ಕುಂದಾಪ್ರ ಡಾಟ್ ಕಾಂ | ಅಂತೂ ಭಾರತ ಗೆದ್ದಿತು. ಮೂವರಿಗೂ 50% ಡಿಸ್ಕೌಂಟ್ ಟಿಕೆಟ್ ಖಾತ್ರಿ ಆಯ್ತು! ಮೌಕಾ ಮೌಕಾ
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಚಟುವಟಿಕೆಗಳಿಗೆ ಮತ್ತು ಶಾಲೆಯ ನಿರಂತರ ಸಂಪರ್ಕ ಮತ್ತು ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್‌ನ್ನು ಸ್ಥಾಪಿಸಲಾಗಿದೆ. ತನ್ಮೂಲಕ ಸಂಸ್ಥೆಯು ನಿರಂತರ ಕ್ರಿಯಾಶೀಲವಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುವಂತಾಗಲಿ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿಯ ಸಂಸ್ಥೆಗಳಾದ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಗಳ ಹಳೆ ವಿದ್ಯಾರ್ಥಿಗಳ ಸಂಘ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್(ಸೆಸ್ಸಾ)ನ್ನು ಆರ್. ಎನ್. ಶೆಟ್ಟಿ ಅಡಿಟೋರಿಯಂ ಹಾಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಎ.ಪಿ.ಮಿತ್ಯಂತಾಯ, ಕಾರ್ಯದರ್ಶಿ ಸೀತಾರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಕ್ಷೇತ್ರ sಸಂಪನ್ಮೂಲ ವ್ಯಕ್ತಿ ಉದಯ್ ಗಾಂವಕರ್, ಬಳಿಕ ವಿಶ್ವ ಜನದಿನಾಚರಣೆಯ ಅಂಗವಾಗಿ ಜಲ ನಿರ್ವಹಣೆ ಮತ್ತು ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಸಂರಕ್ಷಣೆಯಿಂದ ಜಲ ಸಂಪನ್ಮೂಲವನ್ನು ರಕ್ಷಿಸಬಹುದು ಮತ್ತು ಸರಳ ಜೀವನ ಇಂತಹ ಜಟಿಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಿಲ್ಪಶ್ರೀ ಸ್ವಾಗತಿಸಿ, ಸುನೀತಾ ಧನ್ಯವಾದಗೈದರು. ಪ್ರಶಿಕ್ಷಣಾರ್ಥಿ ಮಹಿಮಾ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರಣ ಕೇಳಿದರೆ ಸಬೂಬು ಹೇಳುತ್ತೀರಿ. ಜನರು ಪ್ರಶ್ನಿಸಿದರೇ ಹಾರಿಕೆಯ ಉತ್ತರ ನೀಡುತ್ತೀರಿ. ನೀವು ಅಧಿಕಾರಿಗಳು ಇಲ್ಲಿ ತುಘಲಕ್ ದರ್ಬಾರ್ ಮಾಡತ್ತಿದ್ದೀರಾ? ಹೀಗೇಂದು ಕುಂದಾಪುರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡದ್ದು ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ. ಕುಮ್ಕಿ ಭೂಮಿ ಗೊಂದಲ ಸಾಕಷ್ಟು ವರ್ಷದಿಂದಲೇ ಇದೆ. ಈಗ ಹಕ್ಕಪತ್ರ ನೀಡಲು ಅಡೆತಡೆ ಇಲ್ಲದಿದ್ದರೂ 16ವರ್ಷದಿಂದ ಬಾಕಿ ಇರುವ ಅರ್ಜಿಗಳು ವಿಲೇವಾರಿಯಾಗಬೇಕಿದೆ. ಹಾಗಾಗಿ ಹಕ್ಕುಪತ್ರ ನೀಡಲು ತಡವಾಗುತ್ತಿದೆ ಎಂದು ಸಚಿವರ ಪ್ರಶ್ನೆಗೆ ಉತ್ತರಿಸುತ್ತಿದ್ದ ತಹಶೀಲ್ದಾರ್ ಅವರಿಗೆ ಎಂಎಲ್‌ಸಿ ಅವರು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳಿ ಸುಸ್ತು ಹೊಡೆಸಿದರು. ಕುಮ್ಕಿ ಭೂಮಿಯನ್ನು ಫಲಾನುಭವಿಗಳಿಗೆ ನೀಡಲು ಹೈಕೋರ್ಟ್‌ನಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಕೆಲವು ದಿನಗಳ ಹಿಂದೆಯೇ ಕುಂದಾಪುರ ತಾಲೂಕಿನ ೧೬೦೦ ಮಂದಿಗೆ ಮೊದಲ ಹಂತದಲ್ಲಿ ಹಕ್ಕುಪತ್ರ ನೀಡಲು ಅವಕಾಶವಿದ್ದರೂ ಈವರೆಗೆ ನೀಡಿಲ್ಲ. ಸಮಿತಿಯ ಕಾರ್ಯದರ್ಶಿಯಾಗಿ ಈ ವಿಚಾರವನ್ನು ಸಮಿತಿಯ ಮುಂದಿಡಬೇಕು ಎಂಬ ಪ್ರಜ್ಞೆಯೂ ತಮಗಿಲ್ಲವೇ? ತಮಲ್ಲಿಯೇ ಲೋಪ ಇಟ್ಟುಕೊಂಡು ಜವಾಬ್ದಾರಿಯನ್ನು ಮರೆತು ಮಾತನಾಡಬೇಡಿ. ಶೀಘ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂತ ಫಿಲಿಪ್ ನೆರಿ ಚರ್ಚ್ ಬಸ್ರೂರಿನಲ್ಲಿ ಪವಿತ್ರ ಶುಕ್ರವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸ್ಥಳೀಯ ಶಾಲೆಯ ಮೈದಾನಾದಲ್ಲಿ ಸ್ಥಳೀಯ ಚರ್ಚನ ಧರ್ಮಗುರುಗಳಾದ ವಂ ವಿಶಾಲ್ ಲೋಬೊರವರ ಮುಂದಾಳತ್ವದಲ್ಲಿ ಶಿಲುಬೆಯ ಹಾದಿಯನ್ನು ನಡೆಸಲಾಯಿತು. ಈ ಭಕ್ತಿ ಕಾರ್ಯದಲ್ಲಿ ವಂ! ವಿಶಾಲ್ ಲೋಬೊರವರ ನೇತೃತ್ವದಲ್ಲಿ ಶುಭಶುಕ್ರವಾರದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸದರು. ಪ್ರಭು ಯೇಸುವಿನ ಜೀವನದ ಪ್ರಮುಖ ಘಟನೆಗಳನ್ನು ಸ್ಮರಿಸಿ ಭಕ್ತಿಭಾವದಿಂದ ಅವರನ್ನು ನಮಿಸಿದರು. ತಾಲೂಕಿನ ಕುಂದಾಪುರ, ಬೈಂದೂರು ಚರ್ಚ್ ಸೇರಿದಂತೆ ಎಲ್ಲಾ ಇಗರ್ಜಿಗಳು ಪವಿತ್ರ ಶುಕ್ರವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಜನತಾ ದರ್ಶನದಲ್ಲಿ ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಜನತಾದರ್ಶನ ನಡೆಸಲಾಗುತ್ತಿದೆ. ಜನರ ಸಮಸ್ಯೆ ನೇರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳುವ ಜೊತೆಗೆ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಇರಾದೆ ನಮ್ಮದು ಎಂದವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಮಧ್ಯೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಲೋಕಾಯುಕ್ತ ದುರ್ಬಲಗೊಳಿಸುವ ಇರಾದೆ ನಮ್ಮ ಮುಂದಿಲ್ಲ. ಈಗಾಗಲೇ ದೇಶದ ಇತರ ರಾಜ್ಯಗಳಲ್ಲಿಯೂ ಎಸಿಬಿ ರಚನೆಯಾಗಿದೆ. ಮಿಗಿಲಾಗಿ ಹೈಕೋರ್ಟ್ ಅದೇಶದಂತೆ ರಾಜ್ಯದಲ್ಲೂ ಎಸಿಬಿ ರಚನೆಗೆ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬಳಿಕ ಬರಲಾಗಿದೆ. ರಾಜ್ಯ ಸರಕಾರ ಲೋಕಾಯಕ್ತ ಹಲ್ಲು ಕೀಳುವ ಕೆಲಸ ಮಾಡಿಲ್ಲ. ಆದರೆ ಈ ಹಿಂದೆ ಲೋಕಾಯುಕ್ತಕ್ಕೆ ಹಲ್ಲೇ ಇರಲಿಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘಟನೆಗಳು ಗ್ರಾಮೀಣ ಭಾಗದ ಬಿಲ್ಲವ ಸಮಾಜದ ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸಿಕೊಡುವ ಮೂಲಕ ಸಂಘಟನೆಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶನಿವಾರ ಕುಂದಾಪುರದ ಶ್ರೀ ನಾರಾಯಣಗುರು ಸಭಾಭವನಲ್ಲಿ ಜರುಗಿದ ಸಭೆಯಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ನಿರ್ಮಾಣಕ್ಕೆ ಮೊದಲನೇ ಕಂತಿನ ೧೨ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಮಾಜ ಸೇವಾ ಸಂಘಟನೆಗಳ ಮೂಲಕ ಕಡು ಬಡವರನ್ನೂ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇದರೊಂದಿಗೆ ಸಮಾಜ ಪ್ರತಿ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸಿಕೊಡುವಲ್ಲಿ ನೆರವಾಗುವುದೊಂದಿಗೆ, ಸಮಾಜವನ್ನು ಬಲಪಡಿಸುವ ಕಾರ್ಯವನ್ನು ಸಮುದಾಯದ ಪ್ರತಿಯೋರ್ವರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದರು. ಕುಂದಾಪುರದಲ್ಲಿ ಮೊಗವೀರ ಸಭಾಭವನ, ಬಂಟರ ಯಾನೆ ನಾಡವರ ಸಭಾಭವನ ಹಾಗೂ ಬಿಲ್ಲವ ಸಭಾಭವನ ನಿರ್ಮಾಣಕ್ಕೆ ೫೦ಲಕ್ಷ ರೂ.ಗಳನ್ನು ಮಂಜೂರು ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಎಲ್ಲರೂ ಒಟ್ಟಾಗಿ ಗೌರವಿಸಬೇಕಿದೆ ಎಂದರು. ಕುಂದಾಪ್ರ ಡಾಟ್ ಕಾಂ…
ಕುಂದಾಪ್ರ ಡಾಟ್ ಕಾಂ – ಕುಂದಾಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿಯೇ ಓದಿನ ಕ್ರೀಯಾಚರಣೆಯ ಜೊತೆಗೆ ಸ್ವಉದ್ಯೋಗದ ಕುರಿತು ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಹಿಂಜರಿಕೆಯನ್ನು ಬಿಟ್ಟು ಉದ್ಯಮಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧ್ಯ ಎಂದು ರುಡ್‌ಸೆಟ್ ಸಂಸ್ಥೆಯ ತರಬೇತುದಾರ ಪ್ರಾಧ್ಯಾಪಕ ಕರುಣಾಕರ ಕೆ. ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಆಶ್ರಯದಲ್ಲಿ ‘ಉದ್ಯಮಶೀಲತಾ ಅರಿವು’ ಎಂಬ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಯೋಜಕರಾದ ಕು. ಶಬೀನಾ ಎಚ್ ಮತ್ತು ಸಹ ಸಂಯೋಜಕರಾದ ಶ್ರೀ ವಿಘ್ನೇಶ್ವರ್ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 102.11 ಕೋಟಿ ವೆಚ್ಚದಲ್ಲಿ ನಡೆಯಲಿರುವ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೀನುಗಾರರ ಸಮಾವೇಶಕ್ಕೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಮೀನುಗಾರರು ಹಾಗೂ ನಾಗರಿಕರು ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖೆ ಹಾಗೂ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿ ಹಾಗೂ ಮೀನುಗಾರರ ಸಮಾವೇಶದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಗಂಗೊಳ್ಳಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಮೀನುಗಾರ ಸಂಘಟನೆಗಳು, ಮೀನುಗಾರರು ಒಗ್ಗಟ್ಟಿನಿಂದ ದುಡಿದು ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಹೇಳಿದರು. ತಾಪಂ ಸದಸ್ಯ ರಾಜು ದೇವಾಡಿಗ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ನಾಗರಾಜ ಖಾರ್ವಿ, ನಾಗಪ್ಪಯ್ಯ ಪಟೇಲ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಡಗುತಿಟ್ಟಿನ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಅವರ ನಾಗೂರು ಬ್ಯಾಟರಕ್ಲು ನಿವಾಸಕ್ಕೆ ಉಪ್ಪುಂದ ಗಾಣಿಗ ಸೇವಾ ಸಂಘದ ಪದಾಧಿಕಾರಿಗಳು ಭೇಟಿನೀಡಿ ಸಂಘದ ವತಿಯಿಂದ ಅಪಘಾತಕ್ಕೀಡಾದ ಭಾಗವತರ ಚಿಕಿತ್ಸೆಗಾಗಿ ಸಹಾಯಧನ ಚೆಕ್ ನೀಡಿದರು. ಕಳೆದ ಜನವರಿಯಲ್ಲಿ ಮುಳ್ಳಿಕಟ್ಟೆ ಸಮೀಪ ನಡೆದ ಬೈಕ್ ಅಪಘಾತದಿಂದ ತೀವೃತರಹದಿಂದ ಗಾಯಾಳುಯಾಗಿದ್ದ ಭಾಗವತರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ದೀರ್ಘಕಾಲದ ಚಿಕಿತ್ಸೆಯ ಬಳಿಕ ಮನೆಗೆ ಹಿಂದಿರುಗಿದ್ದರು. ಸದ್ಯ ಎಡಕಾಲು ತೀವೃ ಜರ್ಝರಿತಗೊಂಡು ನಡೆದಾಡಲಾಗದ ಸ್ಥಿತಿಯಲ್ಲಿರುವ ಭಾಗವತರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ನೆರವಿಗೆ ಬಂದ ಕುಂದಾಪುರ ಗಾಣಿಗ ಸೇವಾ ಸಮಿತಿ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಮತ್ತು ಬೈಂದೂರು ಘಟಕದ ಅಧ್ಯಕ್ಷ ಬಿ.ಎಂ.ನಾಗರಾಜ ಗಾಣಿಗ ತಮ್ಮ ವೈಯಕ್ತಿಕ ನೆರವು ನೀಡಿ ಭಾಗವತರಿಗೆ ಆತ್ಮಸ್ಥೈರ್ಯ ತುಂಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಉಪ್ಪುಂದ ಘಟಕದ ಗೌರವಾಧ್ಯಕ್ಷ ಅನಂತ ಗಾಣಿಗ, ಅಧ್ಯಕ್ಷ ಗಣಪಯ್ಯ ಗಾಣಿಗ, ಉಪಾಧ್ಯಕ್ಷ ಶಿವಾನಂದ ಗಾಣಿಗ,…
