Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯ ಪ್ರಭಾವ ಹಾಗೂ ತಲ್ಲಣಗಳು ಕುಟುಂಬದ ಮೇಲೆ ಬೀರಬಹುದಾದ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡು ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಿಸಿ, ನಿಖಿಲ್ ಮಂಜೂ ನಿರ್ದೇಶಿಸುತ್ತಿರುವ ‘ರಿಸರ್ವೆಶನ್’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಹಟ್ಟಿಯಂಗಡಿ ನಮ್ಮಭೂಮಿ ಸ್ಟಡಿ ಸೆಂಟರ್‌ನಲ್ಲಿ ಜರುಗಿತು. ಅಕ್ಕ ಅಮೇರಿಕಾದ ಮಾಜಿ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕರಾವಳಿಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆಯುತ್ತಿರುವುದಲ್ಲದೇ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಲಾಭದ ನಿರೀಕ್ಷೆ ಇಲ್ಲದ ಕಲಾತ್ಮಕ ಚಿತ್ರವನ್ನು ನಿರ್ಮಿಸುವ ದೊಡ್ಡ ಕೆಲಸಕ್ಕೆ ಯಾಕೂಬ್ ಖಾದರ್ ಮುಂದಾಗಿರುವುದು ಅವರಲ್ಲಿನ ಕಲೆಯ ಸೆಳೆತವೇ ಸಾಕ್ಷಿ ಎಂದರು. ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಚಿತ್ರಗಳಲ್ಲಿ ನಟನೆ ಹಾಗೂ ದೇಶ ವಿದೇಶ ಸುತ್ತಿ ಜನಜೀವನವನ್ನು ಅರಿತ ಬಳಿಕ ಕಲಾತ್ಮಕ ಚಿತ್ರಗಳನ್ನು ಮಾಡಬೇಕು ಎನ್ನುವ ಆಸೆ ಮೂಡಿತ್ತು. ಅದು ನಿರ್ದೇಶಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಂಗ್ಲ ಭಾಷೆಯ ಹಿಂದೆ ಬಿದ್ದಿರುವ ಪೋಷಕರು ಇಂದಿನ ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಮಾತೃಭಾಷೆಗೆ ಕುತ್ತು ಬಂದೊದಗಿದೆ. ಮನೆಯಲ್ಲಿಯೂ ಇಂಗ್ಲಿಷ್ ಭಾಷೆ ಬಳಕೆಯಾಗುತ್ತಿದ್ದು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೇರು ಮರೆಯಾಗುತ್ತಿದೆ ಎಂದು ಲೇಖಕಿ ಮಾಧುರಿ ಕೃಷ್ಣ ವಿಷಾದ ವ್ಯಕ್ತಪಡಿಸಿದರು. ಅವರು ಕುಂದಾಪುರ ಬೋರ್ಡ್ ಹೈಸ್ಕೂಲು ಶ್ರೀ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ಜರುಗಿದ ಬರಹಗಾರರ ಅಕ್ಷರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅನ್ಯಭಾಷಿಗರನ್ನೂ ಕನ್ನಡದತ್ತ ಸೆಳೆಯುವ ಕೆಲಸ ಆಗದಿದ್ದರೆ ಕನ್ನಡ ಭಾಷೆಗೆ ಅಪಾಯ ತಪ್ಪಿದ್ದಲ್ಲ. ಸಾಹಿತ್ಯ ಕ್ಷೇತ್ರ ಶ್ರೀಮಂತ ಹಾಗೂ ಸದೃಢವಾಗಿ ಬೆಳೆಸಲು ಯುವ ಸಮುದಾಯ ಪಣತೊಡಬೇಕಿದೆ ಎಂದ ಅವರು, ಇಂದಿನ ದಿನಮಾನದಲ್ಲಿ ಸಾಹಿತ್ಯ ಕ್ಷೇತ್ರವೂ ವೇಗವನ್ನು ಕಂಡುಕೊಂಡಿದ್ದು ಸ್ವಲ್ಪ ನಿಧಾನಿಸಿದರೂ ನಮ್ಮನ್ನು ಬೇರೊಬ್ಬರು ಹಿಂದಕ್ಕಿಕ್ಕಿ ಮುಂದೆ ಸಾಗುತ್ತಾರೆ. ಗಟ್ಟಿಯಾದ ಕನಸುಗಳ ಕಟ್ಟಿ ಅದನ್ನು ಸಾಕಾರ ಮಾಡುವ ಪ್ರಯತ್ನ ಮಾಡಿದರೆ ಸಾಹಿತ್ಯ ಕೇತ್ರದಲ್ಲಿ ಒಂದೊಂದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೋಮಾತೆ ಎಂದಿಗೂ ಶ್ರೇಷ್ಟ. ದೇಶ, ಸಂಸ್ಕೃತಿ, ಧರ್ಮ ಉಳಿಯಬೇಕಾದರೆ ಗೋವುಗಳ ರಕ್ಷಣೆಗೆ ಒತ್ತು ನೀಡಬೇಕಿದೆ. ಈ ನೆಲೆಯಲ್ಲಿ ಗೋವಿನ ಕುರಿತಾದ ಧನಾತ್ಮಕ ಚಿಂತನೆಗಳಿಂದ ಮಾಡುವ ಎಲ್ಲಾ ಕಾರ್ಯಗಳೂ ಯಶಸ್ಸನ್ನು ಕಾಣಲು ಸಹಕಾರಿಯಾಗುತ್ತದೆ ಎಂದು ಧಾರ್ಮಿಕ ಮುಖಂಡ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೋವಾದ ರಾಮನಾಥೀ ಕ್ಷೇತ್ರದಿಂದ ಆಗಮಿಸಿದ ಗೋಕಿಂಕರ ರಥಯಾತ್ರೆಯನ್ನು ಸ್ವಾಗತಿಸಿ, ಗೋಧ್ವಜಾರೋಹಣಗೈದು ಮಾತನಾಡಿದರು. ಭಾರತೀಯ ಜನಜೀವನದೊಂದಿಗೆ ಗೋವಿನ ಇತಿಹಾಸ ತಳಕುಹಾಕಿಕೊಂಡಿದೆ. ಅಲ್ಲದೇ ವಿಜ್ಞಾನದ ಸಂಶೋಧನೆಗಳೂ ಗೋವಿನ ಹಿರಿಮೆಯನ್ನು ಒಪ್ಪಿಕೊಂಡಿವೆ ಎಂದ ಅವರು ರಾಮಚಂದ್ರಾಪುರದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದೆರಡು ದಶಕಗಳಿಂದ ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆವನ್ನು ಹಮ್ಮಿಕೊಳ್ಳತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಗೋಕಿಂಕರ ರಥಯಾತ್ರೆಯ ಮುಖ್ಯಸ್ಥ ಶಿಶಿರ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಶ್ರೀ ರಾಮಚಂದ್ರಾಪುರ ಮಠದ ಮೂಲಕ ಮಾಡುತ್ತಿರುವ ಗೋರಕ್ಷಣಾ ಕಾರ್ಯಗಳಿಂದ ರಾಜ್ಯಾದ್ಯಂತ ಲಕ್ಷಾಂತರ ಗೋಪ್ರೇಮಿಗಳು ಹುಟ್ಟಿಕೊಂಡಿದ್ದು, ಹಲವಾರು ಗೋಶಾಲೆಗಳು ಸ್ಥಾಪನೆಯಾಗಿವೆ. ದೇಶೀ…

Read More

ನ್ಯೂಜಿಲ್ಯಾಂಡ್ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ವಿಶ್ವನಾಥ್ ಮಲೇಷ್ಯಾ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಗುರುರಾಜ್ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ಹೆಮ್ಮೆಯ ಕುವರರು ಕ್ರೀಡಾಕ್ಷೇತ್ರದಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿ ನಮ್ಮೂರಿಗೆ ಹೆಮ್ಮೆ ತಂದಿದ್ದ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಈ ಭಾರಿ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ಆಯ್ಕೆಯಾಗಿದ್ದರೇ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಂಡ್ಸೆ ಜಡ್ಡುವಿನ ಗುರುರಾಜ್ ಮಲೇಷ್ಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿ ತಮ್ಮ ಸಾಮಥ್ಯ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ. ಕಷ್ಟಗಳೊಂದಿಗೆ ಸೆಣಸಿದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಗಾಣಿಗ: ಬೇಕರಿಯಲ್ಲಿ ಕೆಲಸ ಮಾಡುತ್ತಾ, ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬುತ್ತಾ ಕುಟುಂಬದ ಆರ್ಥಿಕ ಸಂಕಷ್ಟ ನೀಗಿಸುತ್ತಿದ್ದ ವಿಶ್ವನಾಥ ಗಾಣಿಗ ಇಂದು ನಮ್ಮ ನಡುವಿನ ಹೆಮ್ಮೆಯ ಕ್ರೀಡಾಪಟು. ತನ್ನ ಕೆಲಸ ಓದಿನ ನಡುವೆಯೇ ಕ್ರೀಡಾಪಟುವಾಗಬೇಕೆಂಬ ಅದಮ್ಯ ತುಡಿತಕ್ಕೆ ತಕ್ಕಂತೆ ಹಾಕಿದ ಶ್ರಮವೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೆಹಲಿ ತಲಕೊತ್ತರಾ ಇಂಡೋರ್ ಸ್ಟೇಡಿಯಂನಲ್ಲಿ ನಡೆ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕುಂದಾಪುರದ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆಫ್ ಇಂಡಿಯಾ ವಿದ್ಯಾರ್ಥಿಗಳಾದ ಅಕ್ಷಯ್, ಗಣೇಶ್, ವೈಭವ್ ಬೋಸ್ಲೆ, ವಿನಯ್ ಕುಮಾರ್, ಚರಣ್ ಶ್ಯಾನ್‌ಬೋಗ್ ಇವರು ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಶಿಹಾನ್ ಕಿರಣ್ ಕುಂದಾಪುರ, ಸಂದೀಪ್ ವಿ.ಕೆ., ಕೀರ್ತಿ ಜಿ.ಕೆ. ತರಬೇತಿ ನೀಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜ ಜೀವನದಲ್ಲಿ ಪ್ರಧಾನವಾದ ಎರಡು ಘಟಕಗಳು ಮದುವೆ ಮತ್ತು ಕುಟುಂಬ. ದುರಂತವೆಂದರೆ ಮದುವೆ ಮತ್ತು ಕುಟುಂಬ ಎಂಬ ಈ ಎರಡು ಅಪೂರ್ವ ಘಟಕಗಳ ನಡುವೆಯೇ ಹೆಣ್ಣು ಹಲವು ತೆರೆನಾದ ದೌರ್ಜನ್ಯಗಳು ಕಣ್ಣಿಗೆ ಕಾಣಿಸುವಂತಿದ್ದರೆ ಹಲವು ಅನುಭವಕ್ಕೆ ಮಾತ್ರ ಗೋಚರವಾಗುತ್ತದೆ. ಇಂತಹ ದೌರ್ಜನ್ಯ ಕಾನೂನಿನಿಂದ ನಿಯಂತ್ರಿಸಬಹುದೇ ಹೊರತು ಪೂರ್ಣಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಕನ್ನಡ ವಿಭಾಗ ಮುಖ್ಯಸ್ಥೆ ರೇಖಾ ಬನ್ನಾಡಿ ಹೇಳಿದರು. ಬೆಂಗಳೂರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಿದ ಮಹಿಳೆಯರ ಮೇಲಿನ ದೌರ್ಜನ್ಯಗಳು :ತಡೆಗಟ್ಟುವಿಕೆ ಮತ್ತು ಪರಿಹಾರ’ ಎಂಬ ವಿಷಯದ ಮೇಲೆ ನಡೆಸಿದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ತವರು ಮನೆಯ ಆಸ್ತಿಯಲ್ಲಿ ಹೆಣ್ಣು ಸಮಾನ ಹಕ್ಕುದಾರಳಾದುದುರಿಂದ ವೈವಾಹಿಕ ಬದುಕು ಅಸಹನೀಯವೆನಿಸಿದಾಗ ಸಾವಿಗೆ ಶರಣಾಗದೆ ತವರು ಮೆನೆಯನ್ನು ಸೇರಿಕೊಂಡು ಬದುಕನ್ನು ಕಟ್ಟಿಸಿಕೊಳ್ಳುತ್ತಾರೆ ಎಂದರು.…

Read More

ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮರ್ಸ್ ಲ್ಯಾಬ್ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಠ್ಯವಸ್ತುವಿನ ಹೊರತಾದ ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಪೂರಕವಾಗುವ ಒಂದು ವಿನೂತನ ಪ್ರಯತ್ನ ಅವನ್ನು ಬೈಂದೂರು ಪದವಿ ಕಾಲೇಜಿನಲ್ಲಿ ಮಾಡಲಾಗಿದ್ದು ಅವು ವಿದ್ಯಾರ್ಥಿಗಳ ಜ್ಞಾನ ವಿಸ್ತಾರ ಮತ್ತು ಉದ್ಯೋಗ ಗಳಿಕೆಗೆ ಸಹಕಾರಿಯಾಗುತ್ತವೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾದ ಕಾಮರ್ಸ್ ಲ್ಯಾಬರೇಟರಿಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಮರ್ಸ್ ವಿಭಾಗ ಮುಖ್ಯಸ್ಥ ಡಾ. ಉಮೇಶ ಮಯ್ಯ ಕಾಮರ್ಸ್ ಲ್ಯಾಬ್ ವಿದ್ಯಾರ್ಥಿಗಳ ಪಠ್ಯವಸ್ತು ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆಯ ನಡುವಿನ ಕೊಂಡಿಯಾಗಿರುತ್ತದೆ. ದೇಶದ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಮಹತ್ವದ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಬ್ಯಾಂಕ್, ವಿಮೆ, ಶೇರು ಮಾರುಕಟ್ಟೆ, ಕಂಪನಿ ವ್ಯವಹಾರಗಳು, ನಿರ್ವಹಣಾ ವಿಜ್ಞಾನ ಇತ್ಯಾದಿ ವಿಚಾರಗಳನ್ನು ಇಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಯುವಕರ ಪಡೆ ಸಂಘಟನೆಯಲ್ಲಿ ಒಂದು ನಂಬಿಕೆ ಇಟ್ಟುಕೊಂಡು ಮುಂದೆ ಬಂದಾಗ ಎನೂ ಬೇಕಾದರೂ ಸಾಧಿಸಿ ತೋರಿಸುವ ಛಲ ಇಂದಿನ ಯವಕರಲ್ಲಿ ಇದೆ. ಅದಕ್ಷಾಗಿ ಸರಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಸಮಾಜದ ದಾನಿಗಳಿಂದ ಸಹಾಯ ಪಡೆದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವುದರದೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಾಗ ಮಾತ್ರ ನಮ್ಮ ಸಮಾಜವು ಏಳಿಗೆಯಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಅರುಣ್ ಭಂಡಾರಿ ಪರ್ಕಳ ಹೇಳಿದರು. ಅವರು ಕುಂದಾಪುರ ಕುಂದೇಶ್ವರ ರಸ್ತೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕುಂದಾಪುರ ತಾಲೂಕು ಪರಿಯಾಳ ಸಮಾಜ ಹಾಗೂ ಮಹಿಳಾ ಪರಿಯಾಳ ಸಮಾಜ ಜಂಟಿ ಆಶ್ರಯದಲ್ಲಿ ಜರುಗಿದ ೪ನೇ ವಾರ್ಷೀಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಯು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಲಲಿತಾ ಕಲಾ ಸಂಘ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ರೀಯಾಶೀಲ ಚಟುವಟಿಕೆ ಉತ್ತೇಜಿಸುವ ನೆಲೆಯಲ್ಲಿ ಪೂಕಳಂ ಪುಷ್ಪ ರಂಗೋಲಿ ಸ್ಪರ್ಧೆ ಕಾಲೇಜ್ ಸಭಾಂಗಣದಲ್ಲಿ ನಡೆಸಲಾಯಿತು. ಲಲಿತ ಕಲಾ ಸಂಘದ ಸಂಯೋಜಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್, ಸಹ ಸಂಯೋಜಕಿ ಅನ್ವಿತಾ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಇದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಿ.ಕಾಂ. ಡಿ ವಿಭಾಗದ ಶ್ರೇಯಾ ಸೆಬೆಸ್ಟಿನ್, ಹಾಗೂ ದ್ವಿತೀಯ ಬಿ.ಕಾಂ. ಸಿ ವಿಭಾಗದ ಯೋಗಿಶ್ ಸ್ಥಾನಗಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಆಶ್ರಯದಲ್ಲಿ ಕೋಟೇಶ್ವರ ನಮ್ಮ ಕಲಾಕೇಂದ್ರದ ಸಹಭಾಗಿತ್ವದಲ್ಲಿ ನಡೆದ ತಿಂಗಳ ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕೆ. ರವಿರಾಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಹಿರಿಯ ಗೊಂಬೆಯಾಟ ಕಲಾವಿದ ವಾಮನ ಪೈ ಹೆಮ್ಮಾಡಿ, ಸಂತೋಷ್ ಅಡ್ವರ್‌ಟೈಸಿಂಗ್ ಮಾಲಕ ಸಂತೋಷ ಕೋಣಿ ಉಪಸ್ಥಿತರಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಬಟ್ವಡಿ ಅನುದಾನಿತ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಮ್ಮ ಕಲಾಕೇಂದ್ರದ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ತಾಳಮದ್ದಳೆ ನಡೆಯಿತು.

Read More