ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿಯಲ್ಲಿ ಕುಟುಂಬೋತ್ಸವ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವು ರವಿವಾರ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಹಾಲಾಡಿ ವಾರಾಹಿಯ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಕಾಮತ್, ಜೆಸಿ ರಶ್ಮಿ ಭಟ್ ತಲಾರಿ, ಸರ್ವೋತ್ತಮ ಹೆಗ್ಡೆ, ವಿವೇಕ್ ಮಿಥ್ಯಾಂತ ಮೂಡಲಮಕ್ಕಿ, ಜ್ಞಾನೆೇಶ್ ಶೆಟ್ಟಿ ಹಾಲಾಡಿ, ಯೊಗೀಶ್ ಕಾಂಚನ್ ಶಂಕರನಾರಾಯಣ ಹಾಗೂ ಜೆಸಿ ಪ್ರವೀಣ್ ಬಾಳೆಕೊಡ್ಲು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಸದಸ್ಯ ರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ನಂತರ ಕುಟುಂಬ ಸದಸ್ಯರಿಗಾಗಿ ವಿವಿಧ ಮನರಂಜನಾ ಆಟಗಳು, ಸಂಗೀತ ಕುರ್ಚಿ ಸ್ಪರ್ಧೆ, ಲಕ್ಕಿ ಡ್ರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅತಿಥಿಗಳು ಮಾತನಾಡಿ, ಜೆಸಿಐ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಶಿಕ್ಷಣ, ಸೇವೆ ಮತ್ತು ಕುಟುಂಬ ಮೌಲ್ಯಗಳ ಬೆಳವಣಿಗೆಯಲ್ಲಿ ಇಂತಹ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಕ್ಕಳ ದಿನಾಚರಣೆ-2026ರ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದ್ದು, ಅರ್ಹ ಬಾಲಕ ಮತ್ತು ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.1,00,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. “ಹೊಯ್ಸಳ” ಮತ್ತು “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಗೆ ಸಂಬAಧಿಸಿದAತೆ 2025 ರ ಆಗಸ್ಟ್ 1 ರಿಂದ 2026 ರ ಜುಲೈ 31 ರ ಒಳಗೆ ಪ್ರಕರಣ ನಡೆದಿರಬೇಕು. ಪ್ರಶಸ್ತಿಗೆ ಆಯ್ಕೆಯಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜೀವನದಲ್ಲಿ ಕನಸು ಮತ್ತು ಗುರಿ ಇರಿಸಿ ಮುನ್ನಡೆದರೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದು ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಭಾನುವಾರ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಮತ್ತು ರೋಟರಿ ಕ್ಲಬ್ ಸಾಹೇಬರಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊರ್ವರು ಆತ್ಮ ಸ್ಥೈರ್ಯದ ಜೊತೆಗೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಸೃಷ್ಠಿಸಿಕೊಳ್ಳಬೇಕು, ಜೀವನದಲ್ಲಿ ಯಶಸ್ವಿಯಾಗುತ್ತಾ ಹೊದಾಗ ಕಾಲೇಳೆಯುವ ಮನಸ್ಥಿತಿಯ ವ್ಯಕ್ತಿಗಳು ಎದುರಾಗುತ್ತಾರೆ ಅವರನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು. ನಮ್ಮ ಜೀವನದಲ್ಲಿ ಸ್ವಾಮೀ ವಿವೇಕಾನಂದರು, ಅಬ್ದುಲ್ ಕಲಾಂ ಅಂತಹ ವ್ಯಕ್ತಿಗಳು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕು. ಅತ್ಯಂತ ಕಠಿಣ ಸಂದರ್ಭದಲ್ಲೂ ಹಿಂಜರಿಯದೆ ಸ್ಪಷ್ಟ ಧ್ಯೇಯೋದ್ದೇಶದೊಂದಿಗೆ ಸಾಧನೆಯ ಪಥವನ್ನೆರಬೇಕು ಎಂದರಲ್ಲದೆ ವಿ. ಶೈನ್ ಕೊಚಿಂಗ್ ಸೆಂಟರ್ ಅವರ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜದ ಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿಎ / ಸಿಎಸ್ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ತ್ರಿಷಾ ಕಾಲೇಜಿನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಆಗಿರುವ CA ಗೋಪಾಲ ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ CA/CS ಕೋರ್ಸ್‌ನ ಹಂತಗಳು, ಅವಧಿ ಮತ್ತು ಅವಕಾಶಗಳನ್ನು ಕುರಿತು ಸಂಪೂರ್ಣ ಮಾಹಿತಿ ನೀಡಿ, CA / CS ಹೊರತುಪಡಿಸಿ ಪಿಯುಸಿ ನಂತರದ ವಿವಿಧ ಕೋರ್ಸ್ ಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಶಿವರಂಜನಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿಯರಾದ ನಿಧಿ ವಂದಿಸಿ, ವಿನಯಾ ಪರಿಚಯಿಸಿ, ವಾಣಿಜ್ಯ ಉಪನ್ಯಾಸಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸೇವೆಯಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಿವೆ. ಅದರಲ್ಲಿ ಪ್ರಕೃತಿಯನ್ನು ಆರಾಧಿಸುವ ಪರಿಸರ ಸಂರಕ್ಷಿಸುವ ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆಯಷ್ಟೆ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಇದು ಪ್ರಸ್ತುತ ಪಂಚವರ್ಣ ಸಂಘಟನೆಗಳಿಂದಾಗುತ್ತಿರುವುದು ಶ್ಲಾಘನೀಯ ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್ ಹೇಳಿದರು. ಅವರು ಭಾನುವಾರ ಪಾಂಡೇಶ್ವರ ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 310ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಗೀತಾನಂದ ಫೌಂಡೇಶನ್ ಮಣೂರು ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದೊಂದಿಗೆ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ನಡೆದ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿರು ಉಳಿಸಿ ಬೆಳೆಸಿದರೆ ಮನುಕುಲ ಸಂಕಷ್ಟದಿಂದ ಪಾರಾಗಬಹುದು ಇಲ್ಲವಾದಲ್ಲಿ ಹಣ ಕೊಟ್ಟು ಆಕ್ಸಿಜನ್ ಕೊಳ್ಳುವ ಕಾಲ ದೂರಿಲ್ಲ ಅದಕ್ಕಾಗಿ ಪ್ರತಿಯೊರ್ವರು ಗಿಡ ನೆಟ್ಟು ಪೋಷಿಸುವ ಕಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ವತಿಯಿಂದ ಕಟ್ ಬೆಲ್ತೂರು ಹೊಲಿಗೆ ತರಬೇತಿ ಕೇಂದ್ರದಲ್ಲಿ ಸ್ವದ್ಯೋಗ ಮಾಡಲು ಬ್ಯಾಂಕಿಂಗ್ ಸೌಲಭ್ಯ ಬಗ್ಗೆ ಕರ್ನಾಟಕ ಗ್ರಾಮೀಣ ವಿಕಾಸ ಹೆಮ್ಮಾಡಿಯ ಶಾಖಾಧಿಕಾರಿಯಾದ ನಾಗರತ್ನಾ ನಾಯಕ್ ಅವರು ಮಾಹಿತಿಯನ್ನು ಹಂಚಿಕೊಂಡರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಅವರು ಮಾತನಾಡಿ, ಮಹಿಳೆಯರು ಶಿಕ್ಷಣ, ಕೌಶಲ್ಯ, ಆರ್ಥಿಕ ಸ್ವಾವಲಂಬಿಗಳಾಗಿ ಆತ್ಮ ವಿಶ್ವಾಸದ ಮೂಲಕ ಸಬಲರಾದರೆ ಒಂದು ಕುಟುಂಬ ಅಭಿವೃದ್ಧಿ ಹೊಂದಿದಂತೆ. ಈ ನಿಟ್ಟಿನಲ್ಲಿ ಮಹಿಳೆಯರು ಹೋಲಿಗೆಯನ್ನು ಕಲಿತು ಸ್ವ ಉದ್ಯೋಗವನ್ನು ಆರಂಭಿಸಬಹುದು. ಗಾರ್ಮೆಂಟ್ ಅಥವಾ ಬಟ್ಟೆ ತಯಾರಿಕಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದು .ಇದರಿಂದ ಕುಟುಂಬದ ಆದಾಯ ಹೆಚ್ಚುವುದರ ಜೊತೆಗೆ ಆತ್ಮ ವಿಶ್ವಾಸವು ವೃದ್ಧಿಯಾಗುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಶಿಬಿರದ ತರಬೇತುದಾರರಾದ ಯಾಸ್ಮಿನ್ ಮತ್ತು ಯಶೋಧ ಇವರು ಉಪಸ್ಥಿತರಿದ್ದರು. ನರಸಿಂಹ ಗಾಣಿಗ ಹರೆಗೋಡು ಪ್ರಾಸ್ತವಿಕ ನುಡಿಗಳನ್ನಾಡಿದರು. ಮಾಜಿ ಅಧ್ಯಕ್ಷ ರಾಜು ಪೂಜಾರಿ ರೋಟರಿ ಮಾಹಿತಿಗಳನ್ನು ನೀಡಿದರು. ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಹಿತ್ಯ, ಓದು, ಯುವ ಮನಸುಗಳನ್ನು ಪುಸ್ತಕದೆಡೆಗೆ ಸೆಳೆಯಬೇಕೆನ್ನುವ ಸದುದ್ದೇಶದಿಂದ ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪುಸ್ತಕ ಮನೆ ವತಿಯಿಂದ ಕ್ರಿಯೇಟಿವ್ ಪುಸ್ತಕ ಧಾರೆ – 2026 ಮೂರನೆಯ ಆವೃತ್ತಿಯ ಕಾರ್ಯಕ್ರಮ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಸಂಪನ್ನಗೊಂಡಿತ್ತು. ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ವಿ.ಸುನಿಲ್ ಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪುಸ್ತಕ ಬೆಳೆಸುವ ಕಾರ್ಯವನ್ನು ಪುಸ್ತಕ ಮನೆ ಮಾಡುತ್ತಿದ್ದು, ಗೂಗಲ್ ವಾಟ್ಸಪ್ ಗಳು ಜ್ಞಾನವನ್ನು ನೀಡಿದರೆ ವಿಶೇಷ ಅನುಭವವನ್ನು ಕೊಡುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪುಸ್ತಕವನ್ನು ಓದುವ ಅಭ್ಯಾಸವನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ, ಕಿರಿಯ ಬರಹಗಾರರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಡುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಮಹಾಪೋಷಕರಾದ ದಿವಂಗತ ಡಾ| ಬಿ.ಬಿ. ಹೆಗ್ಡೆ ಅವರ ಧರ್ಮಪತ್ನಿ ದಿವಂಗತ ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ಗ್ರಂಥಾಲಯದಲ್ಲಿ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು, ಸಂಸ್ಥೆಯ ಏಳಿಗೆಗೆ ಕಾರಣರಾದ ಮಾತೃ ಹೃದಯಿ ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಹಕಾರವನ್ನು ಸ್ಮರಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುರೇಖಾ ಆಚಾರ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಪುಷ್ಪಾರ್ಚನೆ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಎಂಬಿಎ ವಿಭಾಗದ ವತಿಯಿಂದ ಮಂಗಳವಾರ ದಿಂದ ಶುಕ್ರವಾರ ದವರೆಗೆ “ವೈಬ್ರೇಷನ್ ವೀಕ್–2026” ಅನ್ನು “ಸ್ಯಾಂಡಲ್‌ವುಡ್” ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಮೊದಲ ದಿನ “ಕವಿರತ್ನ ಕಾಳಿದಾಸ ಬ್ರೇನ್ ಬ್ಯಾಟಲ್” ಕ್ವಿಜ್ ಸ್ಪರ್ಧೆ ಹಾಗೂ “ಸಿಹಿ ಕಹಿ ರುಚಿ” (ಅಗ್ನಿ ರಹಿತ ಅಡುಗೆ) ಸ್ಪರ್ಧೆ ನಡೆಯಿತು. ಎರಡನೇ ದಿನ “ಯುವರತ್ನ ಲೀಡರ್‌ಶಿಪ್ ಹಂಟ್” (ಬೆಸ್ಟ್ ಮ್ಯಾನೇಜರ್), “ಪ್ರೆಸ್ ಮೀಟ್ ಪ್ರಸಂಗ” (ಮಾಕ್ ಪ್ರೆಸ್ ಮೀಟ್) ಹಾಗೂ “ವಿಚಿತ್ರ ವೇಷ” (ಮಿಸ್‌ಮ್ಯಾಚ್ ಫ್ಯಾಷನ್ ಶೋ) ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿದ್ದವು.ಮೂರನೇ ದಿನ “ಯಜಮಾನ ಪ್ರೆಸೆಂಟೇಶನ್ ಲೀಗ್” (ಪವರ್‌ಪಾಯಿಂಟ್ ಪ್ರಸ್ತುತಿ) ಮತ್ತು “ಕಲ್ಪನಾ ರೀಲ್ಸ್” (ರೀಲ್ಸ್ ತಯಾರಿಕೆ) ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು.ಕೊನೆಯ ದಿನ “ಅಷ್ಟರಂಗ ಸಿನಿ ಉತ್ಸವ” ಎಂಬ ತಂಡ ಸ್ಪರ್ಧೆಯಲ್ಲಿ ಗುಂಪು ಗಾಯನ, ಗುಂಪು ನೃತ್ಯ, ಕಿರಿಕ್ ಮಿಮಿಕ್ರಿ ಹಾಗೂ ರೆಟ್ರೋ ಫ್ಯಾಷನ್ ಶೋ ಸ್ಪರ್ಧೆಗಳು ನಡೆದವು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರಕ್ಕೆ ವೈದ್ಯರಾದ ಡಾ. ಪ್ರವೀಣ್ ಶೆಟ್ಟಿ ಅವರು ರೋಟರಿ ಕ್ಲಬ್ ಬೈಂದೂರು ಮೂಲಕ ಕೊಡಮಾಡಿದ ಮಕ್ಕಳಿಗೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಅವರು ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು. ಮಾಜಿ ಸಹಾಯಕ ಗವರ್ನರ್ ಐ. ನಾರಾಯಣ, ಕಾರ್ಯದರ್ಶಿ ಮಣಿಕಂಠ ಬೈಂದೂರು, ಸದಸ್ಯ ನಾರಾಯಣ ದೇವಾಡಿಗ, ಬೈಂದೂರು ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಐತಾಳ್, ಸಂಚಾಲಕ ದಿನೇಶ್, ಸಮಿತಿಯ ರವೀಂದ್ರ ಶ್ಯಾನುಭಾಗ್, ರಾಮ ಟೈಲರ್, ಗುರುರಾಜ್ ಮಾಸ್ಟರ್, ನಿರ್ಮಲಾ ಕಿಣಿ, ಆಶಾ ದಿನೇಶ್, ಮಾತಾಜಿಯರಾದ ಸುಜಾತಾ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.
