ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೋಟೆಶ್ವರ ಕಾಮತ್ ಪೆಟ್ರೋಲ್ ಪಂಪ್ ಪ್ರಸನ್ನ ನಾರಾಯಣ ಆಚಾರ್ಯ (47) ಅವರ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣಗಳನ್ನು ಹಾಗೂ ನಗದು ಹಣ ಕಳವುಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ಕುಂದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವೃತ್ತಿಪರ ಕಳವು ಆರೋಪಿಗಳಾದ ಕಾಸರಗೋಡಿನ ಹಾಶಿಮ್ ಎ ಎಚ್ (42 ವರ್ಷ) ಮಜೇಂಶ್ವರದ ಅಬೂಬಕ್ಕರ್ ಸಿದ್ದಿಕ್ (48 ವರ್ಷ) ಎಂಬಾತನನ್ನು ಮಡಿಕೇರಿಯಲ್ಲಿ ಡಿ.27ರಂದು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಪಾದಿತರು ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣೆ. ಮಲ್ವೆ ಪೋಲೀಸ್ ಠಾಣೆ. ಕುಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆಸಿ ಕಳವು ಮಾಡಿದ್ದಾಗಿ ತಿಳಿಸಿ ಚಿನ್ನಾಭರಣಗಳನ್ನು ಕೇರಳ ಮಂಜೇಶ್ವರ ತಾಲೂಕಿನ ನೀರ್ಚಾಲ್ ಕಾಳಿಕಾಂಬ ಜುವೆಲ್ಸರ್ಸ್ ಗೆ ಮಾರಾಟ ಮಾಡಿದ್ದರು. ಸದ್ರಿ ಜುವೆಲ್ಲರಿ ಅಂಗಡಿಯವನು ಹಾಜರುಪಡಿಸಿದ 15 ಲಕ್ಷ ಮೌಲ್ಯದ ಒಟ್ಟು 300 ಗ್ರಾಂ ಚಿನ್ನ ಹಾಗೂ 1 ಲಕ್ಷ ಮೌಲ್ಯದ ಒಟ್ಟು 1481 ಗ್ರಾಂ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಧನವಂತರಿಗೆಲ್ಲಾ ಪರರಿಗೆ ಸಹಾಯ ಮಾಡುವಷ್ಟು ಔದಾರ್ಯವಿರಲ್ಲ. ಹೃದಯವಂತರು ಮಾತ್ರ ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸುತ್ತಾರೆ ಎಂದು ಅವಧೂತ ವಿನಯ್ ಗುರೂಜೀ ಹೇಳಿದರು. ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಇದರ ವತಿಯಿಂದ ಮರವಂತೆ ಗಾಂಧಿನಗರದ ಹಿಂದೂ ಕಾರ್ಯಕರ್ತ ರಾಜು ಮರವಂತೆ ಅವರಿಗೆ ನಿರ್ಮಿಸಿಕೊಡಲಾದ ‘ಶ್ರೀ ವರಲಕ್ಷ್ಮೀ ನಿಲಯ’ ಉದ್ಘಾಟಿಸಿ ಆಶೀರ್ವದಿಸಿ, ಪರರ ಕಷ್ಟಕ್ಕೆ ಸ್ಪಂದಿಸುವ ಶ್ರೇಷ್ಠ ಚಿಂತನೆಗಳು ಮುಖ್ಯ. ಪರರಿಗೆ ಒಳಿತಾಗಲು ಶ್ರಮಿಸುತ್ತಿರುವ ಡಾ. ಗೋವಿಂದ ಬಾಬು ಪೂಜಾರಿಯವರ ಸೇವಾ ಕೈಂಕರ್ಯ ಶ್ರೇಷ್ಠವಾದುದು ಎಂದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಧರ್ಮ ಜಾಗೃತಿಗಾಗಿ ಹಾಗೂ ಹಿಂದುತ್ವದ ರಕ್ಷಣೆಗಾಗಿ ವೈಯಕ್ತಿಕ ಬದುಕನ್ನು ಮರೆತು ಧರ್ಮ ಕಾರ್ಯದಲ್ಲಿ ತೊಡಗುವ ಸಂಘಟನೆಯ ಕಾರ್ಯಕರ್ತರ ಪರಿಶ್ರಮ, ತ್ಯಾಗ ಸದಾ ಸ್ಮರಣೀಯವಾಗಿದೆ. ಅವರ ಕಷ್ಟ, ನೋವುಗಳಿಗೆ ಸ್ಪಂದಿಸಬೇಕಾಗಿರುವುದು ಧರ್ಮ. ಹೀಗಾಗಿ ಎಲ್ಲಾ ಪ್ರಮುಖರ ಮಾರ್ಗದರ್ಶನದಲ್ಲಿ ಹಿಂದೂ ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಹಾಲ್ಕಲ್ನಲ್ಲಿ ನಡೆದ ಒಂಭತ್ತನೇ ’ಕರ್ನಾಟಕ ಹಕ್ಕಿ ಹಬ್ಬ’ವನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಉತ್ತಮವಾದುದು ಎಂದು ಹೇಳಿದರು. ಅರಣ್ಯ ಇಲಾಖೆ ಮೂಲಕ ಅರಣ್ಯ ಹಾಗೂ ಇಲ್ಲಿನ ಪ್ರಾಣಿ-ಪಕ್ಷಿಗಳ ರಕ್ಷಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದರೆ ಈ ಕಾಡಿನ ತಪ್ಪಲು ಪ್ರದೇಶದಲ್ಲಿ ಶೇ.95ರಷ್ಟು ಬಡತನ ರೇಖೆಗಿಂತ ಕೆಳಗಿರುವ ಬುಡಕಟ್ಟು ಜನಾಂಗದವರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಅವರಿಗೆ ಮೂಕಸೌಕರ್ಯ ಒದಗಿಸುವುದಕ್ಕೆ ಆರಣ್ಯ ಇಲಾಖೆ ಕಾನೂನುಗಳು ತೊಡಕಾಗುತ್ತಿದೆ. ಈ ನೆಲೆಯಲ್ಲಿ ಅರಣ್ಯ ಇಲಾಖೆಯ ಕಾನೂನುಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸುವ ಮೂಲಕ ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಹಕಾರ ನೀಡಬೇಕಿದೆ. ಕಾಡುಪ್ರಾಣಿಗಳ ರಕ್ಷಣೆಯೊಂದಿಗೆ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡವರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ ಕೆಲವು ವರ್ಷಗಳಿಂದೀಚೆಗೆ ಸರಕಾರಿ ಶಾಲೆಯೊಂದನ್ನು ಮಾದರಿಯಾಗಿ ರೂಪಿಸಿ, ಎಲ್ಲವೂ ಸಸೂತ್ರವಾಗಿ ನಡೆಯುತ್ತಿರುವಾಗ ಏಕಾಏಕಿ ಹೆಚ್ಚುವರಿ ಕಾರಣ ಮುಂದಿಟ್ಟು ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ. ಶಿಕ್ಷಣ ಇಲಾಖೆ ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು, ಶಾಲೆಯಲ್ಲಿ ಕೊರತೆಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವುಂದ ಆಗ್ರಹಿಸಿದರು. ಆವರು ಶುಕ್ರವಾರ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಪಿಟಿ ಶಿಕ್ಷಕರನ್ನು ಹೆಚ್ಚುವರಿ ಮಾಡಿರುವುದನ್ನು ಕೈಬಿಡಲು ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಳೆವಿದ್ಯಾರ್ಥಿಗಳು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 63 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ, ಇದೀಗ 305 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 10 ಶಿಕ್ಷಕರು ಇರಬೇಕಿದ್ದು, ಪ್ರಸ್ತುತ 7 ಮಂದಿ ಶಿಕ್ಷಕರು ಮಾತ್ರವೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮತ್ತೆ ಇಬ್ಬರು ಶಿಕ್ಷಕರನ್ನು ಹೆಚ್ಚುವರಿಯನ್ನಾಗಿಸಿ ವರ್ಗಾವಣೆ ಮಾಡಿದರೆ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಎದುರಾಗಬಹುದಾದ ಸವಾಲು ಸ್ವೀಕರಿಸಿ ಮುನ್ನಡೆಯಲಷ್ಟೆ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣದೊಂದಿಗೆ ಯಾವ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂಬುದನ್ನು ಗುರುತಿಸಿ, ಅದರಲ್ಲಿ ಹೆಚ್ಚಿನ ಕೌಶಲ್ಯ ಹೊಂದಲು ವಿದ್ಯಾರ್ಥಿ ದೆಸೆಯಿಂದಲೇ ತಯಾರಿ ನಡೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕು ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಶೆಟ್ಟಿ ಹೇಳಿದರು. ಅವರು ಗುರುವಾರ ಇಲ್ಲಿನ ಯು. ಬಿ. ಶೆಟ್ಡಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ‘ಚೈತನ್ಯ’ ಉದ್ಘಾಟಿಸಿ ಮಾತನಾಡಿ, ಭಾರತವು ಯುವಜನರ ದೇಶವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದರೂ ಅದೇ ನಾವು ದೇಶಕ್ಕೆ ಸಲ್ಲಿಸಬಹುದಾದ ಕೊಡುಗೆಯಾಗಿದೆ. ಆಧುನಿಕ ಯುಗದಲ್ಲಿ ನೂರಾರು ಕೆಲಸದ ಅವಕಾಶ ತೆರೆದುಕೊಂಡಿದ್ದು, ಅದಕ್ಕೆ ತಕ್ಕಂತೆ ಸಿದ್ಧರಾಗುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು. ಅಧಿಕಾರ ಮತ್ತು ಹುದ್ದೆಯನ್ನು ಕೇವಲ ತೋರಿಕೆಗೆ ಹೊಂದದೇ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಸೇರುವುದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದ್ದು, ಕರಾವಳಿಯ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇವರ ಚೈತನ್ಯಶಕ್ತಿ ವೃದ್ಧಿಗೆ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವ ಕ್ರಮವಿದ್ದು, ದೊಡ್ಡ ಭಕ್ತಗಣವನ್ನೇ ಹೊಂದಿರುವ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿಯೂ ಈ ಕಾರ್ಯ ಶೀಘ್ರ ನಡೆಯುವಂತಾಗಲಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಬುಧವಾರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ 11 ದಿನಗಳ ಕಾರ್ಯಕ್ರಮಕ್ಕೆ 1 ಕೋಟಿ ರೂ. ಖರ್ಚಾಗಬಹು. ಉತ್ತಮವಾದ ಸಮಿತಿ ನೇಮಿಸಿಕೊಂಡು ಭಕ್ತರ ದೇಣಿಗೆ ಎಲ್ಲಿಯೂ ವ್ಯರ್ಥವಾಗದಂತೆ ಕಾರ್ಯಕ್ರಮ ಆಯೋಜಿಸುವುದು ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಹೊಣೆಯಾಗಿದೆ ಎಂದರು. ತಂತ್ರಿಗಳಾದ ಕೆ. ಮಂಜುನಾಥ ಅಡಿಗ ಮಾತನಾಡಿ, 25 ವರ್ಷದಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿಲ್ಲ. ಗ್ರಾಮಸ್ಥರು, ಭಕ್ತರ ಸಹಕಾರ ಪಡೆದು ಅಷ್ಟಬಂಧ ಕಾರ್ಯಕ್ರಮ ಮಾಡಬೇಕಾಗಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು. ಪ್ರಧಾನ ಅರ್ಚಕ ಪ್ರಕಾಶ್ ಉಡುಪ, ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಸಿಇಓ ಬಿಮಪ್ಪ ಬಿಲ್ಲಾರ, ಬೈಂದೂರು ಪೊಲೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಧ್ಯಾತ್ಮ ರಹಸ್ಯ ಮಾಸಪತ್ರಿಕೆ, ಬೀಜಾಡಿ ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಕಲಾ ಸಂಘ, ಕೋಟೇಶ್ವರ ಓಂಶಾಂತಿ ಪ್ರೊಡೆಕ್ಷನ್, ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಿಕಾ ಕೃಷಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಹಾಗೂ 10 ಸಾವಿರ ನಗದು ಪುರಸ್ಕಾರಕ್ಕೆ ವಿಜಯವಾಣಿ ಹಿರಿಯ ವರದಿಗಾರ ಆರ್. ಶ್ರೀಪತಿ ಹೆಗಡೆ ಹಕ್ಲಾಡಿ ಆಯ್ಕೆ ಆಗಿದ್ದಾರೆ. ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಅವರ ಹತ್ತಾರು ವರದಿಗಳು ಮಹತ್ತರ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವುದಲ್ಲದೇ, ಆಡಳಿತಯಂತ್ರವನ್ನು ನಿರಂತರವಾಗಿ ಎಚ್ಚರಿಸುತ್ತಲೇ ಬಂದಿದೆ. ಹಕ್ಲಾಡಿ ಅವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ `ಕಡಲ ತೀರದ ಭಾರ್ಗವ ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’, ಮಾನವ ಹಕ್ಕು ಮಂಡಳಿ- ಬೆಂಗಳೂರು ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ‘ಟಿಪ್ಪು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶುದ್ಧವಾದ ನೀರು ಮತ್ತು ಹಿತ-ಮಿತವಾದ ಆಹಾರ ಸೇವನೆ, ಕಾಲಕ್ಕನುಗುಣವಾಗಿ ನಿದ್ರೆ ಮತ್ತು ದೇಹ ಪ್ರಕೃತಿಗೆ ಹೊಂದಿಕೊಳ್ಳುವ ವ್ಯಾಯಮದಿಂದ ರೋಗಮುಕ್ತರಾಗಬಹುದು. ಆಯುರ್ವೇದದ ದಿನಚರ್ಯೆ, ಋತುಚರ್ಯೆ ಹಾಗೂ ಯೋಗಚರ್ಯೆಗಳನ್ನು ಪಾಲಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದು ಎಂದು ಕುತ್ಪಾಡಿ ಎಸ್ಡಿಎಂ ಆಯರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಪೂಜಾರಿ ಹೇಳಿದರು. ಗೋಳಿಹೊಳೆ ಮೂರ್ಕೈ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ಸೋಮವಾರ ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಗೊಳಿಹೊಳೆ ಶಾಖೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉಡುಪಿ ಸಹಯೋಗದೊಂದಿಗೆ ನಡೆದ ಉಚಿತ ಆಯುರ್ವೇದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಆರೋಗ್ಯ ಮಾಹಿತಿ ನೀಡಿದರು. ನಿದ್ರೆ ಮನುಷ್ಯನ ಆಯಸ್ಸನ್ನು ನಿರ್ಧರಿಸುತ್ತದೆ. ಆಧ್ಯಾತ್ಮಿಕ ವ್ಯಾದಿ, ಆದಿಭೌತಿಕ ವ್ಯಾಧಿ ಹಾಗೂ ಆದಿದೈವಿಕ ವ್ಯಾದಿಗಳೇ ತಾಪತ್ರಯಗಳು. ನಮಗೆ ನಮ್ಮ ಜೀವನದ ಕಲ್ಪನೆಯೊಂದಿಗೆ ದೈವಬಲವೂ ಬೇಕು. ಪ್ರಕೃತಿಯನ್ನು ಗೌರವಿಸುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿ ಸಮುದಾಯಕ್ಕೆ ನೆಲಪರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಸ.ಹಿ.ಪ್ರಾ. ಶಾಲೆ, ಬವಳಾಡಿಯಲ್ಲಿ ನಡೆದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ವಿವೇಕಾನಂದ ಯುವಕ ಮಂಡಲ, ಗಂಟಿಹೊಳೆ, ಬವಳಾಡಿ, ಶ್ರೀ ಜಟ್ಟಿಗೇಶ್ವರ ಕಲಾ ಮತ್ತು ಕ್ರೀಡಾ ಸಂಘ, ಬವಳಾಡಿ ಇವರ ಸಹಯೋಗದೊಂದಿಗೆ ’ಕೆಸರಲ್ಲೊಂದಿನ’ ಮತ್ತು ’ಕಂಬಳ ಅಣಕು ಪ್ರದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬಿಜೂರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಿವೃತ್ತ ಮುಖ್ಯೋಪಧ್ಯಾಯರಾದ ನಾರಾಯಣ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಗೂ ಉದ್ಯಮಿಗಳಾದ ಬಿ.ಎಸ್. ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಜ್ವಲ್ ಶೆಟ್ಟಿ, ಉದ್ಯಮಿಗಳು, ಬವಳಾಡಿ, ಶೇಖರ ಆಚಾರಿ ಬವಳಾಡಿ, ಬಾಬು ಶೆಟ್ಟಿ ಗಂಟಿಹೊಳೆ, ಶ್ರೀಕಾಂತ ಶೆಟ್ಟಿ ಗಂಟಿಹೊಳೆ, ಸ.ಹಿ.ಪಾ. ಶಾಲೆ, ಬವಳಾಡಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮನ್ನು ತೆಗಳುವವರು, ತಿರಸ್ಕರಿಸುವವರನ್ನು ಮತ್ತು ತಪ್ಪು ಹುಡುಕುವವರನ್ನು ದೂರ ಇಡದೆ ಜೊತೆಯಲ್ಲೇ ಇರಿಸಿಕೊಂಡರೆ ನಮ್ಮ ಹೋರಾಟಕ್ಕೆ ಅವರೇ ಸ್ಪೂರ್ತಿಯಾಗುತ್ತಾರೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು. ಅವರು ಕಲಾಕ್ಷೇತ್ರ – ಕುಂದಾಪುರ ಟ್ರಸ್ಟ್ ಇದರ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಕೆಲಸ ಅಥವಾ ಗುರಿ ತಲುಪಿದ ನಂತರ ಸಿಗುವ ಖುಷಿಗಿಂತ ಆ ಗುರಿ ಸಾಧನೆ ಮಾಡುವ ನೆಪದಲ್ಲಿ ಪಡುವ ಪರಿಶ್ರಮ ಇದೆಯಲ್ಲ ಆ ಅನುಭವವೇ ಮನಸ್ಸಿಗೆ ಖುಷಿ ಕೊಡುತ್ತದೆ ಮತ್ತು ಅದು ಜೀವನಕ್ಕೂ ಪಾಠವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ದಾಮೋದರ ಪೈ, ಕೆ.ಆರ್. ನಾಯಕ್, ಡಾ. ರಾಜರಾಮ್ ಶೆಟ್ಟಿ, ಸನತ್ ಕುಮಾರ್ ರೈ, ಕುಮಾರ್ ಕಾಂಚನ್, ರಾಜೇಶ್ ಕಾವೇರಿ, ಕಲಾವಿದ ಭಾಸ್ಕರ ಆಚಾರ್ಯ, ಗೋಪಾಲ ವಿ, ಶ್ರೀಧರ ಸುವರ್ಣ, ಡಾ. ಹರಿಪ್ರಸಾದ್ ಶೆಟ್ಟಿ, ಪ್ರಕಾಶ್ಚಂದ್ರ ಹೆಗ್ಡೆ, ಬಿ.ಎನ್. ರಾಮಚಂದ್ರ, ಮೋಹನ್ ಸಾರಂಗ್, ಸಾಯಿನಾಥ ಶೇಟ್,…
