Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಹರ್ತಟ್ಟು ನವೋದಯ ಫ್ರೆಂಡ್ಸ್ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಸುಮಾರು ರೂ.50 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ತಂಗುದಾಣ ಲೋರ್ಕಾಣೆಗೊಳಿಸಲಾಯಿತು. ತಂಗುದಾಣವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ, ಮಾತನಾಡಿ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಅಭಿನಂದನೀಯ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಪರಸ್ಪರ ಸಹಕಾರ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸುತ್ತವೆ ಎಂದರು. ಇದೇ ಸಂದರ್ಭದಲ್ಲಿ ಹರ್ತಟ್ಟು ಗ್ರಾಮವನ್ನು ಹಸಿರು ಗ್ರಾಮವನ್ನಾಗಿಸುವ ಉದ್ದೇಶದಿಂದ ಹಸಿರು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಮಹಿಳಾ ಸದಸ್ಯರಿಗೆ ೧೫೦ ಸಸಿಗಳನ್ನು ವಿತರಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವಂತೆ ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಅಧ್ಯಯನ ಭೇಟಿಯ ಭಾಗವಾಗಿ ವಿದ್ಯಾರ್ಥಿಗಳು ಸ್ವರಾಜ್ಯ – 75 ತಂಡ ಮೂಡು ಗಿಳಿಯಾರಿನ ಜನ ಸೇವಾ ಟ್ರಸ್ಟ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕ, ಕೋಟದ ಹಸ್ತ ಚಿತ್ತ ಫೌಂಡೇಶನ್, ಉಸಿರು ಕೋಟ, ಜೈ ಕುಂದಾಪುರ ಸೇವಾ ಟ್ರಸ್ಟ್ ಹಾಗೂ ಅದಿಮ ಕಲಾ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಕೋಟೇಶ್ವರದ ಸರ್ಜನ್ ಆಸ್ಪತ್ರೆಯ ಆವರಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಹುಲಿಕಲ್ಲು ನಾಗಭೂಷಣ್ ರಾವ್ ಅವರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ರಾಷ್ಟ್ರಧ್ವಜಕ್ಕೆ ಗೌರವಾರ್ಪಣೆ ಸಲ್ಲಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ದಿನಕರ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಭೂಸೇನಾ ಯೋಧ ಕರುಣಾಕರ ಗಾಣಿಗ ನಾಮಫಲಕ ಅನಾವರಣ ಮಾಡಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಕದ್ರಿಕಟ್ಟು ಅಮೃತ್ ಯುವಕ ಸಂಘದ ವತಿಯಿಂದ ಕದ್ರಿಕಟ್ಟು ಪರಿಸರದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿದ್ದು ಇದನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅಮೃತ್ ಯುವಕ ಸಂಘದ ಅಧ್ಯಕ್ಷ ಜಗನಾಥ ಕಾಂಚನ್, ಪದಾಧಿಕಾರಿಗಳು, ಗಣ್ಯರಾದ ಕವಿತಾ ಸದಾನಂದ ಪೂಜಾರಿ, ಚಂದ್ರ ಆಚಾರ್, ಜಿ.ಎಸ್. ಆನಂದ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರ ಪೂಜಾರಿ ಕದ್ರಿಕಟ್ಟು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸದ್ದಿ.ಕುಂದಾಪುರ: ಸುಜ್ಷಾನ ಎಜುಕೇಷನಲ್ ಟ್ರಸ್ಟ್ ಕುಂದಾಪುರ ಹಾಗೂ ಇವರ ಅಂಗಸಂಸ್ಥೆಗಳ ಸಹಭಾಗಿತ್ವದಲ್ಲಿ ಯಡಾಡಿ ಮತ್ಯಾಡಿಯ ವಿದ್ಯಾರಣ್ಯದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು. ಧ್ವಜಾರೋಹಣ ಪೂರ್ಣಗೊಳಿಸಿದ ಮಾನ್ಯ ಮುಖ್ಯಮಂತ್ರಿಯವರ ಮಾಜಿ ಕಾನೂನು ಸಲಹೆಗಾರರಾದ ಕೆ. ದಿವಾಕರ್ ಮಾತನಾಡಿ ”ನಮ್ಮ ದೇಶದ ಇತಿಹಾಸವು ನೂರಾರು ವರ್ಷಗಳು ಊಟಿ, ಸಾಮೂಹಿಕ ಹತ್ಯೆ, ದಾಳಿ, ಹೊರಟಾಗಳೆಂದಲೇ ಕೂಡಿದರೂ ಕೂಡ ನಾವು ಇಂದು ಅಭಿವೃದ್ಧಿ ಪದದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದ್ದೇವೆ. ಇಂದು ಇಲ್ಲಿನ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯದ ಹೊಳವು ಎದ್ದು ಕಾಣುತ್ತಿದೆ ಎಂದು ಯುವ ಪೀಳೆಗೆಯ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದರು. ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಸರಿ ಬಿಳಿ ಹಸಿರು ಬಣ್ಣದ ಉಡುವು ತೊಟ್ಟು ರಾಷ್ಟ್ರಧ್ವಜ ರೂಪಿಸಿರುವುದು ಎಲ್ಲ ಗಮನ ಸಳೆಯಿತು. ವಿದ್ಯಾರ್ಥಿಗಳ ಶಿಸ್ತಿನ ಸ್ವಾಗತದ ಜೊತೆಗೆ ನೆರೆದ ಎಲ್ಲರ ಕೈಯಲ್ಲಿ ರಾಷ್ಟ್ರಧ್ವಜ ಗೋಚರಿಸಿದವು. ಕಾರ್ಯಕ್ರಮದ ವಿಶೇಷ ಅಂಗವಾಗಿ ಖ್ಯಾತ ಗಾಯಕರಾಗಿರುವ ಜಗದೀಶ್ ಪುತ್ತೂರು ಇವರ ಸಾರಥ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಪಡಿಯಾರ್ ನರ್ಸಿಂಗ್ ಹೋಮ್ ಸ್ಥಾಪಕ, ಆರ್.ಎಸ್.ಎಸ್ ಪ್ರಮುಖರಾಗಿದ್ದ ಡಾ ಎಸ್. ಎನ್. ಪಡಿಯಾರ್ (84) ಅವರು ನಿಧನರಾಗಿದ್ದಾರೆ. ಕುಂದಾಪುರದಲ್ಲಿ ಪಡಿಯಾರ ನರ್ಸಿಂಗ್ ಹೋಮ್ ಹಾಗೂ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದರು. ಡಾ. ಪಡಿಯಾರ್ ಅವರು ವೈದ್ಯಕೀಯ ವೃತ್ತಿಯ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೇವಾ ಸಂಗಮ ಶಿಶುಮಂದಿರಗಳ ಸ್ಥಾಪನೆ, ವಿಷ್ಣು ಸಹಸ್ರನಾಮದ ವಿಶೇಷತೆಯನ್ನು ಸಾರುತ್ತಾ ಜನಸಾಮಾನ್ಯರತ್ತಾ ಕೊಂಡೊಯ್ದ ಹೆಗ್ಗಳಿಕೆ ಇವರದ್ದು. ಮೂಲತಃ ಉಪ್ಪುಂದದವರಾದ ಪಡಿಯಾರ್ ಅವರು ಕುಂದಾಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು. ಅವರು ಮಡದಿ ಹಾಗೂ ಇಬ್ಬರು ಪುತ್ರರು, ಬಂಧು ಬಳಗವನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕತಾರ್: ಕತಾರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಕಾರ್ಮಿಕ ಮತ್ತು ಸಮುದಾಯ ಕಲ್ಯಾಣ, ವೀಸಾ ಮತ್ತು ಒಸಿಐ) ಡಾ. ಈಶ್ ಸಿಂಘಾಲ್ ಅವರಿಗೆ ಗೌರವ ಹಾಗೂ ಭಾವಪೂರ್ಣ ಬೀಳ್ಕೊಡುಗೆ ನೀಡಲು ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ (ICBF) ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ಡಾ. ಈಶ್ ಸಿಂಘಾಲ್ ಅವರು ನೀಡಿದ ಸಮರ್ಪಿತ ಸಾರ್ವಜನಿಕ ಸೇವೆ, ಸುಲಭ ಲಭ್ಯತೆಯ ನಾಯಕತ್ವ ಹಾಗೂ ನಿರಂತರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಲು ಭಾರತೀಯ ರಾಯಭಾರ ಕಚೇರಿಯ ಪ್ರಮುಖ ರಾಜತಾಂತ್ರಿಕರು, ಭಾರತೀಯ ಉನ್ನತ ಶೃಂಗ ಸಂಸ್ಥೆಗಳ (Apex Bodies) ಮುಖಂಡರು ಮತ್ತು ವಿವಿಧ ಸಂಯೋಜಿತ ಸಮುದಾಯ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ (DCM) ಸಂದೀಪ್ ಕುಮಾರ್, ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಹಾಗೂ ಪ್ರಮುಖ ಉನ್ನತ ಶೃಂಗ ಸಂಸ್ಥೆಗಳ ನಿರ್ವಹಣಾ ಸಮಿತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರಾವಣ ಮಾಸ ಎಂಬುವುದು ಶ್ರದ್ಧಾ ಭಕ್ತಿ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಸಾಲಿಗ್ರಾಮ ದೇಗುಲ ಜಾತ್ರಾ ಸಡಗಡವಾಗಿ ರೂಪುಗೊಂಡಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ಹೇಳಿದರು. ಅವರು ಶನಿವಾರ ಒಂದು ತಿಂಗಳುಗಳ ಕಾಲ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಾನಿಧ್ಯದಲ್ಲಿ ಪ್ರತಿ ಶನಿವಾರ ಶ್ರಾವಣ ಮಾಸ ಸಾಂಸ್ಕೃತಿಕ ಸಡಗರಕ್ಕೆ ಚಾಲನೆ ನೀಡಿ ಪುಣ್ಯ ಕ್ಷೇತ್ರಗಳಲ್ಲಿ ಸಾಲಿಗ್ರಾಮ ದೇಗುಲ ತನ್ನದೆ ಆದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ದೇಗುಲವನ್ನು ಸಂದರ್ಶಿಸುತ್ತಾರೆ ಇದಕ್ಕೆ ಶ್ರಾವಣ ಮಾಸ ತನ್ನದೆ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರಶುರಾಮ ಭಟ್ ,ಸದಸ್ಯರಾದ ಚಂದ್ರಶೇಖರ ನಾವಡ, ತಾರನಾಥ ಹೊಳ್ಳ, ಮೆನೇಜರ್ ಗಣೇಶ ಭಟ್ಟ ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶ್ರೀದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಯಕ್ಷಗಾನ ತಾಳಮದ್ದಲೆ ಮೀನಾಕ್ಷಿ ಕಲ್ಯಾಣ ಜರಗಿತು.ದೇಗುಲದಲ್ಲಿ ಸಾವಿರಾರು ಭಕ್ತರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ, ಅ.15: ದೇಶದಾದ್ಯಂತ ಇಂದು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು ಇದರ ಅಂಗವಾಗಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ಸೈನಿಕ ಸದಾಶಿವ ಪ್ರಭು ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆಂದರೆ ಅದಕ್ಕೆ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದಾಗಿ. ಇಂದಿನ ಪೀಳಿಗೆಯು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ದೇಶದ ಪ್ರಗತಿಗೆ ಕೊಡುಗೆಯನ್ನು ನೀಡಬೇಕು ಆಗ ಮಾತ್ರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಕ್ಕೆ ನ್ಯಾಯವನ್ನು ಒದಗಿಸಿದಂತಾಗುತ್ತದೆ. ಗಡಿ ಕಾಯುವ ಸೈನಿಕನಿಂದಾಗಿ ನಾವೆಲ್ಲರೂ ಈ ದೇಶದಲ್ಲಿ ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯ. ಪ್ರಾಮಾಣಿಕ,ನಿಷ್ಠೆ, ಶಿಸ್ತು ಮತ್ತು ಶ್ರದ್ಧೆಯಿಂದ ದುಡಿದು ತಮ್ಮದೇ ಕ್ಷೇತ್ರದಲ್ಲಿ ಕೊಡುಗೆಗಳನ್ನು ನೀಡುವುದರ ಮೂಲಕ ಸ್ವಾತಂತ್ರ್ಯದ ಆಶೋತ್ತರಗಳನ್ನು ಈಡೇರಿಸಬೇಕು. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು ಸಾಮಾಜಿಕ ಮಾಧ್ಯಮಗಳನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಈ ದೇಶವು ಇನ್ನು ಹೆಚ್ಚಿನ ಪ್ರಗತಿಯನ್ನು ಸಾಧಿಸಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಸ್ವಾತಂತ್ರ್ಯವೆಂದರೆ ನಮಗೆ ಇಷ್ಟ ಬಂದಂತೆ ಬದುಕುವ ಹಕ್ಕು ಮಾತ್ರವಲ್ಲ; ದೇಶ, ಸಂವಿಧಾನ, ಸಮಾಜ ಹಾಗೂ ಭವಿಷ್ಯದ ಪೀಳಿಗೆಯೆಡೆಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನೂ ಒಳಗೊಂಡಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ನಿವೃತ್ತ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ 80ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಪಾಲಕರು, ಪೋಷಕರು ಹಾಗೂ ಊರಿನ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ‍್ಯ ಹೋರಾಟ, ಸ್ವಾತಂತ್ರ‍್ಯೋತ್ತರ ಭಾರತದ ಸಾಧನೆ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ, ಸಂವಿಧಾನ, ವೈವಿಧ್ಯತೆಯಲ್ಲಿ ಏಕತೆ ಹಾಗೂ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರದ ಕುರಿತು ವಿವರವಾಗಿ ಮಾತನಾಡಿದರು. ತ್ಯಾಗದ ಫಲವೇ ಸ್ವಾತಂತ್ರ್ಯಭಾರತದ ಸ್ವಾತಂತ್ರ್ಯವು ಒಂದು ದಿನದಲ್ಲಿ ದೊರೆತದ್ದಲ್ಲ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ರಾಷ್ಟ್ರಪ್ರೇಮದ ಸಂದೇಶ ಸಾರಿದ ಸಾಲಿಗ್ರಾಮ ಕಯಾಕಿಂಗ್ ತಂಡ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಹೃದಯದಲ್ಲಿ ಬಿತ್ತುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ, ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವ ಸಂಕಲ್ಪದೊಂದಿಗೆ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಲಿಗ್ರಾಮ ಕಯಾಕಿಂಗ್ ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ರಾಷ್ಟ್ರಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಜನರಿಗೆ ಪರಿಚಯಿಸುವುದರ ಜೊತೆಗೆ, ಪ್ರಕೃತಿ ಪ್ರೇಮದೊಂದಿಗೆ ದೇಶಪ್ರೇಮವನ್ನೂ ಬೆಳೆಸುವ ಸಂದೇಶವನ್ನು ಸಾರುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಮತ್ತೊಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಹಿಂದೆ ಸೀತಾ ನದಿಯ ಮಧ್ಯಭಾಗಕ್ಕೆ ಕಯಾಕಿಂಗ್ ಮೂಲಕ ತೆರಳಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ್ದ ತಂಡ, ಮತ್ತೊಮ್ಮೆ ನದಿಯ ಮಧ್ಯದಲ್ಲಿರುವ ಕಾಂಡ್ಲಾ ಮರಗಳ ನಡುವೆ ಸೇತುವೆ ನಿರ್ಮಿಸಿ ಅದರ ಮೇಲೆ…

Read More