ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಮಲಶಿಲೆಯ ಗಣೇಶ್ ಐತಾಳ ಎಂಬುವವರ ಮನೆಯ ಸಮೀಪ ದೊಡ್ಡದಾದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು. ಉರಗಪ್ರೇಮಿ ಅಂಪಾರು ಶಂಕರ ಅವರು ಕಮಲಶಿಲೆಗೆ ತೆರಳಿ ಸುಮಾರು 10ಕೆಜಿಗೂ ಹೆಚ್ಚಿನ ತೂಕದ 8 ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಅವರಿಗೆ ಕಮಲಶಿಲೆ ದೇಗುಲದ ಗುಹಾಲಯ ಅರ್ಚಕ ರಾಘವೇಂದ್ರ ಜೋಗಿ ಅವರು ಸಹಕರಿಸಿದರು. ಬಳಿಕ ಅದನ್ನು ಕಾಡಿಗೆ ಬಿಡಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಲೆನಾಡು, ಅರೆ ಮಲೆನಾಡು ಹಾಗು ಬಯಲುಸೀಮೆ – ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ರಸ್ತೆಯ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಖುದ್ದು ಲೋಕೋಪಯೋಗಿ ಇಲಾಖಾ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಮಾಡಿ, ಅಭಿವೃದ್ಧಿ ಕಾರ್ಯಗಳ ಸಾಧಕ-ಬಾಧಕಗಳನ್ನು ಚರ್ಚಿಸಿದರು. ಮಲೆನಾಡು, ಅರೆ ಮಲೆನಾಡು ಹಾಗು ಬಯಲುಸೀಮೆ : ಕರಾವಳಿ ಭಾಗಕ್ಕೆ ಅತೀ ಸಮೀಪದ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ನಲ್ಲಿ ಹೆಚ್ಚು ಲಘು ವಾಹನಗಳು, ಮಿನಿ ಬಸ್ಗಳು ಸಂಚರಿಸುತ್ತವೆ. ಹೆಚ್ಚಾಗಿ ಘಟ್ಟದ ಮೇಲಿನ ಜನರು ಉತ್ತಮ ಆರೋಗ್ಯ ಸೇವೆ ಹಾಗೂ ಶಿಕ್ಷಣ ಪಡೆಯಲು ಹೆಚ್ಚು ಹೆಚ್ಚು ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಈ ಘಾಟ್ ರಸ್ತೆಯ ಕೆಲವೊಂದು ಸ್ಥಳಗಳಲ್ಲಿ ಅಗಲೀಕರಣ, ರಕ್ಷಣಾ ಗೋಡೆಗಳ ನಿರ್ಮಾಣ ಸೇರಿದಂತೆ ಮತ್ತಿತರ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಪರಿಶೀಲನೆ ನಡೆಸಿ, ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಅಭಿಯಂತರರುಗಳೊಂದಿಗೆ ಮಾಹಿತಿ ಪಡೆದರು. ಆಗುಂಬೆ ಘಾಟ್ನಲ್ಲಿ ಶಿವಮೊಗ್ಗದ ಕಡೆಯಿಂದ ಬರುವ ಘಾಟ್ನ ಆರಂಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್’’ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಆಯುರ್ವೇದವು ಇಂದು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಸುಮಾರು 17 ರಾಷ್ಟ್ರಗಳಿಗೆ ಇದರ ವಿಸ್ತರಣೆ ಆಗಿದ್ದು, 25ಕ್ಕೂ ಹೆಚ್ಚು ಯುರೋಪಿನ ರಾಷ್ಟ್ರಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆಯುತ್ತಿರುವುದು ಈ ವೈದ್ಯ ಪದ್ಧತಿಯ ಬೆಳವಣಿಗೆಯ ಸೂಚಕವಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ₹3,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯ ಮತ್ತು ಸಚಿವರ ವ್ಯವಸ್ಥೆಯೂ ಇರುವುದರಿಂದ ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಮಹತ್ವ ಸ್ಪಷ್ಟವಾಗುತ್ತದೆ ಎಂದರು. ಆಯುರ್ವೇದದಲ್ಲಿ ಔಷಧ, ಚಿಕಿತ್ಸಾ ವಿಧಾನ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಂಡುಬಂದಿದ್ದು, ವೈದ್ಯರು ನಿರಂತರವಾಗಿ ಹೊಸ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಗೆಳೆಯರು, ಹೆತ್ತವರು ಹಾಗೂ ಗುರುಗಳ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿ ವಿಶ್ವಾತ್ಮಕ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಬಸ್ರೂರಿನ ಶ್ರೀ ಶಾರದಾ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಮ್. ದಿನೇಶ್ ಹೆಗ್ಡೆ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ 2026- 27ನೇ ಶೈಕ್ಷಣಿಕ ಸಾಲಿಗೆ ಕಾಲೇಜಿನ ಪ್ರಥಮ ವರ್ಷದ ಪದವಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಪ್ರೇರಣಾ” ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪದವಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಯಾವುದೇ ಜ್ಞಾನ ಶಿಸ್ತನ್ನು ಆಯ್ಕೆ ಮಾಡಿಕೊಂಡರೂ, ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಗಳಿಸಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಸಂಸ್ಥೆಯ ಭಿನ್ನ ಶೈಕ್ಷಣಿಕ ಆಯಾಮಗಳ ಕುರಿತು ತಿಳಿಸಿದರು. ಕಾಲೇಜಿನ ಶೈಕ್ಷಣಿಕ ನಿಕಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ನೆರಳಕಟ್ಟೆ ಸಮೀಪದ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ನಾಗೇಶ್ ಗಾಣಿಗ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ತಕ್ಷಣವೇ ಕುಂದಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ನಾಗೇಶ್ ಅವರು ಹಲವು ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ನೇಹಪರ ವ್ಯಕ್ತಿತ್ವದ ಸಹೃದಯಿ ಪತ್ರಕರ್ತರಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಲ್ಲಿ ಡಾ. ಆರ್. ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಬೈಂದೂರು ಕ್ಷೇತ್ರದ ಶಂಕರನಾರಾಯಣ ಗ್ರಾಮದ ಕುಪ್ಪಾರು ಬಟ್ಟಿಹಕ್ಲು, ಜಡ್ಕಲ್ ಗ್ರಾಮದ ಬಸ್ರಿಬೇರು ಹಾಗೂ ಹೊಸಂಗಡಿ ಗ್ರಾಮದ ಅಯ್ಯಪ್ಪನಜೆಡ್ಡು ಕಕ್ಕನಪಾಲು ಇಲ್ಲಿ ನೂತನ ಕಾಲುಸಂಕದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಡಾ. ಆರ್ ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು, ಇದರ ಪ್ರವರ್ತಕರಾದ ಕ್ಯಾಪ್ಟನ್ ರಮೇಶ್ ಅರುಣಾಚಲಂ ಅವರ ಜೊತೆಗೂಡಿ ನೆರವೇರಿಸಿದರು. ಶಂಕರನಾರಾಯಣ ಕುಪ್ಪಾರು ಕಾಲುಸಂಕ:ಶಂಕರನಾರಾಯಣ ಗ್ರಾಮದ ಕುಪ್ಪಾರು ಬಟ್ಟಿ ಹಕ್ಲುವಿನಲ್ಲಿ ಡಾ. ಆರ್ ಅರುಣಾಚಲಂ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಿದ ಅರುಣಾಚಲಂ ಕಾಲುಸಂಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಅರುಣಾಚಲಂ ಅವರ ಕುಟುಂಬವು ಬೈಂದೂರಿನ ಜನತೆಯ ಮೇಲಿನ ಪ್ರೀತಿಯಿಂದ ತಮ್ಮ ಸ್ವಂತ ದುಡಿಮೆಯಿಂದ ನಿರ್ಮಿಸಿದ ಈ ಕಾಲುಸಂಕಕ್ಕೆ ಬೆಲೆ ಕಟ್ಟಲು ಅಸಾಧ್ಯ, ಬೈಂದೂರಿನ ಜನತೆ ನಿಮ್ಮನ್ನು ಈ ಸಮಾಜಮುಖಿ ಕಾರ್ಯಕ್ಕೆ ಸದಾ ಸ್ಮರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು. ಇದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಡಿ ಕನ್ಯಾಣ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದೇವಳದ ಹೆಬ್ಬಾಗಿಲು ಮತ್ತು ರಾಜಗೋಪುರ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮವು ಮಂಗಳವಾರ ಸಂಪನ್ನಗೊಂಡಿತು. ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಶ್ರೀಧರ ಪುರಾಣಿಕ್ ಅವರ ನೇತೃತ್ವದಲ್ಲಿ ಜರುಗಿದವು. ಈ ಸಂದರ್ಭದಲ್ಲಿ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ್ ಅಮೀನ್, ಉದ್ಯಮಿಗಳಾದ ಶಿವ.ಎಸ್.ಕರ್ಕೇರ, ನರಸಿಂಹ ಪೂಜಾರಿ ಸಾಲಿಗ್ರಾಮ, ದೇವಳದ ಅರ್ಚಕರು ಸೇರಿದಂತೆ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕೈಜೋಡಿಸಲು ಆಡಳಿತ ಮಂಡಳಿ ಕರೆದೇಗುಲದ ಅಭಿವೃದ್ಧಿಗೆ 2014ರಲ್ಲಿ ನಾಡೋಜ ಜಿ. ಶಂಕರ್ ಹಾಗೂ ಆನಂದ ಸಿ. ಕುಂದರ್ ಅವರ ಮಾರ್ಗದರ್ಶನ ಮತ್ತು ಭಕ್ತಾಭಿಮಾನಿಗಳ ಸಹಕಾರದೊಂದಿಗೆ ನೂತನ ಗರ್ಭಗುಡಿ ಸಂರಚನೆಗೊಂಡು ಪುನರ್ ಪ್ರತಿಷ್ಠಾ ಮಹೋತ್ಸವ ಅದ್ದೂರಿಯಾಗಿ ಜರುಗಿದೆ. ಇದೀಗ ದೇವಳದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸರಿ ಸುಮಾರು 2 ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ ಅನ್ನಛತ್ರ, ಸಭಾಭವನ, ಹೆಬ್ಬಾಗಿಲು, ರಾಜಗೋಪುರ ಮತ್ತು ದೇವಳದ ಸುತ್ತಲೂ ಮೇಲ್ಚಾವಣಿ ನಿರ್ಮಾಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ರಂದು ನಡೆದ (CISCE) ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಶಾಲೆಯ 17 ವರ್ಷದ ಬಾಲಕಿಯರ ತಂಡವು ಚಾಂಪಿಯನ್ ಆಗಿ (ಪ್ರಥಮ ಸ್ಥಾನ) ಹೊರಹೊಮ್ಮಿದೆ. ಹಾಗೆಯೇ, 17 ವರ್ಷದೊಳಗಿನ ಬಾಲಕರ ತಂಡವು ರನ್ನರ್-ಅಪ್ (ದ್ವಿತೀಯ ಸ್ಥಾನ) ಪಡೆದು ಗಮನಾರ್ಹ ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿಗಳಾದ ವಿಕಾಸ್ ಸಿ.ಕೆ, ಶಂಭು ಬಿ, ಈರಣ್ಣ ಕೆ. ಪತ್ತಾರ್, ಶ್ರೇಯಸ್ ಸಿ, ಸುವಾಸ್ ಎಸ್ ಜಿ, ಸಿದ್ಧಾರ್ಥ್ ವೈ.ಸಿ., ಪ್ರತುಲ್ ಎಸ್. ಶೆಟ್ಟಿ, ಸಂಕೇತ್ ಆರ್ ಬಿ, ಸಂಪತ್ ಎಸ್ ಕೆ, ಪ್ರಸನ್ನ ಆರ್ ಜೆ, ವೇದಿತ್, ವೇದಾಂತ್ ವಿ. ಎಸ್ ಈ ವಿದ್ಯಾರ್ಥಿಗಳು ಸೀನಿಯರ್ (U-17) ಬಾಲಕರ ವಿಭಾಗದಲ್ಲಿ ಶಾಲಾ ತಂಡದಲ್ಲಿ ಭಾಗವಹಿಸಿದ್ದರು. ತನಿಷ್ಕಾ ವಿ ಮೇತ್ರಿ, ಮಾಣಿಕ್ಯ ಎ ಎಸ್, ವಿಜಯಲಕ್ಷ್ಮಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗಾಣಿಗ ಯುವ ಸಂಘಟನೆ ಕೋಟ ಆಶ್ರಯದಲ್ಲಿ “ಯುವ ಸಂಗಮ” ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕೋಟ ವಿವೇಕ ವಿದ್ಯಾಸಂಸ್ಥೆಯ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆಯಿತು. ಯಕ್ಷಗಾನ ಕೇಂದ್ರ ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಹೇರಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಪ್ರದಾನ ಮಾಡಿ ಮಾತನಾಡಿ, ಯಕ್ಷಗಾನ ಕಲೆಗೆ ಹಾರಾಡಿ ಮನೆತನ ಹಾಗೂ ಗಾಣಿಗ ಸಮಾಜದ ಕೊಡುಗೆ ಅವಿಸ್ಮರಣೀಯವಾದದ್ದು. ಡಾ. ಶಿವರಾಮ ಕಾರಂತರ ತಂಡದಲ್ಲಿ ಗಾಣಿಗ ಸಮಾಜದ ಕಲಾವಿದರಿಗೆ ಅಗ್ರಪಾಲಿತ್ತು. ಒಂದು ಊರಲ್ಲಿ ಹಲವು ಮೇಳಕ್ಕಾಗುವಷ್ಟು ಪ್ರಬುದ್ಧ ಕಲಾವಿದರಿದ್ದರು.ಇದೆಲ್ಲವೂ ಗಾಣಿಗ ಸಮಾಜ ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಅಗ್ರಗಣ್ಯ ಸಾಧನೆಯನ್ನು ಬಿಂಬಿಸುತ್ತದೆ ಹಾಗೂ ಹಾರಾಡಿ ಮಹಾಬಲ ಗಾಣಿಗರು ಕೂಡ ಅತ್ಯಂತ ಶಿಸ್ತಿನ ಮತ್ತು ಪರಿಪೂರ್ಣ ಕಲಾವಿದರಾಗಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಮನೆ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು ಅವುಗಳನ್ನು ಭರ್ತಿ ಮಾಡಿ ತ್ವರಿತವಾಗಿ ಮತಗಟ್ಟೆ ಅಧಿಕಾರಿಗಳಿಗೆ ಸಾರ್ವಜನಿಕರು ಹಿಂದಿರುಗಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು. ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್.ಐ.ಆರ್) ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಕಾರಾತ್ಮಕವಾಗಿ ಸಹಕರಿಸಬೇಕು.ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಗಳ ವಿತರಣೆಯ ಕಾರ್ಯವು ಈಗಾಗಲೇ ಶೇ.99.97ರಷ್ಟು ಪೂರ್ಣಗೊಂಡಿದೆ. ಸಾರ್ವಜನಿಕರು ಗಣತಿ ನಮೂನೆಗಳನ್ನು ಭರ್ತಿ ಮಾಡಿ ತ್ವರಿತವಾಗಿ ಬಿ.ಎಲ್.ಓ ಗಳಿಗೆ ನೀಡಬೇಕೆಂದರು. ಗಣತಿ ನಮೂನೆಗಳನ್ನು ಭರ್ತಿ ಮಾಡಿ ನೀಡಿದಲ್ಲಿ ಅವುಗಳ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲು ಬಿ ಎಲ್ ಓ ಗಳಿಗೆ ಅನುಕೂಲವಾಗಲಿದೆ. ಕೊನೆಗಳಿಗೆಯಲ್ಲಿ…
