ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನೆ ಮಾರಿ ಹಣ ಕೊಡುವಂತೆ ಒತ್ತಾಯಿಸಿ ತಂದೆಯ ಮೇಲೆ ಮಗ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿರುವ ಘಟನೆ ಬಳ್ಕೂರಿನಲ್ಲಿ ಸಂಭವಿಸಿದೆ. ಬಳ್ಕೂರಿನ ರಘು ಪೂಜಾರಿ (68) ಹಲ್ಲೆಗೊಳಗಾದವರು. ಅವರ ಪುತ್ರ ನವೀನ್ ಆರೋಪಿ. ರಘು ಬಳ್ಳೂರಿನ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಪುತ್ರ ಹಾಗೂ ಪುತ್ರಿಯ ಮದುವೆಗೆ ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಹರಾಜಿಗೆ ಬಂದಿದ್ದು, ಆಗ ಪುತ್ರಿ ಪ್ರಮೀಳಾ ಅವರು ತಮ್ಮ ಸ್ವಂತ ಹಣದಿಂದ ಸಾಲ ತೀರಿಸಿದ್ದರು. ಅನಂತರ ರಘು ಅವರು ಆ ಮನೆಯನ್ನು ಪುತ್ರಿಯ ಹೆಸರಿಗೆ ಮಾಡಿಕೊಟ್ಟಿದ್ದರು. ಇದೇ ವಿಚಾರವಾಗಿ ಪುತ್ರ ನವೀನ್ ಮನೆ ಮಾರಿ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಅನೇಕ ಬಾರಿ ಹಲ್ಲೆಗೈದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರು ಎಚ್ಚರಿಕೆಯನ್ನು ಸಹ ನೀಡಿದ್ದರು. ಮೇ.9 ರಂದು ಮನೆಗೆ ಅಕ್ರಮವಾಗಿ ನುಗ್ಗಿದ ನವೀನ್ ತನಗೆ ಬೈದು, ಹಲ್ಲೆ ಮಾಡಿ, ತಾಯಿ ಹಾಗೂ ಸಹೋದರಿಗೂ ಬೆದರಿಕೆ ಹಾಕಿರುವುದಾಗಿ ರಘು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಿರಿಮಂಜೇಶ್ವರ ಗ್ರಾಮದ ನ್ಯಾರಿಕೇರಿ ಹತ್ತಿರದ ಕ್ಲಿನಿಕ್ ಒಂದರ ಎದುರುಗಡೆ ರಾ.ಹೆ 66ರ ಪೂರ್ವ ಬದಿಯ ಚರಂಡಿಯ ಬಳಿ 35 ರಿಂದ 40 ವರ್ಷದ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯು ಕೆಲವು ದಿನಗಳಿಂದ ಈ ಪರಿಸರದಲ್ಲಿ ತಿರುಗಾಡಿಕೊಂಡಿದ್ದು ಮೇ.6ರಿಂದ7ರ ಮಧ್ಯಾವಧಿಯಲ್ಲಿ ಅನಾರೋಗ್ಯ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. 5 ಅಡಿ 5 ಇಂಚು ಎತ್ತರವಿದ್ದು, ವ್ಯಕ್ತಿಯು ತೆಲುಗು ಬಾಷೆ ಬಲ್ಲವರಾಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) 2023–2024ರ ವ್ಯವಸ್ಥಾಪಕ ಸಮಿತಿಯನ್ನು ಕತಾರ್ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತದ ರಾಯಭಾರ ಕಚೇರಿಯು ಇತ್ತೀಚಿಗೆ ಐಸಿಸಿ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಚಾನ್ಸೆರಿ ಮತ್ತು ಕಾನ್ಸುಲರ್ ಮುಖ್ಯಸ್ಥ) ಡಾ. ವೈಭವ್ ಎ. ತಂಡಲೆ ಅವರ ಸಮ್ಮುಖದಲ್ಲಿ ಕತಾರ್ಗೆ ಭಾರತದ ರಾಯಭಾರಿಯಾಗಿರುವ ಗೌರವಾನ್ವಿತ ವಿಪುಲ್, ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಐಸಿಸಿ ವ್ಯವಸ್ಥಾಪಕ ಸಮಿತಿಯ ಎಲ್ಲಾ ಸದಸ್ಯರಿಗೆ ಅವರ ಕೊಡುಗೆಗಳು ಮತ್ತು ಸೇವೆಯನ್ನು ಗುರುತಿಸಿ ಮೆಚ್ಚುಗೆಯ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು. ತಾರ್ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹಾದ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಸನ್ಮಾನಿಸಿತು, ವಿಶೇಷವಾಗಿ ಅವರು ಸತತ 4 ವರ್ಷಗಳ ಕಾಲ ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸುಬ್ರಹ್ಮಣ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ರಕ್ಷಣಾ ಪಡೆಗೆ ಸೇರ ಬಯಸುವವರಿಗೆ ಕೇಂದ್ರ ಲೋಕಸೇವಾ ಆಯೋಗದವರು ನಡೆಸುವ 2026ರ ಎನ್ ಡಿ ಎ-1 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಕಾಲೇಜಿನ ಸುಕ್ಷಿತ್ ಗಿರೀಶ್ ಗೌಡ, ಸಂವಿತ್ ಅಮಿತ್ ಗೋಕರ್ಣ, ಅಭಿಷೇಕ್ ಜೋಶಿ ಮತ್ತು ನಾಗದೇವ್ ಎಂ.ಜಿ. ತೇರ್ಗಡೆಗೊಂಡು ಮುಂದಿನ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ,ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕೇಂದ್ರದ ಲೋಕಸೇವಾ ಆಯೋಗದ ಮೂಲಕ ನಡೆಯುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಅಧಿಕಾರಿಗಳಾಗಲು ಎನ್ಡಿಎ ಪ್ರಮುಖ ಘಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಿದ್ಧಗೊಳಿಸುವ ಕಾರ್ಯವನ್ನು ಆಳ್ವಾಸ್ ಪದವಿಪೂರ್ವ ಕಾಲೇಜು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಾದ ವಿವೇಕ್ ಎ, ಅದ್ವೆತ್ ವಿಕ್ರಾಂತ್ ಶೆಂಡೆ, ಅಮೋಘ್ ನಾಗರಾಜ್ ಬಿಲ್ಲೂರ್, ಮೊಹಮ್ಮದ್ ಯೂಸುಫ್ ನಿಸಾರ್ ಶೇಖ್, ಸಾಯೀಶ್ ಪ್ರಶಾಂತ್ ತಾಳೇಕರ್, ಪ್ರಹ್ಲಾದ್ ದತ್ತ ದೇಸಾಯಿ, ಸಂಹಿತ್ ವಿ ರಾವ್, ಹರ್ಷ ಎಂ, ಕೃತಿಕ್ ಬಿ, ಪ್ರಣವ್ ಎನ್ ಪಂಡಿತ್, ವಿಜಯಕುಮಾರ್ ಸಂಗಯ್ಯ ಚಿಕ್ಕಮಠ, ಪಿಯೂಷ್ ಎಚ್, ಶ್ರೇಯಸ್ ಸಿ ಕಬ್ಬಿನಕಂತಿಮಠ, ಭರತೇಶ್ ನಾಗೇಶ್ ಮೊಗೇರ್, ಚಿನ್ಮಯ್ ಎಸ್., ಸಂಕೇತ್ ಭಟ್, ಸುಮಿತ್ ವಿಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್ ಜೆ., ಅಕ್ಷಯ್ ಭಾರದ್ವಾಜ್, ಅನುಷ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ನಾಡ ಗ್ರಾಮದ ಕೊಡಗುಂಜಿ ಸೇತುವೆ ಬಳಿ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳುವಿನ ಬಾಗಿಲುವಿನ ರತ್ನಾಕರ ಕಾಂಚನ್ (55), ಒಕ್ಕೇರಿಯ ಸಂತೋಷ್ ಪೂಜಾರಿ (46), ಪಡುಕೋಣೆಯ ರಾಘವೇಂದ್ರ (28), ರಾಜೇಶ್ ಪೂಜಾರಿ (42), ಬಾಬು ಮೊಗವೀರ (50) ಬಂಧಿತ ಆರೋಪಿಗಳು. ಇವರಿಂದ 13,020ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ರಾಜ್ಯದ ಭಕ್ತರೊಬ್ಬರು ಕಳೆದುಕೊಂಡ 2ಚಿನ್ನದ ಸರ ಹಾಗೂ ಹಣವನ್ನು ಒಳಗೊಂಡ ಪರ್ಸ್‌ನ್ನು ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಬೆಲೆಬಾಳುವ ಸೊತ್ತುಗಳು ಕಳವಾಗಿದ್ದು, ಅಲ್ಲಿನ ಸಿಸಿ ಟಿವಿ ಮುಖೇನ ಪೊಲೀಸರು ಅದನ್ನು ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿದ್ದು ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಬುಧವಾರ ಕೊಲ್ಲೂರು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಪಿಎಸ್ಐ ಭೀಮಾಶಂಕರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಯಡ್ತರೆ ಗ್ರಾಮದ ಎಸ್ಬಿಐ ಬ್ಯಾಂಕ್ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಯುವಕನನ್ನು ಬಂಧಿಸಿರುವ ಪೊಲೀಸರು, ಆತನಿಂದ ಕಳವು ಮಾಡಲಾಗಿದ್ದ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಮಹೇಂದ್ರ ಸೈನ್ (23) ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್ 23ರಂದು ಮಧ್ಯಾಹ್ನ 3:00 ರಿಂದ ರಾತ್ರಿ 10:00 ಗಂಟೆಯ ಅವಧಿಯಲ್ಲಿ, ಯಡ್ತರೆ ಗ್ರಾಮದ ಎಸ್ಬಿಐ ಬ್ಯಾಂಕ್ ಹಿಂಭಾಗ ವಾಸವಿದ್ದ ರಾಜಸ್ಥಾನ ಮೂಲದ ರಾವಲ್ ಸಿಂಗ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳತನ ನಡೆದಿತ್ತು. ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಗೋಡೇಜ್ನಲ್ಲಿದ್ದ 6 ಲಕ್ಷ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಬೈಂದೂರು ವೃತ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಸ್ತು ಅರಣ್ಯ ಪಾಲಕರೊಬ್ಬರಿಗೆ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಯಲ್ಲಿ ಅರಣ್ಯ ಗಸ್ತು ಪಾಲಕನಾಗಿರುವ ಆನಂದ ಬಳೆಗಾರ್ ಕರ್ತವ್ಯದಲ್ಲಿರುವಾಗ ಕುಂದಾಪುರ ಸಂಗಂ ಜಂಕ್ಷನ್ ಸಮೀಪ ಸದಾಶಿವ ಕೋಟೆಕಾರ್ ಎಂಬವರು ಬೆದರಿಸಿ, ಹಣಕ್ಕೆ ಬೆದರಿಕೆ ಹಾಕಿರುವುದಾಗಿ ಆನಂದ ಬಳೆಗಾರ್ ದೂರು ನೀಡಿದ್ದಾರೆ. ಆರೋಪಿ ಸದಾಶಿವನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೇ.1ರಂದು ಆರೋಪಿಯು ತನ್ನ ಇಲಾಖಾ ಸಮವಸ್ತ್ರಕ್ಕೆ ಕೈ ಹಾಕಿ, ನಿಂದಿಸಿ, 25 ಸಾವಿರ ರೂ. ಕೊಡಬೇಕು. ಇಲ್ಲದಿದ್ದರೆ ಎಲ್ಲ ವಿಚಾರ ಪ್ರಚಾರ ಮಾಡುತ್ತೇನೆಂದು ಬೆದರಿಸಿದ್ದಾನೆ. ಮೇ 6ರಂದು ಅಡ್ಡಹಾಕಿ 25 ಸಾವಿರ ರೂ. ಕೊಡದಿದ್ದರೆ ನಿನ್ನ ಎಲ್ಲ ವ್ಯವಹಾರ ಮಾಹಿತಿ ಹಕ್ಕಿನಲ್ಲಿ ಪಡೆದು, ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಸದಾಶಿವ ಕೋಟೆಕಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಯನ್ನು ಲಾಕ್ ಮಾಡಿ ಹೊರಗೆ ಹೋದಾಗ, ಅಂತಹ ಮನೆಗಳ ಮೇಲೆ ನಿಗಾ ಇಡಲು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ʼ (LHBS) ಎನ್ನುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇಂತಹ ಲಾಕ್ ಆಗಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸುತ್ತಾರೆ. ಸದರಿ ಮನೆ ಇರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಠಾಣಾ ಬೀಟ್ ಸಿಬ್ಬಂದಿಯು ಆ ಮನೆಗೆ ಭೇಟಿ ನೀಡಿ ರಾತ್ರಿ ಮತ್ತು ಹಗಲು ವೇಳೆ ಆ ಮನೆಯ ಸೂಕ್ತ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತಾರೆ. ಉಡುಪಿ ಜಿಲ್ಲೆಯ ಯಾವುದೇ ಸಾರ್ವಜನಿಕರು ತಾವು ಮನೆಯಿಂದ ಪ್ರವಾಸ ಮತ್ತು ಇತರೇ ಕಾರ್ಯಕ್ರಮಗಳಿಗಾಗಿ ಮನೆಯನ್ನು ಲಾಕ್ ಮಾಡಿ ಹೊರಡುವಾಗ ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಈ ಬಗ್ಗೆ ನೀಡಲಾದ ವಿಶೇಷ ದೂರವಾಣಿ ಸಂಖ್ಯೆ 0820-2526709 ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ನಿಯಂತ್ರಣ ಕೊಠಡಿಯಿಂದ ನೀಡುವ ವಾಟ್ಸಾಪ್…
