ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಬೈಂದೂರು – ಬೆಂಗಳೂರು ಕೆ.ಎಸ್.ಆರ್.ಟಿ.ಸಿ ಸಂಜೆ ಬಸ್ ಸೇವೆಯು ಗ್ಯಾರಂಟಿ ಅನುಷ್ಠಾನ ಸಮಿತಿ ನಿರಂತರ ಒತ್ತಡದಿಂದಾಗಿ ಬುಧವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು. ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿಗಳು ಸದ್ಯದಲ್ಲಿಯೇ ಉದ್ಘಾಟಿಸಲಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ತಿಳಿಸಿದರು. ಪಡಿತರ ಚೀಟಿ ಸಮಸ್ಯೆ ಗಮನಹರಿಸಿ:ರಾಜ್ಯದಲ್ಲಿ ಅನರ್ಹ ಬಿ.ಪಿ.ಎಲ್ ಕಾರ್ಡುಗಳು ರದ್ದಾಗಿ ಎ.ಪಿ.ಎಲ್ ಕಾರ್ಡ್ ಆಗುತ್ತಿದೆ. ಈ ನಡುವೆ ಕೆಲವು ಅರ್ಹ ಬಿ.ಪಿ.ಎಲ್ ಕಾರ್ಡುದಾರರಿಗೂ ತೊಂದರೆಯಾಗಿದೆ. ಬ್ಯಾಂಕ್ ಸಾಲದ ಉದ್ದೇಶಕ್ಕಾಗಿ ಮಾಡಿದ ಐ.ಟಿ.ಆರ್ ರಿಟರ್ನ್ ಕಾರಣವನ್ನು ಇಟ್ಟುಕೊಂಡು ಕಾರ್ಡ್ ರದ್ದಾಗಿದೆ. ಅಂತಹ ಪ್ರಕರಣವನ್ನು ಪರಿಶೀಲಿಸಿ ಆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು ಸೋಮವಾರದಂದು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮ ಅವರು ‘ಬೆಳಕಾಗಲಿ ಬಾಳು’ ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತನಾಡಿ, “ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ಎಂದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ವಿದ್ವಾನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಣುರೇಣುತೃಣಕಾಷ್ಠ ಗೋವಿಂದ ಎಂಬಂತೆ ವಿಶೇಷತೆಯನ್ನು ಕಾಣುವ ಪ್ರತಿಯೊಂದು ವಸ್ತುವನ್ನೂ ಪೂಜಿಸುವ ಸಂಸ್ಕೃತಿ ಭಾರತದ್ದು. ಅದರಂತೆ ದಿನಾಂಕ ಉತ್ಥಾನ ದ್ವಾದಶಿಯ ಪರ್ವಸಮಯದಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತುಳಸಿಯ ಕಟ್ಟೆಯಲ್ಲಿ ಕಾರ್ತಿಕದಾಮೋದರನ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು. ಈ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರರನ್ನು ಭಜನೆಗಳ ಮೂಲಕ ಆರಾಧಿಸಿದರು. ಶ್ರೀನಿವಾಸ ಶೇಟ್ ಕುಂದಾಪುರ ತಮ್ಮ ಸಿರಿಕಂಠದಿಂದ ಭಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಅಧ್ಯಾಪಕ ರಾಮಕೃಷ್ಣ ಉಡುಪ ತುಳಸಿಪೂಜೆಯನ್ನು ನೆರವೇರಿಸಿ, ಅದರ ಮಹತ್ವವನ್ನು ತಿಳಿಸುತ್ತಾ ತನ್ನ ಪತ್ರ-ಪುಷ್ಪ-ಫಲ-ಕಾಷ್ಠಗಳ ಮೂಲಕ ಸರ್ವೋಪಯೋಗಿಯಾದ ಸಸ್ಯ ತುಳಸಿ. ಶೈತ್ಯಸಂಬಂಧಿಯಾದ ಯಾವುದೇ ರೋಗವಿದ್ದರೂ ಅದನ್ನು ದೂರಮಾಡಬಲ್ಲ ಸಸ್ಯವಾಗಿದ್ದು, ಮನೆಯಲ್ಲಿ ಇರಲೇ ಬೇಕಾದ ಅನಿವಾರ್ಯ ಆಯುರ್ವೇದೀಯ ಪದಾರ್ಥವಾಗಿದೆ. ಕೀಟಗಳು ಬೆಳೆದ ಪೈರನ್ನು ಹಾಳುಗೆಡಹಬಹುದಾದ ಸಮಯ ಇದಾಗಿದ್ದರಿಂದ ಅವುಗಳನ್ನು ಆಕರ್ಷಿಸಿ ನಾಶ ಮಾಡಲು ದೀಪಗಳನ್ನು ಬಳಸುವ ಪದ್ಧತಿ ಭಾರತದ ಅನಾದಿಕಾಲದ ನಿಯಮವಾಗಿದ್ದು ಅದರಂತೆ ಈ ದಿನ ಕಾರ್ತಿಕದಾಮೋದರನನ್ನು ತುಳಸಿಯ ಸನ್ನಿಧಿಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ಡಿ-ಸಿಇಟಿ, ಪಿಜಿ-ಸಿಇಟಿ ಹಾಗೂ ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್), ದಂತ ವೈದ್ಯಕೀಯ (ಬಿ.ಡಿ.ಎಸ್, ಎಂ.ಡಿ.ಎಸ್), ಆಯುಷ್ (ಬಿ.ಆಯುಷ್, ಎಂ.ಆಯುಷ್), ಇಂಜಿನಿಯರಿಂಗ್ & ಟೆಕ್ನಾಲಜಿ (ಬಿ.ಇ, ಬಿ.ಟೆಕ್, ಎಂ.ಇ, ಎಂ.ಟೆಕ್), ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ್, ಎಂ.ಆರ್ಕ್), ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿ.ಎಸ್ಸಿ ಇನ್ ಹಾರ್ಟಿಕಲ್ಚರ್, ಅಗ್ರಿಕಲ್ಚರಲ್ ಎಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಫಾರೆಸ್ಟಿ, ವೆಟರಿನರಿ ಅಂಡ್ ಅನಿಮಲ್ ಸೈನ್ಸಸ್, ಫಿಶರೀಸ್, ಸೆರಿಕಲ್ಚರ್, ಹೋಮ್/ ಕಮ್ಯೂನಿಟಿ ಸೈನ್ಸಸ್ ಫುಡ್ ನ್ಯೂಟ್ರೀಷನ್ ಅಂಡ್ ಡಯಟೆಟಿಕ್ಸ್, ಬಿ ಫಾರ್ಮಾ, ಎಂ. ಫಾರ್ಮಾ, ಫಾರ್ಮಾ ಡಿ ಅಂಡ್ ಡಿ ಫಾರ್ಮಾ ಗಳಲ್ಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರಿವು (ರಿನ್ಯೂವಲ್) ಸಾಲ ಯೋಜನೆಯ ಸೌಲಭ್ಯ ಪಡೆಯಲು ನಿಗಮದ ವೆಬ್‌ಸೈಟ್ https://kmdconline.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಅವರು ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ 2025ರ ಸಮಾರೋಪ ಸಮಾರಂಭವು ಸುರಭಿ ಸ್ಟುಡಿಯೋ ಗಂಗೊಳ್ಳಿ ಇವರ ಸಹಭಾಗಿತ್ವದಲ್ಲಿ ಇಲ್ಲಿನ ಶಾರದ ಮಂಟಪದಲ್ಲಿ ನಡೆಯಿತು. ಗಂಗೊಳ್ಳಿಯ ಮಾಜಿ ಮಂಡಲ ಪಂಚಾಯತ್ ಪ್ರಧಾನರಾದ ಸದಾನಂದ ಶೆಣೈ, ಕುಂದಾಪುರದ ಬೆನಕ ಸ್ಟುಡಿಯೋ ಮಾಲಕರಾದ ಗಣೇಶ್ ದೇವಾಡಿಗ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಕೋರಿದರು. ಗಂಗೊಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ಶೆಣೈ ಮತ್ತು ಜಯಶ್ರೀ ಶೆಣೈ ದಂಪತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಂಗೊಳ್ಳಿ ವಲಯದ ದೈಹಿಕ ಶಿಕ್ಷಕರಾದ ಸೂರಜ್ ಖಾರ್ವಿ, ದೀಕ್ಷಿತ್ ಮೇಸ್ತ, ಪ್ರಣಯ ಕುಮಾರ್ ಶೆಟ್ಟಿ ಮತ್ತು ನಿರಂಜನ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುರಭಿ ಸ್ಟುಡಿಯೋ ಮಾಲೀಕರಾದ ಕೃಷ್ಣ ಖಾರ್ವಿ ಅವರು ಗಣೇಶ್ ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಜಯ ಶೆಣೈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪರಮಾದರಣೀಯ ಶ್ರೀ ಕಾಶೀಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ಗೊಂಬೆ ಮ್ಯೂಜಿಯಂ (ವಸ್ತು ಸಂಗ್ರಹಾಲಯ) ಉದ್ಘಾಟನೆ ಮಾಡಿದರು. ಅಕಾಡೆಮಿಯ ವತಿಯಿಂದ ಸ್ವಾಮೀಜಿ ಅವರಿಗೆ ಪಾದ ಪೂಜೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸೆಂಚುರಿ ಬಿಲ್ಡರ್ಸ್ ನಿರ್ದೇಶಕರಾಗಿರುವ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ ಮೋಹಿನಿ ಡಿ. ಪೈ. ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ಕಾರ್ಪೊರೇಟ್ ವ್ಯವಸ್ಥೆ ಹಾಗೂ ಅದರಲ್ಲಿ ಉದ್ಯೋಗ ಪಡೆಯಬೇಕಾದಲ್ಲಿ ಬೇಕಾಗುವ ಅಗತ್ಯ ಕೌಶಲ್ಯಗಳು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾರ್ಪೊರೇಟ್ ಟ್ರೈನರ್ ಹಾಗೂ ಡಾಟಾ ಎನಾಲಿಸ್ಟ್‌ರಾದ ಗೌತಮ್ ಎಚ್. ಶೆಟ್ಟಿಗಾರ್ ಮಾತನಾಡಿ, ಯಾವುದೇ ಕೌಶಲವನ್ನು ವೃದ್ಧಿಸಿಕೊಳ್ಳಬೇಕಾದರೆ ಸೂಕ್ತ ಪ್ರಯತ್ನದ ಅವಶ್ಯಕತೆ ಇದೆ. ಪ್ರಸ್ತುತ ಯಾವ ಕೌಶಲಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಬೇಡಿಕೆ ಇದೆ ಎಂಬುದನ್ನು ಗಮನಿಸಿ ಆ ಕೌಶಲಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡು ಬಳಸಿಕೊಂಡಾಗ ಯೋಗ್ಯ ಉದ್ಯೋಗ ನಮ್ಮದಾಗಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿಗಳು ಡಿಜಿಟಲ್ ಮಾಧ್ಯಮದ ಮೂಲಕ ಶೀಘ್ರವಾಗಿ ಹಾಗೂ ಸುಲಭವಾಗಿ ಸಿಗುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲಗಳನ್ನು ಪರಿಚಯಿಸುವ ಸಲುವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ ಶಿವಮೊಗ್ಗ ಮತ್ತು ಕಲಾ ಯೋಗಾಸನ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ತುಮಕೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 8ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನಾ ಸ್ಪರ್ಧೆ 2025-26 ರಲ್ಲಿ ತ್ರಾಸಿ ಗ್ರಾಮ ಪಂಚಾಯತಿನ ಸಿಬ್ಬಂದಿ ಸಂದೀಪ್ ಪೂಜಾರಿ ಅವರು ವಿವಿಧ ಹಂತದ ಸ್ಪರ್ದೆಯಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟದಿಂದ ಡಿಸೆಂಬರ್ ತಿಂಗಳ ಮಾಲ್ಡೀವ್ಸ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಕಿಶನ್ ಪೂಜಾರಿ, ನಾಗಶ್ರೀ ಭಟ್, ಪ್ರಜ್ಞಾ ಹಾಗೂ ದೀಪಾ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮಾರ್ಗದರ್ಶನ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರ ಕುಂದಾಪುರ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಥಮ ದರ್ಜೆ ಎಲೆಕ್ಟಿಕಲ್ ಗುತ್ತಿಗೆದಾರ ಕೆ. ಆರ್. ನಾಯ್ಕ್ಕ್, ಕ್ವಿಜ್ ಮಾಸ್ಟರ್ ಶಿಕ್ಷಕ ಅಶೋಕ್ ತೆಕ್ಕಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟಿ. ಎನ್. ಪ್ರಭು ಚಾರ್ಟರ್ಡ್ ಅಕೌಂಟೆಂಟ್ಸ್ ಕುಂದಾಪುರದ ಸಂಸ್ಥೆಯಲ್ಲಿ ತರಬೇತಿ ಪಡೆದ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನವದೆಹಲಿ ಅವರು ಸೆಪ್ಟೆಂಬರ್ 2025ರಲ್ಲಿ ನಡೆಸಿದ ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಸಿಎ-ಫೈನಲ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೆದೂರು ಶಾನಾಡಿ ಹರ್ಷ ಹೆಗ್ಡೆ ಹಾಗೂ ಆಶಾ ಎಚ್. ಹೆಗ್ಡೆ ಅವರ ಪುತ್ರಿ ಸಿಎ ವೈಷ್ಣವಿ ಹೆಗ್ಡೆ, ಕುಂಭಾಸಿ ರವೀಂದ್ರ ಕಾಮತ್-ಭಾರತಿ ಕಾಮತ್ ದಂಪತಿ ಪುತ್ರಿ ಸಿಎ ರಶ್ಮಿ ಆರ್. ಕಾಮತ್ ಮತ್ತು ಸೌಕೂರಿನ ರವಿ ಎಂ. ಶೆಟ್ಟಿ ಹಾಗೂ ಉಷಾ ಆರ್. ಶೆಟ್ಟಿ ದಂಪತಿ ಪುತ್ರ ಸಿಎ ರೋಹನ್ ಶೆಟ್ಟಿ ತೇರ್ಗಡೆ ಹೊಂದಿ ಗೌರವ ಪಡೆದಿದ್ದಾರೆ.
