಈ ಕಾಲದಲ್ಲಿ ಅದನ್ನು ಉಳಿಸಿಕೊಳ್ಳಲು ಇಂತಹ ಕಾರ‍್ಯಕ್ರಮಗಳು ಹೆಚ್ಚಾಗಿ ಮೂಡಿ ಬರಬೇಕು. ಕೂಡು ಕುಟುಂಬದಲ್ಲಿ ಇರುವ ಆಚಾರ-ವಿಚಾರಗಳ ಮಹತ್ವದ ಕುರಿತು ತಿಳಿಸಿದರು. ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ‍್ಯನಿರ್ವಾಹಕಿ ಅನುಪಮ ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಶಾಯಿಜು ಕೆ. ಆರ್ ನಾಯರ್ ಉಪಸ್ಥಿತರಿದ್ದರು. ವಿಶಾಲ.ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಸ್ವಾಗತಿಸಿದರು, ಶಿಕ್ಷಕಿ ವಿಜೇತ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗೆ ಅನೇಕ ನೆರವು ನೀಡಲಾಗಿದೆ. ತ್ರಾಸಿಯಲ್ಲಿ ಕೊಂಕಣಿ ಖಾರ್ವಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ಕಟ್‌ಬೇಲ್ತೂರಿನ ತಮ್ಮ ಸ್ವಗೃಹದಲ್ಲಿ ಭಾನುವಾರ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಸೀಮೆಎಣ್ಣೆ ಬಂಕ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ ಅವರು ಈ ಸನ್ಮಾನಕ್ಕಿಂತ ಕ್ಷೇತ್ರದಲ್ಲಿ ಜನಸೇವಕನಾಗಿ ಸೇವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂತಾನ ಸತ್ಸಂಪತ್ತಿನ ಜೊತೆಗೆ ಸಂಮೃದ್ಧಿಯು ನಾಗಮಂಡಲ ಸೇವೆಯಿಂದ ದೊರೆಯುತ್ತದೆ. ನಾಡಿಗೂ ಮಂಗಲವಾಗಲಿದೆ. ಯುವಕರು ನಾಗರಾಧನೆಯಂತಹ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ದೇವಸೇನಾನಿ ಸ್ವಾಮಿ ಸುಬ್ರಹ್ಮಣ್ಯನಂತೆ ರಾಷ್ಟ್ರಸೇನಾನಿಗಳಾಬೇಕಿದೆ ಎಂದು ಒಡೆಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಹಕ್ಲಾಡಿ ಗ್ರಾಮದ ಬಾಳೆಮನೆ ಕುಟುಂಬಸ್ಥರ ಮೂಲನಾಗಬನದಲ್ಲಿ ಜರುಗಿದ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು. ಧರ್ಮವೆಂಬುದು ನಮ್ಮ ಬದುಕಿನ ಸಂವಿಧಾನದಂತೆ. ಧರ್ಮ ಮತ್ತು ಸಂಸ್ಕೃತಿ, ನಡೆ ಮತ್ತು ನುಡಿ ಒಂದು ಧರ್ಮದ ಎರಡು ಮುಖವಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ದೇಶದ ಸಂವಿಧಾನವನ್ನು ಪಾಲಿಸಿದಂತೆ ಧರ್ಮವೆಂಬ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಪಾಲಿಸಿದಾಗ ಬದುಕು ಪರಿಪೂರ್ಣವಾಗುತ್ತದೆ ಎಂದರು. ಕೃಷಿ ಹಾಗೂ ನಾಗದೇವರಿಗೂ ಹತ್ತಿರದ ಸಂಬಂಧವಿದೆ. ನಾಗ ಕೃಷಿಸ್ನೇಹಿ. ಕೃಷಿ ಕಾರ್ಯವನ್ನು ಹೆಚ್ಚಿಸುವುದರಿಂದ ನಾಗದೇವರ ಕೃಪೆಗೆ ಪಾತ್ರರಾಗುತ್ತೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೃಷಿ ಸಂಸ್ಕೃತಿಯನ್ನು ಬೆಳೆಸಬೇಕಿದೆ. ದೇಶ ಬಲಿಷ್ಠವಾಗಲು ಕೃಷಿ ಮತ್ತು ಋಷಿ ಇಬ್ಬರೂ ಬೇಕು. ಕೃಷಿಯಿಂದ ಹಸಿವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಬಂಧು ಬಾಂಧ್ಯವ್ಯದ ಹಬ್ಬ ಕೊಂಪ್ರಿಪೆಸ್ಟ್ ಉಡುಪಿಯ ಧರ್ಮಗುರುಗಳಾದ ರೆ.ಪಾ.ವಿಲಿಯಂ ಮಾರ್ಟಿಸ್ ಮತ್ತು ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಪಾ.ರೋನಾಲ್ಡ್ ಮಿರಾಂದ ಅವರ ನೇತೃತ್ವದಲ್ಲಿ ಜರಗಿತು. ಹೋಲಿಕ್ರಾಸ್ ಚರ್ಚ್‌ನಿಂದ ಗಾಂಧಿ ಮೈದಾನದ ವರೆಗೆ ಯೇಸುಕ್ರಿಸ್ತ್‌ನ ಪರಮಪ್ರಸಾದವನ್ನು ಪುರ ಮೆರವಣಿಗೆ ಜರುಗಿತು. ಬೈಂದೂರು ಭಾಗದ ನೂರಾರು ಕ್ರೈಸ್ತ ಭಾಂದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಟ್ಯಾಬ್ಲೊಗಳ ಗಮನ ನೋಡುಗರ ಗಮನ ಸೆಳೆದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಚಿಕ್ಕು ಯುವ ಸಂಘಟನೆ ಹಿಜಾಣ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ಉಡುಪಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜ.೨೯ರಂದು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಶಿಬಿರವನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ಕಣ್ಣಿನ ದೃಷ್ಠಿ ಸರಿಯಾಗಿದ್ದರೆ ಬದುಕಿನ ದೃಷ್ಠಿ ಚನ್ನಾಗಿರಲು ಸಾಧ್ಯ ಆದುದರಿಂದ ಮಾನವನ ಅಮೂಲ್ಯ ಆಸ್ತಿಗಳಾಗಿರುವ ಕಣ್ಣಿನ ದೋಷವನ್ನು ಸರಿಪಡಿಸಿಕೊಂಡು ಜೋಪಾನವಾಗಿ ನೋಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಮೋಹಿನಿ ಬಾ ವಹಿಸಿದ್ದರು. ಮುಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಜಿ.ಎಸ್.ಬಿ ಸಭಾ ಆಶ್ರಯದಲ್ಲಿ ಹಾಗೂ ಚಿತ್ತಾರ ಕ್ಯಾಶ್ಯೂ ವಂಡಾರ ಇವರ ಪ್ರಾಯೋಜಕತ್ವದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರಿಗೆ ಸೀಮಿತ ಓವರುಗಳ 30 ಗಜಗಳ ಕ್ರಿಕೆಟ್ ಪಂದ್ಯಾಟ ಆಮ್ಗೆಲೆ ಟ್ರೋಫಿ-2017 ಬಸ್ರೂರಿನ ಸರಕಾರಿ ಪ್ರೌಡಶಾಲೆಯ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬಸ್ರೂರು ಬಿ.ನರಸಿಂಹ ಪ್ರಭು ನೇರವೇರಿಸಿದರು. ನಂತರ ಮಾತನಾಡಿದ ಅವರು ಸಮಾಜದ ಸರ್ವರೂ ಪಂದ್ಯಾಟದಲ್ಲಿ ಪಾಲ್ಗೊಂಡು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಂತಹ ಪಂದ್ಯಾಟಗಳು ನಿರಂತರ ಆಯೋಜಿಸಲು ಕರೆನೀಡಿದರು. ಅಲ್ಲದೇ ಸಮಾಜದ ಉದಯೋನ್ಮುಕ ಆಟಗಾರರಿಗೆ ಇಂತಹ ಪಂದ್ಯಾಟಗಳು ವೇದಿಕೆಯಾಗಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ರೂರು ಜಿ.ಎಸ್.ಬಿ. ಸಭಾದ ಆದ್ಯಕ್ಷರಾದ ಬಿ.ರಘುವೀರ ಆಚಾರ್ಯ ವಹಿಸಿ ಪ್ರಾಸ್ತಾವಿಕ ಮಾತನಾಡುತ್ತಾ ಪಂದ್ಯಾಟದ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಕಿಣಿ ಜಪ್ತಿ, ಬಿ.ನರಸಿಂಹರಾಜ ಪ್ರಭು ಹಾಗೂ ರಾಘವೇಂದ್ರ ಪ್ರಭು ಉಪಸ್ಥಿತರಿದ್ದರು. ಬಸ್ರೂರು ಜಿ.ಎಸ್.ಬಿ ಸಭಾದ ಕಾರ್ಯದರ್ಶಿ ರಂಗನಾಥ ಪಡಿಯಾರ ಆಮ್ಗೆಲೆ ಟ್ರೋಫಿ-೨೦೧೭ನ್ನು ಅನಾವರಣಗೊಳಿಸಿದರು. ಗಣೇಶ ಕಾಮತ್ ಸ್ವಾಗತಿಸಿ ಸತೀಶ ಆಚಾರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ನಾವುಂದದ ಬೊಬ್ಬರ್ಯನ ಹಿತ್ಲು ಪದ್ಮಾವತಿ ಅಮ್ಮನವರ ಪುಷ್ಕರಿಣಿಯನ್ನು ಸಣ್ಣ ನೀರಾವರಿ ಇಲಾಖೆಯ ರೂ. ೪೫ ಲಕ್ಷ ಅನುದಾನದಲ್ಲಿ ಪುನರುತ್ಥಾನಗೊಳಿಸುವ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಮಾತನಾಡಿದ ಅವರು ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಪಡೆದಿದ್ದ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ನಾಲ್ಕು ಶಾಸಕತ್ವ ಅವಧಿಗಳಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಪ್ರಸಕ್ತ ಅವಧಿಯ ಉಳಿದೊಂದು ವರ್ಷಾವಧಿಯಲ್ಲೂ ಅದರ ವೇಗ ಇನ್ನಷ್ಟು ಹೆಚ್ಚಲಿದೆ. ಈ ದೇವಸ್ಥಾನದ ಅನ್ಯ ಕೆಲಸಗಳಿಗೂ ಅನುದಾನ ಒದಗಿಸಲಾಗುವುದು. ಮುಂದಿನ ತಿಂಗಳಿನಲ್ಲಿ ನಡೆಯುವ ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಬೈಂದೂರು ತಾಲೂಕು ಆರಂಭದ ಘೋಷಣೆ ಮಾಡುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತರಲಾಗಿದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಗ್ರಾ.ಪಂ…

Read More