ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್, ಕಾರ್ಯದರ್ಶಿಯಾಗಿ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ಆಯ್ಕೆಯಾಗಿದ್ದಾರೆ. ಎಂ.ಅನಂತ ಪೈ (ಖಜಾಂಚಿ), ಬಿ.ಗಣೇಶ ಶೆಣೈ (ಉಪಾಧ್ಯಕ್ಷ), ಎಂ.ನಾಗೇಂದ್ರ ಪೈ (ಜತೆ ಕಾರ್ಯದರ್ಶಿ), ಎಂ.ರಮೇಶ ಪೈ, ಕೆ.ಶ್ರೀನಿವಾಸ ನಾಯಕ್, ಕೆ.ರಾಮನಾಥ ನಾಯಕ್, ರಮೇಶ ಖಾರ್ವಿ, ಎನ್.ಅಶ್ವಿನ್ ನಾಯಕ್, ಎಂ.ನಾಗೇಂದ್ರ ಪೈ, ಕೃಷ್ಣಾನಂದ ಮಡಿವಾಳ, ಬಿ.ರಾಘವೇಂದ್ರ ಪೈ, ಕೆ.ಕೃಷ್ಣ ಭಟ್, ರಾಘವೇಂದ್ರ ಭಂಡಾರ್‌ಕಾರ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು.
Author: ನ್ಯೂಸ್ ಬ್ಯೂರೋ
ಬೈಂದೂರು: ರಾಜ್ಯದಲ್ಲಿ ಪ್ರತೀ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನೀಯರ್ ಪದವಿ ಪಡೆಯುತ್ತಿದ್ದಾರೆ. ಮೂಲಭೂತಸೌಕರ್ಯಗಳ ಬದಲಾವಣೆಯಾಗದ, ನಮ್ಮ ಹಿಂದಿನವರ ಹಾಗೆ ಹೊಸತನವೇನೂ ಇಲ್ಲದ ಈ ಪದವಿ ಪಡೆದು ವೃತ್ತಿ ಪ್ರಾರಂಬಿಸುವ ಮೊದಲು ನಾವು ಕಲಿತ ಶಿಕ್ಷಣದಲ್ಲಿ ಹೊಸ ಚಿಂತನೆಗಳು ಹಾಗೂ ಒಳ್ಳೆಯ ಉದ್ದೇಶದಿಂದ ಕೂಡಿದ ಅಗತ್ಯವಾದ ಬದಲಾವಣೆಗಳಾಬೇಕು. ಸಮಾಜದ ಪಾಲುದಾರಿಕೆ ಹಾಗೂ ಉತ್ತಮ ನಾಗರೀಕತೆಗೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ೧೫ನೇ ವಾರ್ಚಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಸ್ವ-ಅಭಿವೃದ್ಧಿನ್ನೆ ಗಮನದಲ್ಲಿಟ್ಟುಕೊಂಡು ದೊಡ್ಡ ಮೊತ್ತದ ಸಂಪಾದನೆಗಾಗಿ ಸೀಮಿತವಾದ ಉನ್ನತ ಶಿಕ್ಷಣದಿಂದ ಲಾಭವಾಗದು. ಇಂಜಿನೀಯರ್, ಡಾಕ್ಟರ್ ಆಗುವ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಸರದಾರವಾಗುವ ದೊಡ್ಡ ಕನಸಿನೊಂದಿಗೆ ದೂರದೃಷ್ಠಿತ್ವದಿಂದ ಕೂಡಿದ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರಿಗೂ ಅನುಕೂಲವಾಗುವಂತಹ ಸಾಧನಗಳನ್ನು ತಯಾರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಹೊಸ ಸಂಶೋದನೆಯಿಂದ…
ಬೈಂದೂರು: ಇಲ್ಲಿಗೆ ಸಮೀಪದ ನಾಕಟ್ಟೆಯಲ್ಲಿ ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಓವರಟೇಕ್ ಮಾಡುವ ಭರದಲ್ಲಿ ನಾಕಟ್ಟೆ ಸಮೀಪ ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಮಂಜುನಾಥ ಹಾಗೂ ಸೀತಾರಾಮ ಎಂಬುವವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಈರ್ವರನ್ನೂ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕಾರಿನ ಮುಂಭಾಗ ಹಾಗೂ ಬೈಕ್ ನುಜ್ಜುಗುಜ್ಜಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಶ್ರದ್ಧೆ, ಪ್ರಾಮಾಣಿಕತೆಯ ಹಾದಿಯಲ್ಲಿ ನಂಬಿಕೆಯೊಂದಿಗೆ ಸಾಗಿದಾಗ ಯಶಸ್ಸು ಅರಸಿ ಬರುವಂತೆ ಕಲಾ ಜಗತ್ತಿನಲ್ಲಿ ನಿಷ್ಠೆ, ಪ್ರಾಮಾಣಿಕ ಪ್ರಯತ್ನ, ಅಚಲ ವಿಶ್ವಸದಿಂದ ಸುಂದರ ಕಲಾ ಜಗತ್ತನ್ನು ಸೃಷ್ಠಿಸಲು ಸಾಧ್ಯ ಎಂಬುದನ್ನು ಉಪ್ಪಿನಕುದ್ರು ಭಾಸ್ಕರ ಕಾಮತರು ತೋರಿಸಿಕೊಟ್ಟಿದ್ದಾರೆ ಎಂದು ಸುದ್ದಿಮನೆಯ ವಾರಪತ್ರಿಕೆ ಸಂಪಾದಕ ಸಂತೋಷ ಕೋಣಿ ಹೇಳಿದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಡಿಸೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ಗೊಂಬೆಮನೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಗೊಂಬೆಯಾಟ ಅಕಾಡೆಮಿ ಸ್ಥಾಪಿಸಿ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವ ಜೊತೆಗೆ ಪರಿಸರದ ಜನರಿಗೆ ಕಲಾಪ್ರಪಪಂಚದ ಅನಾವರಣ ಮಾಡಿಸುತ್ತಿರುವುದು ಶ್ಲಾಘನೀಯ. ನಿವೃತ್ತ ಪದವೀಧರ ಮುಖ್ಯೋಪಧ್ಯಾಯರಾದ ಟಿ. ವಿಷ್ಟು ಕಾಮತ್ ಹಾಗೂ ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ಮೇಲಾಡಿ ಉಪಸ್ಥಿತರಿದ್ದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವಿದ್ಯಾರ್ಥಿಗಳಿಂದ ’ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ಜರುಗಿತು.
ಕುಂದಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣಕನ್ನಡ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಪ್ರಕಾಶ್ ಶೆಟ್ಟಿ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿರ್ದೇಶನದಂತೆ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಚುನಾವಣೆ ಕಣದಲ್ಲಿ ಅಭ್ಯರ್ಥಿ ಎಂದು ಘೋಷಿಸಿದಾಗ ಪಕ್ಷ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಲ್ಲದೇ ಮುಂದೆ ಪಕ್ಷ ಸಂಘಟನೆ ವಿಚಾರದಲ್ಲಿ ಹಿರಿಯರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು. ಜೆಡಿಎಸ್ ಈ ಬಾರಿ ಪರಿಷತ್ ಚುನಾವಣೆಗೆ ದಕ್ಷಿಣಕನ್ನಡ ಕ್ಷೇತ್ರದಲ್ಲಿ ಇಬ್ಬರೂ ಅಭ್ಯರ್ಥಿಗಳಿಗೆ ಸ್ಪರ್ಧೆಗಾಗಿ ಬಿ. ಫಾರ್ಮ ನೀಡಿತ್ತು, ಅಂತಿಮ ಕ್ಷಣದಲ್ಲಿ ಕೆಲವು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷಾಧ್ಯಕ್ಷರ ಸ್ವರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಪಕ್ಷದ ಅಧೀಕೃತ ಅಭ್ಯರ್ಥಿ…
36 ಕ್ವಾರ್ಟಸ್ ವಾಸಕ್ಕೆ ಸಿದ್ಧ: ಮಾರ್ಚ್‌ನಲ್ಲಿ ದ್ವಿತೀಯ ಹಂತ ಪೂರ್ಣ: ಎಸ್ಪಿ ಅಣ್ಣಾಮಲೈ ಕುಂದಾಪುರ: ಪೊಲೀಸರ ಬಹುಕಾಲದ ಬೇಡಿಕೆಯಾದ ಸುಸಜ್ಜಿತ ವಸತಿಗೃಹ ಅಂತು ಅಂತಿಮ ಹಂತ ತಲುಪಿದೆ. ಸುಮಾರು 2.96ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯದಲ್ಲಿ 76 ಪೇದೆ ಹಾಗೂ 6 ಉನ್ನತ ಮಟ್ಟದ ಅಧಿಕಾರಿಗಳ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಂಡಿದ್ದು ಮೊದಲ ಹಂತ 36ರ ವಸತಿಗೃಹವನ್ನು ವಾಸಕ್ಕೆ ಸಿದ್ಧಗೊಂಡಿದ್ದು ಕಾಮಗಾರಿಗೆ ಸಮುಚ್ಚಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ್ ಗೃಹ 2020ಯೋಜನೆಯ ಅನ್ವಯ ಕುಂದಾಪುರದ ಫೆರಿ ರಸ್ತೆಯಲ್ಲಿ ನಿರ್ಮಾಣಗೊಂಡ ಪೊಲೀಸ್ ವಸತಿ ಸಮುಚ್ಛಯ ಸಾಂಕೇತಿಕವಾಗಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸುದ್ಧಿಗಾರರ ಜೊತೆ ಮಾತನಾಡಿ, ಕುಂದಾಪುರದ ಪೊಲೀಸ್ ಸಿಬ್ಬಂದಿಗಳ ವಸತಿ ಸಮಸ್ಯೆ ಹಲವು ದಿನಗಳಿಂದ ಇದ್ದು ಪೊಲೀಸ್ ಸಿಬ್ಬಂದಿಗಳು ಕ್ವಾರ್ಟಸ್ ಇಲ್ಲದೇ ಬೇರೆ ಬೇರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಂಗ್ರೆಸ್ಸಿನ ಸಭೆಗಳಲ್ಲಿ ತಾನು ಸ್ವತಂತ್ರವಾಗಿ ಸ್ವರ್ಧಿಸಿರುವುದೇ ದೊಡ್ಡ ಪ್ರಮಾದ ಎಂಬಂತೆ ತನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಹೀಗೆ ನಿರಾಧಾರವಾಗಿ ಆರೋಪಿಸುವ ಬದಲು ತನ್ನೊಂದಿಗೆ ಬಹಿರಂಗವಾಗಿ ವಿಷಯಾಧಾರಿತ ಚರ್ಚೆಗೆ ಬನ್ನಿ ಎಂದು ವಿಧಾನ ಪರಿಷತ್ ಸ್ವತಂತ್ರ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದರು. ಹೆಮ್ಮಾಡಿ ಜೂವೆಲ್ ಪಾರ್ಕ್‌ನಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಬೇರೆ ಪಕ್ಷದಿಂದ ಬಂದವರು ಎಂದು ಆರೋಪಿಸುವ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಮಾಜಿ ಶಾಸಕ ಯು.ಆರ್.ಸಭಾಪತಿ ಮೂಲ ಕಾಂಗ್ರೆಸಿಗರಾ? ಅವರೂ ಕೂಡ ಬೇರೆ ಬೇರೆ ಪಕ್ಷದಿಂದ ಕಾಂಗ್ರಸ್‌ಗೆ ಬಂದವರಲ್ಲವೇ ಎಂದು ಪ್ರಶ್ನಿಸಿದರು. ಅಧಿಕಾರ ದಾಹ ಯಾರಿಗೆ? ಜೆಪಿ ಹೆಗ್ಡೆಗೆ ಅಧಿಕಾರದಾಹ ಎಂದು ಗೂಬೆ ಕೂರಿಸಿವ ಕಾಂಗ್ರೆಸ್ಸಿಗರಿಗೆ ತಾನು ಎರಡು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸರಕಾರ ನಿಲುವು ಸರಿಕಾಣದಿದ್ದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಕುಮಾರ ಸ್ವಾಮಿ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುತ್ತೇನೆ…
ಕುಂದಾಪುರ: ಮಳೆ ನೀರಿನ ಕೊಯ್ಲು, ನೀರಿನ ಮಿತ ಬಳಕೆ, ನೀರಾವರಿ ಪದ್ಧತಿಗಳ ಕ್ರಮಬದ್ದ ನಿರ್ವಹಣೆ, ಬಹುಮಹಡಿ ಮಿಶ್ರಬೆಳೆ ಪದ್ಧತಿ, ಸುಧಾರಿತ ಅಡಿಕೆ ಕೊಯ್ಲು ಮನೆ ಮತ್ತು ತೋಟಗಳಲ್ಲಿ ಅಲಂಕಾರಿಕ ಸಸ್ಯಗಳ ಅಳವಡಿಕೆ ಮತ್ತು ಉತ್ತಮ ಸಾಗುವಳಿ ಪದ್ಧತಿಗಳ ಮೂಲಕ ರೈತ ವರ್ಗಕ್ಕೆ ಮಾರ್ಗದರ್ಶಕ ಪೈಲೂರು ಶ್ರೀನಿವಾಸ ರಾವ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗೆ ಹೆಸರಿನ 2015-16 ಸಾಲಿನ ಕೃಷಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಿ.24 ರಂದು ಬಸ್ರೂರಿನಲ್ಲಿ ನಡೆಯುವ ಬಿ. ಅಪ್ಪಣ್ಣ ಹೆಗ್ಡೆ ಅವರ 81ನೇ ಹುಟ್ಟುಹಬ್ಬದಂದು ಶ್ರೀ ರಾಮಕೃಷ್ಣ ಆಶ್ರಮ ಬೈಲೂರು ಶ್ರೀ ವಿನಾಯಕನಂದಜೀ ಮಹರಾಜ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಹಾಗೂ ಸಭೆ ಅಧ್ಯಕ್ಷv ಡಾ. ಎಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಕಲ ಬಿ.ರಾಮಕಿಶನ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಸ್ಥಾನಮಾನ ಹಾಗೂ ಜನರ ವಿಶ್ವಾಸ ಹೊಂದಿರುವ ನೇರ ನುಡಿಯ, ಸರಳ ನಡೆಯ ರಾಜಕಾರಣಿಗಳ ಪೈಕಿ ಜಯಪ್ರಕಾಶ್ ಹೆಗ್ಡೆಯವರೂ ಒಬ್ಬರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಜಯಕಂಡವರು. ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಂದರು ಮತ್ತು ಮೀನುಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 1999 ಮತ್ತು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಯ ಸಾಧಿಸಿದ್ದರು. ಆ ಬಳಿಕ ಕಾಂಗ್ರೆಸ್ ಪಕ್ಷ ಸೇರಿ 2007ರ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡರ ವಿರುದ್ದ ಸ್ವರ್ಧಿಸಿ ಸೋಲುಂಡರೂ ಮತ್ತೆ 2012ರ ಉಪ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಗೆಲುವು ತಂದುಕೊಟ್ಟು ಕಾಂಗ್ರೆಸ್ ನ ಸರಣಿ ಸೋಲಿಗೆ ಬ್ರೇಕ್ ಹಾಕಿದ್ದರು. ಇದೀಗ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಉಡುಪಿ-ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಫಲವಾಗಿ ಪಕ್ಷದಿಂದ ಆರು ವರ್ಷ ಉಚ್ಚಾಟನೆಯೂ ಆಗಿದ್ದಾರೆ. ಈ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಜಯಪ್ರಕಾಶ್…
ಕುಂದಾಪ್ರ ಡಾಟ್ ಕಾಂ . ಕುಂದಾಪುರ: ರಾಜ್ಯದ ಟೆನ್ನಿಸ್‌ಬಾಲ್ ಕ್ರಿಕೆಟ್‌ನ ಹೆಸರಾಂತ ತಂಡವಾದ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ 5೫ನೇ ಬಾರಿಗೆ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟ ‘ಚಕ್ರವರ್ತಿ ಟ್ರೋಫಿ’ ಡಿ. 24ರಿಂದ 27ರವರೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. [quote font_size=”13″ bgcolor=”#b0d69c” bcolor=”#113b66″ arrow=”yes” align=”right”]ಚಕ್ರವರ್ತಿ ಕ್ರಿಕೆಟ್ ಕ್ಲಬ್: 1974 ರಲ್ಲಿ ಪ್ರಾರಂಭವಾದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಹಂತ ಹಂತವಾಗಿ ಬೆಳೆದು 1987 ರಿಂದ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಕೂಟಗಳನ್ನು ಗೆಲ್ಲುತ್ತಾ ರಾಜ್ಯದ ಹೆಸರಾಂತ ತಂಡವಾಗಿ ಹೊರಹೊಮ್ಮಿತು. ಈ ವರೆಗೆ ಸುಮಾರು 27 ರಾಜ್ಯಮಟ್ಟದ ಪ್ರಶಸ್ತಿ ಹಾಗೂ 100ಕ್ಕೂ ಮಿಕ್ಕಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಚಕ್ರವರ್ತಿ ಕುಂದಾಪುರ ತಂಡ ಗೆದ್ದಿದೆ. ಟೆನ್ನಿಸ್‌ಬಾಲ್ ಕ್ರಿಕೆಟ್‌ಗಷ್ಟೇ ತಮ್ಮನ್ನುಸೀಮಿತಗೊಳಿಸದೆ 1998 ರಿಂದ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಶಿಬಿರ ನಡೆಸಿ ಯುವ ಪ್ರತಿಭೆಗಳನ್ನು ಶೋಧಿಸಿ ವಿಶ್ವವಿದ್ಯಾನಿಲಯ, ರಾಜ್ಯ ಗ್ರಾಮಾಂತರ, ರಾಜ್ಯ ರಣಜಿ ಮೀಸಲು ಹಾಗೂ ರಾಷ್ಟ್ರಮಟ್ಟದ ಜೂನಿಯರ್ ತಂಡದವರೆಗೂ ಕುಂದಾಪುರದ ಪ್ರತಿಭೆಗಳನ್ನು ಪರಿಚಯಿಸಿದ…
