ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ಯುವಶಕ್ತಿಯ ಮುಂದಿರುವ ಸವಾಲುಗಳು ಜಾಗತಿಕವಾಗಿವೆ. ಬೆಳೆಯಬೇಕು ಎಂಬ ತುಡಿತ, ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ವ್ಯವಸ್ಥೆ ಜೊತೆಗೆ ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಭವಿಷ್ಯವನ್ನು ಚೆನ್ನಾಗಿ ರೂಪಿಸುವತ್ತ ಗಮನ ಹರಿಸಿ ದೇಶದ ಅಪ್ರತಿಮ ಸಂಪತ್ತಾಗಬೇಕು ಎಂದು ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇಅದರ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ಯುವಜನತೆಯಲ್ಲಿ ಅಸಾಮಾನ್ಯ ಪ್ರತಿಭೆ, ಜ್ನಾನ , ಬುದ್ಧಿವಂತಿಕೆ ಇದೆ. ಅದಕ್ಕೆ ಪೂರಕಾವಾಗಿ ಕಲಿಯುವಿಕೆಗೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಬದುಕಿನ ಕುರಿತು ಆಲೋಚಿಸಿ, ಗಮನಿಸಿ ಸವಾಲುಗಳನ್ನು ಹೋರಾಟದ ಮನೋಭಾವನೆಯಿಂದ ಸ್ವೀಕರಿಸಿ ಬದುಕನ್ನು ಹಸನಾಗಿಸುಕೊಳ್ಳುವಂತಹ ಪ್ರಜ್ನಾವಂತಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದೊಂದಿಗೆ ಪಾಠೇತರ ಚಟುವಟಿಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಾಂಸ್ಕೃತಿಕ ಕಲೆ, ಆಚಾರ-ವಿಚಾರವನ್ನು ಕಲಿಯುವುದರೊಂದಿಗೆ ನಮ್ಮ ಸಾಂಸ್ಕೄತಿಕ ಶ್ರೀಮಂತಿಕೆಯನ್ನು ಸೂರ್ಯ -ಚಂದ್ರರಿರುವವರೆಗೂ ಅಜರಾಮರವಾಗಿಸಬೇಕು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀದೇವಿಯ ಅನುಗ್ರಹ ಕೃಪೆಯಿಂದ ಜಿಎಸ್‌ಬಿ ಸಮಾಜ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಸಮಾಜದಿಂದ ನಾವು ಗಳಿಸಿದ ದ್ರವ್ಯವನ್ನು ಭಯ ಭಕ್ತಿಯಿಂದ ಯಾವುದೇ ಅಹಂಕಾರವಿಲ್ಲದೆ ಉತ್ತಮ ಕೆಲಸಕ್ಕೆ ನೀಡುತ್ತಿರಬೇಕು. ನಾವು ನೀಡಿದ ದಾನದ ಉಪಯೋಗ ಸರಿಯಾದ ರೀತಿಯಲ್ಲಿ ಆಗುವಂತಿರಬೇಕು. ಅತಿಥಿ ಸತ್ಕಾರ ನಮ್ಮ ಸಂಸ್ಕೃತಿಯಾಗಿದ್ದು ಅತಿಥಿಗಳನ್ನು ಸತ್ಕಾರ ಮಾಡುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಅಲ್ಲದೆ ನಮ್ಮಲ್ಲಿ ಪ್ರೀತಿ ಬೆಳೆಯುತ್ತದೆ ಹಾಗೂ ಸಂಬಂಧಗಳು ವೃದ್ಧಿಯಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಅವರು ಕುಂದಾಪುರ ತಾಲೂಕು ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ವಠಾರದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ’ಶ್ರೀ ನಾರಾಯಣೀ ಅತಿಥಿ ಗೃಹ’ ಸಮುಚ್ಛಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಾಲಯದಲ್ಲಿ ಅನೇಕ ರೀತಿಯ ವಿವಿಧ ಧಾರ್ಮಿಕ ಚಟುವಟಿಕೆಗಳು, ದೇವಾಲಯದ ಅಭಿವೃದ್ಧಿ ಕಾರ್ಯಗಳು, ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಯೋಜನೆಗಳು ಯಶಸ್ವಿಯಾಗಿ ನಡೆದಿದ್ದು, ದೇವಾಲಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಸ್ವಚ್ಚತಾ ಆಂದೋಲನ ಕೇವಲ ಪ್ರಚಾರಕ್ಕಾಗಿ ಮಾತ್ರ ನಡೆಯುತ್ತಿದೆ. ಘನತ್ಯಾಜ್ಯಗಳ ಸಮರ್ಪಕ ವಿಲೇವಾರಿ ನಡೆದಾಗ ಮಾತ್ರ ನಗರಗಳ ನೈರ್ಮಲ್ಯ ಹೆಚ್ಚಿಸಲು ಸಾಧ್ಯವಾಗುವುದರ ಜೊತೆಗೆ ಮುಂದಿನ ಪೀಳಿಗೆಗೂ ಉತ್ತಮ ಸಮಾಜವನ್ನು ಕಟ್ಟಕೊಡಲು ಸಾಧ್ಯವಿದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಟ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಸ್ವಚ್ಚತಾ ಆಂದೋಲನದಲ್ಲಿ ನಾಗರಿಕರ ಪಾತ್ರ” ಕುರಿತು ಮಾತನಾಡುತ್ತಿದ್ದರು. ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೩೦,೦೦೦ ಜನವಸತಿ ಇದ್ದು, ಸುಮಾರು ೧೫ ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ಬಳಸಿಕೊಂಡು ಗೊಬ್ಬರ ತಯಾರಿಸುವ ಘಟಕವನ್ನು ಪುರಸಭೆ ಉತ್ತಮವಾಗಿ ನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿಯಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ದಕ್ಷಿಣದ ಅಧ್ಯಕ್ಷ ವಾಸುದೇವ ಕಾರಂತ ವಹಿಸಿದ್ದರು. ಪ್ರಾರ್ಥನೆಯನ್ನು ಶ್ರೀನಿವಾಸ ಶೇಟ್ ನೇರವೇರಿಸಿದರು. ಕಾರ್ಯದರ್ಶಿ ರೊ ಸುರೇಶ ಮಲ್ಯ ವಾರದ ವರದಿಯನ್ನು ಮಂಡಿಸಿದರು. ರೋಟರಿ ಮಾಹಿತಿಯನ್ನು…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕನ್ನಡ ಶಾಲೆಗಳಿಗೆ ಬೀಗ ಬೀಳಲು ಪರೋಕ್ಷವಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯಲ್ಲಿನ ಲೋಪವೇ ಕಾರಣವಾಗುತ್ತಿವೆ ಎಂಬ ಅಂಶ ಗುಟ್ಟಾಗಿ ಉಳಿದಿಲ್ಲ. ಕನ್ನಡ ಶಾಲೆಗಳಿಗೆ ಮಕ್ಕಳ ಬರುವುದಿಲ್ಲ ಎಂಬ ಆತಂಕದ ನಡುವೆ, ಬರುವ ಮಕ್ಕಳಿಗೂ ಸಸೂತ್ರವಾದ ಶೈಕ್ಷಣಿಕ ವಾತಾವಣವನ್ನು ನಿರ್ಮಿಸುವಲ್ಲಿ ಶಿಕ್ಷಣ ಇಲಾಖೆ ಸೋಲುತ್ತಿವೆ ಎಂಬುದಕ್ಕೆ ಇಡುರು-ಕುಂಜ್ಞಾಡಿ ಗ್ರಾಪಂ ವ್ಯಾಪ್ತಿಯ ಕುಗ್ರಾಮವಾದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಾಗಿದ್ದವರು ಏಕಾಏಕಿ ವರ್ಗಾವಣೆ ಸಾಕ್ಷೀಕರಿಸಿವೆ. ಬೈಂದೂರು ವಲಯದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ೧೩ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಶಿಕ್ಷಕರೂ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸದ್ದಿಲ್ಲದೇ ವರ್ಗಾವಣೆಗೊಂಡು ಇಲ್ಲಿನ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸದ ಘಟನೆ ತಡವಾಗಿ ಬೆಳಕಿದೆ ಬಂದಿದೆ. ಶಿಕ್ಷಕರು ವರ್ಗಾವಣೆಗೊಂಡ ವಿಚಾರ ಅವರ ಜನ್ನಾಲು ಶಾಲೆಗೆ ಗೈರಾಗುವವರೆಗೂ ಶಾಲೆಯ ಮಕ್ಕಳಿಗಾಗಲಿ, ಎಸ್‌ಡಿಎಂಸಿ ಸದಸ್ಯರಿಗಾಗಲಿ ತಿಳಿದಿರಲಿಲ್ಲ. ಶಿಕ್ಷಕರು ಏಕೆ ಬರುತ್ತಿಲ್ಲ ಎಂದು ಗೊಂದಲಕ್ಕೆ ಬಿದ್ದ ಎಸ್‌ಡಿಎಂಸಿ ಸದಸ್ಯರು,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಸೈಕ್ಲಿಂಗ್ ಕ್ಲಬ್ ವತಿಯಿಂದ ಜಿಲ್ಲೆಯ ಶಿರೂರಿನಿಂದ ಹೆಜಮಾಡಿವರೆಗೆ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ ನೇತೃತ್ವದಲ್ಲಿ ಸೈಕ್ಲಿಂಗ್ ರಾಲಿ ನಡೆಯಿತು. ಸೈಕ್ಲಿಂಗ್ ಪೂರ್ಣಗೊಳಿಸಿದ ಬಳಿಕ ಎಸ್ಪಿ ಕೆ. ಅಣ್ಣಾಮಲೈ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ, ಫಿಟ್‌ನೆಸ್ ಮತ್ತು ಮಾನಸಿಕ ಸಾಮರ್ಥ್ಯ ವ್ರದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಸೈಕ್ಲಿಂಗ್ ನಡೆಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸೈಕ್ಲಿಂಗ್ ಕ್ಲಬ್ ಉಡುಪಿ ವತಿಯಿಂದ ನಡೆದ ರಾಲಿಗೆ ಅದಾನಿ ಯುಪಿಸಿಎಲ್, ಕುಂದಾಪುರ ಪಾರಿಜಾತ ಹೋಟೆಲ್, ಉಡುಪಿಯ ಜಂಕ್ಷನ್ ಬೇಕರಿ ಹಾಗೂ ಸೇಂಟ್ ಆಂಥೊನಿ ಸೈಕಲ್ ಕಂಪೆನಿ ಪ್ರಾಯೋಜಕತ್ವ ವಹಿಸಿದ್ದವು. ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ ಸೈಕ್ಲಿಂಗ್ ಕ್ಲಬ್, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು ೨೮ ಜನ ರಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು. ಈಜುಪಟು ಉಡುಪಿಯ ರೋನನ್…
ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ದೇಗುಲ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ.ಹೆಗ್ಡೆ ಪ್ರಧಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉಡುಪಿ ಪಲಿಮಾರು ಮಠ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿವಿಧ ಧರ್ಮದವರು ನೆಲೆಸಿರುವ ಭಾರತದಲ್ಲಿ ಒಂದೊಂದು ಧರ್ಮಿಯರು ಸ್ಥಳವನ್ನು ಪುಣ್ಯಕ್ಷೇತ್ರವೆಂದು ತಿಳಿದು ಸಂದರ್ಶಿಸುತ್ತಾರೆ. ಆದರೆ ಸರ್ವಧರ್ಮಿರ ಸಂದರ್ಶಿಸುವ ವಿದ್ಯಾಸಂಸ್ಥೆ ಮಾತ್ರ ಶೈಕ್ಷಣಿಕ ದೇವಾಲಯಗಳಾಗಿವೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದೇಶಗಳಲ್ಲಿ ಸರಕಾರವೇ ಮಕ್ಕಳಿಗೆ ವಿದ್ಯಾಭ್ಯಾಸ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ. ನಮ್ಮ ದೇಶದಲ್ಲಿ ಆ ಪ್ರಮಾಣ ಕಡಿಮೆ. ಸರಕಾರ ಅಕ್ಕಿ, ಬೇಳೆ, ಭಾಗ್ಯ ಕೊಡುವುದಕ್ಕಿಂತ ಉದ್ಯೋಗ ನೀಡುವ ವಿದ್ಯೆ ನೀಡಬೇಕು ಎಂದು ಸಲಹೆ ಮಾಡಿದ ಅವರು, ಅಧ್ಯಯನ, ದೇವರ ಅನುಗ್ರಹ ಜೊತೆ ಪ್ರಾಮಾಣಿಕ ಪ್ರಯತ್ನ ಇದ್ದರೆ ಮೇಲಕ್ಕೇರಲು ಸಾಧ್ಯ. ಕುಂದಾಪುರ ಎಜುಕೇಶನ್ ಸೊಸೈಟಿ ಶೈಕ್ಷಣಿಕ ವಲಯದಲ್ಲಿ ಉತ್ತಮ ಸಾಧನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕಲೆ ಹಾಗೂ ಇನ್ನಿತರ ಕೌಶಲ್ಯಗಳು ಹೆಚ್ಚೆಚ್ಚು ಇದ್ದಷ್ಟು ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವ್ಯವಹಾರ ಅಧ್ಯಯನ ಉತ್ಸವ ಸ್ಪರ್ಧಾ – 16 ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಭೆ ಇದ್ದರೆ ಸಾಲದು. ಅದಕ್ಕೆ ತಕ್ಕಂತೆ ತಯಾರಿ ಮತ್ತು ಅಧ್ಯಯನ ಅಗತ್ಯವಾಗಿರುತ್ತದೆ. ಕೇವಲ ಉದ್ಯೋಗಕ್ಕಾಗಿ ಅಲ್ಲದೇ ಬದುಕನ್ನು ಉತ್ತಮ ರೀತಿಯಲ್ಲಿ ನಡೆಸಲು ಮತ್ತು ಯಶಸ್ವಿಯಾಗಲು ನೀವು ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ಬದುಕಿನ ಒಂದು ಭಾಗವಾಗಿದೆ. ನಿಮಗೆ ಕಾಲೇಜು ಉತ್ತಮ ಶಿಕ್ಷಣವನ್ನು ಕೊಡುತ್ತದೆ. ಆದರೆ ಬದುಕೆ ಒಂದು ಅನುಭವ. ಜೀವನದ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಟ್ಟಾಗ ಯಶಸ್ಸು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರು ಗ್ರಾಮದ ಮೂಡುತಾರಿಬೇರು ಶ್ರೀ ಆದಿಶಕ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು 1ಲಕ್ಷ ರೂ. ಡಿ.ಡಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ ಅವರು ದೇವಸ್ಥಾನದ ಸಮಿತಿಯವರಿಗೆ ಡಿ.ಡಿಯನ್ನು ಇತ್ತೀಚೆಗೆ ಹಸ್ತಾಂತರಿಸಿದರು. ಚಿತ್ತೂರು ವಲಯದ ಮೇಲ್ವಿಚಾರಕ ಪ್ರಭಾಕರ ದೇವಸ್ಥಾನದ ಸಮಿತಿಯವರಾದ ನಾಗರಾಜ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಸಹಯೋಗದೊಂದಿಗೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳು ಅಭಿನಯಿಸಿದ ಧಾಂ ಧೂಂ ಸುಂಟರಗಾಳಿ ನಾಟಕ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಪ್ರದರ್ಶನಗೊಂಡಿತು. ಶೇಕ್ಸ್ಫಿಯರ್‌ನ್ ಟಿಂಪೆಸ್ಟ್ ಆಧಾರಿತ ನಾಟಕ ಧಾಂ ಧೂಂ ಸುಂಟರಗಾಳಿ ನಾಟಕವನ್ನು ಖ್ಯಾತ ಲೇಖಕಿ ವೈದೇಹಿ ರಚಿಸಿದ್ದು, ಕ್ರಿಯಾಶೀಲ ನಿರ್ದೇಶಕ ಜೀವನ್‌ರಾಂ ಸುಳ್ಯ ರಂಗದ ಮೇಲೆ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳ ನಟನೆ, ರಂಗವಿನ್ಯಾಸ, ಬೆಳಕಿನ ಸಂಯೋಜನೆ, ಸಂಗೀತ, ವಸ್ತ್ರ ವಿನ್ಯಾಸ, ರಂಗತಂತ್ರ, ಜಾದೂ ಸಂಯೋಜನೆ, ಪ್ರಸಾದನ ಎಲ್ಲಾ ವಿಭಾಗಗಳಲ್ಲಿಯೂ ನಾಟಕ ಉತ್ತಮವಾಗಿ ಮೂಡಿಬಂದಿದ್ದು, ಮಕ್ಕಳಿಗೆ ವಿಶೇಷ ಮನೋರಂಜನೆ ನೀಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದಿ. ಕೆ. ಶ್ರೀನಿವಾಸ ರಾವ್ ಮತ್ತು ಪದ್ಮಾವತಿ ಎಸ್. ರಾವ್ ಹೇರಂಜಾಲು ಇವರ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನ ಹಾಗೂ ರಾಮಕ್ಷತ್ರಿಯ ಸಮಾಜ ಕುಂದಾಪುರ, ಬೈಂದೂರು ಇದರ ಆಶ್ರಯದಲ್ಲಿ ಹೇರಂಜಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೇಗಾರ್ ಅವರನ್ನು ಸನ್ಮಾನಿಸಲಾಯಿತು. ಹೆರಂಜಾಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ. ಪದ್ಮನಾಭ ರಾವ್, ಸುಶೀಲ ಪಾಂಡುರಂಗ ನಾಯಕ್, ವಿಷ್ಣುಮೂರ್ತಿ ಕುಂದಾಪುರ, ರಶ್ಮಿರಾಜ್ ಕುಂದಾಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
