ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಿ. ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19ರ ವರೆಗೆ ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಅಭಿನಯ ಪ್ರಧಾನ ಚಿಣ್ಣರಮೇಳ 2026 ರಾಜ್ಯಮಟ್ಟದ ಮಕ್ಕಳಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಪ್ರತಿದಿನ ಪೂ.9.00 ರಿಂದ ಸಂಜೆ 4.30ರ ವರೆಗೆ ನಡೆಯಲಿರುವ ಈ ಶಿಬಿರವು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ರಂಗ ಬದುಕಿನ 35ನೇ ವರ್ಷದ ಶಿಬಿರ ಇದಾಗಿದ್ದು, ಮಕ್ಕಳ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಂದ ಕೂಡಿರುತ್ತದೆ. ಈ ಶಿಬಿರದಲ್ಲಿ ವಯೋಮಿತಿ 7 ರಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರತಿಭಾನ್ವಿತ ನೀನಾಸಂ ಮತ್ತು ರಂಗಾಯಣದ ರಂಗ ಪದವೀಧರರು ಭಾಗವಹಿಸಲಿದ್ದಾರೆ. ಊಟ, ಉಪಹಾರ ಹಾಗೂ ಅಗತ್ಯ ಇರುವ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಸಕ್ತರು ಕೂಡಲೇ:9448989382 (ವಿದುಷಿ ಸುಮನಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಅಧ್ಯಯನ ಭೇಟಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶದಿಂದ ಕೆದೂರು ತೆಕ್ಕಟ್ಟೆಯ ಕಾಮಾಕ್ಷಿ ಫಾರ್ಮ್ಗೆ ಅಧ್ಯಯನ ಭೇಟಿ ಆಯೋಜಿಸಲಾಯಿತು. ತೆಕ್ಕಟ್ಟೆ ಕಾಮಾಕ್ಷಿ ಫಾರ್ಮ್ನ ಪ್ರವರ್ತಕರಾದ ಮಹಿಳಾ ಉದ್ಯಮಿ ದಿವ್ಯ ನಾಯಕ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಲಸಿನ ಹಣ್ಣುಗಳ (Jackfruit varieties) ಬಗ್ಗೆ ವಿವರವಾದ ಮಾಹಿತಿ ನೀಡಿದರು. ಹಲಸಿನ ಹಣ್ಣಿನ ವಿವಿಧ ಖಾದ್ಯಗಳು, ಅವುಗಳ ವೈಶಿಷ್ಟ್ಯತೆ, ಬೆಳವಣಿಗೆ ವಿಧಾನಗಳು ಹಾಗೂ ಮಾರುಕಟ್ಟೆ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು. ಕೃಷಿಯನ್ನು ಆಧರಿಸಿ ಉದ್ಯಮ ಆರಂಭಿಸುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಭಾಗವಹಿಸಿದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಸಾಧಕ – ಬಾಧಕಗಳ ಬಗ್ಗೆ ಸಂವಾದ ನಡೆಸಿ, ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಾಸುದೇವ ಭಟ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ಲಾಸ್ಟಿಕ್ಸ್ ಮೋಲ್ಡ್ ಟೆಕ್ನಾಲಜಿ ಡಿಪ್ಲೋಮಾ ಹಾಗೂ ಪ್ಲಾಸ್ಟಿಕ್ಸ್ ಟೆಕ್ನಾಲಜಿ ಡಿಪ್ಲೋಮಾ ಕೋರ್ಸುಗಳಿಗೆ ಲ್ಯಾಟರಲ್ ಎಂಟ್ರಿ (ನೇರ ದ್ವಿತೀಯ ವರ್ಷ) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ (ವಿಜ್ಞಾನ) ಅಥವಾ ಐ.ಟಿ.ಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಲ್ಲದೆ, ವೃತ್ತಿಪರ ಡಿಪ್ಲೋಮಾ ಕೋರ್ಸ್ಗಳಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಂತಿಮ ಸೆಮಿಸ್ಟರ್ನಲ್ಲಿ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗಾವಕಾಶವನ್ನು ಖಚಿತಪಡಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.cipet.gov.in ಅಥವಾ ಮೊ.ನಂ: 9480253024, 9791431827 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದ ಆಚಾರ್ಯ ಕುಟುಂಬಸ್ಥರ ಜಟ್ಟಿಗ ಮತ್ತು ಹೈಗುಳ್ಳಿ ದೇವಸ್ಥಾನ ಮುಂಭಾಗ ಕಳೆದ ವರ್ಷ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಶೌರ್ಯ ಟೀಮ್ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಬಿದ್ದಿರುವ ಬಾರಿ ಗಾತ್ರದ ಮರವನ್ನು ತೆರವುಗೊಳಿಸಿ ದೈವಸ್ಥಾನದ ದಾರಿ ಸುಗಮಗೊಳಿಸಿದ ಹಿನ್ನಲ್ಲೆಯಲ್ಲಿ ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಪುನ: ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶೌರ್ಯ ಟೀಮಿನ ಸದಸ್ಯರಿಗೆ ಶಾಲನ್ನು ಹೊಂದಿಸಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗುಂಡ್ಮಿ ಒಕ್ಕೂಟದ ಕಾರ್ಯದರ್ಶಿಯಾದ ಶೇಖರ್ ಪೂಜಾರಿ, ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಶೌರ್ಯ ಟೀಮ್ ಅಧ್ಯಕ್ಷ ಲಕ್ಷ್ಮೀಶ ಆಚಾರ್ಯ, ಘಟಕದ ಸೇವಾ ಪ್ರತಿನಿಧಿ ಶೋಭಾ, ಸ್ಥಳೀಯ ಸೇವಾ ಪ್ರತಿನಿಧಿ ಶಶಿಕಲಾ, ಶೌರ್ಯ ಟೀಮ್ನ ಸದಸ್ಯರಾದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಸತೀಶ, ರೇಣುಕಾ, ಯಶೋಧ, ವಿಜಯಶ್ರೀ, ಆಚಾರ್ಯ ಕುಟುಂಬಸ್ಥರು, ತಂಡದ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಾಲಾಡಿ ಜೆಸಿಐ ಘಟಕದ ವತಿಯಿಂದ ಜೆಸಿಐ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿಶೇಷ ಮಾಹಿತಿ ಕಾರ್ಯಗಾರವು ಇಲ್ಲಿನ ಹಾಲಾಡಿ ಬ್ರೈಟ್ ಪರ್ಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆಎಫ್ಎಂ ರೇಖಾ ಪ್ರಭಾಕರ ಕುಲಾಲ್ ಜೆಸಿಐ ಧ್ಯೇಯೋದ್ದೇಶಗಳು ಮತ್ತು ಸಂಘಟನೆ ಹಾಗೂ ಸಭೆಯ ಮಹತ್ವ ಮತ್ತು ಆಯೋಜನೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಹಾಲಾಡಿ ಜೆಸಿಐ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ ಹಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಂಕರನಾರಾಯಣ ಜೆಸಿಐ ಪೂರ್ವಾಧ್ಯಕ್ಷರಾದ ಜೆಸಿ ಪ್ರವೀಣ ಬಾಳೆಕೊಡ್ಲು, ಶಂಕರನಾರಾಯಣ ಜೆಸಿಐ ಅಧ್ಯಕ್ಷರಾದ ಜೆಸಿ ಯೋಗೇಶ್ ಕಾಂಚನ್, ಜೆಸಿಐ ಕಾರ್ಯದರ್ಶಿ ಜೆಸಿ ಅಶೋಕ ಆಚಾರಿ, ಲೇಡಿ ಜೇಸಿ ಪ್ರೆಸಿಡೆಂಟ್ ಜೆಸಿ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಆಶಾ ರಾಜೀವ ಕುಲಾಲ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಲಯ ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಟರ್ಸ್ ಅಸೋಸಿಯೇಶನ್ ರಿ., ಕುಂದಾಪುರ ಇದರ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಗಣೇಶ್ ಆಚಾರ್ಯ ನಾಯ್ಕನಕಟ್ಟೆ, ಗೌರವಾಧ್ಯಕ್ಷ ಅರುಣ್ ಪಿ. ಆಚಾರ್ಯ ಕುಂದಾಪುರ, ಉಪಾಧ್ಯಕ್ಷರಾಗಿ ಭಾಸ್ಕರ ಆಚಾರ್ಯ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಸಂತೋಷ ಆಚಾರ್ಯ ಮಧುವನ, ಜೊತೆ ಕಾರ್ಯದರ್ಶಿ ವಿಜಯ ನಾಯಕ್ ಕೋಕ್ಕರ್ಣೆ, ದಿವಾಕರ ಆಚಾರ್ಯ ಕುಂದಾಪುರ, ಕೋಶಾಧಿಕಾರಿ ರಾಘವೇಂದ್ರ ಆಚಾರ್ಯ ವಕ್ವಾಡಿ, ಲಕ್ಷ್ಮೀನಾರಾಯಣ ಆಚಾರ್ಯ ಹಾಲಾಡಿ, ಸಂಘಟನಾ ಕಾರ್ಯದರ್ಶಿ ಗಣಪತಿ ಟಿ. ಶ್ರೀಯಾನ್ ತೆಕ್ಕಟ್ಟಿ, ಮಲ್ಲಿಕಾರ್ಜುನ ಆಚಾರ್ಯ ಕಾಗೇರಿ, ಕೃಷ್ಣಯ್ಯ ಆಚಾರ್ಯ ಮೊಳಹಳ್ಳಿ,, ನಾಗೇಂದ್ರ ಆಚಾರ್ಯ ಗೋಳಿಯಂಗಡಿ, ಮಹೇಶ ಆಚಾರ್ಯ ಹೊಸಕೋಟೆ, ರಾಜೇಶ ಆಚಾರ್ಯ ಶಂಕರನಾರಾಯಣ, ರಮೇಶ ಆಚಾರ್ಯ ತಲ್ಲೂರು, ಪ್ರಸಾದ ಜೋಗಿ ತೆಕ್ಕಟ್ಟೆ ಆಯ್ಕೆಗೊಂಡಿದ್ದಾರೆ. ಆಡಳಿತ ಮಂಡಳಿ ಸದಸ್ಯರುಗಳಾಗಿ ಸಂತೋಷ ದೇವಾಡಿಗ ಬೀಜಾಡಿ, ರಾಘವೇಂದ್ರ ಕುಂದರ್ ನಾವುಂದ, ಲಕ್ಷ್ಮಣ ಆಚಾರ್ಯ ತ್ರಾಸಿ, ವಿವೇಕ ನಾಯಕ್ ಕಾಲ್ತೊಡು, ಗಣೇಶ ಆಚಾರ್ಯ ಬೆಳ್ಳೆ, ಅಣ್ಣಪ್ಪ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನದಡಿ ಮೂಡುಗಿಳಿಯಾರಿನ ರೋಟರಿ ಸಮುದಾಯದಳ ಮತ್ತು ಹಿರಿಯ ನಾಗರೀಕ ವೇದಿಕೆ ಗಿಳಿಯಾರು ಇವರ ಸಯುಕ್ತ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ವಠಾರ ಹಾಗೂ ಗ್ರಾಮದ ಧಾರ್ಮಿಕ ಸ್ಥಳ ಹೊನ್ನಾರಿ ಬೊಬ್ಬರ್ಯ ದೇವಸ್ಥಾನದ ಆಸುಪಾಸಿನ ರಸ್ತೆ ಬದಿ ಸೇರಿದಂತೆ ವಿವಿಧ ಭಾಗಗಳ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಜರಗಿತು. ಈ ಸಂದರ್ಭದಲ್ಲಿ ಸ್ಥಳೀಯ ನಾಗರೀಕರಿಗೆ ಸ್ವಚ್ಛತೆ ಮತ್ತು ಆರೋಗ್ಯಕಾಪಾಡುದರ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕ ವೇದಿಕೆ ಕೋಟ ಗಿಳಿಯಾರು ಇದರ ಅಧ್ಯಕ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಂದ ಕುಂದ ಸೋಮಶೇಖರ್ ಶೆಟ್ಟಿ ಗಿಳಿಯಾರು ಮತ್ತು ವೇದಿಕೆಯ ಸದಸ್ಯರು ಹಾಗೂ ರೋಟರಿ ಸಮುದಾಯದ ದಳದ ಅಧ್ಯಕ್ಷ ದಯಾನಂದ ಪೂಜಾರಿ, ಮಾಜಿ ಅಧ್ಯಕ್ಷ ಶರಣಯ್ಯ ಹೀರೆಮಠ, ಗೋಪಾಲ ಗರಡಿ ಮಕ್ಕಿ, ಪ್ರಮುಖರಾದ ರಾಘವೇಂದ್ರ ಬಸವನ ಕಲ್ಲು, ಲಲಿತಾ ಪೂಜಾರಿ, ಸದಾನಂದ ಹೊನ್ನಾರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಮಕ್ಕಳಿಗೆ ಬಾಲ್ಯದಲ್ಲಿ ದೊರೆಯಬೇಕಾದ ಶಿಕ್ಷಣ ಸಿಗುತ್ತಿಲ್ಲ. ಈ ಕಾರಣದಿಂದ ಮಕ್ಕಳು ದಾರಿ ತಪ್ಪುತ್ತಿದ್ದು, ದುಶ್ಚಟ, ಭ್ರಷ್ಟಾಚಾರ, ಭಯೋತ್ಪಾದನೆ ಮೊದಲಾದ ಚಟುವಟಿಕೆಗಳತ್ತ ಗಮನ ಹರಿಸುತ್ತಿದ್ದಾರೆ. ಮಕ್ಕಳ ಮೂಲಕ ಮನೆ ಮಂದಿಗೆ ಶಿಕ್ಷಣ ದೊರೆತು ಮನೆ, ಕೇರಿ, ಊರು ಬೆಳಗಬೇಕೆಂಬ ಉದ್ದೇಶದಿಂದ ಶಿಶು ಮಂದಿರಗಳಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ತಿಳಿಸುವ ಶಿಕ್ಷಣ ನೀಡಲಾಗುತ್ತಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ನ ಕಾರ್ಯನಿರ್ವಾಹಕ ವಿಶ್ವಸ್ಥ ಸುಬ್ರಹ್ಮಣ್ಯ ಹೊಳ್ಳ ಹೇಳಿದರು. ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಸಂವಾದ ನಡೆಸುತ್ತಾ ಮಾತನಾಡಿದರು. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮ ಟ್ರಸ್ಟ್ನ ವಿಶ್ವಸ್ಥ ಕಾರ್ಯದರ್ಶಿ ಚಂದ್ರಿಕಾ ಧನ್ಯ, ವಿಶ್ವಸ್ಥರಾದ ಕಲ್ಪನಾ ಭಾಸ್ಕರ, ಶಿಶು ಮಂದಿರದ ಕಾರ್ಯದರ್ಶಿ ಅಶ್ವಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಮಹಾಲಿಂಗೇಶ್ವರ ಹಾಗೂ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಾ. 30ರಿಂದ ಎಪ್ರಿಲ್ 4ರ ವರೆಗೆ ನಡೆಯುವ ಜಾತ್ರೋತ್ಸವದ ವೈಭವವನ್ನು ಬೆಂಗಳೂರು ಉದ್ಯಮಿ ಸೀತಾರಾಮ ಹೊಳ್ಳ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ ಕೊಯ್ಕೂರು, ಸ್ಥಳೀಯ ಉದ್ಯಮಿ ನವೀನ್ ಶೆಟ್ಟಿ ನಡುಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೋಪಾಲಕೃಷ್ಣ ಮಯ್ಯ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಛಾಯಾ ತರಂಗಿಣಿ ಸಂಗೀತ ಶಾಲೆ ಇವರಿಂದ ಛಾಯಾ ತರಂಗಿಣಿ ಕಲಾಮಂಜರಿ, ಸ್ನೇಹಕೂಟ ಮಣೂರು ಇವರಿಂದ ಹಬ್ಬದೊಳಗೊಂದು ಹಬ್ಬ ಮತ್ತು ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಇವರ ನಿರ್ದೇಶನದಲ್ಲಿ ಮಣೂರು ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಬಾಲ ಯಕ್ಷಕಲಾವಿದರಿಂದ ಚಕ್ರವರ್ತಿ ಬಲಿ ಎಂಬ ಯಕ್ಷಪ್ರದರ್ಶನಗೊಂಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ವತಿಯಿಂದ ಆಯೋಜಿಸಲಾದ “Beyond the Scroll – Rewriting the Social Narrative” ಅಂತರ್ ಕಾಲೇಜು ಉತ್ಸವವು ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಆಟೋಮೊಬೈಲ್ ಅಭಿಮಾನಿ ನಿರೀಕ್ಷಿತ್ ಹೆಬ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯವಾಗಿವೆ. ಇಂದಿನ ಯುವಜನತೆ ಸೃಜನಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿಕೊಂಡು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇಂತಹ ಉತ್ಸವಗಳಲ್ಲಿ ಭಾಗವಹಿಸುವುದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ವನಿತಾ ಮೈಯ್ಯ, ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ್ ಪೈ ಹಾಗೂ ಬಿಕಾಂ/ಬಿಬಿಎ…
