Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಟಿವಿ ಟೆಕ್ನಿಷಿಯನ್ ಹಾಗೂ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತ್ವರಿತ ಯಶಸ್ಸಿನತ್ತ ಹೆಚ್ಚು ಆತುರಪಡಬಾರದು ಎಂದು ಸಲಹೆ ನೀಡಿದರು. ಕೊರೋನಾ ಸಂದರ್ಭದಲ್ಲಿ ಸಹಬಾಳ್ವೆ ಹಾಗೂ ಜೀವನ ಮೌಲ್ಯಗಳ ಮಹತ್ವವನ್ನು ನಾವು ಕಲಿತಿದ್ದೇವೆ. ಎಷ್ಟೇ ಸಾಧನೆ ಮಾಡಿದರೂ ವ್ಯಕ್ತಿತ್ವವೇ ನಮ್ಮನ್ನು ಗುರುತಿಸುವುದಾಗಿ, ಆದ್ದರಿಂದ ಹಣಕ್ಕಿಂತ ವ್ಯಕ್ತಿತ್ವ, ಶಿಸ್ತು, ಪ್ರಾಮಾಣಿಕತೆ ಮತ್ತು ದೃಢಸಂಕಲ್ಪ ಮುಖ್ಯವೆಂದು ಹೇಳಿದರು. “ಆರೋಗ್ಯಕರ ಬದಲಾವಣೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆ ಉತ್ತಮ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ,” ಎಂದು ಕರೆ ನೀಡಿದ ಅವರು ಕೃಷಿ ಹಾಗೂ ಟಿವಿ ಟೆಕ್ನಿಷಿಯನ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬ್ರಹ್ಮಾವರ ಎ.ಎಸ್.ಐ …

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ (ಐಎಂಜೆಐಎಸ್ ಸಿ) ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗವು ಭಾರತ ಸರ್ಕಾರ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾರ್ಗದರ್ಶನದಲ್ಲಿ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಜಾಗೃತಿಯ ಆನ್ಲೈನ್ ಸಂವಾದಾತ್ಮಕ ಸಂವಹನ ಕಾರ್ಯಾಗಾರವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಹಣಕಾಸು ಯೋಜನೆ ಮತ್ತು ಪರಿಣಾಮಕಾರಿ ಉಳಿತಾಯ ತಂತ್ರಗಳನ್ನು ಉತ್ತೇಜಿಸುವುದರ ಮೇಲೆ ಈ ಕಾರ್ಯಕ್ರಮ ಕೇಂದ್ರೀಕರಿಸಿತ್ತು. ಹಣಕಾಸು ಯೋಜನೆ, ಸಂಪತ್ತು ನಿರ್ವಹಣೆ ಮತ್ತು ಕಾರ್ಪೊರೇಟ್ ತರಬೇತಿಯಲ್ಲಿ ವೃತ್ತಿಪರ ತರಬೇತಿಯುಳ್ಳ ನಿಧಿ ಮತೂರ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಜೆಟ್, ವ್ಯವಸ್ಥಿತ ಉಳಿತಾಯ, ಹೂಡಿಕೆ ಯೋಜನೆ ಮತ್ತು ಕ್ರೆಡಿಟ್‌ನ ಪ್ರಜ್ಞಾಪೂರ್ವಕ ಬಳಕೆಯ ಮಹತ್ವವನ್ನು ಎತ್ತಿ ತೋರಿಸಿದರು. ಅವರು ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ವಿವರಿಸಿದರು ಮತ್ತು ಸಾಮಾನ್ಯ ಹಣಕಾಸು ಅಪಾಯಗಳ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ಪ್ರಾಯೋಗಿಕ ಒಳನೋಟಗಳು ಮತ್ತು ನೈಜ-ಜೀವನದ ಉದಾಹರಣೆಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವತಿಯಿಂದ ಭಾನುವಾರ ಕೋಟದ ಗಾಂಧಿ ಮೈದಾನದಲ್ಲಿ ವೈಭವದ ಏಕಃಪವಿತ್ರ ನಾಗಮಂಡಲ ಸೇವೆ ಸಂಪನ್ನಗೊಂಡಿತು. ಮಂಡಲೋತ್ಸವದಲ್ಲಿ ಸುಮಾರು 40,000 ಅಧಿಕ ಮಂದಿ ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿ ನಾಗಮಂಡಲೋತ್ಸವದಲ್ಲಿ ಭಾಗಿಯಾದರು. ಸಂಜೆ 7.00 ಗಂಟೆಗೆ ನಾಗನಿಗೆ ಹಾಲಿಟ್ಟು ಸೇವೆ ನಡೆದು 9:30ರಿಂದ ನಾಗಮಂಡಲೋತ್ಸವಕ್ಕೆ ಚಾಲನೆ ದೊರಕಿದ್ದು ಮಣೂರು ಮಧುಸೂದನ ಬಾಯರಿ ಮತ್ತು ಬಳಗದವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಾಗಮಂಡಲದ ಕೇಂದ್ರದಲ್ಲಿ ನೆರವೇರಿತು. ಮಂಡಲೋತ್ಸವದಲ್ಲಿ ಪಾತ್ರಿಗಳಾಗಿ ಕಾರ್ಕಡ ವೆಂಕಟರಮಣ ಹೊಳ್ಳ ಮತ್ತು ವೈದ್ಯರಾಗಿ ರಾಘವೇಂದ್ರ ವೈದ್ಯ ಮತ್ತು ಬಳಗ ಬಾಗಿಯಾದರು. ಸಹಸ್ರ ಸಂಖ್ಯೆಯಲ್ಲಿ ಮಂಡಲ ಸೇವೆಯನ್ನು ಕಣ್ತುಂಬಿಕೊಂಡರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಸದಸ್ಯರಾದ ಕೆ. ಸುಬ್ರಾಯ ಜೋಗಿ, ಸುಭಾಷ್ ಶೆಟ್ಟಿ, ಗಣೇಶ್ ಕೆ. ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಧಾ ಎ. ಪೂಜಾರಿ, ರತನ್ ಐತಾಳ, ಶಿವ ಪೂಜಾರಿ, ಚಂದ್ರಶೇಖರ ಆಚಾರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಸೇರಿದಂತೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡಬಿದಿರೆ: ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ಕೋತ್ಸವ್‌ದ’ ಉದ್ಘಾಟನಾ ಕಾರ್ಯಕ್ರಮವು ಮೋಹಿನಿ ಅಪ್ಪಾಜಿ ವೇದಿಕೆ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಡ್‌ಕ್ರಾಫ್ಟ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ‘ಟೆಕ್ಕೋತ್ಸವ್ ಕೇವಲ ತಂತ್ರಜ್ಞಾನ ಆಚರಣೆಗಾಗಿ ಮಾತ್ರವಲ್ಲ; ನವೀನತೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಆಯೋಜಿಸಲಾದ ವೇದಿಕೆಯಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಇಂತಹ ತಾಂತ್ರಿಕ ಉತ್ಸವಗಳು ಅತ್ಯಂತ ಮಹತ್ವದ್ದಾಗಿದ್ದು, ಕಾಲೇಜಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.20ಕ್ಕೂ ಅಧಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ವೇದಿಕೆಗಳು ಹೊಸ ವಿಷಯಗಳನ್ನು ತಿಳಿಯಲು, ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಅನುಭವ ಹಂಚಿಕೊಳ್ಳಲು ನೆರವಾಗುತ್ತವೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಯಾವುದೇ ತಂತ್ರಜ್ಞಾನವನ್ನು ಬಳಸುವ ಮೊದಲು ಮೂಲಭೂತ  ಅಂಶಗಳ ಮೇಲೆ ಗಮನಹರಿಸುವುದು ಅಗತ್ಯ. ಪ್ರೋಗ್ರಾಮಿಂಗ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಬ್ರಹ್ಮಾವರ ಹಂಗಾರಕಟ್ಟೆಯ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಬಿಎಸ್ಸಿ ನರ್ಸಿಂಗ್, ಜಿಎನ್ಎಂ ಮತ್ತು ಡಿಎಂ ಎಲ್ ಟಿ, ಡಿಒಟಿ ಮತ್ತು ಎಟಿ ಇದರ ಪದವಿ ಪ್ರದಾನ ಸಮಾರಂಭ- 2026 ಸಂಸ್ಥೆಯ ವಠಾರದಲ್ಲಿ ರವಿವಾರ ನಡೆಯಿತು. ಸಮಾರಂಭದ ಮುಖ್ಯ ಅಬ್ಯಾಗತರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಮೇ. 12ರಂದು ಆಧುನಿಕ ನರ್ಸಿಂಗ್ ವಿಭಾಗಕ್ಕೆ ಅಡಿಪಾಯ ಹಾಕಿದ ಪ್ಲಾರೆನ್ಸ್ ನೈಂಟಿಂಗೇಲ್ ಅವರ ಜನ್ಮದಿನದಂದು ದಾದಿಯರ ಸೇವೆಯನ್ನು ಸ್ಮರಿಸುತ್ತದೆ. ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು ಅವರು ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ಪ್ರೀತಿಯ ಆರೈಕೆಗೆ ಪ್ರಮುಖ ಕಾರಣರಾಗಿರುತ್ತಾರೆ. ಅವರ ನಿಸ್ವಾರ್ಥ ಸೇವೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆರೋಗ್ಯ ಕ್ಷೇತ್ರಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾದವರು ನಡೆಸಿದ 2026ರ ಸಿಎ ಅಂತಿಮ ಪರೀಕ್ಷೆಯಲ್ಲಿ ಅಕ್ಷಯ ಶೆಟ್ಟಿ ಅವರು ಉತ್ತೀರ್ಣರಾಗಿದ್ದಾರೆ. ಅವರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ. ಈತ ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74ರ ಕರುಣಾಕರ ಶೆಟ್ಟಿ ಅವರ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕೊಡ್ಲಾಡಿ ಗ್ರಾಮದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ 28ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ವರ್ಧಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಬಳಿಕ ನವಕುಂಭಸ್ಥಾಪನಾದಿ ಹೋಮ, ಹಾಗುಳಿ ಮತ್ತು ನಾಗ ದೇವರಿಗೆ ಕುಂಭಾಭಿಷೇಕ, ಮಹಾಪೂಜೆ, ನಾಗ ದೇವರ ಹಾಗೂ ಹಾಗುಳಿ ದೈವದ ಸಂದರ್ಶನ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಢಕ್ಕೆ ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಪುರೋಹಿತರು, ದೈವಸ್ಥಾನದ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ, ಭಾಂಡ್ಯ ಸುಭಾಶ್ ಶೆಟ್ಟಿ, ಭಾಂಡ್ಯ ಸುಧಾಕರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ, ಭಾಂಡ್ಯ ಕೃಷ್ಟ್ರಾಯ ಪೈ, ಆಡಳಿತ ಮಂಡಳಿ ಸದಸ್ಯರು, ಊರ ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಇಂಡಿಯಾ ವತಿಯಿಂದ ನಡೆಸಲ್ಪಡುವ ಸಿಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನ ಮಕ್ಕಿಯ ಸಂದೇಶ ಕೆ. ಪೂಜಾರಿ ಅವರು ಉತ್ತೀರ್ಣರಾಗಿದ್ದಾರೆ. ಅವರು ಬಡಾಕೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾದ ಪಾರ್ವತಿ ಕೃಷ್ಣ ಪೂಜಾರಿ ಅವರ ಪುತ್ರರಾಗಿರದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್.ಸಿ.ಸಿ (ನೌಕಾದಳ ಮತ್ತು ಭೂದಳ), ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಹಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ” ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ಇತ್ತೀಚಿಗೆ ನಡೆಯಿತು. ಹಂಗಳೂರು ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ ಹಂಗಳೂರು ಇದರ ಕಾರ್ಯದರ್ಶಿಗಳಾದ ವಿಲ್ಫ್ರೆಡ್ ಮೆನೆಜರ್ಸ್ಯ, ಕಾಲೇಜಿನ ರಾಷ್ಟ್ರೀಯ ಸೇವಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ದಾಕುಹಿತ್ತುನಿಂದ ಮೀನುಗಾರಿಕೆಗೆ ತೆರಳಿದ್ದಾಗ ಭಾರೀ ಗಾಳಿಗೆ ದೋಣಿಯೊಳಗೆ ಆಯತಪ್ಪಿ ಬಿದ್ದು, ಎದೆ ನೋವಿನಿಂದ ಅಸ್ವಸ್ಥಗೊಂಡಿದ್ದ ಗಂಗೊಳ್ಳಿಯ ಜಗನ್ನಾಥ ‌ಖಾರ್ವಿ (43) ಅವರು ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಸಾವನ್ನಪ್ಪಿದ್ದಾರೆ. ಫೆ.27ರ ಬೆಳಗ್ಗೆ ಅವರು ಇನ್ನಿತರ ಮೀನುಗಾರರೊಂದಿಗೆ ಗಣಮಣಿ ಪ್ರಸಾದ್‌ ಎನ್ನುವ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ದಾಕುಹಿತ್ತುನಿಂದ ಸುಮಾರು 5 ಮಾರು ದೂರದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಗಾಳಿ ಬಂದಿದ್ದರಿಂದ ಅವರು ದೋಣಿಯಲ್ಲಿ ಆಯತಪ್ಪಿ ಬಿದ್ದಿದ್ದರು. ಎದೆ ನೋವು ಕಾಣಿಸಿಕೊಂಡ ಅವರನ್ನು ದೋಣಿಯಲ್ಲಿದ್ದವರು ಗಂಗೊಳ್ಳಿ ಬಂದರಿಗೆ ಕರೆದುಕೊಂಡು ಬಂದು, ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More