ಬೈಂದೂರು: ಅವಕಾಶ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಸುಪ್ತಪ್ರತಿಭೆಗಳನ್ನು ಗುರುತಿಸಿ ವಿದ್ಯಾಸಂಸ್ಥೆಗಳು, ಶಿಕ್ಷಕರು, ಪಾಲಕರು ಹಾಗೂ ಸಂಘ-ಸಂಸ್ಥೆಗಳು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಉಪ್ಪುಂದ ಸಪಪೂ ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಖಾರ್ವಿ ಹೇಳಿದರು. ಉಪ್ಪುಂದ ಸಪಪೂ ಕಾಲೇಜು ಹಾಗೂ ಸ್ಥಳೀಯ ಜೆಸಿಐ ಘಟಕ ಜಂಟಿಯಾಗಿ ವಲಯದ ಆಯ್ದ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾಥಿಗಳಿಗೆ ಆಯೋಜಿಸಿದ ಚಿತ್ರ-ಚಿತ್ತಾರ 2016 ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಕೆ ವಿದ್ಯಾರ್ಥಿಗಳಿಗೆ ಮಾನದಂಡವಾಗಬಾರದು. ಪಾಠದ ಜೊತೆಗೆ ಪಾಠೇತರ ಶಿಕ್ಷಣವೂ ಅಷ್ಟೇ ಮುಖ್ಯ. ನಾಲ್ಕುಗೋಡೆಗಳ ಮಧ್ಯ ಕಲಿಸುವ ಪಾಠದ ಜೊತೆಗೆ ಪರಿಣತಿ ಹೊಂದಿದ ತರಬೇತುದಾರರಿಂದ ವಿವಿಧ ಕಲೆಗಳ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪಾಠೇತರ ಶಿಕ್ಷಣದ ಅರಿವು ಮೂಡಿಸಬೇಕು. ಇದರಿಂದ ಮಕ್ಕಳು ಕಲಾತ್ಮಕ ಜೀವನಕ್ಕೆ ಒಗ್ಗಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕೂಡಾ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಸಾಧನೆಯ ದಾರಿ ಕಂಡುಕೊಳ್ಳಬೇಕು ಎಂದ ಸಲಹೆ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲೆ ಜಾನಕಿ ಎಂ. ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಯು.…
Author: ನ್ಯೂಸ್ ಬ್ಯೂರೋ
ಗಂಗೊಳ್ಳಿ: ಗಂಗೊಳ್ಳಿಯ ಜನರ ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ವೇಗ ನಿಯಂತ್ರಣಗಳಿಗೆ (ರಸ್ತೆ ಉಬ್ಬುಗಳು) ಸರಿಯಾದ ಬಣ್ಣವಿಲ್ಲದಿರುವುದರಿಂದ ಜನರು ಹಾಗೂ ವಾಹನ ಸವಾರರು ಬಹಳಷ್ಟು ಸಮಸ್ಯೆಗಳನ್ನು ಹಾಗೂ ತೊಂದರೆಯನ್ನು ಅನುಭವಿಸುತ್ತಿದ್ದರು. ಜನರ ಹಾಗೂ ವಾಹನ ಸವಾರರ ಸಮಸ್ಯೆಗಳಿಗೆ ಸ್ಪಂದಿಸಿದ ಗಂಗೊಳ್ಳಿಯ ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಯುವಕರ ತಂಡ ಸೋಮವಾರ ರಾತ್ರಿಯಿಂದ ಬೆಳಗಿನ ವರೆಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿರುವ ಎಲ್ಲಾ ವೇಗ ನಿಯಂತ್ರಣಗಳಿಗೆ (ಹಮ್ಸ್) ಉತ್ತಮವಾದ ರಬ್ಬರ್ ಗುಣಮಟ್ಟದ ಪೈಂಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಬಾರಿ ಈ ರಸ್ತೆ ಉಬ್ಬುಗಳಿಗೆ ಪೈಂಟಿಂಗ್ ಮಾಡಲಾಗಿದ್ದರೂ ಕೆಲವೇ ದಿನಗಳಲ್ಲಿ ಇದು ಅಳಿಸಿ ಹೋಗುತ್ತಿತ್ತು. ರಸ್ತೆಗಳಲ್ಲಿ ಉಬ್ಬುಗಳಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡ ಯಾವುದೇ ಸೂಚನಾ ಫಲಕ ಅಳವಡಿಸಿರುವುದರಿಂದ ವಾಹನ ಸವಾರರಿಗೆ ರಸ್ತೆ ಉಬ್ಬುಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ಅವಘಡಗಳು ಸಂಭವಿಸುತ್ತಿದ್ದವು. ಈ ಕಾರ್ಯಕ್ಕೆ ಉತ್ತಮ ಗುಣಮಟ್ಟದ ಪೈಂಟನ್ನು ನೀಡಿ ಸಹಕರಿಸಿದ ಎಂ.ಮಾಧವ ಸುಬ್ರಾಯ ಪೈ ಅಂಗಡಿಯ ಮಾಲೀಕ ಎಂ.ನಾಗೇಂದ್ರ…
ಗಂಗೊಳ್ಳಿ: ಭಕ್ತಿಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ನಮ್ಮಲ್ಲಿ ಕರುಣೆ, ಮಿತೃತ್ವ ಭಾವನೆ ಇರಬೇಕು. ಯಾರೊಬ್ಬರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಯಿಂದ ನಾವೆಲ್ಲರೂ ಒಂದೇ ಎಂಬ ಭಾವದಿಂದ ನೋಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ತಾಳಗುಪ್ಪ ಕೂಡ್ಲಿ ಬಾರಂಗಿ ಮಹಾಸಂಸ್ಥಾನದ ಶ್ರೀ ಮ| ನಿ| ಪ್ರ. ಸಿದ್ಧವೀರ ಮಹಾಸ್ವಾಮಿಗಳು ಹೇಳಿದರು. ಅವರು ಸೋಮವಾರ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಬಾವಿಕಟ್ಟೆ ಬಳಿಯ ಶ್ರೀ ಬಸವೇಶ್ವರ ದೇವಸ್ಥಾನದ ನವೀಕೃತ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಶಿವಲಿಂಗ, ನಂದಿ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಮಸ್ತ ಜೀವಿಗಳು ಬಯಸುವುದು ಸುಖವನ್ನು. ಸುಖ ದೊರೆಯಬೇಕಾದರೆ ಭಗವಂತನ ಸ್ತುತಿ, ಆರಾಧನೆ, ಉಪಾಸನೆ ಮಾಡಬೇಕು. ಪ್ರತಿನಿತ್ಯ ಮನೆಗಳಲ್ಲಿ ದೇವರ ಪೂಜೆ, ಆರಾಧನೆ ನಿರಂತರವಾಗಿ ನಡೆಯುತ್ತಿರಬೇಕು. ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಮ್ಮಿಂದಾಗುವ ಸೇವೆ ಸಲ್ಲಿಸಬೇಕು. ಹಿಂದುಳಿದ ಸಮಾಜದವರಲ್ಲಿನ ಒಗ್ಗಟ್ಟು…
ಬೈಂದೂರು: ಗ್ರಾಮದ ಶೈಕ್ಷಣಿಕ ಸ್ಥಿತಿಗತಿ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗಳು ಊರಿನ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಅಭಿಪ್ರಾಯಪಟ್ಟರು. ಖಂಬದಕೋಣೆ ಹೊನ್ನೆಕಳಿ ಜಟ್ಟಿಗೇಶ್ವರ ದೈವಸ್ಥಾನದ ಹಾಲುಹಬ್ಬ, ಗೆಂಡಸೇವೆ, ಮಂಡಲಸೇವೆ ಹಾಗೂ ಸ್ಥಳೀಯ ಕದಂಬ ಯುವಕ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಪ್ರಗತಿಯ ಹಿಂದೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುವುದನ್ನು ಯೋಚಿಸಬೇಕಾಗಿದೆ. ಕಾಲದ ಗೋಜಿನಲ್ಲಿ ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು. ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ಶಶಿಧರ ಶೆಣೈ, ಶಿಕ್ಷಕಿ ಕೃಷ್ಣಾಬಾಯಿ ಟೀಚರ್, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಲತಾ, ರಾಷ್ಟ್ರೀಯ ಯೋಗ ಹಾಗೂ ಕ್ರೀಡಾ ಪ್ರತಿಭೆಗಳಾದ ದಿವ್ಯಾ ಮತ್ತು ಅಕ್ಷತಾ ಇವರನ್ನು ಸನ್ಮಾನಿಸಲಾಯಿತು. ದೈವಸ್ಥಾನ ಅಭಿವೃದ್ದಿಗೆ, ಧಾರ್ಮಿಕ ಕಾರ್ಯಗಳಿಗೆ ಸಹಕರಿಸಿದ ದಾನಿಗಳನ್ನು…
ಕುಂದಾಪುರ: ಕೊಂಕಣ ಖಾರ್ವಿ ಸಮಾಜ ಶ್ರಮಜೀವಿಗಳಾಗಿದ್ದು, ತಮ್ಮ ಸ್ನೇಹ ಪರ ಗುಣಗಳಿಂದ ಎಲ್ಲರಿಗೂ ಆತ್ಮೀಯರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿ ಪ್ರಶಾಂತ್ ತೋಳಾರ್ ಹೇಳಿದರು. ಅವರು ಕೊಂಕಣ ಖಾರ್ವಿ ಪ್ರಗತಿಪರ ಸಂಘ(ರಿ) ಮದ್ದುಗುಡ್ಡೆ ಇದರ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾಟ ಕೆ.ಕೆ.ಪಿ.ಎಸ್ ಮದ್ದುಗುಡ್ಡೆ ಟ್ರೋಫಿ ಉದ್ಘಾಟಿಸಿ ಮಾತನಾಡಿದರು. ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನಸ ಇಂಜಿನಿಯರಿಂಗ್ & ವೆಲ್ಡಿಂಗ್ ವರ್ಕ್ಸ್‌ನ ನಿತ್ಯಾನಂದ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕೆ.ಕೆ.ಫಿಶರೀಸ್‌ನ ಸಂದೀಪ್ ಖಾರ್ವಿ, ಮದ್ದುಗುಡ್ಡೆ ನಾಗ ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ವಸಂತ ಮೇಸ್ತ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುರೇಂದ್ರ ಖಾರ್ವಿ, ಸಂಸ್ಥೆಯ ಅಧ್ಯಕ್ಷರಾದ ಸಂಜೀವ ಖಾರ್ವಿ, ಉಪಾಧ್ಯಕ್ಷರಾದ ನಾರಾಯಣ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಹಾಲಿ ತಾಪಂ ಸದಸ್ಯ ಎಸ್. ರಾಜು ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಜನರ ನಡುವೆಯೇ ಇದ್ದು ಜನಸೇವೆ ಮಾಡುತ್ತಾ ಬಂದಿರುವ ತನಗೆ ಬೈಂದೂರಿನ ಮತದಾರರು ಈ ಭಾರಿಯೂ ಬಹುಮತದಿಂದ ಆಯ್ಕೆಮಾಡುವರೆಂಬ ವಿಶ್ವಾಸವಿದೆ. ಹಲವು ಚುನಾವಣೆಯನ್ನು ಎದುರಿಸಿರುವುದರಿಂದ ಸ್ವರ್ಧಿಸುವ ಬಗ್ಗೆ ಭಯವಿಲ್ಲ. ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವುದರಿಂದ ಪ್ರತಿ ಮತದಾರರನ್ನೂ ಭೇಟಿ ಸುಲಭವಾಗುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಬಟ್ಟೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು ಅಂಗಡಿಯಲ್ಲಿದ್ದ ಮಾಲಿಕನೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ತಲ್ಲೂರಿನ ಕೋಟಿ ಪೂಜಾರಿ(75) ಮೃತ ದುರ್ದೈವಿ. ತಲ್ಲೂರಿನ ನಗರ ಭಾಗದಲ್ಲಿ ಕಳೆದ 25 ವರ್ಷಗಳಿಂದ ಗಣೇಶ ಡ್ರೆಸ್ ಸೆಂಟರ್ ಹೆಸರಿನ ಬಟ್ಟೆ ಅಂಗಡಿ ನಡೆಸುತ್ತಿದ್ದ ತಲ್ಲೂರು ಗರಡಿ ನಿವಾಸಿ ಕೋಟಿ ಪೂಜಾರಿ (75) ಇಂದು ಮುಂಜಾನೆ ವಾಕಿಂಗ್ ತೆರಳುವ ಸಂದರ್ಭದಲ್ಲಿ ಬಟ್ಟೆಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಶಟರ್ ಮುಚ್ಚಿದ್ದ ಅಂಗಡಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು, ಶಟರ್ ತೆರೆದಾಗ ಅಂಗಡಿಗೆ ಬೆಂಕಿ ಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರಾದರೂ ಅಂಗಂಡಿಯಲ್ಲಿ ಕೋಟಿ ಪೂಜಾರಿ ಬಟ್ಟೆಯೊಂದಿಗೆ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಂಗಡಿಗೆ ಆಕಸ್ಮಾತ್ ಬೆಂಕಿ ತಗಲಿದ್ದೂ ಇಲ್ಲವೇ ಆತ್ಮಹತ್ಯೆಯೋ ಎಂಬ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಬೈಂದೂರು: ಕುಂದಾಪುರ ತಾಲೂಕಿನ ತುತ್ತ ತುದಿಯ ಊರು ಶಿರೂರು. ಶಿರಭಾಗದ ಊರಾದ ಕಾರಣ ಶಿರೂರು ಎಂಬ ಹೆಸರು ಬಂತು ಎಂದು ಕೆಲವರು ಹೇಳಿದರೆ ಒಂದು ಕಾಲದಲ್ಲಿ ಸಿರಿ ತುಂಬಿದ ಊರಾಗಿದ್ದ ಕಾರಣ ಶಿರೂರು ಎಂದು ಕರೆಯಲಾಯಿತು ಎನ್ನತ್ತಾರೆ. ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಇಷ್ಟು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೂ ಗುರುತಿಸಬಹುದಾದ ಕೆಲವು ಅಭಿವೃದ್ಧಿ ಕಾಮಗಾರಿಗಳು ಒಂದಿರಡು ವರ್ಷಗಳ ಈಚೆಗೆ ನಡೆದಿವೆ. (ಕುಂದಾಪ್ರ ಡಾಟ್ ಕಾಂ ವರದಿ) ಈ ಭಾರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಬಂದಿರುವುದರಿಂದ ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ತಾಪಂ ಸದಸ್ಯ ಮದನಕುಮಾರ್ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪಡುವರಿ ಗ್ರಾಪಂ ಹಾಲಿ ಸದಸ್ಯ ಸುರೇಶ್ ಬಟ್ವಾಡಿ ಸ್ವರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಹಾಲಿ ತಾಪಂ ಸದಸ್ಯ ರಾಮ ಕೆ. ಪಕ್ಷದಿಂದ ಟಿಕೇಟ್ ವಂಚಿತರಾಗಿದ್ದರಿಂದ ಶಿರೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ವರ್ಧಿಸುತ್ತಿದ್ದಾರೆ. ಒಂದು ನೋಟ: ಗ್ರಾಮೀಣ ಪ್ರದೇಶವೇ ಹೆಚ್ಚಿರುವ ಶಿರೂರು…
ಕುಂದಾಪುರ: ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರ ಹಾಗೂ ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಮಾಲಿನಿ ಕೆ. ನಾಮಪತ್ರ ಸಲ್ಲಿಸಿದರೆ, ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸುಜಾತ ದೇವಾಡಿಗ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀ ನಾರಾಯಣ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ಕೃಷ್ಣಯ್ಯ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನ ವಾರ್ಷಿಕ ಉತ್ಸವ ತೆರಾಲಿಗೆ ಪೂರ್ವಭಾವಿಯಾಗಿ ನಡೆಯುವ ಕೋಂಪ್ರಿ ಪೆಸ್ತ್ ಸಡಗರದಿಂದ ಆಚರಿಸಲಾಯಿತು. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಗಂಗೊಳ್ಳಿ ಚರ್ಚ್‌ನ ಧರ್ಮಗುರು ರೆ. ಫಾ. ಆಲ್ಬರ್ಟ್ ಕ್ರಾಸ್ತಾ, ಎಲ್ಲವರನ್ನು ನಮ್ಮವರೆಂದು ತಿಳಿದು ದೀನ-ದಲಿತರ, ಬಡವರ, ರೋಗಿಗಳ, ಖೈದಿಗಳ ಹಾಗೂ ನಮ್ಮ ನೆರೆಹೊರೆಯವರ ಸುಖ-ಕಷ್ಟಗಳಗೆ ಸ್ಪಂದಿಸುವ ಮೂಲಕ ಮಾನವೀಯತೆ ತೋರಬೇಕು. ಮಾನವೀಯ ಧರ್ಮದ ಮೂಲಕ ಸಾಮರಸ್ಯ ಕಾಪಾಡಿಕೊಂಡು ಪರಸ್ಪರ ಪ್ರೀತಿಯಿಂದ ಬದುಕುವುದೇ ನಿಜವಾದ ಜೀವನ ಎಂದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಚರ್ಚ್‌ನಿಂದ ಹೊರಟು ಯಡ್ತರೆವರೆಗೆ ಸಾಗಿದ ಪುರಮೆರವಣಿಗೆಯಲ್ಲಿ ಪರಮಪ್ರಸಾದವನ್ನು ಸ್ಥಬ್ದಚಿತ್ರ ವಾದ್ಯಘೋಷಗಳೊಂದಿಗೆ ಕೊಂಡೊಯ್ದರು. ಲಿಯೋ ನಜ್ರತ್ ಮತ್ತು ತಂಡದವರ ಗಾಯನ ಕಾರ್ಯಕ್ರಮ ಮೆರವಣಿಗೆಗೆ ಮೆರುಗು ನೀಡಿತ್ತು. ಬೈಂದೂರು ಚರ್ಚ್ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ, ಕಾರ್ಯದರ್ಶಿ ಸಿಸಿಲಿಯಾ ರೆಬೆರೊ, ಉಪಾಧ್ಯಕ್ಷ ರಾಬಟ್ ರೆಬೆಲ್ಲೊ ಉತ್ಸವದ ನೇತೃತ್ವವಹಿಸಿದ್ದರು.
