Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದಲ್ಲಾಗುವ ವೈಪರಿತ್ಯವನ್ನು ಸರಿಪಡಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಸಂಸ್ಕಾರಯುತ ಶಿಕ್ಷಣವನ್ನು ಮೊದಲು ಮನೆಯಿಂದಲೇ ಆರಂಭಿಸಿದಾಗ ಮಾತ್ರ  ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ತ್ಯಾಗ ಬಲಿದಾನ ಇಲ್ಲದೆ ಧರ್ಮ, ದೇಶ ಉಳಿಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಸಹ ಕಾರ್ಯವಾಹ ಜನಾರ್ದನ್ ಉಪ್ಪಳ ಹೇಳಿದರು. ಬೈಂದೂರು ಜಯಾನಂದ ಹೋಬಳಿದಾರ್ ಅವರ ನಿವಾಸದಲ್ಲಿ ನಡೆದ ’ಭಾರತ್ ಮಾತಾ ಪೂಜನ’ ಕಾರ್ಯಕ್ರಮ ಉದ್ಘಾಟಿಸಿ (ಭೌದ್ದಿಕ್) ಮಾತನಾಡಿದರು. ಭಾರತೀಯರಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಶಕ್ತಿ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಸಮಾಜದಲ್ಲಿ ತಾರತಮ್ಯ ಸಲ್ಲದು. ಇಲ್ಲಿ ಜಾತಿ ಭೇಧಕ್ಕಿಂತ ರೀತಿ-ನೀತಿ ಮುಖ್ಯವಾಗಿರಬೇಕು. ಭಾರತವೇ ನಮ್ಮ ಆತ್ಮ, ಪ್ರಾಣ, ಉಸಿರು. ಹಿಂದುತ್ವ ಸ್ವಾಭಿಮಾನ ಸಂಕೇತ ಎಂದರು. ’ಜಯ ಜಯ ಹೇ ಭಗವತಿ ಸುರ ಭಾರತಿ ತವ ಚರಣೌ ಪ್ರಣಮಾಮ್ಯಹಂ’ ಸಮೂಹ ಗೀತೆಯೊಂದಿಗೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆರತಿ ಬೆಳಗಿದ ನಂತರ ಮೂರ್ತಿ ಬೈಂದೂರು ಹಾಡಿದ ದೇಶಭಕ್ತಿ ಗೀತೆಯೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಮತ್ತು ಕಲಾ ಪ್ರತಿಭೆಯನ್ನು ಆಕಾಶವಾಣಿಯ ಮೂಲಕ ಕೇಳುಗರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಆವಶ್ಯಕ ಎಂದು ಮಂಗಳೂರು ಆಕಾಶವಾಣಿ ಬಾಲವೃಂದ ವಿಭಾಗದ ನಿರ್ದೇಶಕಿ ಶುಭದಾ ಅವರು ಹೇಳಿದರು. ಮಂಗಳೂರು ಆಕಾಶವಾಣಿ ಸಹಯೋಗದೊಂದಿಗೆ ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರಗಿದ ಸಮುದಾಯದತ್ತ ಶಾಲೆ ಮತ್ತು ಆಕಾಶವಾಣಿಯಲ್ಲಿ ಪ್ರತೀ ರವಿವಾರ ಪ್ರಸಾರವಾಗುವ ಚಿಣ್ಣರ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಬಾಲವೃಂದ ಧ್ವನಿಮುದ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುಕುಮಾರ ದೇವಾಡಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರಸಾರಗೊಳಿಸುವ ಆಕಾಶವಾಣಿಯ ಕಾರ್ಯ ಪ್ರಶಂಸನೀಯ ಎಂದರು. ಮುಖ್ಯ ಅತಿಥಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಮಲತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ದೇವಾಡಿಗ, ಸುರೇಂದ್ರ, ಶಿಕ್ಷಕರ ಸಂಘದ ಸದಸ್ಯೆ ಗಿರಿಜಾ, ಸಮುದಾಯದತ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನವೋದಯದಲ್ಲಿ ಕಾವ್ಯ ರಚನೆ ಆರಂಭಿಸಿ, ನವ್ಯ ಪಂಥವನ್ನು ಹುಟ್ಟುಹಾಕಿ ನವ್ಯೋತ್ತರದಲ್ಲೂ ಪ್ರಸ್ತುತರೆನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯದ ನಡೆ ಅನನ್ಯವಾದುದು. ತಮ್ಮ ಸಮಕಾಲೀನ ಪ್ರಪಂಚಕ್ಕೆ ಅಡಿಗರಂತೆ ಸ್ಪಂದಿಸಿದ ಕವಿ ಇನ್ನೊಬ್ಬರಿಲ್ಲ. ಭಾಷೆ ಮತ್ತು ಪ್ರತಿಮೆಗಳ ಬಳಕೆಯಲ್ಲಿ ಅವರು ಏರಿದ ಔನ್ನತ್ಯ ಅಸಾಧಾರಣವಾದುದು. ಅವರ ಕಾವ್ಯ ಅವರ ಕಾಲವನ್ನೂ ಮೀರಿ ಓದು, ಚರ್ಚೆ, ವಿಮರ್ಶೆಗೆ ಒಳಗಾಗುತ್ತಿರುವುದು ಅದರ ಸಾರ್ವಕಾಲಿಕ ಮೌಲ್ಯಕ್ಕೆ ಸಾಕ್ಷಿ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ಮೊಗೇರಿ ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಆರಂಭವಾದ ಅಡಿಗರ ಪ್ರಸಿದ್ಧ ಭಾವಗೀತೆಗಳ ಹಾಡುವ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕನ್ನಡ ಕಾವ್ಯ ಪರಂಪರೆಯಲ್ಲಿ ಶಾಶ್ವತ ಸ್ಥಾನ ಪಡೆದ ಅಡಿಗರು ಮೊಗೇರಿಯ ಅಮೂಲ್ಯ ಆಸ್ತಿ. ಇಲ್ಲಿ ಅಡಿಗರ ನಿರಂತರ ಸ್ಮರಣೆ ನಡೆಸುವ ಮೂಲಕ ಈ ಹಿರಿಮೆಯನ್ನು ಮೊಗೇರಿ ತನ್ನದಾಗಿಸಿಕೊಳ್ಳಬೇಕು ಎಂದು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮುಂದಿನ ವರ್ಷ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ರೂ ೧೨೦ ಕೋಟಿ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದು, ಕನಿಷ್ಠ ರೂ 100 ಕೋಟಿ ದೊರೆಯುವ ಭರವಸೆ ಇದೆ. ಅದರಲ್ಲಿ ಕೊರಗರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾದ ಮೊತ್ತದಿಂದ ಅವರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಸಿ. ಬಸವರಾಜು ಹೇಳಿದರು. ಅವರು ಮರವಂತೆಯ ಕೊರಗರ ಕಾಲನಿಗೆ ಭೇಟಿ ನಿಡಿದ್ದ ಸಂದರ್ಭದಲ್ಲಿ ಮಾತನಾಡಿದರು. ಕೊರಗರು ಶತಮಾನದಿಂದ ನೆಲಸಿದ್ದ ನಿವೇಶನವನ್ನು ಅದರ ಭೂಮಾಲೀಕರಿಂದ ಖರೀದಿಸಿ, ಕೊರಗ ಕುಟುಂಬಗಳಿಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಂಡ ಅವರನ್ನು ಮತ್ತು ಉಡುಪಿ ಜಿಲ್ಲಾ ವ್ಯವಸ್ಥಾಪಕ ದೇವರಾಜ್ ಅವರನ್ನು ಕೊರಗ ಸಮುದಾಯದವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಸನ್ಮಾನಿಸಿದರು. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ ವಿ. ಸ್ವಾಗತಿಸಿದರು. ಶೇಖರ ಮರವಂತೆ ನಿವೇಶನದ ಹಕ್ಕು ಪಡೆಯಲು 1998ರಿಂದ ನಡೆಸಿದ್ದ ಪ್ರಯತ್ನಗಳನ್ನು ವಿವರಿಸಿ, ನಿವೇಶನ ಖರೀದಿಗೆ ನಿಗಮ ನೀಡಿದ್ದ ನೆರವಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿದ್ಯಾರ್ಥಿಗಳು ಕಲಿಯುವಿಕೆಯನ್ನು ಒಂದೇ ವಿಷಯದಲ್ಲಿ ತೊಡಗಿಸಿಕೊಳ್ಳದೇ, ಎಲ್ಲಾ ವಿಷಯದ ಜ್ಞಾನವನ್ನು ಹೊಂದಿರಬೇಕು. ಕಲಿಯುವಿಕೆಗೆ ಕೊನೆಯಿಲ್ಲ, ಅದು ನಿರಂತರವಾಗಿರುತ್ತದೆ. ಕಾರ್ಯಗಾರದ ನಂತರವು ವಿದ್ಯಾರ್ಥಿಗಳು ಹೆಚ್ಚಿನ ಸಂಶೋಧನೆಗಳ ಮೇಲೆ ಗಮನ ಹರಿಸಬೇಕು ಎಂದು ಪ್ರಮುಖ ಸಂಪನ್ಮೂಲ ವ್ಯಕ್ತಿ, ಆರ್. ವಿ. ಇಂಜಿನಿರಿಂಗ್ ಕಾಲೇಜಿನ ಪ್ರೊಫೆಸರ್ ಡಾ| ರೇಣುಕಾ ಪ್ರಸಾದ್, ಹೇಳಿದರು. ಅವರು ಕಂಪ್ಯೂಟರ್ ಸೈನ್ಸ್ ವಿಭಾಗದವರು ಆಯೋಜಿಸಿದ ಫ್ರೀ ಓಪನ್ ಸೋರ್ಸ್ ಸಾಫ್ಟ್‌ವೇರ್ ಆಂಡ್ ಆಪ್ಲಿಕೇಶನ್ಸ್ ಎನ್ನುವ ಕಾರ್ಯಗಾರದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸತೀಶ ಎಸ್. ಅಂಸಾಡಿ ಅವರು ವಹಿಸಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾವನ್ನು ಹೆಚ್ಚಿಸಿ ಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಕಂಪ್ಯೂಟರ್ ಸೈನ್ಸ್‌ನ ಚಟುವಟಿಕೆಗಳು ಉಳಿದ ವಿಭಾಗದವರಿಗೂ ಪ್ರೋತ್ಸಾಹ ಕೊಡುತ್ತಿದ್ದು, ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಧ್ಯಕ್ಷೀಯ ಬಾಷಣದಲ್ಲಿ ಹೇಳಿದರು. ವಿಭಾಗದ ಮುಖ್ಯಸ್ಥ ಪ್ರೊ| ಮೆಲ್ವಿನ್ ಡಿ’ಸೋಜಾರವರು ಕಾಲೇಜಿನ ಚೇರ್‌ಮನ್ ಶ್ರೀ ಸಿದ್ದಾರ್ಥ ಜೆ. ಶೆಟ್ಟಿಯವರು…

Read More

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣ ನಡೆದು ಒಂದು ತಿಂಗಳಾದರೂ ಪ್ರಕರಣದ ಸಮಗ್ರ ತನಿಖೆ ನಡೆದಿಲ್ಲ. ಮಾತ್ರವಲ್ಲದೆ ತನಿಖೆಗಾಗಿ ರಚಿಸಲಾಗಿರುವ ಸಮಿತಿಯಲ್ಲಿರುವ ಓರ್ವ ಅಧಿಕಾರಿಯ ಮೇಲೆಯೇ ಆರೋಪಗಳಿವೆ ಎಂದು ದೇಗುಲದ ಮಾಜಿ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್‌ಪಿ ಅಣ್ಣಾಮಲೈ ಮೇಲೆ ಕಾಣದ ಕೈಗಳ ಒತ್ತಡ ಇರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಓರ್ವರು ಈ ಹಿಂದೆ ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅವರ ಮೇಲೆಯೂ ಆಪಾದನೆಗಳಿವೆ. ಹಾಗಾಗಿ ಅವರನ್ನು ಸಮಿತಿಯಿಂದ ಕೈಬಿಡಬೇಕು ಎಂದರು. ನಕಲಿ ಆಭರಣಗಳು ಇನ್ನೂ ದೇಗುಲದ ಕಪಾಟಿನಲ್ಲಿವೆ. ಹಾಗಾದರೆ ಅಸಲಿ ಆಭರಣಗಳು ಎಲ್ಲಿ ಹೋದವು ಎಂಬುದನ್ನು ಕೂಡ ಪತ್ತೆ ಹಚ್ಚಬೇಕಾಗಿದೆ. ಕಳೆದ 8 ವರ್ಷಗಳಿಂದ ದೇಗುಲದ ಲೆಕ್ಕಪರಿಶೋಧನೆ ಕೂಡ ನಡೆದಿಲ್ಲ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ನೀಡುವ ಜವಾಬ್ದಾರಿ ಸರಕಾರದ ಮೇಲಿದ್ದರೇ, ಸರಕಾರಿ ಆಡಳಿತ ವ್ಯವಸ್ಥೆಯನ್ನು ಶ್ರೀಸಾಮಾನ್ಯರಿಗೂ ತಲುಪಿಸುವ ಜವಾಬ್ದಾರಿ ಸರಕಾರಿ ನೌಕರರದ್ದು ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮೈಸೂರು ವಿಭಾಗೀಯ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಬರಗಾಲ ಮುಂತಾದ ಸಂಕಷ್ಟ ಎದುರಿಸುತ್ತಿದ್ದರೂ, ರಾಜ್ಯ ಸರಕಾರಿ ನೌಕರರ ಖಾಲಿ ಹುದ್ದೆ ಭರ್ತಿ ಮಾಡುವ ಜೊತೆಗೆ ವೇತನ ತಾರತಮ್ಯ ಹೋಗಲಾಡಿಸಿ ಕೇಂದ್ರದ ೭ನೇ ಹಣಕಾಸು ಆಯೋಗದ ವೇತನ ರಾಜ್ಯ ಸರಕಾರಿ ನೌಕರರಿಗೆ ನೀಡುವಂತೆ ಮುಖ್ಯಮಂತ್ರಿ ಅವರ ಮನ ಒಲಿಸಲಾಗುತ್ತದೆ ಎಂಬ ಭರವಸೆ ನೀಡಿದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದು ತಪ್ಪಲ್ಲ. ಆರ್ಥಿಕ ಶಕ್ತಿ ಸಿಕ್ಕರೆ ಬದುಕಿಗೆ ಸ್ಥಿರತೆ ಸಿಕ್ಕುತ್ತದೆ. ಎಲ್ಲರಿಗೂ ಉದ್ಯೋಗ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು. ಸರಕಾರ ಆಡಳಿತ ಸುಧಾರಣಾ ಯೋಜನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮೊದಲ ದಿನ ಅಂತರ ತರಗತಿ ಪ್ರತಿಭಾ ಸ್ಫರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅಂತರ ತರಗತಿ ಪ್ರತಿಭಾ ಸ್ಫರ್ಧೆಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ಥಾನ ದ್ವಿತಿಯ ಬಿಕಾಂ, ದ್ವಿತೀಯ ಸ್ಥಾನವನ್ನು ಪ್ರಥಮ ಬಿಎಸ್.ಸಿ, ತೃತೀಯ ಸ್ಥಾನವನ್ನು ಬಿ.ಎ ವಿದ್ಯಾರ್ಥಿಗಳು ಪಡೆದುಕೊಂಡರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ನೇಶ್ ಪ್ರಭು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ರೀಸರ್ಚ್ ಫಂಡ್‌ನಿಂದ ಸಂಶೋಧನೆ ಪ್ರಬಂಧ ಮಂಡಿಸಿದ ಮತ್ತು ಮಾರ್ಗದರ್ಶನ ಮಾಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಕಾಲೇಜಿನ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಘಟಕದಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಂತರ್ ಕಾಲೇಜು ಸ್ಫರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ಉಪಸ್ಥಿತರಿದ್ದರು. ಸಂಖಾಶಾಸ್ತ್ರ ವಿಭಾಗದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ಘಟಕದಿಂದ ಅವರ ವಾರ್ಷಿಕೊತೋತ್ಸವದ ಸಲುವಾಗಿ ಏರ್ಪಡಿಸಲಾಗಿದ್ದ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ವಲಯದ ಪ್ರಧಾನ ವ|ಧರ್ಮಗುರು ಅನೀಲ್ ಡಿಸೋಜಾ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ಜಾಕೋಬ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಧರ್ಮಗುರು ವ|ಪಾವ್ಲ್ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಶೈಲಾ ಆಲ್ಮೇಡಾ, ಸುನೀಲ್ ಡಿಸೋಜಾ, ಹಾಗೂ ಪಂದ್ಯಾವಳಿಯ ತೀರ್ಪುಗಾರರಾಗಿದ್ದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ವೀಕ್ಷಕ ವಿವರಣೆ ನೀಡಿದರು. ಮೂವತ್ತು ಯಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ವಾಡೆಯ ಪಂಗಡಗಳು ಭಾಗವಹಿಸಿ ಅಂತಿಮವಾಗಿ ಲೂರ್ಡ್ಸ್ ವಾಡೆಯವರು ಪ್ರಥಮ ಸ್ಥಾನ ಪಡೆದರೆ ದ್ವೀತಿಯ ಸ್ಥಾನವನ್ನು ಫಾತಿಮಾ ವಾಡೆಯವರು ಗಳಿಸಿಕೊಂಡರು. ಲುರ್ಡ್ಸ್ ವಾಡೆಯ ಅನೀಲ್ ಡಿಸೋಜಾ ಅತ್ಯಧಿಕ ರನ್ನುಗಳನ್ನು ಹಾಗೆ ವಿಕೆಟುಗಳನ್ನು ಪಡೆದು ಕೊಂಡರು. ತ್ರೋಬಾಲ್ ಪಂದ್ಯಾವಳಿಯಲ್ಲಿ 6 ವಾಡೆಯ ಪಂಗಡದವರು ಭಾಗವಹಿಸಿದ್ದು, ಫಲಿತಾಂಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಹೊಸ ಬಸ್ ನಿಲ್ದಾಣ ಪ್ರವೇಶಿಸಿದ ಬಸ್ಸನ್ನು ಯಾವುದೇ ಸೂಚನೆ ನೀಡದೇ ಚಾಲಕ ಹಿಮ್ಮುಖವಾಗಿ ಚಲಾಯಿಸಿದ ಕಾರಣ ಪ್ರಯಾಣಿಕ ಪಾದದ ಮೇಲೆ ಹಾದು ಹೋದ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಬಸ್ ನಿರ್ವಾಹಕನಿಲ್ಲದಿರುವಾಗ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಬಸ್ಸನ್ನು ರಭಸವಾಗಿ ನಿಲ್ದಾಣದೊಳಕ್ಕೆ ಚಲಾಯಿಸಿಕೊಂಡು ಬಂದ ಚಾಲ್ಲಕ ಅದೇ ವೇಗದಲ್ಲಿ ಹಿಂಬದಿಗೆ ರಿವರ್ಸ್ ತೆಗೆದು ಕೊಂಡಿದ್ದಾನೆ. ಈ ಸಂದರ್ಭದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮುದೂರು ಮೂಲದ ಯುವಕನ ಪಾದದ ಮೇಲೆ ಬಸ್ಸಿನ ಮುಂದಿನ ಚಕ್ರ ಹರಿದು ಹೋಗಿವೆ. ಯುವಕನ ಆಕ್ರಂದನಕ್ಕೆ ಬೆಚ್ಚಿದ ಚಾಲಕ ತನ್ನ ಎಡವಟ್ಟನ್ನು ಅರಿತು ಬಸ್ಸನ್ನು ಪುನ: ಮುಂದಕ್ಕೆ ಚಲಾಯಿಸಿದ್ದಾನೆ. ಅಷ್ಟರಲ್ಲಾಗಲೇ ಯುವಕನ ಪಾದವೆನ್ನುವುದು ಸಂಪೂರ್ಣವಾಗಿ ಜಜ್ಜಿ ಹೋಗಿ ನೆತ್ತರು ಚಿಮ್ಮಲಾರಂಭಿಸಿದೆ. ಯುವಕನ ಬೊಬ್ಬೆಗೆ ಕೂಡಲೇ ಸೇರಿದ ಪ್ರಯಾಣಿಕರು ಹಾಗೂ ಅಂಗಡಿಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಚಾಲಕರ ಬಗ್ಗೆ ಆಕ್ರೋಶ: ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದ ಹಾಗೆ ಯಮವೇಗದಿಂದ…

Read More