ದೇವಲ್ಕುಂದ ಮೀನು ಸಂಸ್ಕರಣಾ ಘಟಕ ವಿವಾದ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ, ಮಾ.15: ಕರೆ ನೀಡಿದ್ದು ಪ್ರತಿಭಟನೆಗೆ ಆದರೆ ಬಂದಿದ್ದು ಮಾತ್ರ ಸಂಧಾನಕ್ಕೆ. ರಾಜಿ ಸೂತ್ರ ಮುರಿದು ತಿರುಗಿ ಬಿದ್ದ ಗ್ರಾಮಸ್ಥರು, ಸದ್ದಿಲ್ಲದೇ ಕಾಲ್ಕತ್ತ ಜಯ ಕರ್ನಾಟಕ ಸಂಘಟನೆಯ ಮುಖಂಡರು! ಇದು ಇಂದು ಕಟ್‌ಬೆಲ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮೀನು ಸಂಸ್ಕರಣಾ ಘಟಕ ತೆರೆಯುವುದನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯ ಪ್ರಮುಖಾಂಶ. ಜನರಿಗೆ ತೊಂದರೆಯಾಗುವು ಕಾರಣದಿಂದ ಮೀನು ಸಂಸ್ಕರಣಾ ಘಟಕ ಆರಂಭಿಸುವುದನ್ನು ವಿರೋಧಿಸಿ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಕರೆ ನೀಡಿತ್ತು. ಅದರಂತೆ ಗ್ರಾಮಸ್ಥರು ಕೂಡ ಪಂಚಾಯತ್ ಎದುರು ಜಮಾಯಿಸಿದ್ದರು. ಗ್ರಾಮಸ್ಥರನ್ನು ಉದ್ದೇಶಿಸಿ ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ರಾವ್ ಮಾತನಾಡುತ್ತಾ, ದೇವಲ್ಕುಂದದಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಗೊಳ್ಳಲಿದೆ ಎಂಬ ತಪ್ಪು ಮಾಹಿತಿಯಿಂದಾಗಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಅಲ್ಲಿ ಮೀನು ಶಿಥಿಲೀಕರಣ ಘಟಕ ಆರಂಭವಾಗುವುದೆಂದು ಡಿವೈಎಸ್ಪಿ ಸಮ್ಮುಖದಲ್ಲಿ ಕಾರ್ಖಾನೆಯವರು ಮನವರಿಕೆ ಮಾಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ. ನಮ್ಮ ವಿರೋಧ ಇದ್ದದ್ದು ಮೀನು…
Author: ನ್ಯೂಸ್ ಬ್ಯೂರೋ
ಬೈಂದೂರು: ಕುಂದಾಪುರ ವಲಯದ ವಿಶೇಷ ಶಿಲುಬೆಯ ಹಾದಿ ಕಾರ್ಯಕ್ರಮ ಖುರ್ಸಾಚೆ ವಾಟ್ ಬೈಂದೂರಿನ ಹೋಲಿಕ್ರಾಸ್ ಇಗರ್ಜಿ ಗುಡ್ಡೆಯಲ್ಲಿ ಜರುಗಿತು. ವಲಯದ ಧರ್ಮಕೇಂದ್ರಗಳಾದ ಬೈಂದೂರು, ಪಡುಕೋಣೆ, ತ್ರಾಸಿ, ತಲ್ಲೂರು, ಗಂಗೊಳ್ಳಿ, ಕುಂದಾಪುರ, ಪಿಯೂಸ್ ನಗರ, ಬಸ್ರೂರು, ಕೋಟ, ಕೋಟೇಶ್ವರ ಮತ್ತು ಸಾಸ್ತಾನದಿಂದ ಬಂದಂತಹ ಭಕ್ತಾಧಿಗಳು ಉಡುಪಿಯ ಬಿಷಪ್ ಅತೀ ವಂದನೀಯ ರೆ. ಜೆರಾಲ್ಡ್ ಐಸಾಕ್ ಲೋಬೋ ರವರ ನೇತೃತ್ವದಲ್ಲಿ ಯೇಸು ಕ್ರಿಸ್ತನ ಶಿಲುಬೆಗೆ ಏರಿಸುವ ೧೪ ವಿಶೇಷ ಕಷ್ಟದ ಸಂದರ್ಭಗಳನ್ನು ನೆನಪಿಸಿಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದಿವ್ಯ ಬಲಿಪೂಜೆ ಜರುಗಿತು. ಈ ಸಂದರ್ಭದಲ್ಲಿ ಕುಂದಾಪುರದ ಮುಖ್ಯ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ, ರೆ.ಫಾ. ಪ್ರಕಾಶ್ ಡಿಸೋಜಾ ಕುಂದಾಪುರ, ಗಂಗೊಳ್ಳಿಯ ರೆ.ಫಾ. ಆಲ್ಬರ್ಟ್ ಕ್ರಾಸ್ತಾ, ತ್ರಾಸಿಯ ಚಾರ್ಲ್ಸ್ ಲೂಯಿಸ್, ಪಡುಕೋಣೆಯ ರೆ.ಫಾ. ಜೊಸೆಪ್ ಮಚಾದೋ, ಸಾಸ್ತಾನದ ಜಾನ್ ಮೆಂಡೆನ್ಸೊರವರು ಉಪಸ್ಥಿತರಿದ್ದರು. ಬೈಂದೂರಿನ ಧರ್ಮಗುರುಗಳಾದ ರೆ.ಫಾ. ರೊನಾಲ್ಡ್ ಮಿರಾಂದ್ ರವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಜರುಗಿತು.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಅಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿ ವೇತನದ ಸಲುವಾಗಿ ಆರ್.ಬಿ.ಬಗ್ವಾಡಿ ಇವರ ಸಂಯೋಜನೆಯಲ್ಲಿ ಬಗ್ವಾಡಿಯ ಮಹಿಷಾಸುರಮರ್ದಿನಿ ಸಭಾ ಭವನದಲ್ಲಿ ಆಯೋಜಿಸಲಾದ ತೆಂಕು-ಬಡಗಿನ ಹೆಸರಾಂತ ಯಕ್ಷಗಾನ ಕಲಾವಿದರ ಸಮ್ಮೀಲನ ’ಯಕ್ಷ ಸಂಭ್ರಮ’ದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ, ಬಡಗುತಿಟ್ಟಿನ ಯಕ್ಷರಂಗದಲ್ಲಿ 25 ವಸಂತ ಪೂರೈಸಿದ ಭಾಗವತ ಉಮೇಶ ಸುವರ್ಣ ಗೋಪಾಡಿ, ಯುವ ಪ್ರತಿಭಾನ್ವಿತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್, ಯಕ್ಷಗಾನ ಬದುಕಿಗೆ ಸಂಸ್ಕಾರವನ್ನು ನೀಡುವ ಕಲೆ. ಮನೋಲ್ಲಾಸದ ಜೊತೆ ಪೌರಾಣಿಕ ಕಥೆಗಳನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸುತ್ತದೆ. ಮಹಾಭಾರತ, ರಾಮಾಯಣದ ಮೌಲ್ಯಗಳು ಯಕ್ಷಗಾನದ ಮೂಲಕ ಹೆಚ್ಚು ಪ್ರಸಾರಗೊಂಡಿವೆ. ಯಕ್ಷಗಾನದ ಬಗ್ಗೆ ಇಂದಿನ ಮಕ್ಕಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ…
ಬೈಂದೂರು: ವಿಶ್ವದ ಅತಿ ಎತ್ತರದ ಸಮರ ಕಣ ಸಿಯಾಚಿನ್ ನೀರ್ಗಲ್ಲ ಪ್ರದೇಶದ ಹಿಮಸಾಗರದಡಿ ಸಿಲುಕಿ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಫೆ. ೧೧ ರಂದು ಹುತಾತ್ಮರಾದ ಧಾರವಾಢ ಜಿಲ್ಲೆಯ ಕುಂದುಗೋಡು ತಾಲೂಕಿನ ಬೆಟಂದೂರು ಗ್ರಾಮದ ವೀರ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಧರ್ಮಪತ್ನಿ ಮಾದೇವಿ ಕೊಪ್ಪದ ಅವರಿಗೆ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ 25ಸಾವಿರದ ಪರಿಹಾರದ ಚೆಕ್ ವಿತರಿಸಲಾಯಿತು. ಪರಿಹಾರದ ಚೆಕ್ ವಿತರಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಮಾತನಾಡಿ, ಯೋಧ ಹನುಮಂತಪ್ಪ ಸಿಯಾಚಿನ್ ಹಿಮದ ರಾಶಿಯ ೩೫ ಅಡಿ ಆಳದಲ್ಲಿ ಸಿಲುಕಿ, ಆರು ದಿನಗಳ ಕಾಲ ಆಹಾರವಿಲ್ಲದೇ ಜೀವ ಹಿಡಿದಿಟ್ಟುಕೊಂಡಿರುವುದು ಸೋಜಿಗವೇ ಸರಿ, ಆದರೆ ಅವರ ಆರೋಗ್ಯ ಸುಧಾರಿಸಲೆಂದು ದೇಶದ ಕೋಟ್ಯಾಂತರ ಜನರ ಪ್ರಾರ್ಥಿಸಿದರು, ಅವರನ್ನು ಉಳಿಸಿಕೊಳ್ಳಲು ಸಾಧವಾಗದಿರುವುದು ವಿಷಾದನೀಯ ಸಂಗತಿ. ದೇಶ ವೀರ ಯೋಧನೊಬ್ಬನನ್ನು ಕಳೆದುಕೊಂಡಿದೆ. ಸರ್ಕಾರ ಅವರ ಕಟುಂಬಕ್ಕೆ ಪರಿಹಾರದ ಮೊತ್ತ ನಿಡಿದರೂ, ಅವರ ಪತ್ನಿಗೆ ಶೀಘ್ರ…
ಶಿರೂರು: ಶಿರೂರು ಜೆಸಿಐ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಅರಮನೆಹಕ್ಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಗ್ರಾಪಂ ಸದಸ್ಯ ಮಂಜುನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಶಿರೂರು ಗ್ರಾಪಂಗೆ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕಯಾದ ದಿಲ್‌ಶಾದ್ ಬೇಗಂರವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಿಲ್‌ಶಾದ್ ಬೇಗಂ ೨೧ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ ಮತ್ತು ಸಂಸಾರ ಎರಡನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾಳೆ. ಜೆಸಿಐ ಸಂಸ್ಥೆ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಶ್ಲಾಘಿಸಿದರು. ಶಿರೂರು ಜೆಸಿಐ ಅಧ್ಯಕ್ಷ ಹರೀಶ್ ಶೇಟ್, ಕಾರ್ಯದರ್ಶಿ ನಾಗೇಶ ಕೆ, ಗ್ರಾಪಂ ಸದಸ್ಯೆ ಸಂಧ್ಯಾ ವಿಶ್ವನಾಥ, ರೇವತಿ, ನಿಕಟಪೂರ್ವಾಧ್ಯಕ್ಷ ಪ್ರಕಾಶ ಮಾಕೋಡಿ, ಜಾನ್ವಿ.ಪಿ. ಪ್ರಭು, ವೀರಮ್ಮ, ರೂಪಾ ರೇವಣಕರ್, ಕವಿತಾ.ಕೆ.ಮೂರ್ತಿ ಹಾಜರಿದ್ದರು.
ಕುಂದಾಪುರ: ಶ್ರೀ ಕ್ಷೇತ್ರ ಹಟ್ಟಿಯಂಗಡಿಯ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟದ ಪದಗ್ರಹಣ ಸಂದರ್ಭದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ.ಮೂ.ಎಚ್.ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ಅಮರ ಪ್ರಸಾದ ಶೆಟ್ಟಿ, ವಲಯಾಧ್ಯಕ್ಷೆ ಸುಪ್ರಿತಾ ಶೆಟ್ಟಿ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕೃಷಿಕ ಸೋಮಶೇಖರ ಶೆಟ್ಟಿ ಕೆಂಚನೂರು, ಹಟ್ಟಿಯಂಗಡಿ ಗ್ರಾ.ಪಂ.ಅಧ್ಯಕ್ಷ ರಾಜೀವ ಶೆಟ್ಟಿ, ಶ್ರೀ ಲೋಕನಾಥೇಶ್ವರ ದೇವಸ್ಥಾನ ಹಟ್ಟಿಯಂಗಡಿ ಇದರ ಆಡಳಿತ ಮೊಕ್ತೇಸರರಾಧ ಸನತ್ ಕುಮಾರ್ ರೈ, ಹಟ್ಟಿಯಂಗಡಿ ಜೈನಕ್ಷೇತ್ರದ ಮುಖ್ಯಸ್ಥರಾದ ಎಚ್.ಚಂದ್ರರಾಜೇಂದ್ರ ಅರಸ್, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯಕುಮಾರ್ ಹಟ್ಟಿಯಂಗಡಿ, ಹಟ್ಟಿಯಂಗಡಿ ಒಕ್ಕೂಟದ ಅಧ್ಯಕ್ಷ ನಾಗರಾಜ್, ಕನ್ಯಾನ ಒಕ್ಕೂಟದ ಅಧ್ಯಕ್ಷ ಜಗದೀಶ ಆಚಾರ್ಯ, ಉಪಸ್ಥಿತರಿದ್ದರು. ವಂಡ್ಸೆ ವಲಯ ಮೇಲ್ವಿಚಾರಕ ನಾಗರಾಜ ಎಸ್. ಸ್ವಾಗತಿಸಿ,…
ಬೈಂದೂರು: ವಿದ್ಯಾರ್ಥಿ ದೆಸೆಯನ್ನು ಜೀವನದ ಸುವರ್ಣ ಕಾಲವೆಂದು ಪರಿಗಣಿಸುತ್ತಾರೆ. ಅದು ಅಕ್ಷರಶ: ಹಾಗಾಗಬೇಕಾದರೆ ಅದರ ಪ್ರತಿ ಕ್ಷಣವನ್ನೂ ಅನುಭವಿಸುವ ಮೂಲಕ ವಿದ್ಯಾರ್ಥಿ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಎತ್ತರಿಸಿಕೊಂಡಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಬೆಳೆಸಿಕೊಂಡಿರಬೇಕು. ಮುಂದಿನ ಬದಲಾವಣೆಗಳನ್ನು ಎದುರಿಸಲು ಸಾಧ್ಯವಾಗುವ ಮನೋಬಲವನ್ನು ಸಂಪಾದಿಸಿಕೊಂಡಿರಬೇಕು ಎಂದು ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ರಾಧಾಕೃಷ್ಣ ಶೆಟ್ಟಿ ಹೇಳಿದರು. ನಾವುಂದದ ರಿಚರ್ಡ್ ಆಲ್ಮೇಡ ಮೆಮೋರಿಯಲ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ಥಾಪಕರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಮೇಲ್ಮೆಗಾಗಿ ದುಡಿದವರನ್ನು ಸ್ಮರಿಸುವ, ಗೌರವಿಸುವ ಕ್ರಮ ಇತರರನ್ನು ಆ ಮಾರ್ಗ ಕ್ರಮಿಸಲು ಪ್ರೇರೇಪಿಸುತ್ತದೆ. ಅಂತಹ ಪರಂಪರೆ ಇರುವ ದೇಶ ಉನ್ನತಿಗೇರುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ ಎಂದು ಅವರು ನುಡಿದರು. ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಆಲ್ಮೇಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಪ್ರೀತಿ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಎಸ್. ನಾರಾಯಣ ರಾವ್ ಸ್ಥಾಪಕರ ಸಂಸ್ಮರಣೆ ಮಾಡಿದರು. ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸುಮಲತಾ…
ಕುಂದಾಪುರ: ಇತ್ತೀಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ| ಮನು ಬಳಿಗಾರ ರವರಿಂದ ಪರಿಷತ್ತಿನ ಧ್ವಜವನ್ನು ಸ್ವೀಕರಿಸುವುದರ ಮೂಲಕ ನೀಲಾವರ ಸುರೇಂದ್ರ ಅಡಿಗರು ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು, ಇನ್ನೊಬ್ಬ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರುಹಾಗೂ ಬೆಂಗಳೂರು ನಗರ ಜಿಲ್ಲಾ ನೂತನ ಅಧ್ಯಕ್ಷರಾದ ಮಾಯಣ್ಣನವರು ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಲಯವು, “ಸುಜ್ಞಾನ” ಮಣೂರು, ಕೋಟ. 576221 ಇಲ್ಲಿ ಪ್ರಾರಂಭಿಸಲಾಗಿದೆ ಎಂದು ಕ.ಸಾ.ಪ ಜಿಲ್ಲಾ ಪ್ರಕಟಣೆ ತಿಳಿಸಿದೆ. ದೂರವಾಣಿ ಸಂಖ್ಯೆ: 9242139645
ಕುಂದಾಪುರ: ಓದು ಮತ್ತು ಬರವಣಿಗೆ ಚಿಂತನೆ ಕ್ಷೀತಿಜ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಓದು ಮತ್ತು ಬರವಣಿಗೆ ಕ್ರಿಯಾಚರಣೆಯಲ್ಲಿ ಹಾಗೂ ಸಾಂಸ್ಕೃತಿಕವಾಗಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಸಮಕಾಲಿನ ವಿದ್ಯಮಾನಗಳಿಗೆ ವಿದ್ಯಾರ್ಥಿಗಳು ತಮ್ಮ ಬರವಣಿಗೆ ಮೂಲಕ ಸ್ಪಂದಿಸಬೇಕು ಎಂದು ಉಡುಪಿ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶಪಾಲೆ ಡಾ. ಮಾಧವಿ ಭಂಡಾರಿ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿದರು.ಕಾಲೇಜ್ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಯೋಜಕ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸದರು. ಸಹಸಂಯೋಜಕಿ ರೇಷ್ಮಾ ಶೆಟ್ಟಿ ಅತಿಥಿ ಪರಿಚಯಿಸಿದರು. ವಿದ್ಯಾರ್ಥಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಸಹಸಂಯೋಜಕಿ ಪ್ರೇಮಲಾಕ್ಷಿ ಬಿ.ಕೆ. ವಂದಿಸಿದರು.
ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಇಲ್ಲಿನ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಪ್ರೊ.ಗಿರೀಶ್ ಮನಶಾಸ್ತ್ರಜ್ಞರು ಕುಂದಾಪುರ ಇವರು ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಬಗೆ ಹೇಗೆ ಎನ್ನುವ ಕುರಿತು ತಿಳಿಸುತ್ತಾ, ಯಾವುದೇ ವಿಷಯವಾಗಲಿ ನಕರಾತ್ಮಕ ಯೋಜನೆ ನಮ್ಮದಾಗಿರಬೇಕು. ಬದಲಾವಣೆ ಎನ್ನುವುದು ಬದುಕಿನ ನಿಯಮ , ಎಂತಹ ಸವಾಲುಗಳು ಬಂದರೂ ಅದನ್ನು ಎದುರಿಸುವ ಛಲಗಾರಿಕೆ ನಮ್ಮದಾಗಿರಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಬಿ.ಎ. ಮೇಳಿ ಉಪಸ್ಥಿತರಿದ್ದರು . ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ್ ಮಯ್ಯ ಕಾರ‍್ಯಕ್ರಮ ಸಂಯೋಜಿಸಿದರು.
