ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತಂತ್ರಜ್ಞಾನ ಬದಲಾದ ಹಾಗೆ ಉದ್ಯಮಗಳೂ ಬದಲಾವಣೆಯಾಗುತ್ತದೆ. ಜನರ ಬೇಡಿಕೆಗೆ ಅನುಗುಣವಾಗಿ ತಮ್ಮ ಉದ್ಯಮವನ್ನು ಬದಲಾವಣೆ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ಕರ್ನಾಟಕ ಅಸೋಸಿಯೇಸನ್ ಆಫ್ ಸೈನೇಜ್ ಇಂಡಸ್ಟ್ರೀಸ್‌ನ ಪ್ರಧಾನ ಕಾರ್ಯದರ್ಶಿ ರವಿ ನಾಗರಾಜ್ ಹೇಳಿದರು. ಅವರು ಇತ್ತೀಚೆಗೆ ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನ್ಯಾಷನಲ್‌ನಲ್ಲಿ ನೂತ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ (ರಿ) ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ವ್ಯಾಪಾರದಲ್ಲಿ ಗುಣಮಟ್ಟ ಮತ್ತು ಪ್ರಾಮಾಣಿಕತೆಯನ್ನು ಉಳಿಸಬೇಕು. ವ್ಯಾಪಾರದಲ್ಲಿ ಸ್ಪರ್ಧೆಗಳು ಗುಣಮಟ್ಟದಲ್ಲಿ ಇರಬೇಕು. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದವರು ಸಲಹೆಯಿತ್ತರು. ರಾಜೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಸೋಸಿಯೇಶನ್‌ನ ಲೆಟರ್ಹೆಡ್, ಐಡಿ ಕಾರ್ಡ್, ದರಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ ಅಸೋಸಿಯೇಶನ್ ಅಧ್ಯಕ್ಷ ದಾಮೋದರ್ ಪೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಲಾರ್ಜ ಫಾರ್ಮ್ಯಾಟ್ ಪ್ರಿಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ಕಾನೂನು…
Author: ನ್ಯೂಸ್ ಬ್ಯೂರೋ
ಗಂಗೊಳ್ಳಿ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಅಭಿಮತ ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಲಿಕೆ ಎನ್ನುವುದು ನಿರಂತರ. ವಿದ್ಯಾರ್ಥಿ ಜೀವನವು ಪಠ್ಯಗಳ ಕಲಿಕೆಗಷ್ಟೇ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಉತ್ಸಾಹ, ಕಠಿಣ ಪರಿಶ್ರಮದ ಅಗತ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಕಷ್ಟಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಂದು ಚಟುವಟಿಕೆಗಳಲ್ಲಿ ಸತತವಾಗಿ ಪಾಲ್ಗೊಂಡಾಗ ಮಾತ್ರ ನಮ್ಮ ಜೀವನದಲ್ಲಿ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ವಿವೇಕ ಆಳ್ವ ಹೇಳಿದರು. ಅವರು ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂಬ ವಾದ ಸತ್ಯವಾದರೂ ಅನೇಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ…
ಕುಂದಾಪ್ರ ಡಾಟ್ ಕಾಂ ಸಉದ್ದಿ. ಕೋಟೇಶ್ವರ: ಕುಂದಾಪುರದ ಕ್ರಿಕೆಟ್ ತಂಡ ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ ತಂಡ ಎಮ್‌ಪಿಎಲ್ ಸೆಮಿಫೈನಲ್‌ಗೆ ದಾಪುಗಾಲನ್ನಿಟ್ಟಿದೆ. ತಂಡ ಆಡಿದ ಐದು ಪಂದ್ಯದಲ್ಲಿ ನಾಲ್ಕರಲ್ಲಿ ಗೆದ್ದು ಸೆಮಿಸ್‌ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸೆಮಿಫೈನಲ್ ಪಂದ್ಯ ಡಿಸೆಂಬರ್ ೨೯ ರಂದು ನಡೆಯಲಿದೆ ತಂಡದ ಪ್ರಮುಖ ಆಟಗಾರರಾದ ಬಿ.ಅಖಿಲ್, ಕೆ.ಸಿ.ಕಾರಿಯಪ್ಪ, ಮಾಷುಕ್ ಹುಸೇನ್ ಹಾಗೂ ನೇಹಲ್ ಡಿಸೋಜ ಅವರ ಸ್ಥಿರವಾದ ಆಟದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ತಂಡದಲ್ಲಿ ಕುಂದಾಪುರದ ಸ್ಥಳೀಯ ಪ್ರತಿಭೆಗಳಾದ ಶಶಾಂಕ್ ಪೂಜಾರಿ, ವಿಘ್ನೇಶ್ ಭಟ್ ಹಾಗೂ ಪ್ರಸನ್ನ ನಾವಡ ಅವರು ಗೆಲುವಿಗೆ ಕೊಡುಗೆ ನೀಡಿದ್ದಾರೆ. ಕೋಟೇಶ್ವರದ ಉದ್ಯಮಿ ಅಬ್ದುಲ್ ಸತ್ತಾರ್ ಅವರ ಮಾಲೀಕತ್ವದ ತಂಡ ಭಾಗವಹಿಸಿದ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಎಲ್ಲರಿಗೂ ಸಂತಸ ತಂದಿದೆ. ತರಬೇತುದಾರರಾಗಿ ಕುಂದಾಪುರ ಪ್ರದೀಪ್ ವಾಜ್ ತಂಡವನ್ನು ಸನ್ನದ್ದುಗೊಳಿಸಿದ್ದರು. ಗೆಲುವಿನ ದಾರಿ: ಮೊದಲ ಪಂದ್ಯ ಎಸ್‌ಎ ಬೋಳಾರ್ ವಿರುದ್ದ ಮೂರು ವಿಕೆಟ್‌ನಿಂದ ಗೆಲುವು, ದ್ವಿತೀಯ ಪಂದ್ಯ ಕೋಸ್ಟಲ್ ಡೈಜೆಸ್ಟ್ ವಿರುದ್ಧ ೩೮ ರನ್ನಗಳಿಂದ ಸೋಲು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಖಾರ್ವಿ (೪೩) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ರಾತ್ರಿ ಊಟ ಮುಗಿಸಿ ಮಲಗಿದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ರಾತ್ರಿ ಎರಡು ಗಂಟೆ ಸುಮಾರು ಮೃತಪಟ್ಟಿದ್ದಾರೆ. ಗಂಗೊಳ್ಳಿಯ ಕಾರಂತಬೈಲು ನಿವಾಸಿಯಾದ ಅಶೋಕ್, ಕಳೆದ ನಾಲ್ಕು ತಿಂಗಳಿನಿಂದ ಕುಂದಾಪುರದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದರು. ಕೋಟ, ಕೊಲ್ಲೂರು ಠಾಣೆಗಳಲ್ಲಿ ಸೇವೆಸಲ್ಲಿಸಿ, ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದ್ದರು. ಮೃತರು ಪತ್ನಿ ಸುಮಿತ್ರಾ ಮಕ್ಕಳಾದ ಆದಿತ್ಯಾ ಹಾಗೂ ಅಪೇಕ್ಷಾ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ಸಕಲ ಸರಕಾರಿ ಗೌರವದೊಂದಿಗೆ ವಿದಾಯ: ಮೃತ ಪೊಲೀಸ್ ಅಶೋಕ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಕುಂದಾಪುರ ಡಿವೈಎಸ್ಪಿ ಪ್ರವೀಣನಾಯಕ್, ಬೈಂದೂರು ವೃತ್ತನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಎಸೈ ನಾಸಿರ್ ಹುಸೇನ್, ಕೊಲ್ಲೂರು ಎಸೈ ಶೇಖರ ಸೇರಿದಂತೆ ತಾಲೂಕಿನ ವಿವಿಧ ಠಾಣೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಮುದಾಯ ಮಾತ್ರ ಹೊರತು ಜಾತಿ ಸಮುದಾಯವಲ್ಲ. ಶಾಲಾ ಹಬ್ಬದ, ಉತ್ಸವಗಳ ಸವಿಯನ್ನು ಬಡವ-ಬಲ್ಲಿದ ಹಾಗೂ ಜಾತಿಭೇಧವಿಲ್ಲದೇ ಎಲ್ಲಾ ಮಕ್ಕಳು ಅನುಭವಿಸಿ ಸಂಭ್ರಮಿಸುವಂತಾಗಬೇಕು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಒಂದು ಕುಟುಂಬದ ಹಾಗೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗಬೇಕು ಎಂದು ಸುಣ್ಣಾರಿ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜಿನ ಸಂಚಾಲಕಿ ಪಿ. ಚಿತ್ರಾ ಕಾರಂತ್ ಹೇಳಿದರು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾ ಕೇಂದ್ರಗಳಲ್ಲಿ ಮಕ್ಕಳು ಪುಸ್ತಕದಿಂದ ಪಡೆದ ಜ್ಞಾನವನ್ನು ತಮ್ಮ ಮಸ್ತಕದಲ್ಲಿ ಸೇವಿಂಗ್ಸ್ ಮಾಡುವುದರಿಂದ ಮುಂದೆ ಯಾವುದೇ ರೀತಿಯಲ್ಲಿಯೂ ಖರ್ಚಾಗದ ಇದು ದೊಡ್ಡ ಅಸ್ತಿಯಾಗಿ ಅವರ ಜೀವನದುದ್ದಕ್ಕೂ ನಿಮಗೆ ಸಹಕಾರಿಯಾಗುತ್ತದೆ. ಶಿಕ್ಷಕರು ಕೂಡಾ ಪಾಠದ ಕುರಿತು ಪೂರ್ವ ತಯಾರಿಯಿಂದ ತರಗತಿಗೆ ಹೋಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ನಂತರ ಯಕ್ಷಗಾನ ಕಲಾವಿದ ಸಂಪಾಜೆಯ ಜಬ್ಬಾರ್ ಸಮೋ ಮಾತನಾಡಿ, ಕಲೆಯೆಂಬ ಮಾಧ್ಯಮದಿಂದ ಸಂಬಂಧಗಳನ್ನು Pಟ್ಟಿ ಬೆಸೆಯುವುದರ ಮೂಲಕ ಸಮಜದಲ್ಲಿ ಸಾಮರಸ್ಯ ಬೆಳೆಸುವುದಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಎಷ್ಟೇ ಪ್ರಯತ್ನ ನಡೆಸಿದರೂ ಅದರಲ್ಲಿ ಸಾರ್ವಜನಿಕರು ಸಹಭಾಗಿತ್ವ ನೀಡದಿದ್ದರೆ ಆ ಪ್ರಯತ್ನ ಸಫಲವಾಗದು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಉಪ್ಪುಂದ ಜ್ಯೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿಗಳ ಸಮ್ಮಿಲನ, ಅಭಿನಂದನಾ ಮತ್ತು ಕ್ರೀಡಾ ದತ್ತು ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವೆಡೆ ಹಳೆವಿದ್ಯಾರ್ಥಿ ಸಂಘ ಸೇರಿದಂತೆ ಸ್ಥಳೀಯ ಸಂಘಟನೆಗಳು ತಮ್ಮೂರಿನ ಶೈಕ್ಷಣಿಕ ಕೇಂದ್ರಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಹಳೆವಿದ್ಯಾರ್ಥಿ ಸಂಘವು ಶಾಲೆಯ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಕೂಡಾ ಮುನ್ನಡೆಯಬೇಕಿದೆ. ಎಂದು ಸಲಹೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ, ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಮಾನಸಿಕ ಶಾಂತಿ ದೊರೆಯುತ್ತಿಲ್ಲ. ದಾನ ಧರ್ಮ, ಸಮಾಜ ಸೇವೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಂಚಿಕಾನ್ ಸಹಿಪ್ರಾ ಶಾಲೆಯ ಶಾರದಾ ರಂಗಮಂದಿರದಲ್ಲಿ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ಒರ್ವ ವ್ಯಕ್ತಿಯ ಕಾಲದ ಅನಂತರ ಅವರ ಸಾಧನೆಗಳನ್ನು ಗುರುತಿಸಿ ಆಚರಿಸುವ ಉತ್ಸವಗಳಿಂದಾಗುವ ತೃಪ್ತಿ ಸಾಧಕರಿಗೆ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿರುತ್ತದೆ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಅಭಿವೃದ್ಧಿಯ ಕಾಳಜಿ ಇರುವುದು ಕೇಲವೇ ಕೆಲವು ಮಹಾನ್ ವ್ಯಕ್ತಿಗಳಿಗೆ ಮಾತ್ರವಾಗಿದ್ದು, ಅಂತಹ ಸಾಧಕರಲ್ಲಿ ಖಂಬದಕೋಣೆ ದಿ. ಆರ್. ಕೆ. ಸಂಜೀವರಾಯರ ಕೊಡುಗೆ ಅಪಾರ. ಈ ನೆಲೆಯಲ್ಲಿ ಮುಂದಿನ ತಲೆಮಾರಿನವರು ಕೂಡಾ ಇವರ ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾಸಂಸ್ಥೆಗಳು ವ್ಯಕ್ತಿಯ ಭವ್ಯ ಭವಿಷ್ಯದ ಬುನಾದಿ ಇದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಶಾಲೆ ಎನ್ನುವುದು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರಯುತವಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಕುಂದಾಪುರ ವಲಯದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಡಿಸೋಜ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸನ್ಮಾನ ಮತ್ತು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಕಾರ‍್ಯದರ್ಶಿ ಸಿಸ್ಟರ್ ಐಡಾ ಬರ್ಬೋಜ ಎ.ಸಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಅಲ್ಲಿ ಕಲಿತ ವಿದ್ಯಾರ್ಥಿಗಳು ನೆರವಾಗಬೇಕು. ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಸಹಕಾರದಲ್ಲಿ ಜೀವನದ ಆನಂದ ಅಡಗಿದೆ ಎಂದು ಹೇಳಿದರು. ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿಯ ಪುರೋಹಿತರಾದ ಜಿ. ನಾರಾಯಣ ಆಚಾರ್ಯ, ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ವಹಾಬ್ ನದ್ವಿ, ಮಂಗಳೂರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಸಂಸ್ಥೆಯನ್ನು ಆರಂಭಿಸುವ ಸ್ಥಾಪಕ ವ್ಯಕ್ತಿಯ ತ್ಯಾಗ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೂಡಿದ ಪ್ರಾಮಾಣಿಕ ಸೇವೆಯಿಂದ ಮಾತ್ರ ಅದು ಅಭಿವೃದ್ಧಿ ಕಾಣಲು ಸಾಧ್ಯ. ಆತನ ದೂರದೃಷ್ಠಿತ್ವದ ಚಿಂತನೆಯನ್ನು ಸಮಾನ ಮನಸ್ಕ ಸಹಚರರು ಆತನನ್ನು ಹಿಂಬಲಿಸುತ್ತಾರೆ. ಈ ವ್ಯವಸ್ಥೆಯಿಂದ ಸಂಸ್ಥೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಹಾಬಲೇಶ್ವರದ ವೇದಮೂರ್ತಿ ಪ್ರಕಾಶ ಉಡುಪ ಹೇಳಿದರು. ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾ ರಂಗಮಂದಿರದಲ್ಲಿ ನಡೆದ ಶಾಲೆಯ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹಳೆವಿದ್ಯಾರ್ಥಿಗಳ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು ಎಂದರು. ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಳೆವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಹೊಸಂಗಡಿ: ಬೈಂದೂರು ವಲಯ ಮರಾಠಿ ಭಾಂದವರಿಗಾಗಿ ಆಯೋಜಿಸಲಾಗಿದ್ದ 8ನೇ ವರ್ಷದ ಕ್ರಿಕೆಟ್ ಪಂದ್ಯಾಟ್ ಮಹಾಗಣಪತಿ ಟ್ರೋಪಿ 2016 ಹೊಸಂಗಡಿಯಲ್ಲಿ ಜರುಗಿತು. ಪಂದ್ಯಾಟದಲ್ಲಿ ಹಳ್ಳಿಹೊಳೆ ತಂಡ ಪ್ರಥಮ ಸ್ಥಾನವನ್ನೂ, ಮುದೂರು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
