Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರ ವತಿಯಿಂದ ಮೂಡುಬಿದಿರೆಯಲ್ಲಿ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್‌ಮೆಟಿಕ್ 2025 ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾದ ಅಪ್ರಮೇಯ ಆರ್. ನಾವಡ  (3D) ಪ್ರಥಮ ಸ್ಥಾನ, ಕ್ಷಿತಿ (4D) ದ್ವಿತೀಯ ರನ್ನರ್ ಅಪ್, ಅತೀಶ್ ಎಸ್. ಪೂಜಾರಿ (4D) ದ್ವಿತೀಯ ಸ್ಥಾನ ಹಾಗೂ ಅವ್ಯನ್ ಎಸ್. (6B) 4ನೇ ಸ್ಥಾನ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವದಾದ್ಯಂತ ನೆಲೆಸಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಜನರು, ಸರಕಾರ ಹಾಗೂ ಉದ್ಯಮಿಗಳು ಬೈಂದೂರಿನತ್ತ ತಿರುಗಿ ನೋಡುವಂತೆ ಮಾಡುವುದು ಮತ್ತು ಆ ಮೂಲಕ ವಿವಿಧ ಆಯಾಮಗಳಲ್ಲಿ ಬೈಂದೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಬೈಂದೂರು ಉತ್ಸವದ ಮೂಲ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ವರ್ಷ ಆಯೋಜಿಸಿದ ಬೈಂದೂರು ಉತ್ಸವ ಯಶಸ್ಸನ್ನು ಕಂಡಿದೆ. 2026ರಲ್ಲಿ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಿದ್ಧತೆ ನಡೆಸಿದ್ದು ಜನವರಿ 24, 25 ಹಾಗೂ 26ರಂದು ಬೈಂದೂರು ಉತ್ಸವದ ಕಾರ್ಯಕ್ರಮಗಳು ಹಾಗೂ ಅದಕ್ಕೆ ಪೂರಕವಾಗಿ ಮೊದಲೇ ಗ್ರಾಮೋತ್ಸವ ಕಾರ್ಯಕ್ರಮಗಳು ಜರುಗಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ತ್ರಾಸಿಯ ಪ್ರೆಸ್ಟೀಜ್ ಸಭಾಭವನದಲ್ಲಿ ಜರುಗಿದ ಬೈಂದೂರು ಉತ್ಸವದ ದಿನಾಂಕ ಘೋಷಣೆ ಹಾಗೂ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮ ಮನೋರಂಜನಾ ಉದ್ದೇಶಕ್ಕೆ ಮಾತ್ರ ಸೀಮಿತವಾಗಿಸದೇ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಯ ಮುನ್ನೋಟ, ಜನರ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಣೆಯ ದೂರದೃಷ್ಠಿತ್ವನ್ನು ಹೊಂದಿದೆ. ಈ ಭಾರಿ ಕ್ಷೇತ್ರದ ವ್ಯಾಪ್ತಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಬ್ರಾಹ್ಮೀ ಭಕ್ತವೃಂದ ನವೆಂಬರ್ 15 ಶನಿವಾರ ರಾತ್ರಿ 9:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೃಷ್ಣಾರ್ಜುನ ಕಾಳಗ, ಭಾರ್ಗವ ವಿಜಯ, ಮೈಂದ ದ್ವಿವಿದ ಮತ್ತು ರುಕ್ಮಾವತಿ ಕಲ್ಯಾಣ ಎಂಬ ಪೌರಾಣಿಕ ಪ್ರಸಂಗದ ಯಕ್ಷಗಾನ ಆಯೋಜಿಸಿದ್ದು, ಯಕ್ಷಾಭಿಮಾನಿಗಳ ಮನರಂಜಿಸಲು ಸಜ್ಜಾಗಿದೆ. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲಾ ಸೇರಿ ಮಹಾನಗರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಮಲಶಿಲೆ ಯಕ್ಷಗಾನ ಮೇಳದ ಮರದ ಹಲಗೆಗಳ ಸಾಂಪ್ರದಾಯಿಕ ರಂಗಸ್ಥಳ ವೈಭವದಲ್ಲಿ ಸಂಯೋಜಿಸುತ್ತಿರುವ ಯಕ್ಷಗಾನ ಬಯಲಾಟ ಯಶಸ್ವಿ 4 ಪ್ರದರ್ಶನ ಕಂಡು, 5ನೇ ವರ್ಷಕ್ಕೆ ಅಂಬೆಗಾಲಿಡುತ್ತಿದೆ. ಕಮಲಶಿಲೆ ಅಮ್ಮನವರ ಬಹು ಬೇಡಿಕೆಯ ಸೇವೆಯಲ್ಲಿ ಒಂದಾದ ಪ್ರೀತಿಯ ಬೆಳಕಿನ ಸೇವೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಸೇವೆಯನ್ನು ಮಹಾ ನಗರಿಯಲ್ಲಿ ಪ್ರದರ್ಶಿಸುವ ಕನಸುಹೊತ್ತ, ಕ್ಷೇತ್ರದಿಂದ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಜೀವನ ಕಂಡು “ಒಗ್ಗಟ್ಟಿನಲ್ಲಿ ಬಲವಿದೆ, ಯಕ್ಷ ಸೌರಭದಲ್ಲಿ ನಲಿವಿದೆ, ಯಶಸ್ವಿಯಾಗಲು ತಾಯಿ ಬ್ರಾಹ್ಮೀ ದುರ್ಗೆಯ ಅಭಯವಿದೆ” ಎಂದು ನಂಬಿದ ತಾಯಿಯ ಭಕ್ತರರೆಲ್ಲರೂ ಕೂಡಿಕೊಂಡ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯಕ್ಷಗಾನದ ಹಿರಿಯ ಕಲಾವಿದರಾದ ಡಾ. ಕೋಳ್ಯೂರು ರಾಮಚಂದ್ರರಾವ್ ಅವರ 94ನೇ ಜನ್ಮ ದಿನಾಚರಣೆಯನ್ನು ಅವರ ಸ್ವಗೃಹ ಉಡುಪಿ ಇನ್ನಂಜೆಯ ಕಲಾಪ್ರಸಾದದಲ್ಲಿ ಬಂಧು ಮಿತ್ರರು ಹಾಗೂ ಶಿಷ್ಯರೊಡಗೂಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೂರ್ವಾಹ್ನ ದೇವತಾ ಕಾರ್ಯದಿಂದ ಪ್ರಾರಂಭಗೊಂಡು ಪ್ರಾರಂಭಗೊಂಡು ಅಪರಾಹ್ನ ಯಕ್ಷ ಭಾರತಿ (ರೀ) ಬೆಳ್ತಂಗಡಿ ಕನ್ಯಾನ ಶಾಖೆಯವರಿಂದ ಶರಸೆತು ಬಂಧನ ಎಂಬ ತಾಳಮದ್ದಲೆಯನ್ನು ನಡೆಸಲಾಯಿತು ನಂತರ ಅವರ ಶಿಷ್ಯ ಅವರ ಪಾವಂಜೆ ಮೇಳದ ಮುಖ್ಯ ಪಾತ್ರಧಾರಿ ಸುಬ್ರಾಯ ಹೊಳ್ಳ ದಂಪತಿಗಳನ್ನು ಗೌರವಿಸಲಾಯಿತು. ಸುಬ್ರಾಯ ಹೊಳ್ಳರ ಇರು ಪ್ರಾತ್ಯಕ್ಷತೆ ಮತ್ತು ಕೋಳೂರರವರು ತನ್ನ 94ನೇ ವಯಸ್ಸಿನಲ್ಲೂ ತಾಳಮದ್ದಳೆಯಲ್ಲಿ ಶ್ರೀರಾಮನ ಪಾತ್ರನಿರ್ವಹಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು. ಹುಟ್ಟು ಹಬ್ಬದ ಸವಿ ನೆನಪಿಗಾಗಿ ತಮ್ಮದೇ ತೋಟದಲ್ಲಿ ಗಿಡ ನೆಟ್ಟು ಖುಷಿ ಪಟ್ಟರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ:  ಮಕ್ಕಳು ತಮ್ಮ ಮೇಲೆ ದೌರ್ಜನ್ಯಗಳು ನಡೆದಾಗ ಅದನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಳ್ಳುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಪೋಕ್ಸೋ ಕಾಯಿದ ಬಗ್ಗೆ ಅರಿವನ್ನು ಹೊಂದುವುದರ ಮೂಲಕ ಸಮಾಜದಲ್ಲಿ  ಜಾಗೃತಿ ಮೂಡಿಸಲು ಮತ್ತು ನೊಂದವರಿಗೆ ಸಹಾಯ ಮಾಡಲು ಸಾಧ್ಯ  ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪೋಕ್ಸೋ ಸಪೋರ್ಟ್ ಪರ್ಸನ್ ಫಿಲೋಮಿನಾ ಫರ್ನಾಂಡಿಸ್  ಅಭಿಪ್ರಾಯಪಟ್ಟರು.  ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಸ್.ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಪೋಕ್ಸೋ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿ ಬಿಂದುಶ್ರೀ ಉಪಸ್ಥಿತರಿದ್ದರು.  ಎಸ್‌. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಕಿತ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಅಂಕಿತ ಅತಿಥಿಗಳನ್ನು ಪರಿಚಯಿಸಿದರು. ಸುಜಾತ ಸ್ವಾಗತಿಸಿ, ವೈಷ್ಣವಿ …

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವದ ನಿಮಿತ್ತ ನ. 28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದು, ಆ ಸಂಬಂಧ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯಿಂದ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ಅವರು ಆಗಮಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ವಾಹನ ನಿಲುಗಡೆ, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೂ ಯಾವುದೇ ಸಮಸ್ಯೆ ಆಗದಂತೆಯೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಸಲಹೆಗಳನ್ನು ನೀಡಿದರು. ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾ‌ರ್ ಕೊಡ್ಲಿ, ಗುರುರಾಜ್ ಗಂಟಿಹೊಳೆ ಮೊದಲಾದವರು ಭದ್ರತೆ, ಸುರಕ್ಷೆ ಹಾಗೂ ಕಾರ್ಯಕ್ರಮ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ಸೂಚನೆ ನೀಡಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೋಟೇಶ್ವರದಲ್ಲಿ ನಡೆದಿದೆ. ಬ್ರಹ್ಮಾವರದ ಪೇತ್ರಿ ನಿವಾಸಿ ಸತೀಶ್‌ (53) ಅವರು ಮೃತಪಟ್ಟವರು. ಅವರು ಕೋಟೇಶ್ವರದಲ್ಲಿ ಮನೆಯೊಂದರ ಮೇಲಿನ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಅಟ್ಟಣಿಗೆಯಿಂದ ಕಾಲು ಜಾರಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮೈಸೂರು ಹಾಗೂ ಆರ್‌ವಿ ಪದವಿಪೂರ್ವ ಕಾಲೇಜು, ಮೈಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 07 ಚಿನ್ನ, 03 ಬೆಳ್ಳಿ ಮತ್ತು 01 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕಗಳನ್ನು ಪಡೆದುಕೊಂಡಿತು.  ಜೊತೆಯಲ್ಲಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 08 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.    ಬಾಲಕಿಯರ ವಿಭಾಗದಲ್ಲಿ:ನಾಗಿಣಿ – 800ಮೀ (ಪ್ರಥಮ), 1500ಮೀ (ಪ್ರಥಮ), ಗುಡ್ಡಗಾಡು ಓಟ (ಪ್ರಥಮ), 4*400ಮೀ ರಿಲೇ (ಪ್ರಥಮ), ಚರಿಷ್ಮಾ – 3000ಮೀ (ಪ್ರಥಮ), 1500ಮೀ (ದ್ವಿತೀಯ), ಗುಡ್ಡಗಾಡು ಓಟ (ದ್ವಿತೀಯ), 4*400ಮೀ ರಿಲೇ (ಪ್ರಥಮ), ಗೋಪಿಕಾ ಜಿ – 100ಮೀ (ಪ್ರಥಮ), 4*100ಮೀ ರಿಲೇ (ಪ್ರಥಮ), ಮಾನ್ವಿ ವಿ ಶೆಟ್ಟಿ – 4*100ಮೀ ರಿಲೇ (ಪ್ರಥಮ), ಭಾನವಿ – 4*100ಮೀ ರಿಲೇ (ಪ್ರಥಮ), ವೈಷ್ಣವಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಅವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ಅವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ. ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಅವರು ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯ ಉದ್ಘಾಟನಾ ಕಾರ್ಯಕ್ರಮವು ಇತ್ತೀಚಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉಪ್ಪುಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲು ವೇದಿಕೆಯಾಗಿದೆ. ಇದೊಂದು ಅಗಾಧವಾದ ಜ್ಞಾನ ಸಂಪತ್ತು ಸಾಧನೆಯ ಸಾಧನವಾಗಿದೆ. ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವನೆಯೊಂದಿಗೆ ತಂತ್ರಜ್ಞಾನದ ಆಸಕ್ತಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ ನಾಯ್ಕ ಅವರು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡರು. ಸಂಸ್ಥೆಯ ಪ್ರಾಂಶುಪಾಲರಾದ ಗಣಪತಿ ಅವಬ್ರತ್ ಕಾರ್ಯಕ್ರಮಕ್ಕೆ ಶುಭ ಕೋರಿದರು.   ಕಾಲೇಜು ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹಾಗೂ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರಾದ ಅರುಣ್…

Read More