Author: ನ್ಯೂಸ್ ಬ್ಯೂರೋ

ಕುಂದಾಪುರ: ನಗರ, ಪಟ್ಟಣಗಳ ಮೂಲಭೂತ ಸೌಲಭ್ಯ, ವಾರಪೂರ್ತಿ ಶುದ್ಧಿ ಕುಡಿಯುವ ನೀರು ಪೂರೈಕೆ, ವೈಜ್ಞಾನಿಕ ಕಸ ವಿಲೇವಾರಿ, ಒಳ ಚರಂಡಿ ಯೋಜನೆ ಮೂಲಕ ತ್ಯಾಜ್ಯ ನೀರಿ ಪರಿಷ್ಕರಿಸಿ ಕೃಷಿ ಮತ್ತು ಕೃಷಿಯೇತರಕ್ಕ ಬಳಕೆ ಜೊತೆ ನಗರ ಪಟ್ಟಣಗಳ ರೋಗ ಮುಕ್ತವಾಗಿ ಪರಿವರ್ತಿಸುವುದು ನಮ್ಮ ರಾಜ್ಯ ಕಾಂಗ್ರೆಸ್ ಸರಕಾರದ ಗುರಿ ಎಂದು ಜಿಲ್ಲಾ ಉಸ್ತುವಾರ ಸಚಿವ ವಿನಿಯ ಕುಮಾರ್ ಸೊರಕೆ ಹೇಳಿದ್ದಾರೆ. ಶನಿವಾರ ಕುಂದಾಪುರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಆರಂಭಗೊಳ್ಳಲಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ತೀರದ ನಗರ ಪಟ್ಟಣಗಳ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅತ್ಯಾಧುನಿಕ ಟೆಚ್ಚ್ ನೀಡಿ, ತ್ಯಾಜ್ಯದಿಂದ ಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಎಡಿಬಿ ಯೋಜನೆಯಲ್ಲಿ 27 ಕೋಟಿ ರೂ.ವೆಚ್ಚದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗುತ್ತದೆ…

Read More

ಕುಂದಾಪುರ: ರಜತದಾನದಿಂದ ಪಿತೃದೋಷ ಪರಿಹಾರ ಎಂಬುದು ಶಾಸ್ತ್ರ ವಿಧಿತ. ಮಾನವ ಜೀವನದಲ್ಲಿ ಬಿಳಿಲೋಹ ಬೆಳ್ಳಿಗೆ ಪ್ರಮುಖ ಸ್ಥಾನವಿದೆ ಈಶ್ವರ ತ್ರಿಪುರಾಸುರನನ್ನು ಸಂಹರಿಸಿದಾಗ ಈಶ್ವರನ ಮೂರನೇ ಕಣ್ಣಿನಲ್ಲಿ ಸುರಿದ ಆನಂದ ಬಾಷ್ಪವೇ ಬೆಳ್ಳಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಮಾನವನ ಮಾನಸಿಕ ಆರೋಗ್ಯಕ್ಕೆ ಬೆಳ್ಳಿ ಅಗತ್ಯ, ಇಂತಹ ಶ್ರೇಷ್ಟ ಲೋಹವನ್ನು ದಾನ ಮಾಡುವುದರಿಂದ ಪಿತೃಋಣ ಮತ್ತಿತರ ಪಾಪಗಳು ಪರಿಹಾರವಾಗುತ್ತವೆ ಎಂದು ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಪ್ರಸಿದ್ದ ಪುಣ್ಯಕ್ಷೇತ್ರ ಗುಡ್ಡಟ್ಟು ವಿನಾಯಕ ದೇವಳದ ಗರ್ಭಗುಡಿಯ ಮುಖದ್ವಾರಕ್ಕೆ ದಾನಿಗಳ ನೆರವಿನಿಂದ ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ಆಚ್ಚಾಧಿಸಿದ ರಜತ ದ್ವಾರವನ್ನು ಶುಕ್ರವಾರ ಸಂಕಷ್ಟಹರ ಚತುರ್ಥಿಯಂದು ಶ್ರೀ ದೇವರಿಗೆ ಸಮರ್ಪ್ಪಿಸಿ ಅವರು ಮಾತನಾಡಿದರು. ಪ್ರಶಾಂತ ಪರಿಸರದಲ್ಲಿ ಗುಹಾಂತರ್ಗತವಾಗಿರುವ ಗುಡ್ಡಟ್ಟು ಕ್ಷೇತ್ರವನ್ನು ವರ್ಣಿಸಿದ ಅವರು, ವಿನಾಯಕನ ಅನುಗ್ರಹದಿಂದ ಮತ್ತು ದಾನಿಗಳ ನೆರವಿನಿಂದ ದೇವಾಲಯದ ಇತರ ಎಲ್ಲಾ ಸ್ಥಂಭಗಳೂ ಶೀಘ್ರ ರಜತ ಆಚ್ಚಾದನೆಗೊಳ್ಳಲಿ ಎಂದು ಹಾರೈಸಿದರು. ಶ್ರೀ ದೇವರ ಶಿಲಾಯಮಯ ಗರ್ಭಗುಡಿಯ ಸಮರ್ಪಣಾ…

Read More

ಗಂಗೊಳ್ಳಿ : ದೇವರ ಪ್ರೀತಿಗೆ ಪಾತ್ರರಾಗ ಬೇಕಾದರೆ ನಿಸ್ವಾರ್ಥ ಮನೋಧರ್ಮದಿಂದ ಸೇವೆಯಲ್ಲಿ ತೊಡಗುವುದು ಅಗತ್ಯ ಎಂದು ಗಂಗೊಳ್ಳಿಯ ಸಮಾಜ ಸೇವಕಿ ಅನಿತಾ ಶೇಟ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮದ ಬಾವಿಕಟ್ಟೆಯ ಮೇಲ್ ಗಂಗೊಳ್ಳಿ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಓಂ ಶ್ರೀ ಮಾತೃ ಮಂಡಳಿಯ ಆಶ್ರಯದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಚೇತನ ಮಾತೃಶ್ರೀ ದಿ. ರತ್ನಮ ಹೆಗ್ಗಡೆಯವರ ಪುಣ್ಯಸ್ಮೃತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಇಂದು ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾಗಿದೆ. ಜಿನೈಕರಾದ ದಿ. ರತ್ನಮ್ಮ ಹೆಗ್ಗಡಯವರ ದೂರದೃಷ್ಟಿತ್ವವೇ ಅದಕ್ಕೆ ಕಾರಣ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚೆಂದು, ಸುಶೀಲ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಪದ್ಮಾವತಿ ಮಾತನಾಡಿದರು. ಶಾಂತಾ, ಸುಶೀಲ ಮೊದಲಾದವರು ಉಪಸ್ಥಿತರಿದ್ದರು. ಸರಸ್ವತಿ ಸ್ವಾಗತಿಸಿದರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಕಳುವಿನ ಬಾಗಿಲು ಎಂಬಲ್ಲಿ ಮೈದುನ ಹಾಗೂ ಆತನ ಪತ್ನಿಯಿಂದ ಏಟಿಗೆ ಗಂಭೀರ ಗಾಯಗೊಂಡ ಮಹಿಳೆಯೋರ್ವಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಉಪ್ಪಿನಕುದ್ರು ನಿವಾಸಿ ವಿಜಯ ಖಾರ್ವಿಯ ಪತ್ನಿ ಜ್ಯೋತಿ ಖಾರ್ವಿ (26) ಮೃತ ಮಹಿಳೆ. ಭಾನುವಾರ ಮಧ್ಯಾಹ್ನದ ವೇಳೆಗೆ ಮನೆಯಲ್ಲಿ ಯಾವುದೋ ಕಾರಣಕ್ಕೆ ಜ್ಯೋತಿ ಖಾರ್ವಿ, ಆಕೆಯ ಮೈದುನ ಗುರುರಾಘವೇಂದ್ರ ಖಾರ್ವಿ (26) ಮತ್ತು ಆತನ ಮಡದಿ ದಿವ್ಯಾಳ(19) ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ಹೊಡೆದಾಟಕ್ಕೆ ತಿರುಗಿ ಗುರು ಹಾಗೂ ದಿವ್ಯಾ ಇಬ್ಬರೂ ಸೇರಿ ಅತ್ತಿಗೆ ಜ್ಯೋತಿಯ ಹೊಟ್ಟೆಯ ಭಾಗಕ್ಕೆ ಸತತವಾಗಿ ಹೊಡೆದಿದ್ದಾರೆನ್ನಲಾಗಿದೆ. ಘಟನೆಯಿಂದ ತೀವ್ರ ಅಸ್ವಸ್ಥರಾದ ಜ್ಯೋತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಬೆಳಿಗ್ಗೆ 3:30ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಜ್ಯೋತಿ ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಆಪಾದಿತ ಮೈದುನ ಹಾಗೂ ಆತನ ಪತ್ನಿಯನ್ನು ಬಂಧಿಸಿ ತನಿಕೆ ನಡೆಸಲಾಗುತ್ತಿದೆ. ಜ್ಯೋತಿ ಖಾರ್ವಿಯ ಪತಿ…

Read More

ಕುಂದಾಪುರ: ಕಥೊಲೀಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಸ್ಟಾನ್ (ರಿ) ಇವರ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಸ್ಮಿ ನರಸಿಂಹ ಕಲಾಮಂದಿರದಲ್ಲಿ ಶಿಕ್ಷಣ ಭಾಷಣ ಮತ್ತು ಕ್ರೀಡಾ ಪ್ರತಿಭಾವಂತರಿಗೆ ಸನ್ಮಾನಿಸುವ ಪ್ರತಿಭಾ ಸಂಜೆ ಕಾರ್ಯಕ್ರಮ ನೆಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೈಸೂರಿನ ಉದ್ಯಮಿ ವಿಕ್ರಮ್ ಕ್ರಾಸ್ಟೊ ’ನಾವೇನು ಆಗ ಬೇಕೆಂದು ನಾವು ಮೊದಲೇ ನಿರ್ದರಿಸಿ ಕೊಳ್ಳಬೇಕು, ನಮ್ಮ ಭಾರತದಲ್ಲಿ ಮೊದಲು ಶ್ರೇಷ್ಠ ಜಾತಿಯವರಿಗೆ ಮಾತ್ರ ವಿಧ್ಯೆ ಸಿಗುತಿತ್ತು, ನಮ್ಮ ಮಿಶನರಿಗಳು ವಿಧ್ಯೆ ನೀಡಲು ಆರಂಭಿಸಿದ ಮೇಲೆ, ಭಾರತೀಯರೆಲ್ಲರಿಗೂ ವಿಧ್ಯೆ ದೊರೆಯುವಂತಾಯಿತು, ಆದರೆ ನಮ್ಮ ಸಮಾಜ ಮಾತ್ರ ಉನ್ನತ ವ್ಯಾಸಂಗವನ್ನು ಪಡೆಯುವಲ್ಲಿ ಸಫಲವಾಗಲಿಲ್ಲಾ, ಹಾಗಾಗಿ ನಾವು ಎಚ್ಚೆತ್ತು ಕೊಳ್ಳ ಬೇಕೆಂದು’ ಸಂದೇಶ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ಕಥೊಲೀಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ವಿಲಿಯಮ್ ಮಚಾದೊ. ವಲಯ ಪ್ರಧಾನ ಧರ್ಮಗುರು ಅನೀಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷ, ವಲಯ ಅಧ್ಯಕ್ಷರಾದಾ, ಪ್ಲೈವನ್ ಡಿಸೋಜಾ ಇವರೆಲ್ಲರೂ ಸಂದೇಶ…

Read More

ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರಗಳನ್ನು ಪ್ರಕಟಿಸಿದ್ದು ಕುಂದಾಪುರ ತಾಲೂಕಿನ ಉಪ್ಪುಂದದ ಜಾದೂಗಾರ ಹಾಗೂ ಸಾಹಿತಿ ಓಂಗಣೇಶ್ ಅವರಿಗೆ ಭಾಷಾಂತರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟಾರ್ ಡಾ. ನಿ. ದೇವದಾಸ ಪೈ ಮಾಹಿತಿ ನೀಡಿದರು. ಮಾರ್ಚ್ 5ರಂದು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 6ರಂದು ಭಟ್ಕಳದ ನಾಗಯಕ್ಷೆ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಶಿರಸಿಯ ರಾಮಚಂದ್ರ ಎಂ.ಶೇಟ್ (ಸಾಹಿತ್ಯ), ಕಾಸರಗೋಡು ಚಿನ್ನಾ (ಕಲೆ) ಮತ್ತು ತೊಳಸಾಣಿಯ ಆಲೂ ಪೀಲೂ ಮರಾಠಿ (ಜಾನಪದ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ ಎಂದರು. ಪುಸ್ತಕ ಬಹುಮಾನ ಪ್ರಶಸ್ತಿಗೆ ಓಂ ಗಣೇಶ್ ಉಪ್ಪುಂದ (ಭಾಷಾಂತರ), ರೊನಿ ಅರುಣ್ (ಅಧ್ಯಯನ) ಮತ್ತು ಡೆನಿಸ್ ಕ್ಯಾಸ್ತಲಿನೋ (ಲೇಖನ) ಆಯ್ಕೆಯಾಗಿದ್ದು, ಪ್ರಶಸ್ತಿಯು ೨೫ ಸಾವಿರ ನಗದು ಒಳಗೊಂಡಿದೆ.…

Read More

ಬೈಂದೂರಿನ ನಾಲ್ವರಿಗೆ ಜಿಪಂ ಸ್ಥಾನ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಒಂದೇ ಊರಿನವರು ರಾಜಕೀಯದಲ್ಲಿರುವುದು ಸಾಮಾನ್ಯ. ಗ್ರಾಪಂ, ತಾಪಂ ಸದಸ್ಯರಾಗುವುದು ಸಾಮಾನ್ಯ ಸಂಗತಿಯೇ. ಆದರೆ ಒಂದೇ ಊರಿನವರು, ಅದರಲ್ಲೂ ಒಂದೇ ವಾರ್ಡಿನವರು ಜಿಲ್ಲಾ ಪಂಚಾಯತ್ ಸದಸ್ಯರಾಗುವುದೆಂದರೆ ಸುಮ್ಮನೆಯೇ? ರಾಜ್ಯದಲ್ಲಿಯೇ ಇಂತಹದ್ದೊಂದು ವಿಶಿಷ್ಟ್ಯಕ್ಕೆ ಪಾತ್ರವಾಗಿದೆ ತಗ್ಗರ್ಸೆ ಗ್ರಾಮ. ಹೌದು ಮೂವರು ಜಿಲ್ಲಾ ಪಂಚಾಯತ್ ಸದಸ್ಯರು ಒಂದೇ ಗ್ರಾಮದವರು, ಅಷ್ಟೇಕೆ ಒಂದೇ ವಾರ್ಡಿನವರು. ಹಾಗೆ ನೋಡಿದರೇ ನೆರಮನೆಯವರು! ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿದ ಕೇತ್ರಗಳು ಬೇರೆ ಬೇರೆಯೇ ಆದರೂ, ಒಂದೇ ಗ್ರಾಮ ಮೂವರು ಜಿಲ್ಲಾ ಪಂಚಾಯತ್‌ಗೆ ಆಯ್ಕೆ ಆದದ್ದು ಮಾತ್ರ ವಿಶೇಷವೇ ಸರಿ. ಇನ್ನು ಶಿರೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಯ ಕಾರ್ಯಕ್ಷೇತ್ರ ಕೂಡಾ ಬೈಂದೂರು ಎನ್ನೋದು ಮತ್ತೊಂದು ವಿಶೇಷ. ಕುಂದಾಪ್ರ ಡಾಟ್ ಕಾಂ ವರದಿ ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಾಬು ಶೆಟ್ಟಿ ತಗ್ಗರ್ಸೆ, ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶಂಕರ…

Read More

ಕುಂದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ನಿರೀಕ್ಷಿತ ಗೆಲುವು ಸಾಧಿಸದೆ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.

Read More

ಕುಂದಾಪುರ: ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಮಾರಿ ಪೂಜೆ ಉತ್ಸವದ ಸಂದರ್ಭ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಕಿಶೋರ್ ಕುಮಾರ್ ಕುಂದಾಪುರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್, ದೇವಳದ ಮೋಕ್ತೆಸರರಾದ ಪಾಂಡು ಸಾರಂಗ್, ರತ್ನಾಕರ ಖಾರ್ವಿ, ದಾಸ ಹೆಗ್ಡೆ, ಶೇಖರ ಖಾರ್ವಿ, ಮಂಜುನಾಥ ಖಾರ್ವಿ, ಗಣಪತಿ ಪೀತಾಂಬರ ಇನ್ನಿತರರು ಉಪಸ್ಥಿತರಿದ್ದರು. ಮಾರಿ ಪೂಜೆ ಉತ್ಸವದ ಅಂಗವಾಗಿ ದೇವಳದಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ಭಕ್ತಾಧಿಗಳಿಗೆ ವಿಶೇಷ ಪ್ರಸಾದ ವಿತರಣೆ ಮಾಡಲಾಯಿತು. ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ. ಕುಂದಾಪುರ: ಕನ್ನಡ ಚಲನಚಿತ್ರರಂಗದಲ್ಲಿ ವಾಣಿ ಜಯರಾಂ ಹೆಸರು ಚಿರಪರಿಚಿತ. ಸಂಗೀತ ಲೋಕದಲ್ಲಿ ತನ್ನ ಗಾನ ಮಾಧುರ್ಯದಿಂದ ಶೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿ ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ ಗಾನ ಕೋಗಿಲೆ ವಾಣಿಜಯರಾಂ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಹೆಸರು ವಾಸಿಯಾದ ಗಾಯಕಿ ಇವರು. ಕನ್ನಡ, ಮಲಯಾಳಿ, ತೆಲುಗು, ಹಿಂದಿ, ಗುಜರಾತಿ ಸೇರಿದಂತೆ 19 ಭಾಷೆಗಳಲ್ಲಿ ತಮ್ಮ ಗಾನ ಸಿಂಚನವನ್ನು ಹರಡಿದ ಹೆಗ್ಗಳಿಗೆ ಇವರದು. ಇಂತಹ ಅಪ್ರತಿಮ ಸಾಧಕಿಯನ್ನು ಕುಂದಾಪುರಕ್ಕೆ ಕರೆತರುವ ಪ್ರಯತ್ನ ಮಾಡಿ ವಾಣಿಜಯರಾಂ ಅವರನ್ನು ನೇರವಾಗಿ ನೋಡುವ ಮತ್ತು ಅವರ ಗಾನ ಮಾಧುರ್ಯದ ಸವಿಯನ್ನು ನೇರವಾಗಿ ಅನುಭವಿಸಲು ಅವಕಾಶ ಕಲ್ಪಿಸಿಕೊಟ್ಟವರು ಕುಂದಾಪುರದ ಖ್ಯಾತ ವೈದ್ಯ ಹಾಗೂ ಗಾಯಕ ಡಾ. ಸತೀಶ್ ಪೂಜಾರಿಯವರು. ಅವರಿಗೆ ಸಾಥ್ ನೀಡಿದ್ದು ಖ್ಯಾತ ವೈದ್ಯ ಡಾ. ಪ್ರಕಾಶ್ ತೋಳಾರ್ ಮತ್ತು ಸಹನಾ ಡೆವೆಲಪರ‍್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ. ವಾಣಿಯ ಗಾನಾಮೃತ ಸವಿದ ಅಭಿಮಾನಿಗಳು : ಸಂಘಟಕರು ಕಾರ್ಯಕ್ರಮದ ವೇದಿಕೆಗೆ ಕಹಳೆ…

Read More