Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ (66) ಸೋಮವಾರ ಅಲ್ಪಕಾಲದ ನಿಧನರಾಗಿದ್ದಾರೆ. ರಾಜಕೀಯ ಬದುಕಿನ ಆರಂಭದಲ್ಲಿ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಅವರು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ ಪಕ್ಷದ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿ ತ್ರಿಸ್ತರ ಆಡಳಿತವನ್ನು ಪ್ರತಿನಿಧಿಸಿದ್ದರು. 1987ರಲ್ಲಿ ತ್ರಾಸಿ ಪಂಚಾಯತ್ ನಲ್ಲಿ ಪ್ರಪ್ರಥಮ ಅಧ್ಯಕ್ಷರಾಗಿದ್ದವರು. 2007ರಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಂಚಗಂಗಾವಳಿ ಸೊಸೈಟಿ ಸ್ಥಾಪಕಾಧ್ಯಕ್ಷರಾಗಿ, ಗಂಗೊಳ್ಳಿಯ ಪಂಚಗಂಗಾವಳಿ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ವಿವಿಧ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಗುಜ್ಜಾಡಿಯ ಭಾಸ್ಕರ ಪೈ ಸ್ಮಾರಕ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಬೈಂದೂರು ತಾಲೂಕು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಪಾರ ದೈವಭಕ್ತರಾಗಿದ್ದ ಅವರು, ಅನೇಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಈ ಜಗತ್ತಿನಲ್ಲಿರುವುದು ಒಂದೇ ಧರ್ಮ, ಅದು ಹಿಂದು ಧರ್ಮ ನಾವು ನಮ್ಮ ಜೀವನವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುತ್ತಿರುವಾಗ ನಮ್ಮ ಆಚರಣೆಗಳಿಂದ ಉಳಿದ ನಮ್ಮವರಿಗೆ ತೊಂದರೆಯಾಗದಂತೆ ಬದುಕುವುದೇ ಧರ್ಮ. ಉಳಿದೆಲ್ಲವುಗಳು ಮತಗಳು. ಜಾತಿ ಪದ್ಧತಿ ಮತ್ತು ಅಸೂಯೆ ನಮ್ಮ ಧರ್ಮಕ್ಕೆ ದೊಡ್ಡ ಕಂಟಕಗಳು. ಜಾತಿ ಜಾತಿ ಹೆಸರಿನಲ್ಲಿ ಹಿಂದುಗಳನ್ನು ಒಡೆದು ಹಾಕಲಾಗುತ್ತಿದೆ. ನಾವೆಲ್ಲ ಒಂದು ನಾವೆಲ್ಲರೂ ಹಿಂದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಸಂಸ್ಕೃತಿ, ಧರ್ಮಕ್ಕೆ ಜೀವ ಕೊಡಲೂ ಸಿದ್ಧರಾಗಿರಬೇಕು ಎಂದು ಬೈಂದೂರು ಯಳಜಿತ್‌ನ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಹಿಂದು ಸಂಗಮ ಆಯೋಜನ ಸಮಿತಿ ಗಂಗೊಳ್ಳಿ ಮಂಡಲ ಇದರ ವತಿಯಿಂದ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಹಿಂದು ಧರ್ಮ ಉಳಿಸಿಕೊಳ್ಳಲು ಕಾರ್ಯಪ್ರವೃತರಾಗದೆ, ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗಿ ಆ ದಿಸೆಯಲ್ಲಿ ಮುಂದುವರಿದರೆ ಮೂರೇ ತಲೆಮಾರಿನಲ್ಲಿ ಈ ಧರ್ಮ ನಶಿಸಿಹೋಗುತ್ತದೆ ಎಂದು ಸ್ವಾಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ಸಾಲಾಡಿ ಎಂಬಲ್ಲಿ ಟ್ಯಾಟೂ ಹಾಕಿಸುವ ವಿಷಯಕ್ಕೆ ಸಂಬಂಧಿಸಿ ಜಗಳ ನಡೆದು ಎದೆಗೆ ಗುಂಡು ಹಾರಿಸಿದ ಘಟನೆ ನಡೆದಿದೆ. ಮಣಿಪಾಲ ದಶರಥ ನಗರದ ವಿವೇಕ್ ಯು. ಹಚ್ಚೆ ಹಾಕುವ ಕೆಲಸ ಮಾಡಿಕೊಂಡಿದ್ದು, ಪರಿಚಯದ ಸಾಗರ್ ಗೆ ಮನೆಯಲ್ಲಿ ಅರ್ಧ ಹಚ್ಚೆ ಹಾಕಿಸಿ ನಂತರ ಟ್ಯಾಟೂವನ್ನು ಪೂರ್ತಿಗೊಳಿಸಲು ಸಾಗರನ ಬಾಡಿಗೆ ಮನೆಯಾದ ಗುಡ್ಡಮ್ಮಾಡಿಗೆ ಆಗಮಿಸಿದ್ದರು. ಅಲ್ಲಿ ಮಲಗಿದ್ದಾಗ ಸಾಗರ್ ಹಚ್ಚೆ ಸರಿಯಾಗಿಲ್ಲವೆಂದು ತಕರಾರು ತೆಗೆದು ಜಗಳ ಮಾಡಿದ್ದ. ಸುಮಂತ್ ಹಾಗೂ ಆದಿತ್ಯ ಎಂಬುವವರು ವಿವೇಕ್ ರನ್ನು ಹಗ್ಗದಿಂದ ಕಟ್ಟಿಹಾಕಿ ಕಿರುಕುಳ ನೀಡಿ ಹಲ್ಲೆ ಮಾಡಿದರು. ಬಳಿಕ ಸಾಗರ್ ಏರ್ ಗನ್ ತಂದು ವಿವೇಕ್ ನ ಎದೆಗೆ ಗುಂಡು ಹಾರಿಸಿದ್ದಾನೆ. ಗಾಯಾಳು ವಿವೇಕ್ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್. ಪೂಜಾರಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್‌ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಅಡಿಕೆ ಮರವೇರಿ ಸಿಂಗಾರ ಹೂವು ಕೊಯ್ಯುವಾಗ ಮರ ತುಂಡಾಗಿ ಕಾರ್ಮಿಕ ಕೆಳಗೆ ಬಿದ್ದ ಮೃತಪಟ್ಟ ಘಟನೆ ಸೋಮವಾರ ಸಾಲಿಗ್ರಾಮ ಸಮೀಪ ಗುಂಡ್ಮಿಯಲ್ಲಿ ಸಂಭವಿಸಿದೆ. ಗುಂಡ್ಮಿ ನಿವಾಸಿ ಶ್ರೀನಿವಾಸ ಪೂಜಾರಿ (45) ಮೃತಪಟ್ಟ ವ್ಯಕ್ತಿ. ಅವರು ತೆಂಗಿನಮರ ಮತ್ತು ಅಡಿಕೆ ಮರ ಹತ್ತಿ ಕಾಯಿ ಹಾಗೂ ಅಡಿಕೆ ಕೊಯ್ಯುವ ಕೆಲಸ ಮಾಡಿಕೊಂಡಿದ್ದರು. ಸೋಮವಾರ ಬೆಳಗ್ಗೆ ಗುಂಡ್ಮಿ ಗ್ರಾಮದ ಕಾಶ್ಮೀರಿ ಎಂಬಲ್ಲಿ ಪದ್ಮನಾಭ ಹೊಳ್ಳ ಎನ್ನುವವರ ಮನೆಯಲ್ಲಿ ಅಡಿಕೆ ಮರದ ಸಿಂಗಾರ ಹೂವು ತೆಗೆಯಲು ಹೊಗಿದ್ದ ಸಂದರ್ಭ ಮರವೇರಿದ್ದಾಗ ಅಡಿಕೆ ಮರ ತುಂಡಾಗಿದ್ದು ಸಮೀಪದಲ್ಲಿದ್ದ ನಾಗನ ಕಟ್ಟೆಯ ಮಾಡಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಕೋಟ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು ಆದರೆ ಅಷ್ಟರೊಳಗೆ ಮೃತಪಟ್ಟಿದ್ದರು. ಅವರು ಮನೆಗೆ ಆಧಾರಸ್ತಂಭವಾಗಿದ್ದು ಕಾಯಿ ತೆಗೆಯಲು ಹಾಗೂ ಸಿಂಗಾರ ಹೂವು ತೆಗೆಯುವ ಕೆಲಸದಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತಿಯರನ್ನು ಅಗಲಿದ್ದಾರೆ. ಈ ಬಗ್ಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ : ಇಲ್ಲಿನ ನಾಡಗುಡ್ಡೆಯಂಗಡಿಯ ಬೆಳ್ಳಾಡಿಯಲ್ಲಿ ರವಿವಾರ ರಾತ್ರಿ ಸವಾರನ ನಿಯಂತ್ರಣ ತಪ್ಪಿ ಬೈಕ್‌ ಪಲ್ಟಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದಾರೆ. ಕೋಟ ಮಣೂರು ಪಡುಕರೆ ನಿವಾಸಿ ಪ್ರಭಾಕರ್ ಮೆಂಡನ್ ಮೃತರು. ಅವರು ರಾತ್ರಿ ಮಣೂರು ಪಡುಕರೆ ಮನೆಯಿಂದ ತಮ್ಮ ಪತ್ನಿಯ ಮನೆಗೆ ತೆರಳುತ್ತಿದ್ದ ಸಂದರ್ಭ, ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಂಗೊಳ್ಳಿ ಆಪದ್ಭಾಂಧವ ಆಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ, ದಾರಿ ಮಧ್ಯೆ ಪ್ರಭಾಕರ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೃತ ಪ್ರಭಾಕರ್ ಮೆಂಡನ್ ಅವರು ಯಕ್ಷಗಾನ ಕಲಾವಿದ ದಿ। ಮೊಳಹಳ್ಳಿ ಹೆರಿಯ ನಾಯಕ್ ಅವರ ಹಿರಿಯ ಪುತ್ರ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: “ಕುಂದಪ್ರಭ” ಸಂಸ್ಥೆಯಿಂದ, ಹಿರಿಯ ಪತ್ರಕರ್ತ, ತರಬೇತುದಾರ, ವಾಗ್ಮಿ, ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡಲಾಗುತ್ತಿರುವ ಕೋ. ಮ. ಕಾರಂತ ಪ್ರಶಸ್ತಿಗೆ ಈ ವರ್ಷ ಪ್ರತಿಭಾವಂತ ಕುಂಚ ಕಲಾವಿದ, ಪ್ರಗತಿಪರ ಉದ್ಯಮಿ, ತಾಂತ್ರಿಕ ನಿರ್ದೇಶಕ, ಇಂಜಿನಿಯರ್ ಬಳ್ಕೂರು ಜಯರಾಮ ಉಡುಪರನ್ನು ಆಯ್ಕೆ ಮಾಡಲಾಗಿದೆ. ರೇಖಾ ಚಿತ್ರ, ಚುಕ್ಕಿ ಚಿತ್ರ, ವ್ಯಂಗ್ಯ ಚಿತ್ರಕಾರರಾಗಿ ಖ್ಯಾತರಾದ ಅವರು ವೃತ್ತಿಯಲ್ಲಿ “ಮೇಕ್ ಇನ್ ಇಂಡಿಯಾ” ದೃಷ್ಟಿಕೋನ ಹೊಂದಿದವರಾಗಿದ್ದು, ದೇಶಕ್ಕಾಗಿ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಹೆಲಿಕಾಪ್ಟರ್, ವಿಮಾನ, ಕ್ಷಿಪಣಿ ಯೋಜನೆಗಳಿಗೆ ತಾಂತ್ರಿಕ ವಿನ್ಯಾಸ ನೀಡಿದವರು. ತೇಜಸ್ ಯುದ್ಧ ವಿಮಾನಕ್ಕಾಗಿ ಬ್ಯಾಕಪ್ ಡಿಸ್‌ಪ್ಲೇ ಯುನಿಟ್ ವಿನ್ಯಾಸ ಅಭಿವೃದ್ಧಿ ಪ್ರಮಾಣಿಕರಣ ಇವರ ಸಾಧನೆ. ಬೆಂಗಳೂರಿನ ಡಾಟಾ ಸೋಲ್ ಇನ್ನೋವೇಟಿವ್ ಲ್ಯಾಬ್‌ನ ಸ್ಥಾಪಕ ನಿರ್ದೇಶಕರಾಗಿರುವ ಇವರು, ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ಲೈವಿ ((Fly-Vi)) ಟೆಕ್ನಾಲಜೀಸ್ ಪ್ರೈ. ಲಿ. ನ ತಾಂತ್ರಿಕ ನಿರ್ದೇಶಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರ, ರೇಖಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದ್ದಾರೆ. ಪವಿತ್ರ ಎ.ವಿ ಅವರು ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಾಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಲೋಕೇಶ್ ಎಂ. ಯು. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದಿದ್ದಾರೆ. ಜ.30 ರಂದು ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಪದವಿ ಪ್ರದಾನ ಮಾಡಿದರು. ಅವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿ ಪ್ರಸಾದ್ ಅವರ ಪತ್ನಿ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಪಾಂಡೇಶ್ವರ ಗಾನ ನಿನಾದ ಆರ್ಕೆಸ್ಟ್ರಾ ಇದರ ದಶಮಾನೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯ ಆಯ್ಕೆ ಪ್ರಕ್ರೀಯೆ ಪಾಂಡೇಶ್ವರ ಶಾಲೆ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಭವಾನಿ ಬಿಲ್ಲ್ದೆರ್ಸ್ ಮಾಲಿಕ ಪುನೀತ್ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಅಭಿವೃದ್ದಿ ಅಧಿಕಾರಿ ವಂದನ, ಸದಸ್ಯರಾದ ರವೀಶ್ ಶ್ರೀಯಾನ್, ಉದ್ಯಮಿ ರಾಜ, ಶ್ರೀ ಕ್ಷೇತ್ರ ಪಾಂಡೇಶ್ವರ ಕಳಿಬೈಲು ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಹಾಗೂ ತೀರ್ಪುಗಾರಗಾಗಿ ರವಿ ಕಾರಂತ್, ಕೋಟ, ಅಖಿಲಾ ಹೆಗ್ಡೆ, ಸಂಸ್ಥೆಯ ಸಾರಥಿ ಶ್ರೀಶ ಆಚಾರ್ಯ ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಾಂತ 100 ಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ   ಭಾಗವಹಿಸಿದ್ದು ಅಂತಿಮ ಆಯ್ಕೆ ಸುತ್ತು ಇದೇ ಫೆ. 21ನೇ ಶನಿವಾರ ರಾತ್ರಿ ನೆಡೆಯುವ ಫೈನಲ್ ಸ್ಪರ್ಧೆಗೆ 10 ಜನರನ್ನು ಆಯ್ಕೆ ಮಾಡಲಾಗುವದು ಎಂದು ಸಂಸ್ಥೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ”, ಅಲೆಮಾರಿ/ಅರೆಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ, “ಶುಲ್ಕ ಮರುಪಾವತಿ” ಮತ್ತು “ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ” ಸೌಲಭ್ಯಕ್ಕಾಗಿ ವೆಬ್‌ಸೈಟ್ https://ssp.postmatric.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 15 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂಖ್ಯೆ: 8050770004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More