ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮೀಪದ ಕೊಡೇರಿ ಎಡಮಾವಿನ ಹೊಳೆಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದ್ದು ಮೃತರನ್ನು ಮುತ್ತು ದೇವಾಡಿಗ (50) ಎಂದು ಗುರುತಿಸಿಲಾಗಿದೆ. ಶುಕ್ರವಾರ ಸಂಜೆ ಕೊಡೇರಿಯಿಂದ ಮರವಂತೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಲು ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ಸ್ಥಳದಲ್ಲಿಯೇ ಮೃತಟ್ಟಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಘಟನಾ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟೆಲ್ ಹಾಗೂ ಮೊಬೈಲ್ ದೊರೆದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನಲ್ಲಿ ಒಟ್ಟು 10 ಜಿಪಂ ಹಾಗೂ 37 ತಾಪಂ ಕ್ಷೇತ್ರಗಳಿಗೆ ೩೫೬ ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ, ಮತಯಂತ್ರದ ಕೆಟ್ಟದ್ದು ಹಾಗೂ ಸಣ್ಣಪುಟ್ಟ ಸಂಘರ್ಷಗಳನ್ನು ಹೊರತುಪಡಿಸಿದರೇ ಮತ್ತೆಲ್ಲೆಡೆ ಸಸೂತ್ರವಾದ ಮತದಾನ ನಡೆದಿದೆ. ಜಡ್ಡಿನಗದ್ದೆಯಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ತೆಗೆದಿದ್ದ ರಿಂದ ಉದ್ವಿಘ್ನ ಸ್ಥಿತಿ, ನಕ್ಸಲ್ ಏರಿಯದಾಲ್ಲಿ ಚುರುಕು ಮತದಾನ, ಅತೀ ಸೂಕ್ಷ್ಮ ಮತ ಕೇಂದ್ರಗಳಲ್ಲಿ ಸರ್ಪಗಾವಲನಲ್ಲಿ ನಡೆದ ಮತದಾನ, ಕುಂದಾಪುರ ಹಂಗಳೂರು ಮತಘಟ್ಟೆ ಬಳಿ ಸಂಜೆ ಹೊತ್ತಿಗೆ ಮಾತಿನ ಚಕಮಕಿ ಲಾಠಿ ಚಾರ್ಜ್, ಉಪ್ಪುಂದದಲ್ಲಿ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಡಿಎಸ್ಪಿ ಮಂಜುನಾಥ ಶೆಟ್ಟಿ ಭೇಟಿ ನೀಡಿ ವಾತಾವರಣ ತಿಳಿ ಮಾಡಿದ್ದು, ಸ್ಥಳಕ್ಕೆ ರಿಸರ್ವ್ ಪೊಲೀಸ್ ಪಡೆ ಕರೆಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ ಬೆಳಗ್ಗೆ ಗ್ರಾಮೀಣ ಭಾಗದಲ್ಲಿ ಮತದಾನ ಚುರುಕಾಗಿದ್ದರೆ, ನಗರ ಪಟ್ಟಣ ಬಳಿ ಮತದಾನ ನೀರಸವಾಗಿ ಆರಂಭವಾಯಿತು. ಹಕ್ಲಾಡಿ ಗ್ರಾಪಂನಲ್ಲಿ ಬೆಳಗ್ಗೆ ಸರತಿ ಸಾಲು ಕಂಡುಬಂದರೆ, ವಯೋವೃದ್ಧರೊಬ್ಬರು ಸಂಬಂಧಿಗಳ ಸಹಕಾರದಲ್ಲಿ ಮತದಾನ…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ತಾಲೂಕಿನಲ್ಲಿ ಮರಳುಗಾರಿಕೆ ಪರವಾನಿಗೆ ರದ್ದಾಗಿ ಅರ್ಧ ತಿಂಗಳೇ ಕಳೆಯುತ್ತಾ ಬಂದಿದೆ. ಆದರೆ ಯಾವುದೇ ವಿಘ್ನವಿಲ್ಲದೇ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ! ಜನವರಿ 22ರಿಂದ ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಜಿಲ್ಲಾಡಳಿತದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಇಷ್ಟರಲ್ಲಿಯೇ ತಿಳಿಯುತ್ತಿದೆ ಪರವಾನಿಗೆ ರದ್ದಾದ ಮೇಲೂ ಎಗ್ಗಿಲ್ಲದೇ ಮರಳು ಲೂಟಿ ನಡೆಸುತ್ತಿರುವುದರ ಹಿಂದಿನ ಲಾಭಿ. ತೀರಾ ಹಾಸ್ಯಾಸ್ಪದವೆಂದರೆ ತಾಲೂಕಿನ ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಒಂದು ಕಡೆ ಮಾತ್ರವೇ ರೈಡ್ ಮಾಡಿ ದಾಖಲೆ ನೀಡುತ್ತಿದ್ದಾರೆ. ಉಳಿದ ಕಡೆ ಕ್ರಮವೇನು ಎಂದು ಪ್ರಶ್ನಿಸಿದರೆ ಇದು ನಮಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂಬ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ [quote font_size=”15″ bgcolor=”#ffffff” bcolor=”#44b200″ arrow=”yes” align=”right”]* ಅಕ್ರಮ ಮರಳುಗಾರಿಕೆ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಜಿಲ್ಲಾದ್ಯಂತ ನಡೆಯುತ್ತಿರುವ…
ತಾಲೂಕಿನಲ್ಲಿ ಒಟ್ಟು 356 ಮತಗಟ್ಟೆ. ಸೂಕ್ಷ್ಮ 56, ಅತೀಸೂಕ್ಷ್ಮ 13 ನಕ್ಸಲ್ ಪೀಡಿತ ಪ್ರದೇಶ 27 ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯದ ಎರಡನೇ ಹಂತದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕುಂದಾಪುರ ತಾಲೂಕು ಸಿದ್ಧಗೊಂಡಿದ್ದು. ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಸಕಲ ಏರ್ಪಾಡುಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ 13 ಅತಿಸೂಕ್ಷ್ಮ, 56 ಸೂಕ್ಷ್ಮ ಹಾಗೂ 27 ನಕ್ಸ್ಲ್ ಪೀಡಿತ ಮತಗಟೆ ಹಾಗೂ, 260 ಸಾಮಾನ್ಯ ಮತಗಟ್ಟೆಗಳೆಂದು ವಿಭಾಗಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳ ಪೈಕಿ ಶಿರೂರು ಜಿ.ಪಂ. ಕ್ಷೇತ್ರದ 4, ತ್ರಾಸಿ ಜಿಪಂ1, ವಂಡ್ಸೆ ಜಿಪಂ 1, ಕಾವ್ರಾಡಿ ಜಿಪಂ 2 , ಕೋಟೇಶ್ವರ ಜಿಪಂನಲ್ಲಿ 3, ಸಿದ್ದಾಪುರ ಜಿಪಂ ಕ್ಷೇತ್ರದಲ್ಲಿ 2 ಹೀಗೆ ಒಟ್ಟು 13 ಅತಿಸೂಕ್ಷ್ಮ ಮತಗಟ್ಟೆಗಳ ಗುರುತಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಮತದಾನ ಕಾರ್ಯಕ್ಕೆ ತಾಲೂಕಿನಲ್ಲಿ 393 ಪ್ರಿಸೈಡಿಂಗ್ ಆಫೀಸರ್, 392 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್, 1176 ಪೋಲಿಂಗ್ ಆಫೀಸರ್ ಹಾಗೂ 392 ಗ್ರೂಫ್ ಡಿ…
ಕುಂದಾಪ್ರ ಡಾಟ್ ಕಾಂ ವರದಿ: ಕುಂದಾಪುರ: ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಈ ಭಾರಿ ಬಹುಪಾಲು ಕ್ಷೇತ್ರಗಳಲ್ಲಿ ಮೀಸಲಾತಿಯೂ ಮಹಿಳೆಯರೇ ಪರವೇ ಬಂದಿರುವುದರಿಂದ ಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಈ ಭಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರೇ ಮತಗಳು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ ತಾಲೂಕಿನ ಒಟ್ಟು 10 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ 37 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಒಟ್ಟು 3,05,471 ಮತದಾರರಿದ್ದು ಆಪೈಕಿ 1,46,949 ಪುರುಷರಿದ್ದರೇ, 1,58,506 ಮಹಿಳಾ ಮತದಾರರಿದ್ದಾರೆ. ತಾಲೂಕಿನಲ್ಲಿ 16 ತೃತೀಯ ಲಿಂಗಿಗಳಿರುವುದು ಮತದಾರರಿರುವುದು ವಿಶೇಷ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಡಹೆಂಡಿರ ನಡವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೇರಿ ಹೆಂಡತಿಗೆ ಹೊಟ್ಟೆಗೆ ಚೂರಿ ಇರಿದ ಘಟನೆ ತಾಲೂಕಿನ ತ್ರಾಸಿಯಲ್ಲಿ ನಡೆದಿದೆ. ತಾಸ್ರಿ ನಿವಾಸಿ ರೇಷ್ಮಾ ಪೂಜಾರಿ(31) ಇರಿತಕ್ಕೊಳಗಾದ ಮಹಿಳೆ. ಚಂದ್ರ ಪೂಜಾರಿ ಚಾಕುವಿನಿಂದ ಇರಿದ ಪತಿರಾಯ. ಹೊಳ್ಮಗೆ ನಿವಾಸಿಯಾದ ಚಂದ್ರ ಪೂಜಾರಿ ಪೂನ:ದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಅವರು ತ್ರಾಸಿಯ ತನ್ನ ಪತ್ನಿಯ ಮನೆಗೆ ತಂಗಿದ್ದರು. ಮನೆಯಲ್ಲಿ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಚಂದ್ರ ಪೂಜಾರಿ ಏಕಾಏಕಿ ಅಲ್ಲಿಯೇ ಇದ್ದ ಚೂರಿಯಿಂದ ಪತ್ನಿಯ ಹೊಟ್ಟೆ ಹಾಗೂ ಕೈಗೆ ತಿವಿದಿದ್ದಾರೆ. ಪತ್ನಿ ರೇಷ್ಮಾ ಅಲ್ಲಿಯೇ ಕೂಗಿಕೊಳ್ಳುತ್ತಾ ನೆಲಕ್ಕುರುಳಿದಾಗ ಚಂದ್ರ ಪೂಜಾರಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರ ನೆರವಿನಿಂದಾಗಿ ಪೊಲೀಸರು ಅತನನ್ನು ಬಂಧಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಗಾಯಾಳುವನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಉಡುಪಿ ಜಿಲ್ಲೆಯ ನೈಸರ್ಗಿಕ ಸೊಬಗಿನ ತವರೂರಾದ ಬೈಂದೂರು ತನ್ನದೇ ಆದ ಕಾರಣಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆದಿದೆ. ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಇಲ್ಲಿನದ್ದು. ಬಿಂದುಋಷಿ ಎಂಬ ಮುನಿಯು ತಪಸ್ಸನ್ನಾಚರಿಸಿದ ಕಾರಣದಿಂದಾಗಿ ಬಿಂದುಪುರ ಎಂಬ ಹೆಸರು ಬಂದಿತು. ಕ್ರಮೇಣ ಅದು ಬೈದೂರು ಆಗಿ ನಂತರ ಬೈಂದೂರು ಎಂದು ಕರೆಯಲ್ಪಟ್ಟಿತು ಎಂಬುದು ಐತಿಹ್ಯ. ಊರಿನ ಹಿಂದಿನ ಐತಿಹ್ಯ. ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಪಶ್ಚಿಮ ಘಟ್ಟಗಳ ಸಾಲು ಬೈಂದೂರಿನ ನೈಸರ್ಗಿಕ ಸೌಂದರ್ಯವನ್ನು ಇಮ್ಮುಡಿಗೊಳಿಸಿದ್ದರೇ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಬೈಂದೂರು ಶ್ರೀ ಸೇನೇಶ್ವರ ಸೇರಿದಂತೆ ಹತ್ತಾರು ದೇವಾಲಯಗಳು, ಜಾಮೀಯಾ ಮಸೀದಿ, ಹೋಲಿ ಕ್ರಾಸ್ ಚಚ್ ಇವೇ ಮುಂತಾದವುಗಳು ಬೈಂದೂರಿನ ಧಾರ್ಮಿಕ ಶಕ್ತಿಕೇಂದ್ರಗಳಾಗಿ ಭಕ್ತರನ್ನು ಕರುಣಿಸಿವೆ. ಬೈಂದೂರು ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು; ಮೂಕಾಂಬಿಕಾ ರೋಡ್…
ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ ಕುಂದಾಪುರ: ಉಡುಪಿ ಜಿಲ್ಲೆಯ ಹೊಸ ಜಿಲ್ಲಾ ಪಂಚಾಯಿತಿ ಬೀಜಾಡಿ ಮುಂದಿದೆ ಬೆಟ್ಟದಷ್ಟು ಸವಾಲು. ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಆಯ್ಕೆಯಾಗುವ ಮಹಿಳೆ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ಬೀಜಾಡಿಯಲ್ಲಿ ಹಿಂದೆ ಗೇರು ಮರದ ಹೊಲವಿದ್ದು, ಸಾಕಷ್ಟು ಗೇರು ಬೀಜವಿದ್ದ ಕಾರಣ ಬೀಜದ ಹಾಡಿ ಎಂಬ ಹೆಸರಿತ್ತು. ಬರುಬರುತ್ತಾ ಬೀಜದ ಹಾಡಿ ಹೋಗಿ ಬೀಜಾಡಿ ಎಂಬ ಹೆಸರು ಶಾಶ್ವತ ಆಯಿತು. ಹಿಂದೆ ಗೋಪಾಡಿ-ಬೀಜಾಡಿ ಸೇರಿ ಒಂದೆ ಗ್ರಾಮ ಪಂಚಾಯತಿ ಆಗಿದ್ದು, ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ಗೋಪಾಡಿ ಮತ್ತು ಬೀಜಾಡಿ ಸ್ವತಂತ್ರ ಗ್ರಾಮಗಳಾಗಿ ಪುನರ್ ವಿಂಗಡನೆಯಾಯಿತು. ಗೋಪಾಡಿ ಗ್ರಾಪಂ.ಗೆ ಹಿಂದೆ ಇದ್ದ ಕಟ್ಟಡ, ಸಭಾಭವನ ಸಿಕ್ಕಿದ್ದು, ಬೀಜಾಡಿ ಗ್ರಾಪಂಗೆ ಕಟ್ಟಡವೇ ಇಲ್ಲದೆ ತಾತ್ಕಾಲಿಕ ವ್ಯವಸ್ಥೆ ಅಡಿ ಕೆಲಸ ನಿರ್ವಹಿಸುತ್ತಿದೆ. ಬೀಜಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಈ ಭಾರಿ ಮಹಿಳಾ ಮೀಸಲಾತಿ ಬಂದಿರುವುದರಿಂದ ಕಾಂಗ್ರೆಸ್ ಬಿಜೆಪಿ ನಡುವೆ ಸ್ವಜಾತಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಕಾಂಗ್ರೆಸ್ನಿಂದ ಜ್ಯೋತಿ ಎ.ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ ಕುಂದಾಪುರ: ಅರಬ್ಬೀ ಸಮುದ್ರದ ಅಬ್ಬರ, ಗೋಡೆ ಕಟ್ಟಿದಂತೆ ನಿಂತ ಪಶ್ಚಿಮಘಟ್ಟ. ಇದರ ನಡುವೆ ಮಂದಗಾಮಿನಿಯಾಗಿ ಹರಿವ ಸೌಪರ್ಣಿಕಾ ನದಿ ತ್ರಾಸಿ ಜಿಲ್ಲಾ ಪಂಚಾಯಿತಿ ವೈಶಿಷ್ಠ್ಯ. ತ್ರಾಸಿ ಜಿಲ್ಲಾ ಪಂಚಾಯಿತಿ ನಾಗರಿಕರು ತ್ರಾಸುದಾಯಕ ಕೆಲಸ ಮಾಡುವ ಹಿನ್ನೆಲೆಯಲ್ಲಿ ತ್ರಾಸಿ ಹೆಸರು ಬರಲು ಕಾರಣ. ಮೀನುಗಾರಿಕೆ ವೃತ್ತಿ ಮತ್ತು ಕೃಷಿ ಪ್ರಮುಖ ಉದ್ಯೋಗ. ರಾಷ್ಟ್ರೀಯ ಹೆದ್ದಾರಿ-66 ತ್ರಾಸಿ ಜಿಪಂ. ಸೀಳಿಕೊಂಡು ಸಾಗುತ್ತದೆ. ತ್ರಾಸಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವೆ ತ್ರಿಕೋನ ಸ್ಪರ್ಧೆಯಿದೆ. ಎರಡನೇ ಬಾರಿ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ಸಾಧು ಬಿಲ್ಲವ, ಪ್ರಥಮ ಬಾರಿ ಬಿಜೆಪಿ ಅಭ್ಯರ್ಥಿ ಶೋಭಾ ಜೆ.ಪುತ್ರನ್, ಸಿಪಿಐ(ಎಂ)ನ ಯಮುನಾ ಎಸ್. ಪೂಜಾರಿ ಸ್ಪರ್ಧಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ ತ್ರಾಸಿ ಜಿಪಂ. ಹಿಂದೆ ಅಭಿವೃದ್ಧಿಯ ಹಿನ್ನೆಡೆ ಕಂಡಿದ್ದರೂ, ಪ್ರಸಕ್ತ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದಿದ್ದರೂ ಸಾಗ ಬೇಕಾದ ದೂರ ಬಹಳವಿದೆ. ಪ್ರಮುಖ ಪ್ರವಾಸಿ ತಾಣಗಳಿದ್ದರೂ, ಪ್ರವಾಸಿಗರ ಸೆಳೆಯುವಲ್ಲಿ ತ್ರಾಸಿ ಜಿಪಂ. ವಿಫಲವಾಗಿದೆ.…
ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ವಾರಾಹಿ ಮತ್ತು ಕುಬ್ಜಾ ನದಿ ಕಾವ್ರಾಡಿ ಜಿಪಂ. ಕ್ಷೇತ್ರ ಬಳಸಿ ಹರಿದರೂ ಕುಡಿಯು ನೀರಿಗೂ ತತ್ವಾರ. ಅತೀ ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡ ಕಂಡ್ಲೂರಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳುವುದು ಹೊಸ ಜಿಪಂ.ಕ್ಷೇತ್ರ ಕಾವ್ರಾಡಿ ಮುಂದಿರುವ ದೊಡ್ಡ ಸವಾಲು. ಕಾವ್ರಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ,ಬಿಜೆಪಿ ಹಾಗೂ ಸಿಪಿಎಂ ಪಕ್ಷದ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿದೆ. ಮಹಿಳಾ ಮೀಸಲಾತಿ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ ಎಂ. ಕಣದಲ್ಲಿದ್ದರೇ, ಬಿಜೆಪಿಯಿಂದ ಸುಶೀಲಾ ಹಾಗೂ ಸಿಪಿಎಂ ಪಕ್ಷದಿಂದ ಪೂರ್ಣಿಮಾ ಕಣದಲ್ಲಿದ್ದಾರೆ. ಸವಾಲಿನ ಕ್ಷೇತ್ರದಲ್ಲಿ ಮಹಿಳಾ ಮಣಿಯರು ಹೇಗೆ ಗೆದ್ದುಬರಲಿದ್ದಾರೆ ಎಂಬುದು ಕುತೂಹಲ. ಕಾವ್ರಾಡಿ ಜಿಪಂ ಕ್ಷೇತ್ರದಲ್ಲಿ ಹೆಂಚು, ಡೆಕೋರೇಶನ್ ಟೈಲ್ಸ್, ಗೇರು ಬೀಜ ಕಾರ್ಖಾನೆಗಳಿದ್ದು, ಕಾವ್ರಾಡಿ ಕೈಗಾರಿಕಾ ಪ್ರದೇಶವೂ ಹೌದು. ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿ ಕೂಡಾ ಕಾವ್ರಾಡಿಗೆ ಸಲ್ಲುತ್ತದೆ. ಆದರೂ ಕಾವ್ರಾಡಿ ಜಿಪಂ. ಕೋಮು ಸಂಘರ್ಷ ಕಪ್ಪು ಚುಕ್ಕೆಯಂಡಿಸಿಕೊಂಡಿದೆ. ಚಿಕ್ಕಪುಟ್ಟ ಸಂಗತಿಗೂ ಇಲ್ಲಿ ಕೋಮು…
