Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾರಣಕಟ್ಟೆ ಕೃಷ್ಣಮೂರ್ತಿಮಂಜರಿಗೆ ಡಿ ಪ್ರಶಸ್ತಿಯ ಮೌಲ್ಯ, ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಸಾಮಾನ್ಯವಾಗಿ ನಮ್ಮ ವ್ಯವಸ್ಥೆಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಅರ್ಜಿ ಹಾಕಬೇಕಾಗಿದೆ. ಆದರೆ ಮಂಜರು ಅರ್ಜಿ ಸಲ್ಲಿಸದಿದ್ದರೂ ಅವರ ಪರವಾಗಿ ಚಿತ್ತೂರಿನ ಸ್ಥಳಿಯರೇ ಅರ್ಜಿ ಸಲ್ಲಿಸಿದ್ದನ್ನು ಜಿಲ್ಲಾಡಳಿತ ಗುರುತಿಸಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ನುಡಿದರು. ಅವರು ಚಿತ್ತೂರಿನ ಬ್ರಹ್ಮಾಧ್ಯ ಕಲ್ಯಾಣ ಮಂಟಪದ ವಿಪ್ಲವ ಓಪನ್ ಗಾರ್ಡನ್‌ನಲ್ಲಿ ನಡೆದ ’ಸಾರ್ವಜಕ ಅಭಿನಂದನಾ ಸಮಾರಂಭದಲ್ಲಿ ಕೊಡುಗೈ ದಾ ಕೃಷ್ಣಮೂರ್ತಿ ಮಂಜರವರನ್ನು ಸನ್ಮಾಸಿ ಮಾತನಾಡುತ್ತಿದ್ದರು. ಮಂಜರು ಎಲ್ಲಾ ಕ್ಷೇತ್ರಗಳಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ದುಡಿಮೆಯ ಒಂದು ಭಾಗವನ್ನು ಕಷ್ಟದಲ್ಲಿದ್ದವರಿಗೆ ದಾನ ಮಾಡುತ್ತಾ ಬಂದು ಆರ್ಥಿಕವಾಗಿ ಬಲಾಡ್ಯರಿಗೆ ಮಾದರಿಯಾಗಿದ್ದಾರೆ. ಮಂಜರ ಸೇವೆ ಹಾಗೂ ಕೊಡುಗೆ ಗಮಸಿದರೆ ಅವರಿಗೆ ರಾಜ್ಯ ಪ್ರಶಸ್ತಿ ಬರಬೇಕಾಗಿದೆ ಆದರೆ ಜಿಲ್ಲಾ ಪ್ರಶಸ್ತಿ ಬಂದಿದೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಮೂಲ ಉದ್ದೇಶದೊಂದಿಗೆ ಸ್ಥಾಪಿತವಾದ ಸಂಸ್ಥೆ ಗುರುಕುಲ ವಿದ್ಯಾಸಂಸ್ಥೆಗೆ ಈ ಭಾರಿ ಐಎಸ್‌ಒ (INTERNATIONAL ORGANISATION FOR STANDARDISATON ) :9001 :2015 ಇಂದ ಪ್ರಮಾಣೀಕೃತಗೊಂಡಿದೆ. ಅಂತರಾಷ್ಟ್ರೀಯ ಗುಣಮಟ್ಟದ ಪರಿಶೀಲನಾಸಂಸ್ಥೆ ತಂಡವಾದ ಡಿ.ಯು.ವಿ ಸರ್ಟೀಫಿಕೇಶನ್ ಪ್ರೈ. ಲಿಮಿಟೆಡ್‌ನ ಪ್ರಮಾಣೀಕರಣ ಪದ್ಧತಿಯಾದ ಜೆ.ಎ.ಝೆಡ್- ಎ.ಎನ್. ಝೆಡ್ ನ ಮೂಲಕ ಗುರುಕುಲ ಪಬ್ಲಿಕ್ ಶಾಲೆಯ ಮೊಂಟೆಸರಿಯಿಂದ ಪ್ರೌಢಶಾಲೆಯವರೆಗಿನ ಗುಣಮಟ್ಟದ ಶಿಕ್ಷಣ ಮತ್ತು ನಿರ್ವಹಣೆಯ ಬಗ್ಗೆ ಮೌಲ್ಯ ಮಾಪನ ಮಾಡಿ ಗುಣಮಟ್ಟ ಪರಿಶೀಲನ ಪತ್ರ ನೀಡಿದೆ. ಈ ಪರಿಶೀಲನ ಪತ್ರವು ವಿದ್ಯಾಸಂಸ್ಥೆಯ ಗುಣಮಟ್ಟ ಮತ್ತು ಅದರ ಉತ್ತಮ ನಿರ್ವಹಣೆಯ ಬಗ್ಗೆ ಇರುವ ಕೈಗನ್ನಡಿಯಾಗಿದೆ. ಸತತ ಹತ್ತು ವರ್ಷಗಳಿಂದ ಕುಂದಾಪುರ ಸುತ್ತ ಮುತ್ತಲಿನ ಹಾಗೂ ರಾಜ್ಯದ ನಾನಾ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸದಾ ಹಚ್ಚ ಹಸುರಿನಿಂದ ಕಂಗೊಳಿಸುವ ಶಾಲಾ ಆವರಣ, ಸುಸಜ್ಜಿತ ಕಟ್ಟಡ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೇರಳದ ಕ್ಯಾಲಿಕಟ್‌ನ ಪಂತೀರನ್‌ಕಾವು ಗಣೇಶ ಸಾಧನ ಕೇಂದ್ರದ ಗುರುಗಳಾದ ಶ್ರೀ ಶ್ರೀ ಯಜ್ಞಾಚಾರ್ಯ ಇವರ ಮಾರ್ಗದರ್ಶನದಲ್ಲಿ ಲೋಕಕಲ್ಯಾರ್ಥವಾಗಿ ನ.೩೦ರಿಂದ ಪ್ರಾರಂಭವಾಗುವ ಶ್ರೀ ಮಂಗಲ ಸಹಸ್ರಚಂಡಿ ಮಹಾಯಾಗದಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಿಂದ ವಿಶೇಷ ರಥದಲ್ಲಿ ದೀಪಾಗ್ನಿ ಕೊಂಡೊಯ್ಯಲಾಯಿತು. ಗುರುವಾರ ಬೆಳಿಗ್ಗೆ ಗೋಕರ್ಣ ಕ್ಷೇತ್ರದಿಂದ ತಿಡಂಬೊ (ಪೂಜೆಗೆ ಇಡುವ ಮೂರ್ತಿ) ದೇವರನ್ನು ಹೊತ್ತು ಕೊಲ್ಲೂರಿಗೆ ಸಾಗಿಬಂದ ವಿಶೇಷ ರಥವು ಯಾಗದ ಆರಂಭಕ್ಕೆ ಬೇಕಾದ ದೀಪಾಗ್ನಿಯನ್ನು ದೇವಿಯ ಸನ್ನಿಧಾನದಿಂದ ಪಡೆದು ನಂತರ ಶ್ರೀಕ್ಷೇತ್ರ ಕಟೀಲಿಗೆ ತೆರಳಿತು. ಅಲ್ಲಿಂದ ದೇವಿಯ ಪವಿತ್ರ ಗ್ರಂಥವನ್ನು ಪಡೆದು ನ.೦೬ಕ್ಕೆ ಕಲ್ಲಿಕೋಟೆ ತಲುಪಲಿದೆ. ನ.೧೮ರಿಂದ ಹೊರಡಲಿರುವ ಇನ್ನೊಂದು ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಶ್ರೀಚಂಡಿಕಾ ಮೂರ್ತಿಯನ್ನು ವಿಶೇಷ ರಥದಲ್ಲಿ ಕೇರಳದ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ನ.೨೬ರಂದು ಯಾಗಸ್ಥಳಕ್ಕೆ ತರಲಾಗುವುದು. ಅಂದಿನಿಂದ (ನ.೨೬) ಸತತ ೧೨ ದಿನಗಳ ಪರ್ಯಂತ ಯಾಗದ ಸಂಪೂರ್ಣ ವಿಧಿ-ವಿಧಾನಗಳ ಮೂಲಕ ಡಿ.೧೦ರಂದು ಮಹಾಪೂರ್ಣಾಹುತಿ ನೀಡಲಾಗುವುದು. ಹಿಂದೆ ೨೦೦೪ರಲ್ಲಿ ಈ ಯಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೆಟ್ಟಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂಜ್ಯ ಶಿರಸಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುವ ಭಗವದ್ಗೀತಾ ಸಪ್ತಾಹ ಅಭಿಯಾನದ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ, ಸಂತ ಮಂಗೇಶ್ ಶೆಣೈ ಮಾತನಾಡಿ ಇಂದಿನ ದಿನಗಳಲ್ಲಿ ತಾಂತ್ರಿಕ ಜೀವನವನ್ನು ಅವಲಂಬಿಸುತ್ತಿರುವ ಪರಿಣಾಮ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ರಾಕ್ಷಸರಾಗುತ್ತಿದ್ದೇವೆ. ಇದನ್ನು ನಿಯಂತ್ರಿಸಲು ಪ್ರತಿ ಮನೆಗಳಲ್ಲಿಯೂ ಭಗವದ್ಗೀತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನಕ್ಕೆ ಪೂರಕವಾದ ಅಂಶಗಳೇ ಭಗವದ್ಗೀತೆಯ ಸಾರಾಂಶ ಎಂದು ಹೇಳಿದರು. ಜಾತಿ, ಮತ, ಸಸ್ಯಾಹಾರಿ, ಮಾಂಸಹಾರಿಗಳೆಂಬ ಭೇಧವಿಲ್ಲದೇ ಏಕಾಗ್ರತೆಯಿಂದ ಧ್ಯಾನಾಸಕ್ತರಾಗಿ ಗೀತಾಪಠಣ ಮಾಡಿದರೆ ಜ್ಞಾನ ಹೆಚ್ಚಾಗುವುದಲ್ಲದೇ ಸಾಂಸಾರಿಕಾ, ವ್ಯಾವಹಾರಿಕಾ ಒತ್ತಡಗಳ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಪಾಪಕರ್ಮ ಮಾಡಿದವರಿಗೂ ಇದರಿಂದ ವಿಮೋಚನಾ ಮಾರ್ಗ ಪಡೆಯಬಹುದಲ್ಲದೆ, ಸೂತಕಾದಿಗಳು ಕೂಡಾ ಇಂದಿಗೂ ವಿಶ್ವ ಮಾನ್ಯವಾಗಿರುವ ಹಾಗೂ ಸೂತ್ರಪ್ರಾಯವಾಗಿರುವ ಮಹಾನ್ ಗ್ರಂಥವನ್ನು ಓದಬಹುದು ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಿಸೆಂಬರ್ ೪ರಿಂದ ೧೦ರ ವರೆಗೆ ನ್ಯೂಜಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿರುವ ಏಷ್ಯಾ ಒಷ್ಯಾನಿಯಾ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕುಂದಾಪುರ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಅವರಿಗೆ ಜೇಸಿಐ ಕುಂದಾಪುರ ಹಾಗೂ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ (ರಿ) ಕುಂದಾಪುರ ಆರ್ಥಿಕ ಸಹಾಯ ಹಸ್ತ ನೀಡಿದೆ. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರದ ನಿಯೋಜಿತ ಅಧ್ಯಕ್ಷ ಶ್ರೀಧರ ಸುವರ್ಣ, ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್‌ನ ಬಿ. ಕಿಶೋರ್ ಕುಮಾರ್ ಕುಂದಾಪುರ, ಪ್ರವೀಣ್‌ಕುಮಾರ್ ಟಿ, ದಾಮೋದರ ಪೈ, ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ, ನಾಗೇಶ ನಾವಡ, ಮಿಥುನ್ ಸುವರ್ಣ, ಚರಣ್ ಸುವರ್ಣ, ಸಂತೋಷ ಕೋಟೇಶ್ವರ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ಹಾಗೂ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ (ರಿ) ಕುಂದಾಪುರ ನೀಡಿದ ಸಹಕಾರಕ್ಕೆ ಕ್ರೀಡಾ ಪಟು ವಿಶ್ವನಾಥ ಗಾಣಿಗ ಕೃತಜ್ಞತೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಹೊಳೆಯ ಮರಳು ಅಡ್ಡೆ ಇರುವ ಪ್ರದೇಶದಲ್ಲಿ ಆಯತಪ್ಪಿ ದೋಣಿಯಿಂದ ನದಿಗೆ ಬಿದ್ದ ಉತ್ತರಪ್ರದೇಶದ ಕಾರ್ಮಿಕ ರಾಮು (40) ದಾರುಣವಾಗಿ ಮೃತಪಟ್ಟಿದ್ದಾರೆ. ಉಪ್ಪಿನಕುದ್ರು ಹೊಳೆಯಲ್ಲಿ ರಣಧೀರ ಎಂಬುವವರ ದೋಣಿಯನ್ನು ರಿಪೇರಿ ಹಾಗೂ ಪೈಂಟಿಂಗ್ ಮಾಡಿಸಲು ತೆಗೆದುಕೊಂಡು ಹೋಗುತ್ತಿದ್ದಾಗ ದೋಣಿಯನ್ನು ಸಾಗಿಸಲು ಉಪಯೋಗಿಸುವ ಬಿದಿರು ಕೋಲಿನ ಜಲ್ಲು ತುಂಡಾಗಿ ಆಯತಪ್ಪಿ ರಾಮು ಹೊಳೆಯ ನೀರಿಗೆ ಬಿದ್ದಿದ್ದರು. ದೋಣಿಯಲ್ಲಿದ್ದ ರಣಧೀರ ನೀರಿಗೆ ಹಾರಿ ನೀರಿನಿಂದ ಎತ್ತಲು ಪ್ರಯತ್ನಿಸಿದರೂ ನೀರಿನ ಸುಳಿಯಲ್ಲಿ ಸಿಗದೆ, ಸ್ಥಳೀಯರ ಸಹಾಯದಿಂದ ಬುಧವಾರ ಮಧ್ಯಾಹ್ನ ಮೃತದೇಹವನ್ನು ಮೇಲೆತ್ತಲಾಗಿತ್ತು. ಘಟನೆಯ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನವನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ನಿರಾಕರಿಸಿದ್ದಾರೆ. ಅರಣ್ಯ ಅಭಿವೃದ್ಧಿ ನಿಗಮದಿಂದ ಸಾರ್ವಜನಿಕ ಸಂಪರ್ಕಕ್ಕೆ ಯಾವುದೇ ಅನುಕೂಲಕರ ಸ್ಥಿತಿ ಇಲ್ಲದಿರುವುದು ಮತ್ತು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಬೇಕಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುತ್ತಿರುವುದಾಗಿ ಗೋಪಾಲ ಪೂಜಾರಿ ಅವರು ’ಕುಂದಾಪ್ರ ಡಾಟ್ ಕಾಂ’ಗೆ ತಿಳಿಸಿದ್ದಾರೆ. ನಾಲ್ಕು ಬಾರಿ ಬೈಂದೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲ ಪೂಜಾರಿ ಅವರು, ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಎರಡೆರಡು ಭಾರಿ ಸಚಿವಸ್ಥಾನ ಕೈತಪ್ಪಿದಾಗ ತಮ್ಮ ಆಕ್ರೋಶ ಬಹಿರಂಗವಾಗಿ ಹೊರಹಾಕಿದ್ದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದರಿಂದ ಸಚಿವ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದರು. ಆದರೆ ಗೋಪಾಲ ಪೂಜಾರಿ ಅವರು ರಸ್ತೆ ಅಭಿವೃದ್ಧಿ ನಿಗಮವನ್ನು ಕೇಳಿಕೊಂಡಿದ್ದರೇ, ಸಿದ್ಧರಾಮಯ್ಯನವರು ಅರಣ್ಯ ಅಭಿವೃದ್ಧಿ ನಿಗಮ ನೀಡಿದ್ದು ಇದರಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ ಹಾಗಾಗಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ನಿಗಮ-ಮಂಡಳಿಗಳಿಗೆ ಅಧ್ಯಕರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನಾಲ್ಕನೇ ಭಾರಿಗೆ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿದ್ದ ಗೋಪಾಲ ಪೂಜಾರಿ ಅವರಿಗೆ ಹಿರಿತನದ ಆಧಾರದಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗುವ ಅವಕಾಶವಿದ್ದರೂ ಕಾರಣಾಂತರದಿಂದ ಅದು ಕೈತಪ್ಪಿ ಹೋಗಿತ್ತು. ಈಗ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಹಜವಾಗಿ ಅವರ ಅಭಿಮಾನಿಗಳಲ್ಲಿ ಸಂತಸವನ್ನುಂಟುಮಾಡಿದೆ. ನಿಗಮ ಮಂಡಳಿಯ ಪಟ್ಟಿಯಲ್ಲಿ 21 ಶಾಸಕರು ಸ್ಥಾನ ಪಡೆದಿದ್ದು, 70 ಕಾರ್ಯಕರ್ತರು ಮತ್ತು ಮುಖಂಡರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಅಧ್ಯಕ್ಷ ಸ್ಥಾನ ಪಡೆದಿರುವ ಶಾಸಕರ ಪಟ್ಟಿ * ಕೆ.ಗೋಪಾಲ ಪೂಜಾರಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ * ಕೆ.ವಸಂತ ಬಂಗೇರ, ಕರ್ನಾಟಕ ರಾಜ್ಯ ಸಣ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ನ್ಯಾಯವಾದಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯದರ್ಶಿ ಶ್ಯಾಮಲ ಭಂಡಾರಿ ರಾಜ್ಯ ಮಹಿಳಾ ಆಯೋಗದ ತನ್ನ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸರವರ ಅಧಿಕಾರಾವಧಿ ಇನ್ನೂ ೮ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸಕಾರಣವಿಲ್ಲದೆ ಏಕಾಏಕಿ ರಾಜೀನಾಮೆ ಪಡೆದಿರುವುದನ್ನು ಪ್ರತಿಭಟಿಸಿ ಈ ಘಟನೆಯಿಂದ ಮನನೊಂದು ತಾನು ತನ್ನ ಆಯೋಗದ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟುವುದು, ಅವರಿಗೆ ರಕ್ಷಣೆ ಒದಗಿಸುವುದು, ಸಮಾನತೆ ಕಲ್ಪಿಸುವುದು ಮತ್ತು ಅವರು ಗೌರವಯುತವಾಗಿ ಬದುಕುವ ಸನ್ನಿವೇಶ ನಿರ್ಮಿಸುವುದು ಮಹಿಳಾ ಆಯೋಗದ ಕಾರ್ಯವಾಗಿರುತ್ತದೆ. ಆದರೆ ಮಹಿಳಾ ಆಯೋಗದೊಳಗಿನ ಪ್ರಸಕ್ತ ಸನ್ನಿವೇಶ ನೋವು ತಂದಿದೆ ಎಂದು ಅವರು ವಿವರಿಸಿದ್ದಾರೆ. ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ನಂತರ ಅಂದರೆ ಕಳೆದ ೨ ವರ್ಷಗಳಿಂದ ಸಕ್ರೀಯವಾಗಿ ಆಯೋಗದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಾನು ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಹಂಪಿ: ಹೆಲಿಕ್ಯಾಪ್ಟರ್ ಮೂಲಕ ಆಗಸದಿಂದ ಹಂಪಿ ಸ್ಮಾರಕಗಳನ್ನು ವೀಕ್ಷಿಸುವ ಹಂಪಿ ಬೈ ಸ್ಕೈ (ಆಗಸದಿಂದ ಹಂಪಿ) ಕಾರ್ಯಕ್ರಮಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದೆ. ಸಸಿಗೆ ನೀರು ಹಾಕಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಅನಿಲ್ ಲಾಡ್ ಚಾಲನೆ ನೀಡಿದರು. ಹಂಪಿ ಬೈಸ್ಕೈಗೆ ಮೊದಲ ದಿನವೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನೂರಕ್ಕೂ ಅಧಿಕ ಜನ ಹಂಪಿ ಸ್ಮಾರಕಗಳ ವೀಕ್ಷಣೆ ಮಾಡಿದರು. ಒಟ್ಟು ಮೂರು ಹೆಲಿಕ್ಯಾಪ್ಟರ್‌ಗಳು ಹಾರಾಟ ನಡೆಸಲಿದ್ದು, ಏಳು ನಿಮಿಷಗಳ ವೀಕ್ಷಣೆಗೆ ಸಾವಿರದ ಒಂಭತ್ತುನೂರು ರೂ ಮತ್ತು ಹತ್ತು ನಿಮಿಷಗಳ ವೀಕ್ಷಣೆಗೆ ಎರಡು ಸಾವಿರದ ಆರುನೂರು ರೂಗಳನ್ನು ನಿಗದಿಪಡಿಸಲಾಗಿದೆ. ನ.೧ರಿಂದ ನ.೭ರ ವರೆಗೆ ಏಳು ದಿನಗಳ ಕಾಲ ಬೆಳಗ್ಗೆ ೮:೩೦ರಿಂದ ಸಂಜೆ ೫:೩೦ರ ವರೆಗೆ ಹಾರಾಟ ನಡೆಸಲಿವೆ.

Read More